ರೇವತಗಾಂವದ ಶ್ರೀ ಸಿಂಹಗಢ ಮಹಾರಾಜರ ೫೪ನೇ ಪುಣ್ಯಾರಾಧನೆ ಸಂಪನ್ನ
ಚಡಚಣ: ಶರಣರ ಆಚರಣೆಗಳು ಯಾವುದೇ ಒಂದು ಜಾತಿ, ಜನಾಂಗ, ವರ್ಗಕ್ಕೆ ಸೀಮಿತವಾಗಿಲ್ಲ. ಮನುಕುಲದ ಸಂತರಾಗಿರುವ ಸಿಂಹಗಢ ಮಹಾರಾಜರಂತಹ ಮಹಾತ್ಮರ ಸಂದೇಶಗಳು, ಪವಾಡಗಳು ಮನುಕುಲ ಸರಿಯಾದ ದಾರಿಯಲ್ಲಿ ನಡೆಯುವುದಕ್ಕೆ ದಾರಿ ದೀಪವಾಗುತ್ತವೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು.
ಬುಧವಾರ ರೇವತಗಾಂವ ಗ್ರಾಮದ ಶ್ರೀ ಸಿಂಹಗಢ ಮಹಾರಾಜರ ೫೪ನೇ ಪುಣ್ಯಾರಾಧನೆ ಕಾರ್ಯಕ್ರಮದ ‘ಧರ್ಮ ಸಭೆ’ ಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಿಂಹಗಢ ಮಹಾರಾಜರಂತಹ ಶರಣರು ಅಂದು ನುಡಿದ ವಿಚಾರಗಳು ಇಂದಿಗೂ ಪ್ರಸ್ತುತ. ಅವರ ವಚನಗಳು, ನಾಣ್ನುಡಿಗಳು ಇಂದಿಗೂ ಅಜರಾಮರವಾಗಿದ್ದು, ಸಮಾಜಕ್ಕೆ ಅವರ ಕೊಡುಗೆ ಅಪಾರ. ಅವರ ಅರ್ಥಪೂರ್ಣವಾದ ತತ್ವಾದರ್ಶ ವಿಚಾರ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡರವರು ಮಾತನಾಡುತ್ತ. ಸಮಾಜದಲ್ಲಿ ನಾವು ಏನಾದರೂ ಬದಲಾವಣೆ ಮಾಡಬೇಕು ಎಂಬ ಇಚ್ಛಾಶಕ್ತಿ ಇದ್ದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ಮನುಷ್ಯನ ಸಂಸ್ಕಾರ ನಡೆ, ನುಡಿ ಮಾನವೀಯ ಬದುಕಿಗೆ ದಾರಿ ದೀಪವಿದ್ದಂತೆ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ. ಸಾಂಸ್ಕೃತಿಕ ವ್ಯಕ್ತಿತ್ವ ವ್ಯಕ್ತಿಯನ್ನು ತಲೆಯೆತ್ತಿ ಬಾಳುಂತೆ ಮಾಡುತ್ತದೆ, ಇಂಥಹ ಸಾಂಸ್ಕೃತಿಕ ಮನಸ್ಸು ಪ್ರತಿಯೊಬ್ಬರಲ್ಲೂ ಬರಬೇಕು ಎಂದು ಹೇಳಿದರು.
ಹತ್ತಳ್ಳಿಯ ಹಿರೇಮಠದ ಗುರುಪಾದೇಶ್ವರ ಶಿವಾಚಾರ್ಯರು ಹಾಗೂ ಹಾವಿನಾಳದ ವಿಜಯಮಹಾಂತೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ “ಧರ್ಮಸಭೆ” ಕಾರ್ಯಕ್ರಮ ನೇರವೇರಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜು ಆಲಗೂರ, ಬಿಜಾಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರಾಜಶೇಖರ ಚವ್ಹಾಣ್, ಕೆರೂರದ ಭೈರವನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾದೇವಸಾವುಕಾರ ಭೈರಗೊಂಡ, ಮರಗೂರ ಭೀಮಾಶಂಕರ ಶುಗರ‍್ಸ್ ನಿರ್ದೇಶಕ ಎಂ.ಆರ್.ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಗಂಗಾಧರ ಸಂಭಾಣಿ, ಮಹಾದೇವ ಹಿರೇಕುರುಬರ, ಮಾಜಿ ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ, ಮಾಜಿ ತಾಪಂ ಸದಸ್ಯ ಶಿವಾಜಿ ವಾಲೀಕಾರ, ಚಡಚಣ ಮಂಡಲ ಬಿಜೆಪಿ ಅಧ್ಯಕ್ಷ ರಾಮ ಅವಟಿ, ಉದಯ ಕಾರಜೋಳ, ಸಂಜು ಐಹೊಳ್ಳಿ, ದಯಾನಂದ ಮಠ, ಎಂ.ಎಂ.ರಾಠೋಡ, ಚಡಚಣ ಪಪಂ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಬಾಬಾಸಾಹೇಬ ವಿಜಯದಾರ, ಸತೀಶ ಕುಂಬಾರ, ಗಂಗಾಧರ ಐಹೊಳ್ಳಿ, ಹುನ್ನೂರದ ಪರಶುರಾಮ ವನಮೋರೆ, ಬರೂರದ ಆನಂದ ಶಾಸ್ತ್ರಿಗಳು, ತದ್ದೇವಾಡಿಯ ಮಹಾಂತೇಶ ಹಿರೇಮಠ ಶಾಸ್ತ್ರಿಗಳು, ಗದಗದ ಅಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಮೈತ್ರಾದೇವಿ, ಹುಲ್ಯಾಳದ ಸಿದ್ಧಓಂಕಾರ ಆಶ್ರಮದ ಶಿವಶರಣೆ ಡಾ. ನೀಲಮ್ಮತಾಯಿ ಅಸುಂಡೆರವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಎಂ.ಎಚ್.ಅಡಕೆ ಹಾಗೂ ಗುರು ಜೇವೂರರವರು ನೆರವೇರಿಸಿದರು.

