ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಕಾಯಚಿಕಿತ್ಸಾ ವಿಭಾಗದ ವತಿಯಿಂದ ಸರ್ವೈಕಲ್ ಸ್ಪಾಂಡೊಲೈಸಿಸ್(cervical spondylsis) ಲಕ್ಷಣಗಳು, ಕುತ್ತಿಗೆಯ ಹಿಂಬಾಗ ಬಿಗಿಯುವುದು, ಕುತ್ತಿಗೆ ನೋವು, ಕುತ್ತಿಗೆಯನ್ನು ತಿರಿಗಿಸಲು ಕಷ್ಟವಾಗುವುದು, ಭುಜದಿಂದ ಕೈಗಳಲ್ಲಿ ನೋವು, ಹರಡುವ ಸಮಸ್ಯೆ ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರವನ್ನು ಎಪ್ರಿಲ್ 13 ರಿಂದ ಎಪ್ರಿಲ್18 ರ ವರೆಗೆ ನಡೆಯಲಿದೆ.
ಬಿ.ಎಲ್.ಡಿ.ಇ ಆಯುರ್ವೇದ ಆಸ್ಪತ್ರೆಯಲ್ಲಿ ಸೋಮವಾರದಿಂದ ಶನಿವಾರದಂದು ಆರು ದಿನಗಳ ಕಾಲ ನಡೆಯಲಿದೆ. ಮೇಲಿನ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು(30ರಿಂದ 60 ವರ್ಷದವರಿಗೆ) ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9513397413 ಸಂಪರ್ಕಿಸಬಹುದಾಗಿದೆ.
