ದಿ. ಡಾ. ಸಿ.ಆರ್.ಬಿದರಿ ಪುಣ್ಯಸ್ಮರಣೆ | ಉಚಿತ ಆರೋಗ್ಯ ತಪಾಸಣೆ & ಚಿಕಿತ್ಸಾ ಶಿಬಿರ
ವಿಜಯಪುರ: ದಿವಂಗತ ಡಾ. ಸಿ.ಆರ್.ಬಿದರಿ ಅವರ ಪುಣ್ಯಸ್ಮರಣೆ ಅಂಗವಾಗಿ ವಿಜಯಪುರ ತಾಲೂಕಿನ ಹೊನಗನಹಳ್ಳಿ ಮತ್ತು ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ ಗ್ರಾಮಗಳಲ್ಲಿ ಮಹಿಳೆಯರು ಮತ್ತು ಚಿಕ್ಕಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಶುಕ್ರವಾರ ನಡೆಯಿತು.
ಹೊನಗನಹಳ್ಳಿ ಗ್ರಾಮದ ಶ್ರೀ ಮಂಗಮ್ಮದೇವಿ ಪ್ರೌಢಶಾಲೆಯಲ್ಲಿ ನಡೆದ ಶಿಬಿರವನ್ನು ಶಶಿ ಬಿದರಿ ಉದ್ಘಾಟಿಸಿದರು.
ಈ ಶಿಬಿರದಲ್ಲಿ ಪ್ರಸೂತಿ ಮತ್ತು ಸ್ರೀ ರೋಗ ವಿಭಾಗದ ಡಾ. ಶೋಭಾ ಶಿರಗೂರ ಮತ್ತು ಚಿಕ್ಕ ಮಕ್ಕಳ ವೈದ್ಯಕೀಯ ವಿಭಾಗದ ಡಾ. ಎಚ್. ಆರ್. ಬಿಜಾಪುರೆ ಅವರು ಒಟ್ಟು 187 ಜನರ ಆರೋಗ್ಯ ತಪಾಸಣೆ ನಡೆಸಿದರು. ಅಲ್ಲದೇ, 13 ಜನರಿಗೆ ಹೆಚ್ಚಿನ ತಪಾಸಣೆಗೆ ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ಶಿಫಾರಸು ಮಾಡಿದರು.
ದೇವರಗೆಣ್ಣೂರ ಗ್ರಾಮದ ಮಹಲಕ್ಷ್ಷಿ ದೇವಸ್ಥಾನದ ಬಳಿ ಇರುವ ಯಾತ್ರಿ ನಿವಾಸದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಪ್ರಸೂತಿ ಮತ್ತು ಸ್ರೀ ರೋಗ ವಿಭಾಗದ ಡಾ. ಶ್ರೀದೇವಿ ಕೋರಿ ಮತ್ತು ಚಿಕ್ಕ ಮಕ್ಕಳ ವೈದ್ಯಕೀಯ ವಿಭಾಗ ಡಾ. ಅನಿಲಕುಮಾರ ಸಜ್ಜನ ಆರೋಗ್ಯ ತಪಾಸಣೆ ನಡೆಸಿದರು.
ಈ ಶಿಬಿರದಲ್ಲಿ ಒಟ್ಟು 263 ಜನರ ಆರೋಗ್ಯ ತಪಾಸಣೆ ನಡೆಸಿದರು. ಅಲ್ಲದೇ, 95 ಜನರಿಗೆ ಹೆಚ್ಚಿನ ತಪಾಸಣೆಗೆ ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ಶಿಫಾರಸು ಮಾಡಿದರು.

