Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 11, 2026

ನಗರದ ಇಬ್ಬಂದಿತನ – ನಾವು ಕಟ್ಟಿಕೊಳ್ಳುತ್ತಿರುವ ಏಕಾಂತ ಕೋಟೆ

ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲ :ಕಲಬುರ್ಗಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ
ವಿಶೇಷ ಲೇಖನ

ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಉದಯರಶ್ಮಿ ದಿನಪತ್ರಿಕೆ

ಗೊಗ್ಗವ್ವೆ ಬಾಲ್ಯದಿಂದಲೂ ವಿಶಿಷ್ಟ ಶಿವಭಕ್ತೆ. ಇವಳ ಜೀವನ ಒಂದು ಬಗೆಯ ಹೋರಾಟದಿಂದ ಕೂಡಿದೆ. ಹೆತ್ತವರು ಈಕೆಗೆ ವಿವಾಹ ಮಾಡಲು ಬಯಸಿದಾಗ, ಮದುವೆ ಬಗ್ಗೆ ಆಸಕ್ತಿ ಇರದ ಈಕೆ ‘ಗೊಗ್ಗಳೇಶ್ವರ’ ದೇಗುಲದಲ್ಲಿ ಅಡಗಿ ಕುಳಿತು ವಿವಾಹ ಆಗುವ ಸಂದರ್ಭವನ್ನು ತಪ್ಪಿಸಿಕೊಂಡ ಳಂತೆ. ಇವಳು ಕೇರಳದ ಅವಳೂರಿನ ಗೊಗ್ಗಳೇಶ್ವರ ದೇವಾಲಯದಲ್ಲಿ ಧೂಪದ ಕಾಯಕ ಮಾಡುತ್ತಿದ್ದುದರಿಂದ ಈಕೆಯನ್ನು ‘ಧೂಪದ ಗೊಗ್ಗವ್ವೆ’ಯೆಂದೂ ಕರೆಯುವರು. ಗುಗ್ಗಳ ಧೂಪ ಸಸ್ಯದ ಒಂದು ಪ್ರಕಾರದ ಅಂಟು. ಪೂಜೆ ಸಮಾರಂಭಗಳಲ್ಲಿ ಪರಿಮಳ ಸೂಸುವ ಕಾರ್ಯಕ್ಕೆ ಬೆಂಕಿಯಲ್ಲಿ ಈ ಧೂಪದ ಪದಾರ್ಥವನ್ನು ಹಾಕಿ ವಾತಾವರಣವನ್ನು ಪ್ರಸನ್ನಗೊಳಿಸುವ ಕೆಲಸ ಕಾಯಕವಾಗಿತ್ತು.
ಈಕೆಯ ವಚನಗಳ ಅಂಕಿತ ‘ನಾಸ್ತಿನಾಥಾ’.


ಗೊಗ್ಗವ್ವೆ
ಜನನ
೧೨ ನೆಯ ಶತಮಾನ
ಅಂಕಿತನಾಮ
ನಾಸ್ತಿನಾಥಾ
ಒಟ್ಟು ವಚನಗಳು. ೬
ಇವರು ೧೨ನೇ ಶತಮಾನದ ವಚನಕಾರರಲ್ಲಿ ಒಬ್ಬರು. ಇವರು ಬಾಲ್ಯದಿಂದಲೆ ಶಿವನ ಆರಾಧಕರಾಗಿದ್ದರು. ಇವರು ಮೂಲತಃ ಕೇರಳ ರಾಜ್ಯದ ಅವಲೂರಿನವರು. ಇವರು ತಮ್ಮ ಮದುವೆಯ ವಯಸ್ಸಿಗೆ ಬಂದಾಗ ಮನೆಯವರು ಇವರ ಮದುವೆ ವಿಷಯದ ಪ್ರಸ್ತಾವನೆ ಇವರ ಮುಂದಿಟ್ಟರು. ಆದರೆ ಇವರಿಗೆ ಮದುವೆಯ ವೈವಾಹಿಕ ಜೀವನ ಆಸಕ್ತಿ ಇಲ್ಲದಿರುವ ಕಾರಣ ಅವರೂರಿನ ಗೊಗ್ಗಳೇಶ್ವರ ದೇವಾಲಯದಲ್ಲಿ ಅಡಗಿ ಕುಳಿತಿದ್ದರಂತೆ.‌ ಮನೆಯವರು ಎಷ್ಟೇ ಕರೆದರು ಇವೆಲ್ಲವೂ ಬೇಡವೆಂದು ಆ ದೇವಾಲಯದಲ್ಲಿಯೇ ಶಿವನಿಗೆ ಪೂಜೆ ಕೈಂಕರ್ಯಗಳನ್ನು ಮಾಡತೊಡಗಿದರು. ಶಿವನಿಗೆ ದಿನಾಲು ಧೂಪ ಹಾಕುವ ಕಾಯಕವನ್ನು ಮಾಡುತಿದ್ದರಂತೆ. ಒಂದು ದಿನ ಸಾಕ್ಷಾತ್ ಪರಶಿವನೇ ಇವರನ್ನು ಪರೀಕ್ಷಿಸಲು ಬಂದಿದ್ದರಂತೆ. ಇವರ ಬಳಿ ಬಂದು ಕೈಲಾಸಕ್ಕೆ ಹೋಗುವ ದಾರಿಯನ್ನು ಕೇಳಿದ್ದರಂತೆ. ಇವರು ಗೊಗ್ಗವ್ವೆಯವರು ಶಿವನಿಗೆ ತಮ್ಮ ಧೂಪದ ಹೊಗೆಯ ಮೂಲಕ ಶಿವನಿಗೆ ಕೈಲಾಸದ ದಾರಿ ತೋರಿಸಿದರಂತೆ. ಇಂತಹ ಒಂದು ಪುರಾಣವು ಬಸವೋತ್ತರ ಕಾಲದಲ್ಲಿ ಸೃಷ್ಟಿಯಾಗಿದ್ದು ಕಂಡು ಬರುತ್ತದೆ.
ಧೂಪ ಹಾಕುವ ಕಾಯಕವನ್ನು ಮುಂದುವರಿದಂತೆ ಇತ್ತ ಕಲ್ಯಾಣ ಕರ್ನಾಟಕದತ್ತ ಬಂದು ಅನುಭವ ಮಂಟಪದಲ್ಲಿ ಶರಣರೊಂದಿಗೆ ನೆಲೆಸಿದಳು. ನಾಸ್ತಿನಾಥಾ’ ಅಂಕಿತದಲ್ಲಿ ೬ ವಚನಗಳನ್ನು ರಚಿಸಿದ್ದಾಳೆ. ಅವುಗಳಲ್ಲಿ ಲಿಂಗಾಂಗ ಸಾಮರಸ್ಯ, ಸ್ತ್ರೀ ಪುರುಷ ಸಮಾನತೆಯ ಚಿಂತನೆಗೆ ಅದ್ಯತೆ ನೀಡಲಾಗಿದೆ. ಸರಳ ಭಾಷೆ, ವೃತ್ತಿಪರಿಭಾಷೆಯ ಬಳಕೆಯಿಂದ ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ
ಇವರು ಭಾಷೆ ಗಡಿಗೂ ಮೀರಿದ ಶಿವಶರಣೆಯಲ್ಲಿ ಒಬ್ಬರು. ಇಲ್ಲಿ ಕರ್ನಾಟಕಕ್ಕೆ ಬಂದು ಇಲ್ಲಿ ನೆಲೆಸಿ ಭಾಷೆ ಸಾಹಿತ್ಯವನ್ನು ಅರಿತು ವಚನಗಳನ್ನು ರಚಿಸಿದರೆಂದರೆ ಇವರ ಸಾಧನೆ ಕಾಯಕ ಅಮೋಘ ಕೊಡುಗೆ.
ಧೂಪದ ಗೊಗ್ಗವ್ವೆಯ ಆರು ವಚನಗಳು ಲಭ್ಯವಾಗಿವೆ.
1 ನೆಯ ವಚನ
ಅನಲಕೊಂಡ ಭೋಗಕ್ಕೆ ಪರಿ ಪ್ರಕಾರವುಂಟೇ ?
ಶರಧಿಕೊಂಡ ಸಾಗರಕ್ಕೆ ಕುರುಹಿನ ತಲೆಯೇ ?
ಲಿಂಗ ಮುಟ್ಟಿದ ಅಂಗಕ್ಕೆ ಮತ್ತೆ
ಪುಣ್ಯವುಂಟೇ ? ಹುಸಿ ನಾಸ್ತಿನಾಥಾ!
2 ವಚನ
ಉದ್ದವನೇರುವದಕ್ಕೆ ಗದ್ದುಗೆಯಿಲ್ಲದೆ ಎಯ್ದಬಾರದು, ಚಿದ್ರೋಪನರಿಯುವದಕ್ಕೆ, ಅರ್ಚನೆ, ಪೂಜೆ ನಿತ್ಯ ನಿಯಮವಿಲ್ಲದೆ ಕಾಣಬಾರದು.ಅದು ಸತ್ಯದಿಂದ ಮಾಡಿ,ಅಸತ್ಯವ ಮೆರೆದೆಡೆ ಅದೇ ಸತ್ಯವೆಂಬೆ ನಾಸ್ತಿನಾಥ॥॥
3ನೇ ವಚನ
ಗಂಡು ಮೋಹಿಸಿ,ಹೆಣ್ಣು ಹಿಡಿದೆಡೆ ಒಬ್ಬರ ಒಡವೆ ಎಂದರಿಯಬೇಕು.ಹೆಣ್ಣು ಮೊಹಿಸಿ,ಗಂಡು ಹಿಡಿದೆಡೆ ಉತ್ತರವಾವುದೆಂದರಿಯಬೇಕು.ಈ ಎರಡು ಉಭಯವ ಕಳೆದು ಸುಖಿ ತಾನಾಗಬಲ್ಲೆದು ನಾಸ್ತಿನಾಥನು ಪರಿಪೂರ್ಣನೆಂಬೆ॥॥
4 ನೇ ವಚನ
ಮಾರುತನಲ್ಲಿ ಬೆರೆದ ಗಂಧದಂತೆ,ಸುರತದಲ್ಲಿ ಬೆರೆದ ಸುಖದಂತೆ,ಮಚ್ಚಿನಲ್ಲಿ ಕೊಡುವ ಉಚಿತದಂತೆ ಭಕ್ತರಿಗದೆ ಹಾದಿಎಂಬೇ ನಾಸ್ತಿನಾಥ॥॥
5 ನೇ ವಚನ
ಭಕ್ತರು ಜಂಗಮರಲ್ಲಿ ಕಟ್ಟಿ ಹೋರಬೇಕೆ.. ಧೂಪದ ಹೊಗೆ ಎತ್ತೆ ಹೋದರು ಅದು ಸತ್ಯವೆಂಬೆ ನಾಸ್ತಿನಾಥ॥॥
6 ನೇ ವಚನ
ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರು, ಮಿಸೆ,ಕಾಸಿ ಬಂದೆಡೆ ಗಂಡೆಂಬರು ಈ ಎರಡು ಉಭಯವು ಹೆಣ್ಣೊ ಗಂಡೊ ಹುಸಿ ನಾಸ್ತಿನಾಥ॥॥
ಕಲ್ಯಾಣದ ಕ್ರಾಂತಿ ನಡೆದಾಗ ಎಲ್ಲ ಶಿವಶರಣರು ಚದುರಿ ಬೇರೆ ಬೇರೆ ಪ್ರದೇಶಗಳಿಗೆ ವಚನಗಳನ್ನು ಹೊತ್ತು ಹೋದರು. ಆದರೆ ಗೊಗ್ಗವ್ವೆ
ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ಧೂಪತಮಾಹಾಗಾಂವ ಎಂಬ ಗ್ರಾಮದಲ್ಲಿ ಬಂದು ನೆಲೆಸಿದರು. ಇದೆ ಕಾರಣಕ್ಕೆ
ಈ ಊರಿಗೆ ಧೂಪತಮಾಹಾಗಂವ ಎಂಬ ಹೆಸರು
ಬರಲು ಇವರೇ ಕಾರಣ.

ಐಕ್ಯ ಸ್ಥಳ
ಇವರು ಧೂಪ ಉರಿಸುತಿದ್ದ ಕಾರಣ ಊರಿನ ಇದ್ದ ಹೆಸರನ್ನು ಬದಲಿಸಿ ಧೂಪತಮಾಹಾಗಂವ ಎಂದು ಮರುನಾಮಕರಣ ಮಾಡಿದ್ದರಂತೆ ಈ ಗ್ರಾಮಕ್ಕೆ ಉಲ್ಲೇಖವಿದೆ.

ಇವರು ಐಕ್ಯವಾದ ಸ್ಥಳದಲ್ಲಿ ಒಂದು ದೇವಾಲಯವು ನಿರ್ಮಾಣವಾಗಿದೆ. ಇವಾಗ ಮತ್ತೆ ಆ ದೇವಾಲಯದಲ್ಲಿ ಭವ್ಯವಾದ ತೋಟವನ್ನು ನಿರ್ಮಿಸಿದ್ದಾರೆ. ಇಲ್ಲಿ ಗೊಗ್ಗವ್ವೆ ಕೆರೆ ಎಂತಲೂ ಕೂಡ ಇದೆ.

ತನ್ನ ವಚನಗಳಲ್ಲಿ ಸ್ತ್ರೀ ಸಂವೇದನೆ ಸಮಾನತೆಯ ಮೂಲಕ ಗಂಡು ಹೆಣ್ಣು ಸಮಾನರು ಎಂದು ಪ್ರತಿಪಾದಿಸಿದ ದಿಟ್ಟ ಮಹಿಳೆ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 11, 2026

ನಗರದ ಇಬ್ಬಂದಿತನ – ನಾವು ಕಟ್ಟಿಕೊಳ್ಳುತ್ತಿರುವ ಏಕಾಂತ ಕೋಟೆ

ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲ :ಕಲಬುರ್ಗಿ

ರೈತರಿಗೆ ಗರಿಷ್ಠ ಪರಿಹಾರ ಕೊಡಿಸಲು ವೈಜ್ಞಾನಿಕ ವರದಿ ಸಿದ್ಧಪಡಿಸಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 11, 2026
    In ದಿನಪತ್ರಿಕೆ
  • ನಗರದ ಇಬ್ಬಂದಿತನ – ನಾವು ಕಟ್ಟಿಕೊಳ್ಳುತ್ತಿರುವ ಏಕಾಂತ ಕೋಟೆ
    In ಭಾವರಶ್ಮಿ
  • ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲ :ಕಲಬುರ್ಗಿ
    In (ರಾಜ್ಯ ) ಜಿಲ್ಲೆ
  • ರೈತರಿಗೆ ಗರಿಷ್ಠ ಪರಿಹಾರ ಕೊಡಿಸಲು ವೈಜ್ಞಾನಿಕ ವರದಿ ಸಿದ್ಧಪಡಿಸಿ
    In (ರಾಜ್ಯ ) ಜಿಲ್ಲೆ
  • ಹಿಟ್ಟಿನಹಳ್ಳಿಯಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿದ ಸಚಿವರು
    In (ರಾಜ್ಯ ) ಜಿಲ್ಲೆ
  • ಸಮರ್ಪಕ ನೀರು, ಶುಚಿತ್ವ, ತೆರಿಗೆ ವಸೂಲಿಗೆ ಪ್ರಗತಿ
    In (ರಾಜ್ಯ ) ಜಿಲ್ಲೆ
  • ಪೌರ ಕಾರ್ಮಿಕರು ಈ ದೇಶದ ಆಸ್ತಿ :ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ಪೊಲೀಸ್ ಇಲಾಖೆ ಜನಸ್ನೇಹಿ ಇಲಾಖೆ :ಪಿಎಸೈ ಶ್ರೀಕಾಂತ
    In (ರಾಜ್ಯ ) ಜಿಲ್ಲೆ
  • ಲಿಂಗಾಯತ ಧರ್ಮ ಮಾನ್ಯತೆ ಬೇಡಿಕೆಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಗಮನಾರ್ಹ ಸಾಧನೆ ತೋರಿದ ಬಿಎಲ್‌ಡಿಇ ವಿವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.