ವಿಜಯಪುರದಲ್ಲಿ ನಿಕಾನ್ ಛಾಯಾಗ್ರಹಣ ಕಾರ್ಯಗಾರ ಉದ್ಘಾಟನೆ
ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕರ್ನಾಟಕ ಛಾಯಾಗ್ರಾಹಕರ ಸಂಘದ ಸಹಯೋಗದಲ್ಲಿ ನಗರದ ಶುಭಶ್ರೀ ಹೋಟೆಲ್ ಸಭಾಂಗಣದಲ್ಲಿ ನಿಕಾನ್ ಛಾಯಾಗ್ರಹಣ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು
ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ಹರ್ಷಗೌಡ ಪಾಟೀಲ್, ಜಗತ್ತಿನ ಎಲ್ಲಾ ನೋವು-ನಲಿವುಗಳ ಜೊತೆಯಲ್ಲಿ ಐತಿಹಾಸಿಕ ದಾಖಲೀಕರಣ ಮಾಡುವವರು ಛಾಯಾಗ್ರಾಹಕರು. ಛಾಯಾಗ್ರಾಹಕರಿಗೆ ನಿಜವಾದ ದಾಖಲುದಾರರು ಎಂದರೆ ತಪ್ಪಾಗಲಾರದು. ಇವರ ವೃತ್ತಿ ಗೌರವಕ್ಕೆ ಎಲ್ಲರು ಸಹಕರಿಸೋಣ. ಛಾಯಾಗ್ರಾಹಕರು ತಮ್ಮಲ್ಲಿ ನೋವಿದ್ದರೂ ಎದುರು ಇರುವವರಿಗೆ ಸ್ಮಾಯಿಲ್ ಪ್ಲೀಸ್ ಎಂದು ಅವರ ನಗುವನ್ನು ಸೆರೆಹಿಡಿಯುತ್ತಾರೆ. ಇಂತಹ ಛಾಯಾಗ್ರಾಹಕ ಕಲಾವಿದರಿಗೆ ನಾವು ಗೌರವಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಕೆಪಿಎ ನಿರ್ದೇಶಕ ನಾಗರಾಜ್ ಟಿ. ಸಿ. ಮಾತನಾಡಿ, ರಾಜ್ಯದಲ್ಲಿ ಛಾಯಾಗ್ರಾಹಕರ ಸಂಘಟನೆ ಮಾಡುತ್ತಿದ್ದು, ವಿಜಯಪುರ ಜಿಲ್ಲೆಯ ಛಾಯಾಗ್ರಾಹಕರು ಒಗ್ಗಟ್ಟಾಗಲು ವಿಜಯಪುರ ಜಿಲ್ಲಾ ನೂತನ ಛಾಯಾಗ್ರಹಕರ ಸಂಘಕ್ಕೆ ಆಜೀವ ಸದಸ್ಯರಾಗಿ ರಾಜ್ಯ ಕೆಪಿಎದಿಂದ ಸಿಗುವ ಎಲ್ಲ ಸೌಲಭ್ಯಗಳಿಗೆ ಪಾಲುದಾರರಾಗಬೇಕೆಂದು ವಿನಂತಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕೆಪಿಎ ನಿಕಟಪೂರ್ವ ಅಧ್ಯಕ್ಷ ಪರಮೇಶ್ ಎಸ್ ಮಾತನಾಡಿ, ರಾಜ್ಯ ಛಾಯಾಗ್ರಹಕರ ಸಂಘದ ಸಹಯೋಗದಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಸಂಘಟನಾತ್ಮಕ ಮತ್ತು ಕಲಿಕೆಯ ದೃಷ್ಟಿಯಿಂದ ಇಂತಹ ಕಾರ್ಯಾಗಾರಗಳನ್ನು ಏರ್ಪಡಿಸುತ್ತಿರುವುದು ಮಹತ್ವದ ಮತ್ತು ಸಂತೋಷದಾಯಕ ಕೆಲಸ ಎಂದರು.
ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಎಲ್ಲಾ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರ್ಯನ್ ಕಲರ್ ಲ್ಯಾಬಿನ ಉಮೇಶ್ ಹಿರೆದೇಸಾಯಿ, ಸ್ಕೇರ್ ಕಲರ್ ಲ್ಯಾಬನ ಪಿಂಟು ಕರ್ವಾ, ನಿಕಾನ್ ಕಂಪನಿಯ ಹಿರಿಯ ಮಾರಾಟ ವ್ಯವಸ್ಥಾಪಕ ಸುರಜ ಪ್ರಭು ಇದ್ದರು.
ಉದ್ಘಾಟನೆ ಕಾರ್ಯಕ್ರಮದ ನಂತರ ನಿಕಾನ್ ಕಂಪನಿಯ ಮೆಂಟರಾದ ಸ್ಟೇರಿನ್ ಇವರಿಂದ ನೂತನ ಕ್ಯಾಮರಾ ಮಾಡೆಲ್‌ಗಳು ಮತ್ತು ಕ್ಯಾಮೆರಾ ಟೆಕ್ನಿಕ್‌ಗಳ ಬಗ್ಗೆ ಕಾರ್ಯಗಾರ ನಡೆಯಿತು. ಬಳಿಕ ರೂಪದರ್ಶಿಗಳ ಸಹಯೋಗದಲ್ಲಿ ವಿವಾಹದ ಛಾಯಾಗ್ರಹಣದ ಕ್ಷೇತ್ರಕ್ಕೆ ಸಂಬಂಧಿಸಿದ ಛಾಯಾಗ್ರಹಣದ ಕುರಿತು ಉಪಯುಕ್ತ ಮಾಹಿತಿಗಳ ವಿವರಣೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಹಕರ ಸಂಘದ ಪದಾಧಿಕಾರಿಗಳಾದ ಸತೀಶ್ ಕಲಾಲ, ಪ್ರಶಾಂತ್ ಪಟ್ಟಣಶೆಟ್ಟಿ, ಸುರೇಶ್ ರಾಥೋಡ್, ರಾಜುಸಿಂಗ್ ರಜಪೂತ್, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ್ ಪಾರ್ವತಿ, ಪವನ ಅಂಗಡಿ, ಮಹೇಶ್ ಕುಂಬಾರ್, ನಾಗಯ್ಯಾ ಗಣಾಚಾರಿ, ಗೌಡಪ್ಪಗೌಡ ಬೀರಾದಾರ, ಸಹಿತ ೭೦ ಜನ ಛಾಯಾಗ್ರಾಹಕರು ಭಾಗವಹಿಸಿ ಕಾರ್ಯಾಗಾರ ಯಶಸ್ವಿಗೊಳಿಸಿದರು.

