Author: editor.udayarashmi@gmail.com

ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಡಾ. ಸರಸ್ವತಿ ಪಾಟೀಲ ಅವರು ಒಬ್ಬ ಅತ್ಯಂತ ಪ್ರಬುದ್ಧ, ಗಂಭೀರ, ಸಂಶೋಧನಾತ್ಮಕ ನಿಲುವಿನ, ಸಮಚಿತ್ತದ ಮಹಿಳೆಎಂದರೆ ತಪ್ಪಾಗಲಾರದು. ಇವರು ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದ ದತ್ತಿ ದಾಸೋಹಿಗಳು.ತಮ್ಮತಾಯಿ -ತಂದೆ, ಅತ್ತೆ -ಮಾವ, ಅವರ ಪತಿ ಡಾ. ಬಿ. ಆರ್. ಪಾಟೀಲರು ಹಾಗೂ ಅವರ ಪಿ. ಎಚ್. ಡಿ ಮಾರ್ಗದರ್ಶಕರ ಹೆಸರಿನಲ್ಲಿ ದತ್ತಿ ದಾಸೋಹದ ಸೇವೆಯನ್ನು ಮಾಡಿದ್ದಾರೆ.ಡಾ. ಸರಸ್ವತಿ ಪಾಟೀಲ ಅವರ ತಾಯಿಯವರು ಶ್ರೀಮತಿ ಗೌರಮ್ಮ, ತಂದೆಯವರು ಶ್ರೀಯುತ ಬಿ. ಎಚ್.ಸಿಂದಗಿ, ನಿವೃತ್ತ ಉಪ ನಿರ್ದೇಶಕರು,ಕೃಷಿ ಇಲಾಖೆ. ಪರಿಶ್ರಮ ಜೀವಿಗಳು,ಶಿಕ್ಷಣ ಪ್ರೇಮಿಗಳು ತಮ್ಮ ಮಕ್ಕಳ ಜೊತೆಗೆ ಬೇರೆಯವರ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಂಡು ಶಿಕ್ಷಣ ಕೊಡಿಸಿದ ಮಹನೀಯರು.ಅವರು ಶಿಕ್ಷಣ ಕಾಶಿ ಎಂದೇ ಕರೆಸಿಕೊಂಡಿರುವ ಧಾರವಾಡದಲ್ಲಿ ಹುಟ್ಟಿ ಬೆಳೆದರು. ಪ್ರಾಥಮಿಕ ಶಿಕ್ಷಣವನ್ನು ಪ್ರೆಸೆಂಟೇಶನ್ ಕಾನ್ವೆಂಟ್ ಸ್ಕೂಲ್ ನಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ ನಲ್ಲಿ, ಬಿ.ಎಸ್ಸಿ. ಕರ್ನಾಟಕ ಕಾಲೇಜಿನಲ್ಲಿ,ಎಂ.ಸ್ಸಿ ಕರ್ನಾಟಕ…

Read More

ಉದಯರಶ್ಮಿ ದಿನಪತ್ರಿಕೆ ಝಳಕಿ: ಇಲ್ಲಿನ ಪೊಲೀಸ್ ಠಾಣೆಗೆ ನೂತನವಾಗಿ ವರ್ಗಾವಣೆಯಾಗಿ ಬಂದ ಪಿಎಸ್‌ಐ ಮಂಜುನಾಥ ತಿರಕನವರ ಇವರನ್ನು ಕ.ರ.ವೇ ತಾಲೂಕಾ ಉಪಾಧ್ಯಕ್ಷ ಪ್ರಕಾಶಗೌಡ ಬಿರಾದಾರರವರ ನೇತೃತ್ವದಲ್ಲಿ ಶಾಲು ಹೊಂದಿಸಿ ಹೂಗುಚ್ಛವನ್ನು ನೀಡುವ ಮೂಲಕ ಸ್ವಾಗತ ಕೋರಲಾಯಿತು.ಈ ಸಂದರ್ಭದಲ್ಲಿ ಕ.ರವೇ ವಲಯ ಅಧ್ಯಕ್ಷರಾದ ರವಿಕುಮಾರ ಹೂಗಾರ, ಸಂತೋಷ ನಾವಿ, ನಿರಂಜನ ಪೂಜಾರಿ, ಹರೀಶ ಶೆಟ್ಟಿ, ಪಿಂಟು ಬಿರಾದಾರ, ಬಾಲಕೃಷ್ಣ ಭೋಸಲೆ, ಮಲ್ಲಿಕಾರ್ಜುನ ಬನಸೋಡೆ, ಅಮೋಘ ಢಾಳೆಯವರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More

ಮುಖ್ಯಮಂತ್ರಿಗಳು ಕೇವಲ ಶಾಸಕರ ದುಃಖ ದುಮ್ಮಾನ ಕೇಳಿದರೆ ಸಾಲದು ಎಂದು ಕುಟುಕಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರು: ಕೇವಲ ಶಾಸಕರ ದುಃಖ ದುಮ್ಮಾನ ಕೇಳಿದರೆ ಸಾಲದು. ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಮಹಾನಗರ ಪಾಲಿಕೆಗಳ ನೌಕರರ ಕಷ್ಟಕಾರ್ಪಣ್ಯ ಆಲಿಸುವ ಹೃದಯವಂತಿಕೆ ತೋರಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತುರ್ತು ಗಮನ ಹರಿಸಬೇಕು ಎಂದು ಕುಮಾರಸ್ವಾಮಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಶಾಸಕರ ಬಂಡಾಯ ತಣಿಸುವುದಕ್ಕೆ, ಕಾಂಗ್ರೆಸ್ ಪಕ್ಷದಲ್ಲಿನ ಬೇಗುದಿಯನ್ನು ಕಡಿಮೆ ಮಾಡಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಮಯವೇ ಸಾಲುತ್ತಿಲ್ಲ. ಇದನ್ನು ನಾನು ತಪ್ಪೆನ್ನಲಾರೆ. ಆದರೆ, ಪಾಲಿಕೆ ನೌಕರರು ಎಸಗಿದ ಪಾಪವೇನು? ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿಳಂಬ ಧೋರಣೆ ಯಾಕೆ? ಸ್ವತಃ ಮುಖ್ಯಮಂತ್ರಿ ಅವರೇ ಮಾನವೀಯ ನೆಲೆಗಟ್ಟಿನಲ್ಲಿ ತಕ್ಷಣವೇ ಕ್ರಮ ವಹಿಸುತ್ತಿಲ್ಲ ಏಕೆ? ಹಗಲಿರುಳು ಜನರಿಗಾಗಿ ದುಡಿಯುವ ಅವರ ಬದುಕಿಗೂ…

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಮುಖ್ಯರಸ್ತೆಗಳ ಪಕ್ಕದ ಎರಡು ಬದಿಗಳಲ್ಲಿ ಚಂಡಿಗಳ ಜಾಗ ಒತ್ತುವರಿ ಮಾಡಿಕೊಂಡು ಕಟ್ಟಿರುವ ಗೂಡಂಗಡಿಗಳು, ತಳ್ಳು ಬಂಡಿಗಳ ತೆರವು ಕಾರ್ಯಾಚರಣೆ ಬುಧವಾರ ನಡೆಯಿತು.ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ ಮಾಹಿತಿ ನೀಡಿ ಮಾತನಾಡಿ ಪಟ್ಟಣದ ಮುಖ್ಯರಸ್ತೆಗಳ ಚರಂಡಿಗಳು ಒತ್ತುವರಿಯಾಗಿದ್ದರಿಂದ ಚರಂಡಿಗಳ ಸ್ವಚ್ಚತೆ ಮಾಡಲಾಗುತ್ತಿಲ್ಲ, ವಾಹನ ದಟ್ಟಣೆ ನಿಯಂತ್ರಣ ಮಾಡಲಾಗುತ್ತಿಲ್ಲ ಹೀಗಾಗಿ ಪುರಸಭೆ ಅಧ್ಯಕ್ಷೆ ಸುಹಾಸಿನಿ ವಿರೇಶ ಖೇಳಗಿ ಅಧ್ಯಕ್ಷತೆಯಲ್ಲಿ ಕೆಲ ತಿಂಗಳ ಹಿಂದೆ ಸಭೆ ನಡೆಸಲಾಗಿದ್ದು ಸರ್ವ ಸದಸ್ಯರ ಸಮ್ಮತಿಯ ನಂತರ ಠರಾವು ಪಾಸು ಮಾಡಿ ಪಟ್ಟಣದ ಸೂಚಿತ ರಸ್ತೆಗಳ ಒತ್ತುವರಿ ತೆರವು ಕಾರ್ಯಕ್ಕೆ ಸಿದ್ದತೆ ಮಾಡಿಕೊಳ್ಳಲಾಯಿತು. ಬಳಿಕ ತೆರವುಗೊಳಿಸುವ ರಸ್ತೆಗಳಲ್ಲಿರುವ ವ್ಯಾಪಾರಿಗಳು, ಸಾರ್ವಜನಿಕರಿಗೆ ನೋಟಿಸ್ ನೀಡಲಾಗಿದ್ದು ಮೈಕ್‌ಗಳ ಮೂಲಕವು ಡಂಗೂರ ಸಾರಿಸಲಾಗಿತ್ತು. ಒತ್ತುವರಿ ತೆರವಿನ ದಿನಾಂಕ ನಿಗದಿಗೊಳಿಸಿದ್ದರಿಂದ ಜುಲೈ ೯ ಮತ್ತು ೧೦ರಂದು ತೆರವು ಕಾರ್ಯಚರಣೆ ಕೈಗೊಂಡಿದ್ದೇವೆ. ಮೊದಲ ದಿನ ಬಸ್ ನಿಲ್ದಾಣದ ಮುಂದಿನ ರಸ್ತೆಯಿಂದ ಕಾರ್ಯಾಚರಣೆ ನಡೆದಿದ್ದು ಬಸವಣ್ಣ ದೇವರ ಗುಡಿ ತನಕ ತಲುಪಿದೆ. ಗುರುವಾರದಂದು ಉಳಿದ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬಸವಣ್ಣನವರ ನಾಡು, ಶರಣರ ನಾಡು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಶರಣರಲ್ಲಿ ಅತಿ ನಿಷ್ಠಾವಂತ ಶರಣರಾಗಿದ್ದವರು ಹಡಪದ ಅಪ್ಪಣ್ಣನವರು. ಅವರ ಕಾಯಕ ಬದುಕು ಮತ್ತು ಅವರ ವಚನಗಳ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ತಹಶೀಲ್ದಾರ ಎಸ್.ಎಸ್. ನಾಯಕಲಮಠ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಡಪದ ಅಪ್ಪಣ್ಣನವರ 891 ನೇ ಜಯಂತಿ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅಪ್ಪಣ್ಣನವರು ನಿಜ ಸುಖಿ ಶರಣರು 250 ಕ್ಕೂ ಹೆಚ್ಚು ವಚನಗಳು ರಚಿಸಿದ್ದಾರೆ. ಕಾಯಕದಲ್ಲಿ ನಿಷ್ಠಾವಂತ ಶರಣರು ಕಾಯಕದಲ್ಲಿ ದೇವರನ್ನು ಕಂಡವರು, ಇದರ ಜೊತೆಗೆ ಕಾಯಕ ಮಾಡಿ ಶರಣರಿಗೆ ದಾಸೋಹ ನೀಡಿದವರು ಅಂತಹ ಶರಣರಲ್ಲಿ ಇವರೊಬ್ಬರು ಎಂದರು.ಸಮಾಜದ ಮುಖಂಡ ಶಿವಲಿಂಗಪ್ಪ ತಳೇವಾಡ ಮಾತನಾಡಿದರು.ಈ ಸಂದರ್ಭದಲ್ಲಿ ಸಮಾಜ ಮುಂಖಂಡರಾದ ಮುದಿಯಪ್ಪ ಹಡಪದ, ಶೇಕಪ್ಪ ಹಡಪದ, ಸಂಗಪ್ಪ ಹಡಪದ, ಅರ್ಜುನ ಹಡಪದ, ಕಾಂತು ಹಡಪದ, ಬಸು ಹಡಪದ, ಭೀಮಸಿ ಹಡಪದ, ಶಿವಾನಂದ ಹಡಪದ, ಲಕ್ಷಮಣ್ಣ ಹಡಪದ, ಶಿವು…

Read More

ದಿನಗೂಲಿ ನೌಕರರ ಬಿಲ್ ಪಾವತಿಸಲು ಹಣದ ಬೇಡಿಕೆ ಆರೋಪ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ದಿನಗೂಲಿ ನೌಕರರ ಬಿಲ್ ಪಾವತಿಸಲು ಗ್ರಾಮ ಪಂಚಾಯತ್ ನ ಅಧಿಕಾರಿಗಳು ಹಣದ ಬೇಡಿಕೆ ಇರಿಸಿದ್ದಾರೆಂದು ಆರೋಪಿಸಿ, ಇಬ್ಬರು ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಹುಲ್ಲೂರು ಗ್ರಾಮ ಪಂಚಾಯತ ಸದಸ್ಯ ಶಿವಾನಂದ ಲಮಾಣಿ ಇಲ್ಲಿನ ತಾಲೂಕು ಪಂಚಾಯತ ಕಾರ್ಯಾಲಯದ ಆವರಣದಲ್ಲಿ ದಿಢೀರ ಏಕಾಂಗಿ ಧರಣಿ ಆರಂಭಿಸಿದರು.ಈ ಕುರಿತು ’ಉದಯರಶ್ಮಿ’ಯೊಂದಿಗೆ ಧರಣಿ ನಿರತ ಶಿವಾನಂದ ಮಾತನಾಡಿ, ತಾಲ್ಲೂಕಿನ ಹುಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಎಮ್.ಜಿ.ಎನ್.ಆರ್.ಜಿ ಬಿಲ್ ಪಾವತಿಸಿಲ್ಲ. ತಾಲ್ಲೂಕು ಪಂಚಾಯತ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿಯೊಂದು ಕೆಲಸಕ್ಕೆ ಸಮತಿಂಗ ನೀಡಿದರೆ ಅಷ್ಟೇ ಬಿಲ್ ಪಾವತಿ. ಇಲ್ಲಂದರೆ ಕ್ಯಾರೆ ಅನ್ನೋದಿಲ್ಲ ಇಲ್ಲಿನ ಅಧಿಕಾರಿಗಳು. ಕೆಲವು ದಿನಗಳ ಹಿಂದೆ ಹುಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟು ೪೦ ದಿನಗೂಲಿ ನೌಕರರು ಕೆಲಸ ನಿರ್ವಹಣೆ ಮಾಡಿದ್ದು, ಅವರ ಬಿಲ್ ಪಾವತಿಸಲು ಫೋನ್ ಕರೆ ಮೂಲಕ. ಜೆ.ಇ ಉಮೇಶ ಕನ್ನಿ ಇವರಿಗೆ ಮಾತನಾಡಿದರೆ ಹಾರಿಕೆ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕಡ್ಲಿಗರ ಹುಣ್ಣಿಮೆಯಂದು ಕಡಲಿಗೆ ಒಡಲು ತುಂಬುವುದು ಸಂಪ್ರದಾಯ. ಅದಕ್ಕಾಗಿ ಗುರುವಾರ, ರೈತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.ಬೆಳಿಗ್ಗೆಯಿಂದಲೇ ಹಲವು ಮಹಿಳೆಯರು ಆಗಮಿಸಿ ಕೃಷ್ಣಾ ನದಿಗೆ ಉಡಿ ತುಂಬಿ, ಕೃಷ್ಣೆಗೆ ಅರ್ಪಿಸಿದರು.ಬಾಗಿನ ಅರ್ಪಿಸಿದ ಬಳಬಟ್ಟಿ ರೈತರು;ಗುರುವಾರ ಸಂಜೆ ಬಳಬಟ್ಟಿ ಗ್ರಾಮದ ಹಲವು ರೈತರು ಸೇರಿ ಕೃಷ್ಣೆಗೆ ಬಾಗಿನ ಅರ್ಪಿಸಿದರು. ಮೊದಲೆಲ್ಲಾ ಪ್ರತಿ ವರ್ಷ ಕಡ್ಲಿಗರ ಹುಣ್ಣಿಮೆಯಂದೇ ಸರ್ಕಾರ ಬಾಗಿನ ಅರ್ಪಿಸಲಿ ಬಿಡಲಿ, ರೈತರು ಮಾತ್ರ ಎಲ್ಲರೂ ಸೇರಿ ಬಾಗಿನ ಅರ್ಪಿಸುತ್ತಿದ್ದರು.ಈಗ ಜಲಾಶಯ ಪೂರ್ತಿಯಾದ ಮೇಲೆ ಬಾಗಿನ ಅರ್ಪಿಸುವ ಸಂಪ್ರದಾಯ ಹೆಚ್ಚಿದೆ.ಆದರೆ ಇದಕ್ಕೆ ಅಪವಾದ ಎಂಬಂತೆ ಗುರುವಾರ, ನಿಡಗುಂದಿ ತಾಲ್ಲೂಕಿನ ಬಳಬಟ್ಟಿ ಗ್ರಾಮದ ರೈತರು ಕೃಷ್ಣೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ನದಿಯೊಳಗೆ ತೆರಳಿ ಬಾಗಿನ ಅರ್ಪಿಸಿದರು.ವೈ.ಎಲ್. ಗಣಿ, ಎಸ್.ಕೆ. ಹುಗ್ಗಿ,ವೈ.ಕೆ. ಮಾಡಿಗೊಂಡ, ಎಂ.ಎನ್. ತುಪ್ಪದ, ಎನ್.ಎಸ್. ವಿಭೂತಿಮಠ, ಎನ್.ಡಿ. ವಾಲಿಕಾರ, ಎಸ್.ವೈ. ಮಾಳಗೊಂಡ, ಎಸ್.ಬಿ. ಕುಮಟಗಿ,…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಅಪರಾಧ ತಡೆ ಹಾಗೂ ಶಾಂತಿ ಮತ್ತು ಭದ್ರತೆಯ ಸ್ಥಿರತೆಯನ್ನು ಕಾಪಾಡುವಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ರಾಜ್ಯ ಸರ್ಕಾರವು ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ಪಿಐ ಗುರುಶಾಂತ ದಾಶ್ಯಾಳ ಹೇಳಿದರು.ತಾಲೂಕಿನ ನರಸಲಗಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯು ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮದಡಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಇಲಾಖೆಯ ಮೇಲೆ ಜನರಲ್ಲಿ ನಂಬಿಕೆ ಬೆಳೆಸುವದು. ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸದ ಸಂಬಂಧವನ್ನು ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ಸ್ಥಳೀಯ ಜನರ ಸಹಕಾರದಿಂದ ಶಾಂತಿ, ಸುವ್ಯವಸ್ಥೆ ಕಾಪಾಡಬಹುದು. ಸಾರ್ವಜನಿಕರ ಸಹಕಾರದಿಂದ ಪೊಲೀಸರು ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗುರುತಿಸಿ ತಡೆಗಟ್ಟಲು ಸಾಧ್ಯ. ಜನರು ಪೊಲೀಸ್ ಇಲಾಖೆಯ ಬಗ್ಗೆ ಯಾವುದೇ ಭಯ ಪಡಬಾರದು. ಯುವಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ಸಕಾರಾತ್ಮಕವಾದ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.ಸೈಬರ್ ಅಪರಾಧ ಮತ್ತು ನಕಲಿ ಮಾಹಿತಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ನಿಜಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಉಪತಹಸೀಲ್ದಾರ ಬಿ.ಆರ್.ಪೋಲೇಶಿ ಅವರು ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಹಡಪದ ಸಮಾಜದ ಮುಖಂಡರಾದ ಗುರುಲಿಂಗ ಹಡಪದ ಅವರು ಹಡಪದ ಅಪ್ಪಣ್ಣವರ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಹಡಪದ ಸಮಾಜ ತಾಲೂಕಾಧ್ಯಕ್ಷ ಮಹಾಂತೇಶ ಹಡಪದ, ಕಾರ್ಯದರ್ಶಿ ಬಸವರಾಜ ಕೋರವಾರ, ನಾಗೇಶ ನಾಗೂರ, ಶಿವಾನಂದ ಬಳವಾಟ, ಶಿವಾನಂದ ಹಡಪದ, ಬಸವರಾಜ ಮುತ್ತಗಿ, ಮಲ್ಲು ಇವಣಗಿ, ಕಿರಣ ನಾಗೂರ, ರಾಚಪ್ಪ ಹಡಪದ, ಚನ್ನು ಹಡಪದ, ಮಹೇಶ ನಾಗೂರ, ಸಾತಪ್ಪ ಹಳ್ಳಿ, ತಹಸೀಲ್ದಾರ ಕಾರ್ಯಾಲಯದ ಸಿಬ್ಬಂದಿ ಇತರರು ಇದ್ದರು.

Read More

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ವಿಜಯಪುರ ಜಿಲ್ಲಾ ಮಟ್ಟದ ಸಂವಾದ ಸಭೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಹಾಗೂ ನೀರಾವರಿಯಂತಹ ಅನೇಕ ಯೋಜನೆಗಳ ಪೂರಕ ವರದಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ಆಯೋಗದ ಅಧ್ಯಕ್ಷರನ್ನಾಗಿ ಮಾಡಿ ಆರ್ಥಿಕ ತಜ್ಞರನ್ನೊಳಗೊಂಡ ಸಮಿತಿ ರಚಿಸಿದೆ. ಸಮಗ್ರ ಸಂಯುಕ್ತ ಅಭಿವೃದ್ದಿ ಸೂಚ್ಯಂಕದಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ವರದಿ ಪೂರಕವಾಗಿರಲಿ ಎಂದರು.ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ನೀರಾವರಿಯಂತಹ ಅನೇಕ ಯೋಜನೆಗಳನ್ನು ರೂಪಿಸಿ ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ಸರ್ಕಾರದ ಯೋಜನೆಗಳ ಲಾಭ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತಾಗಲು ಅಧಿಕಾರಿಗಳು ಬದ್ದತೆಯಿಂದ ಕಾರ್ಯನಿರ್ವಹಿಸಬೇಕು. ಆರೋಗ್ಯ ವಲಯಕ್ಕೆ ಮತ್ತುಷ್ಟು ಆದ್ಯತೆ ಸೇರಿದಂತೆ ಶಿಕ್ಷಣ…

Read More