Author: editor.udayarashmi@gmail.com

ಸರ್ಕಾರಿ ಶಾಲೆಯಂಗಳಕ್ಕೆ ಹಸಿರುಹೊದಿಕೆ ತೊಡಿಸಿದ ಶಿಕ್ಷಕ | ಬೇಡರ ಬೂದಿಹಾಳ ಶಾಲೆಯ ಮುಖ್ಯಗುರು ಕಾರ್ಯಕ್ಕೆ ಗ್ರಾಮಸ್ಥರ ಶ್ಲಾಘನೆ ಉದಯರಶ್ಮಿ ದಿನಪತ್ರಿಕೆ ವಿಶೇಷ ವರದಿ: ಕೃಷ್ಣಾ ಪೂಜಾರಿಬದಾಮಿ: ಸರ್ಕಾರಿ ಶಾಲೆಯೆಂದರೆ ಹೀಗಳೆಯುವವರೇ ಹೆಚ್ಚು ಜನ. ಹೀಗಿರುವಾಗ ಕೇವಲ ಎರಡೂವರೆ ವರ್ಷದ ಹಿಂದೆ ಬೇರೆ ಶಾಲೆಯಿಂದ ವರ್ಗಾವಣೆಗೊಂಡು ಬಂದ ಶಿಕ್ವಕರೊಬ್ಬರು ತಾವಿರುವ ಶಾಲೆಯ ಆವರಣವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿ ಪರಿಸರ ಕಾಳಜಿ ಮೆರೆದು ಎಲ್ಲರೂ ತಲೆಎತ್ತಿ ನೋಡುವಂತೆ ಮಾಡಿದ್ದಾರೆ.ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬೇಡರ ಬೂದೀಹಾಳ ಶಾಲೆಯ ಮುಖ್ಯ ಗುರು ವೈ.ಎನ್.ಅಮರಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಶಿಕ್ಷಕರು.ಗ್ರಾಮದ ಎಲ್ಲ ಗುರು ಹಿರಿಯರ ಹಾಗೂ ಎಸ್.ಡಿ.ಎಮ್.ಸಿ ಯವರ ವಿಶ್ವಾಸ ಗಳಿಸಿ, ಸರಕಾರದಿಂದ ಬರುವ ಅನುದಾನವಲ್ಲದೇ ತಮ್ಮ ಸಹೋದ್ಯೋಗಿ ಶಿಕ್ಷಕರ ಸಹಾಯ ಪಡೆದು ತಮ್ಮ ಸ್ವಂತ ಹಣವನ್ನು ವಿನಿಯೋಗಿಸಿ ಇಡೀ ಶಾಲೆಯ ಆವರಣವನ್ನು ಒಂದು ಸುಂದರ ತೋಟವನ್ನಾಗಿಸಿ, ಹಸಿರು ಹೊದಿಕೆ ತೊಡಿಸುವಲ್ಲಿ ಸಫಲರಾಗಿದ್ದಾರೆ.ಶಾಲೆಯಲ್ಲಿ ಮಕ್ಕಳಿಗೆ ಕೇವಲ ಪಾಠ ಮಾಡಿದರೆ ಸಾಲದು, ಅವರಿಗೆ ಶಿಕ್ಷಣಕ್ಕೆ ಪೂರಕ ವಾತಾವರಣವನ್ನು…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ.ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪ್ರವಾಸ.. ಅದರಲ್ಲೂ ಧಾರ್ಮಿಕ ಪ್ರವಾಸ ಮನುಷ್ಯ ಜೀವನದ ಅತ್ಯುತ್ತಮಿಕೆಯನ್ನು ನಮಗೆ ಕೊಡಮಾಡುತ್ತದೆ. ಇತ್ತೀಚಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಮಂದಿರದ ಗರ್ಭಗುಡಿಯಲ್ಲಿ ಪುಟ್ಟ ಬಾಲರಾಮನ ಮೂರ್ತಿಯನ್ನು ಸಾವಿರಾರು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಯಿತು. ಜಗತ್ತಿನಾದ್ಯಂತ ಈ ದೃಶ್ಯವನ್ನು ಲೈವ್ ನಲ್ಲಿ ನೋಡಿದ ಜನರು ಭಕ್ತಿ ಪರವಶರಾದರೆ, ಭಾರತೀಯರ ಪಾಲಿಗೆ ಇದು ಅವರ ಜೀವನದ ಮಹೋನ್ನತ ಘಳಿಗೆ. ಕಳೆದ ಐದು ಶತಮಾನಗಳಿಂದ ರಾಮನಿಲ್ಲದ ಅಯೋಧ್ಯೆಯಲ್ಲಿ ಅಖಂಡ ಪೂಜೆ ಜಪ ತಪ ಭಜನೆ ಪಾರಾಯಣಗಳು ನಡೆಯುತ್ತಿದ್ದರೂ ರಾಮ ಭಕ್ತರಿಗೆ ಮಂದಿರವಿಲ್ಲದೆ ಹೋಗಿದ್ದು ಅತೀವ ನೋವನ್ನು ಉಂಟು ಮಾಡಿತ್ತು. ಇದೀಗ ಆ ಎಲ್ಲ ನೋವಿಗೆ ಮುಕ್ತಿ ಹಾಡುವಂತೆ ಅಯೋಧ್ಯೆಯ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದ್ದು ಪುಟ್ಟ ಬಾಲ ರಾಮನ ಮೂರ್ತಿಯ ಪ್ರತಿಷ್ಠಾಪನೆಯಾಗಿ ನಮ್ಮೆಲ್ಲರ ಭಕ್ತಿಯ ಶಕ್ತಿಯ ಪ್ರತೀಕವಾಗಿ ಮುದ್ದು ರಾಮ ನಗುತ್ತಾ ನಿಂತಿದ್ದಾನೆ. ಮುಂದಿನ ದಿನಮಾನಗಳಲ್ಲಿ ಅತಿ ಹೆಚ್ಚಿನ ವಾಣಿಜ್ಯೋದ್ಯಮವಾಗಿ ಧಾರ್ಮಿಕ ಪ್ರವಾಸ ತಾಣವಾಗಿ ಅಯೋಧ್ಯೆ…

Read More

ಮೂವರಿಗೆ ವಾರ್ಷಿಕ, ಮೂವರಿಗೆ ಯುವ ಪ್ರಶಸ್ತಿ | ಜಿಲ್ಲಾಧಿಕಾರಿ ಡಾ.ಆನಂದ ಕೆ. ಪ್ರಕಟಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಲಸಂಗಿ ಗೆಳೆಯರ ಪ್ರತಿಷ್ಠಾನದ ವಾರ್ಷಿಕ ಗೌರವ ಹಾಗೂ ಯುವ ಪ್ರಶಸ್ತಿಗಳನ್ನು ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ. ಅವರು ಪ್ರಕಟಿಸಿದ್ದಾರೆ.ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಷ್ಠಾನದ ಸಭೆಯಲ್ಲಿ ಅರ್ಹರಿಗೆ ಪ್ರಶಸ್ತಿಗಳನ್ನು ಅಂತಿಮಗೊಳಿಸಲಾಗಿದೆ.ಪ್ರತಿಷ್ಠಾನದ ಗೌರವ ವಾರ್ಷಿಕ ಪ್ರಶಸ್ತಿಯನ್ನು ಜಾನಪದ ಸಾಹಿತ್ಯ ಸಮಗ್ರ ಸಾಹಿತ್ಯ ಹಾಗೂ ವಿಮರ್ಶೆ, ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಕೃತಿಗಳನ್ನು ಗಣನೀಯ ಸೇವೆ ಸಲ್ಲಿಸಿರುವ ಸಾಹಿತಿಗಳನ್ನು ಹಾಗೂ ಯುವ ಪ್ರಶಸ್ತಿಗೆ ಅತ್ಯುತ್ತಮ ಕೃತಿಗಳನ್ನು ರಚಿಸಿದ ಯುವ ಬರಹಗಾರರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ.ವಾರ್ಷಿಕ ಗೌರವ ಪ್ರಶಸ್ತಿ ೫೦ ಸಾವಿರ ರೂ. ಗಳು ಹಾಗೂ ಯುವ ಪ್ರಶಸ್ತಿಗೆ ೧೦ ಸಾವಿರ ರೂ. ಗಳ ನಗದಿನೊಂದಿಗೆ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಜನಪದ ಕ್ಷೇತ್ರದಲ್ಲಿ ೨೦೨೨ನೇ ವಾರ್ಷಿಕ ಗೌರವ ಪ್ರಶಸ್ತಿಗೆ ದಕ್ಷಿಣಕನ್ನಡ ಜಿಲ್ಲೆಯ ಡಾ. ಬಿ.ಎ. ವಿವೇಕ ರೈ ಪುರಸ್ಕೃತರಾಗಿದ್ದಾರೆ.…

Read More

ಬಬಲೇಶ್ವರ ಮತಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ ನಡೆಯುತ್ತಿರುವ ೨೦೨೬ರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಶೇಕಡಾ ನೂರರಷ್ಟು ಪ್ರಗತಿ ಸಾಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಮೇಲ್ವಿಚಾರಕರನ್ನು ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಜುಲೈ ೧೬ರಂದು ಸನ್ಮಾನಿಸಿ, ಅಭಿನಂದಿಸಲಾಯಿತು.​ಮತದಾರರ ಪಟ್ಟಿ ಪರಿಷ್ಕರಣೆಯ ಗಣತಿ ನಮೂನೆಗಳ ವಿತರಣೆ ಹಾಗೂ ಡಿಜಿಟೈಜೇಶನ್ ಕಾರ್ಯವನ್ನು ನಿಗದಿತ ಸಮಯಕ್ಕಿಂತ ಮೊದಲೇ ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.೨೯-ಬಬಲೇಶ್ವರ ಮತಕ್ಷೇತ್ರದ​ ಭಾಗ ಸಂಖ್ಯೆ ೮೪ರ ಮತಗಟ್ಟೆ ಮಟ್ಟದ ಅಧಿಕಾರಿಯಾದ ಎಚ್.ಎನ್. ಮೋಹಿತೆ ಹಾಗೂ ಮತಗಟ್ಟೆ ಮೇಲ್ವಿಚಾರಕರಾದ ಶ್ರೀಮತಿ ಸುಜಾತಾ ಬಾಗಲಕೋಟ, ಭಾಗ ಸಂಖ್ಯೆ ೨೦೪ರ ಮತಗಟ್ಟೆ ಅಧಿಕಾರಿಯಾದ ಶ್ರೀಮತಿ ಚಂದ್ರವ್ವ ತಂಬದ ಹಾಗೂ ಮತಗಟ್ಟೆ ಮೇಲ್ವಿಚಾರಕರಾದ ಶಕೆ.ಕೆ. ಅಸ್ಕಿ ಮತ್ತು ಭಾಗ ಸಂಖ್ಯೆ ೨೧೨ರ ಮತಗಟ್ಟೆ ಅಧಿಕಾರಿಯಾದ ಶ್ರೀಮತಿ ಸುನೀತಾ ವಾಲೀಕಾರ ಹಾಗೂ ಮತಗಟ್ಟೆ ಮೇಲ್ವಿಚಾರಕರಾದ ಶಿವಪ್ಪ ಕಾಂಬಳೆ ಇವರನ್ನು ಸನ್ಮಾನಿಸಲಾಯಿತು.​ ಅವಧಿಗೆ ಮುನ್ನವೇ…

Read More

ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಪ್ರಸಾದ್ ಮನವಿ ಉದಯರಶ್ಮಿ ದಿನಪತ್ರಿಕೆ ವರದಿ: ಶ್ರೀಕಂಠ ಈಶ್ವರ್ಎಚ್ ಡಿ ಕೋಟೆ: ತಾಲೂಕಿನ ಹಲವು ಭಾಗಗಳಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರಗಾಲದ ಛಾಯೆ ಆವರಿಸಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬೆಳೆಗಳು ಒಣಗುತ್ತಿದ್ದು, ಕೊಳವೆ ಬಾವಿಗಳು ಕೂಡ ಬರಿದಾಗಿವೆ. ಮುಸುಕಿನ ಜೋಳ ಒಣಗುತ್ತಿದ್ದು, ಹತ್ತಿ ಬೆಳೆ ಯಲ್ಲಿ ಯಾವುದೇ ಬೆಳವಣಿಗೆ ಕೂಡ ಕಂಡುಬರುತ್ತಿಲ್ಲ. ಇನ್ನು ಹೊಗೆಸೊಪ್ಪು ಕೂಡ ಬೆಳೆಯದೆ ಇರುವುದರಿಂದ ರೈತರು ಆತಂಕಗೊಂಡಿದ್ದಾರೆ. ಇನ್ನು ಸುರಿಯುತ್ತಿರುವ ಇಬ್ಬನಿಗೆ ಬೆಳೆಗಳು ನಾಶವಾಗುತ್ತಿದ್ದು, ಅನ್ನದಾತನಿಗೆ ದಿಕ್ಕೆತೋಚದಂತಾಗಿದೆ.ತಾಲೂಕಿನಲ್ಲಿ ಈ ತಿಂಗಳಲ್ಲಿ ಇಲ್ಲಿಯವರಿಗೆ ಕೇವಲ ನಾಲ್ಕರಿಂದ ಐದು ದಿನಗಳು ಮಾತ್ರ ಸಾಧಾರಣ ಮಳೆಯಾಗಿದ್ದರೆ, ಬೀಚನಹಳ್ಳಿ, ಆಲನಹಳ್ಳಿಯಲ್ಲಿ ಒಂದು ಹನಿ ಕೂಡ ಮಳೆ ಧರೆಗೆ ಬಿದ್ದಿಲ್ಲ. ಹೀಗಾಗಿ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ಅನ್ನದಾತ ಆಕಾಶ ನೋಡುವಂತಾಗಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 52 ರಷ್ಟು ಕಡಿಮೆ ಮಳೆಯಾಗಿರುವುದರಿಂದ ಬಹುತೇಕ ಕಡೆ ರೈತರು ಇನ್ನು ಬಿತ್ತನೆ…

Read More

ವಿಜಯಪುರದಲ್ಲಿ ರಾಷ್ಟ್ರೀಯ ಬಂಜಾರ ಪರಿಷತ್ ಅಧ್ಯಕ್ಷ ಪ್ರಕಾಶ ಬಾಳು ಚವ್ಹಾಣ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರಸಿದ್ಧ ಶ್ರೀ ಅಂಬಾ ಭವಾನಿ ವಾರ್ಷಿಕ ಜಾತ್ರಾ ಮಹೋತ್ಸವವು ಜುಲೈ 18 ಹಾಗೂ 19 ರಂದು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ನಡೆಯಲಿದ್ದು, ಜಾತ್ರೆಯ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ರಾಷ್ಟ್ರೀಯ ಬಂಜಾರ ಪರಿಷದ ಅಧ್ಯಕ್ಷ ಪ್ರಕಾಶ ಬಾಳು ಚವ್ಹಾಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅವರು ಮಾತನಾಡಿ, ಜುಲೈ 18ರಂದು ಬೆಳಿಗ್ಗೆ 9.00 ಗಂಟೆಗೆ ಸೋಲಾಪುರ ರಸ್ತೆಯಲ್ಲಿರುವ ಮರಗಟ್ಟೆ ಓಣಿಯಿಂದ ಶ್ರೀ ಅಂಬಾ ಭವಾನಿ ದೇವಿಯ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಬಂಜಾರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಡೊಳ್ಳು-ತಾಶಾ, ಸಾಂಪ್ರದಾಯಿಕ ನೃತ್ಯಗಳು, 501 ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, ಗೋಂಬೆ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.ಜುಲೈ 19ರಂದು ಸಂಜೆ 6.00 ಗಂಟೆಗೆ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ…

Read More

ವಿಜಯಪುರ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಆನಂದ ಕೆ ಮಾಹಿತಿ ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮನೆ ಮನೆ ಗಣತಿ ಹಾಗೂ ಡಿಜಿಟಲೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಪ್ರಸ್ತುತ ಜಿಲ್ಲಾದ್ಯಂತ ಒಟ್ಟು ೧೯,೩೯,೬೭೭ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಗಣತಿ ಕಾರ್ಯವು ಪ್ರಗತಿಯಲ್ಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಜುಲೈ.೧೬.ರಲ್ಲಿದ್ದಂತೆ ಮತದಾರರ ಪಟ್ಟಿಯಲ್ಲಿ ಒಟ್ಟು ೧೯,೮೨,೧೧೪ ಮತದಾರರಿದ್ದು, ಗಣತಿ ನಮೂನೆಗಳನ್ನು ಈಗಾಗಲೇ ಆಯಾ ವ್ಯಾಪ್ತಿಯ ಬಿ.ಎಲ್.ಒ ಗಳಿಗೆ ವಿತರಿಸಲಾಗಿದೆ.ಮನೆ ಮನೆ ಗಣತಿ ಹಾಗೂ ಡಿಜಿಟಲೀಕರಣದ ಅವಧಿಯು ದಿನಾಂಕ ೩೦-೦೬-೨೦೨೬ ರಿಂದ ಆರಂಭಗೊಂಡಿದ್ದು, ೦೮-೦೮-೨೦೨೬ರವರೆಗೆ ನಡೆಯಲಿದೆ.​ಇದುವರೆಗೆ ಜಿಲ್ಲೆಯಲ್ಲಿ ಕೈಗೊಳ್ಳಲಾದ ಗಣಕೀಕರಣದ ಸದ್ಯದ ಸ್ಥಿತಿಗತಿಯಂತೆ ಒಟ್ಟು ೧೦,೦೮,೮೯೯ ಗಣತಿ ನಮೂನೆಗಳನ್ನು ಯಶಸ್ವಿಯಾಗಿ ಗಣಕೀಕರಣಗೊಳಿಸಲಾಗಿದೆ. ಇದರಲ್ಲಿ ಆನ್‌ಲೈನ್ ಮೂಲಕ ಮತದಾರರು ಸಲ್ಲಿಸಿದ ಒಟ್ಟು ಗಣತಿ ನಮೂನೆಗಳ ಸಂಖ್ಯೆ ೩,೩೨೧ ಆಗಿದೆ. ಇನ್ನುಳಿದಂತೆ ಕ್ಷೇತ್ರ ಭೇಟಿಯ ಸಮಯದಲ್ಲಿ ವಿವರ ಸಂಗ್ರಹಿಸಲು ಸಾಧ್ಯವಾಗದ ಅಥವಾ ಗೈರುಹಾಜರಾದ ಮತದಾರರ ಸಂಖ್ಯೆ…

Read More

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗುರುವಾರ ಮಧ್ಯಾಹ್ನ ೧೨:೦೦ ಗಂಟೆಯವರೆಗೆ ೨,೫೨,೫೭೦ ಮತದಾರರ ಗಣತಿ ನಮೂನೆಗಳನ್ನು ವಿತರಣೆ ಮಾಡಲಾಗಿದ್ದು, ಅದರಲ್ಲಿ ೭೬,೭೭೭ ಗಣತಿ ನಮೂನೆಗಳು ಡಿಜಿಟೈಜ್ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಹೇಳಿದರು.ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ -೨೦೨೬ ಪ್ರಗತಿ ಕುರಿತಂತೆ ನಗರ ಮತಕ್ಷೇತ್ರದ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆನಲೈನನಲ್ಲಿ ಮತದಾರರು ಸಲ್ಲಿಸಿದ ಒಟ್ಟು ಗಣತಿ ನಮೂನೆಗಳು ೧೯೭೯, ಸಂಗ್ರಹಿಸಲಾಗದ/ಗೈರುಹಾಜರಾದ ಮತದಾರರು ೧೧, ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು ೪೬೮, ಮರಣ ಹೊಂದಿರುವ ಮತದಾರರು ೮೬೭ ಈಗಾಗಲೇ ನೋಂದಾಯಿಸಿಕೊಂಡ ಮತದಾರರು ೭೩೦ ಮತ್ತು ಇತರೆ ೬೯ ಪ್ರಗತಿಯ ಬಗ್ಗೆ ಮಾಹಿತಿ ನೀಡಲಾಯಿತು.ಈಗಾಗಲೇ ಶೇ.೮೭ರಷ್ಟು ಮತದಾರರಿಗೆ ಮನೆ ಮನೆಗೆ ತೆರಳಿ ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಗಣತಿ ನಮೂನೆ ತಲುಪದಿರುವ ಮತದಾರರ ಗುರುತಿನ ಚೀಟಿಯ ಮಾಹಿತಿ ಹಾಗೂ ಅವರ…

Read More

ಗೋಲಗೇರಿಯ ಡಂಬಳ ಕ್ರಾಸ್‌ನಲ್ಲಿ ಸಿಂದಗಿ ಬಿಜೆಪಿ ಮಂಡಲ ಹಾಗೂ ರೈತರ ನೇತೃತ್ವದಲ್ಲಿ ಬೃಹತ್ ರಸ್ತೆ ತಡೆ ಚಳುವಳಿ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದೆ ನಂಬಿಕೆ ದ್ರೋಹ ಮಾಡಿದೆ. ಮಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣವೇ ಪ್ರತಿ ಹೆಕ್ಟರ್‌ಗೆ ರೂ.೫೦ ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಆಗ್ರಹಿಸಿದ್ದಾರೆ.ಸಿಂದಗಿ ತಾಲೂಕಿನ ಗೋಲಗೇರಿಯ ಡಂಬಳ ಕ್ರಾಸ್‌ನಲ್ಲಿ ಸಿಂದಗಿ–ಕೊಡಂಗಲ್ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು, ಗುತ್ತಿಗೆ ಬಸವಣ್ಣ ಏತ ನೀರಾವರಿ ಯೋಜನೆ ಹಾಗೂ ಇಂಡಿ ಐಬಿಸಿ ಕಾಲುವೆಗಳಿಗೆ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿ ಸಿಂದಗಿ ಬಿಜೆಪಿ ಮಂಡಲ ಹಾಗೂ ರೈತರ ನೇತೃತ್ವದಲ್ಲಿ ಹಮ್ಮಿಕೊಂಡ ಬೃಹತ್ ರಸ್ತೆ ತಡೆ ಚಳುವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿವೆ. ಸರ್ಕಾರ ನೀಡಿರುವ ಭರವಸೆಗಳು ಈಡೇರಿಲ್ಲ ಎಂದು ಟೀಕಿಸಿದ ಅವರು, ಕಾಂಗ್ರೆಸ್…

Read More