Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅಕ್ಕಮಹಾದೇವಿ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಭಾಷೆಗಳ ಜ್ಞಾನ ಹಾಗೂ ಸಂವಹನ ಕೌಶಲಗಳನ್ನು ಸಂಪಾದಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಕಲಾ ನಿಕಾಯದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ‘ಸಂವಹನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನ: ಭಾಷಾ ಅಧ್ಯಯನದ ಮಹತ್ವ’ ಎಂಬ ವಿಷಯದ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೌಶಲಗಳು ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತವೆ. ವಿದ್ಯಾರ್ಥಿನಿಯರು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು, ಕೌಶಲಗಳನ್ನು ಬೆಳೆಸಿಕೊಂಡು, ಹೊಸ ಜಗತ್ತಿನ ಸವಾಲುಗಳು ಮತ್ತು ಅವಕಾಶಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜಾಗಬೇಕು ಎಂದರು.ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಡಾ.ಆರ್.ಜಿ.ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ವೃತ್ತಿಪರ ಕೌಶಲದ ಜೊತೆಗೆ ವ್ಯಕ್ತಿತ್ವದ ಕೌಶಲವನ್ನೂ ಮೈಗೂಡಿಸಿಕೊಳ್ಳಬೇಕು. ಉತ್ತಮ ಕೌಶಲಗಳು ಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿಯನ್ನು ತರಲು ನೆರವಾಗುತ್ತವೆ. ಕೌಶಲಗಳ ಅಭಿವೃದ್ದಿಯ ಮೂಲಕ ವ್ಯಕ್ತಿ ತನ್ನ ಭವಿಷ್ಯವನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಬೀದಿ ನಾಯಿಗಳಿಗೆ ಆಶ್ರಯ ಒದಗಿಸಲು ಬುರಾನಪುರನಲ್ಲಿ ಕಾಯ್ದಿರಿಸಿದ ಎರಡು ಎಕರೆ ಜಾಗದಲ್ಲಿ ಡಾಗ್ ಶೆಲ್ಟರ್ ನಿರ್ಮಾಣಕ್ಕಾಗಿ ನೀಲ ನಕ್ಷೆ ತಯಾರಿಸಿ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದ್ದಾರೆ.ಸೋಮವಾರ ನಗರದ ಬುರಾನಪುರದಲ್ಲಿರುವ ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಡಾಗ್ ಶೆಲ್ಟರ್ ನಿರ್ಮಾಣಕ್ಕೆ ಸೂಚನೆ ನೀಡಿ, ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಕಾಳಜಿಯಿಂದ ನೋಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.ನಗರದಲ್ಲಿರುವ ಪಶುಪಾಲನಾ ಇಲಾಖೆ ಕಚೇರಿಗೆ ಭೇಟಿ ನೀಡಿದ ಅವರು, ಬೀದಿ ನಾಯಿಗಳ ಸಂತಾನ ಹರಣಶಸ್ತ್ರ ಚಿಕಿತ್ಸಾ ಕಾರ್ಯಕ್ರಮದ ಕಟ್ಟಡವನ್ನು ನವೀಕರಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ ಅವರು, ಪಾಲಿಕ್ಲಿನಿಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಜಾನುವಾರು ಚಿಕಿತ್ಸೆ, ನಾಯಿ ಮತ್ತು ಬೆಕ್ಕುಗಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾ ಕೊಠಡಿ, ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡುವುದನ್ನು ಸಂಬಂಧಿಸಿದ ಪಶುವೈದ್ಯರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.ಈ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಅ.೨೩ ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಇಲಾಖೆಗಳಿಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಯ ಕುರಿತು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಎಂಟು ದಿನಗಳ ಕಾಲ ನಡೆದ ವಿಶ್ವ ಯುವ ಶೃಂಗ ಸಭೆಯಲ್ಲಿ ಭಾರತ ದೇಶದಿಂದ ಏಕೈಕ ಯುವ ಪ್ರತಿನಿಧಿಯಾಗಿ ಭಾಗವಹಿಸಿ `ವಿಶ್ವಶಾಂತಿ ಅಗತ್ಯತೆ ಹಾಗೂ ವಿಶ್ವಶಾಂತಿಯಲ್ಲಿ ಭಾರತದ ಪಾತ್ರ’ ಕುರಿತು ಮಹತ್ವಪೂರ್ಣ ಸಂದೇಶ ಸಾರಿ ವಿಜಯಪುರದ ಕೀರ್ತಿಯನ್ನು ಹೆಚ್ಚಿಸಿದ ಕುಮಾರಿ ಶಿಫಾ ಜಮಾದಾರ ಅವರನ್ನು ಕೃಷಿ ಉತ್ಪನ್ನ ಮಾರುಕಟ್ಟೆ, ಜವಳಿ, ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಅದರಲ್ಲೂ ರಷ್ಯಾ, ಮಯನ್ಮಾರ್, ಅರ್ಮೇನಿಯಾ ಸೇರಿದಂತೆ ವಿವಿಧ ರಾಷ್ಟçಗಳ ರಾಷ್ಟಾçಧ್ಯಕ್ಷರ ಸಮ್ಮುಖದಲ್ಲಿ ವಿಜಯಪುರ ಯುವತಿ ಕು.ಶಿಫಾ ಜಮಾದಾರ ಅವರು ಸಮರ್ಥವಾಗಿ ಶಾಂತಿಯ ಮಂತ್ರ ಸಾರಿದ್ದು ಪ್ರತಿಯೊಬ್ಬ ವಿಜಯಪುರ ನಿವಾಸಿಗಳು ಅಷ್ಟೇ ಅಲ್ಲ ಇಡೀ ಕನ್ನಡ ನಾಡಿನ ಜನತೆ ಹೆಮ್ಮೆಪಡುವಂತಹ ವಿಷಯವಾಗಿದೆ, ವಿಜಯಪುರ ಪ್ರತಿಭಾವಂತರ ನೆಲ, ಜ್ಞಾನದ ಸಂಗಮ, ಈ ನಾಡಿನ ಹೆಮ್ಮೆಯ ಪ್ರತಿಭೆ ಶಿಫಾ ಜಮಾದಾರ ಸರ್ಕಾರಿ ಶಾಲೆಗಳಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೈಸೂರು, ಮದ್ದೂರು ಹಾಗೂ ಮಂಡ್ಯದಿಂದಲೇ ಹಿಂದೂ ಧ್ರುವೀಕರಣ ಪ್ರಾರಂಭವಾಗಿದೆ. ಇದಕ್ಕೆ ಸಾವಿರಾರು ಸಂಖ್ಯೆಗಳಲ್ಲಿ ಸೇರಿದ್ದ ಕಾರ್ಯಕರ್ತರೇ ಸಾಕ್ಷಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.ಯದುವಂಶದ ಅರಸರ ಆಳ್ವಿಕೆಯಿಂದ ಸಮೃದ್ಧವಾಗಿರುವ ಆ ಭಾಗದಲ್ಲಿ ಹಿಂದೂ ಆಚರಣೆಗಳಲ್ಲಿ, ಹಬ್ಬಗಳಲ್ಲಿ ಕಲ್ಲು ತೂರುವುದು, ಅಶಾಂತಿ ಸೃಷ್ಟಿಸುವುದು ಕಳೆದ ಎರಡು ವರ್ಷಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಆಳುವ ಸರ್ಕಾರದ ಅಲ್ಪ ಸಂಖ್ಯಾತ ಓಲೈಕೆ ನೀತಿಯೇ ಕಾರಣ ಎಂದು ಬಿಡಿಸಿ ಹೇಳಬೇಕಾಗಿಲ್ಲ.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಕ್ಷ ಆಡಳಿತ, ಸರ್.ಎಂ.ವಿಶ್ವೇಶರಯ್ಯರಂಥ ಅಪ್ರತಿಮ ಚಿಂತಕರು, ಅಭಿಯಂತರರಿಂದ ಬೆಳಗಿರುವ, ಅಭ್ಯುದಯ ಕಂಡಿರುವ ಈ ನಾಡಿನಲ್ಲಿ ಸಮಾಜ ಘಾತುಕ, ವಿಚ್ಛಿದ್ರಕಾರಿ ಮನಸ್ಥಿತಿಯ ವ್ಯಕ್ತಿಗಳು ಹಾಗೂ ಧರ್ಮದವರು ಅಶಾಂತಿ ಸೃಷ್ಟಿಸುತ್ತಿದ್ದಾರೆ. ಆದರೆ, ಅಲ್ಲಿನ ಸ್ವಾಭಿಮಾನಿ ಹಿಂದೂಗಳು ಈ ರೀತಿಯಾದ ಯಾವುದೇ ಕಷ್ಟ ಬಂದರೂ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ ಎಂದು ತೋರಿಸಿದ್ದಾರೆ.ಅಂದು ಸ್ವಾತಂತ್ರ್ಯ ಪಡೆಯಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶೋತ್ಸವವನ್ನು ಸಾರ್ವಜನಿಕ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುವಂತೆ ಪರಿವರ್ತಿಸಿದರು.…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆದಿಂದ 2025-26 ನೇ ಸಾಲಿನ ಜೂನ ತಿಂಗಳಿನಿಂದ ಇದುವರೆಗೂ ಸುರಿದಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ನಷ್ಟಗೊಂಡ ರೈತರ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮೂಲಕ ಮನವಿ ಸಲ್ಲಿಸಲಾಯಿತು.ಪ್ರತಿಭಟನಕಾರರು ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಮೆರವಣಿಗೆ ಆರಂಭಿಸಿ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ರೈತರು ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿ ಜಿಲ್ಲೆಯಲ್ಲಿ ಸಾಕಷ್ಟು ರೈತರ ಬೆಳೆಗಳು ಸಂಪೂರ್ಣ ನಷ್ಟಗೊಂಡಿವೆ. ಜೊತೆಗೆ ಜಿಲ್ಲೆಯ ಭೀಮಾ, ಕೃಷ್ಣಾ ಹಾಗೂ ಡೋಣಿ ನದಿಯ ಪ್ರವಾಹದಿಂದಾಗಿಯೂ ಸಾಕಷ್ಟು ಬೆಳೆ ನಷ್ಟಗೊಂಡಿವೆ. ಜಿಲ್ಲಾಡಳಿತಕ್ಕೂ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿ ಕೂಡಲೇ ಪರಿಹಾರ ಮತ್ತು ಫಸಲ್ ಭೀಮಾ ಯೀಜನೆಯಡಿ ವಿಮೆ ನೀಡಬೇಕು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯ 13 ತಾಲೂಕಿನಲ್ಲಿ ಯಾವುದೇ ಸಮೀಕ್ಷೆ ಹೆಸರಲ್ಲಿ ವಿಳಂಬ ಮಾಡದೇ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ರಾಜ್ಯದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯವನ್ನು ಪಟ್ಟಣದ ಪಲ್ಲ್ಯೆಕಟ್ಟೆ, ಇಕ್ಬಾಲ ನಗರ, ಬಸವ ನಗರ, ಯಾತ್ರಿ ನಿವಾಸದ ಹತ್ತಿರ ಸೇರಿದಂತೆ ವಿವಿಧೆಡೆ ಸೋಮವಾರ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರು ಭೇಟಿ ಪರಿಶೀಲನೆ ಮಾಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರು ಸಮೀಕ್ಷದಾರರ ಭೇಟಿ ಮಾಡಿ ಯಾವುದೇ ಕುಟುಂಬ, ವ್ಯಕ್ತಿ ಉಳಿಯದಂತೆ ಸಮೀಕ್ಷೆದಾರರು ಸಮೀಕ್ಷೆ ಮಾಡಬೇಕು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಯಾವುದೇ ಕುಟುಂಬ, ವ್ಯಕ್ತಿಯ ಸಮೀಕ್ಷೆ ಆಗದೇ ಹೋಗಿದ್ದರೆ ಅಂತಹವರು ಪುರಸಭೆಯ ಕಾರ್ಯಾಲಯದಲ್ಲಿರುವ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಮಾಹಿತಿಯನ್ನು ನೀಡಿದರೆ ಅಂತಹ ಮನೆಗೆ ತೆರಳಿ ಸಮೀಕ್ಷಾದಾರರು ತೆರಳಿ ಸಮೀಕ್ಷೆ ಮಾಡುತ್ತಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಮೊ-9620121146 ಕರೆ ಜನರು ಕರೆ ಮಾಡಿ ಸದುಪಯೋಗ ಪಡೆದುಕೊಳ್ಳಬಹುದು. ಜನರು ತಮ್ಮ ಮಾಹಿತಿಯನ್ನು ಸ್ವಯಂ ಘೋಷಣೆ ಮಾಡಿಕೊಳ್ಳಲು ಸಹ ಅವಕಾಶವಿದೆ ಎಂದರು.ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಾಧಿಕಾರಿ ಸುನೀಲ ರಾಠೋಡ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ರಾಜೇಸಾಬ್ ನದಾಫ್ (ಪಿಂಜಾರ್) ಇವರನ್ನು ಬಸವನ ಬಾಗೇವಾಡಿ ತಾಲೂಕಿನ ಕರ್ನಾಟಕ ಕನ್ನಡ ದೀಕ್ಷಾಬದ್ಧ ಸಂಘಟನೆಯಾದ ಕದಂಬ ಸೈನ್ಯ ಸಂಘಟನೆಯ ತಾಲೂಕು ಅಧ್ಯಕ್ಷರನ್ನಾಗಿ ರಾಜ್ಯ ಉಪಾಧ್ಯಕ್ಷ ನಿಂಬಣ್ಣ (ಸಾಗರ್ )ಕಾಂಬಳೆ ಹಾಗೂ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ವಿನಾಯಕ್ ಸೊಂಡೂರ್ ಅವರ ವಿನಂತಿ ಮೇರಿಗೆ ರಾಜ್ಯಾಧ್ಯಕ್ಷ ಆಯುಷ್ಮಾನ್ ಬೇಕ್ರಿ ರಮೇಶ್ ಅವರು ಆಯ್ಕೆ ಮಾಡಿ ಆದೇಶಿಸಿದ್ದಾರೆ.ಬಸವಣ್ಣನ ಜನ್ಮಭೂಮಿಯಲ್ಲಿ ಕನ್ನಡದ ನಾಡು ನುಡಿ ನೆಲಜಲದ ರಕ್ಷಣೆಗೆ ಪ್ರತಿಭದ್ಧರಾಗಿ ಕನ್ನಡತನವನ್ನು ಉಳಿಸಿಕೊಂಡು ಬೆಳೆಸಿಕೊಂಡು ಸಂಘಟನೆಯನ್ನು ಬಲಪಡಿಸಬೇಕೆಂದು ತಮ್ಮ ಆದೇಶದ ಮುಖಾಂತರ ಸೂಚಿಸಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ವಿನಾಯಕ್ ಸೊಂಡುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖನ- ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಎಂ ಎನ್ ರಾಯ್ ಅವರು ಭಾರತ ದೇಶವು ಕಂಡ ಅಪ್ರತಿಮ ದೇಶಭಕ್ತ ವೀರ ಸೇನಾನಿ.ಮನಬೇಂದ್ರ ನಾಥ್ ರಾಯ್ (21 ಮಾರ್ಚ್ 1887 – 25 ಜನವರಿ 1954),ನರೇಂದ್ರ ನಾಥ್ ಭಟ್ಟಾಚಾರ್ಯ, ಒಬ್ಬ ಭಾರತೀಯ ಕ್ರಾಂತಿಕಾರಿ, ತೀವ್ರಗಾಮಿ ಕಾರ್ಯಕರ್ತ ಮತ್ತು ರಾಜಕೀಯ ಸಿದ್ಧಾಂತಿ. ರಾಯ್ ಮೆಕ್ಸಿಕನ್ ಕಮ್ಯುನಿಸ್ಟ್ ಪಕ್ಷ ಮತ್ತು ಭಾರತದ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರಾಗಿದ್ದರು. ಅವರು ಕಮ್ಯುನಿಸ್ಟ್ ಇಂಟರ್ನ್ಯಾಷನಲ್ನ ಕಾಂಗ್ರೆಸ್ಗಳಿಗೆ ಪ್ರತಿನಿಧಿಯಾಗಿದ್ದರು ಮತ್ತು ಚೀನಾಕ್ಕೆ ರಷ್ಯಾದ ಸಹಾಯಕರಾಗಿದ್ದರು. ಜೋಸೆಫ್ ಸ್ಟಾಲಿನ್ ಅವರ ಉದಯದ ನಂತರ, ರಾಯ್ ಸ್ವತಂತ್ರ ತೀವ್ರಗಾಮಿ ರಾಜಕೀಯವನ್ನು ಅನುಸರಿಸಲು ಮುಖ್ಯ ಕಮ್ಯುನಿಸ್ಟ್ ಚಳುವಳಿಯನ್ನು ತೊರೆದರು. 1940 ರಲ್ಲಿ ರಾಯ್ ರಾಡಿಕಲ್ ಡೆಮಾಕ್ರಟಿಕ್ ಪಕ್ಷದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು, ಈ ಸಂಘಟನೆಯಲ್ಲಿ ಅವರು 1940 ರ ದಶಕದ ದಶಕದಲ್ಲಿ ಹೆಚ್ಚಿನ ಕಾಲ ಪ್ರಮುಖ ಪಾತ್ರ ವಹಿಸಿದ್ದರು. ನಂತರ ರಾಯ್ ಮಾರ್ಕ್ಸ ವಾದದಿಂದ ದೂರ ಸರಿದು ತೀವ್ರಗಾಮಿ ಮಾನವತಾವಾದದ ತತ್ತ್ವಶಾಸ್ತ್ರದ ಪ್ರತಿಪಾದಕರಾದರು.ನಾನು…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದಿಂದ ಸಿದ್ಧಾರೂಢರ ಮೂರ್ತಿ ಮೆರವಣೆಗೆಯನ್ನು ತೆರದ ವಾಹನದಲ್ಲಿ ಕುಂಭ ಹೊತ್ತ ಸಾವಿರಾರು ಜನ ಸುಮಂಗಲೆಯ ಮಹಿಳೆಯರು, ಯುವಕರು ಹೆಜ್ಜೆಹಾಕಿದರು. ೫೫ಜೋಡಿ ಎತ್ತಿನ ಗಾಡಿಗಳು, ಡೋಲು, ಪುರುಷರು ಮತ್ತು ಮಹಿಳೆಯರ ಡೊಳ್ಳು, ವೀರಗಾಸೆ, ಪುರವಂತರ ತಂಡ, ಚೆಟ್ಟಿ ಮೇಳ, ಬೃಹತ್ ಗೊಂಬೆಗಳಲ್ಲದೇ, ಬ್ಯಾಂಡ್, ಜಾಂಜ್ ಮೆರವಣಿಗೆ, ಸಕಲ ವಾದ್ಯಗಳೊಂದಿಗೆ ಸಿದ್ಧಾರೂಢರ ಮೂರ್ತಿಯ ಮೆರವಣೆಗೆ ಪ್ರಮುಖ ಬೀದಿಗಳಲ್ಲಿ ಶನಿವಾರ ನಡೆಯಿತು.ನೆರೆದ ಭಕ್ತಸಮೂಹವು ಮೆರವಣಿಗೆಯ ಮೇಲೆ ಪುಷ್ಪವೃಷ್ಟಿಗೈದರು. ಸುಡುಬಿಸಿಲನ್ನು ಲೆಕ್ಕಿಸದೇ ಕುಂಭ ಹೊತ್ತ, ಗ್ರಂಥ ತಲೆಯಲ್ಲಿ ಇಟ್ಟುಕೊಂಡಿದ್ದ ಭಕ್ತ ಹೆಜ್ಜೆ ಹಾಕುತ್ತಿದ್ದರೆ, ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ಅವರಲ್ಲಿ ಅಂತಃಶಕ್ತಿಯನ್ನು ಹೊರಹೊಮ್ಮಿಸುತ್ತಿತ್ತು. ಅಜ್ಜನ ಭಜನೆಗಳು ಆಯಾಸವನ್ನು ಮರೆಸುತ್ತಿದ್ದವು. ಬರೋಬ್ಬರಿ ೪ ಗಂಟೆಗೂ ಅಧಿಕ ಕಾಲ ಮೆರವಣಿಗೆ ಸಾಗಿತು.ಪಟ್ಟಣದ ಸಿದ್ಧಲಿಂಗ ದ್ವಾರ ಬಾಗಿಲದವರಿಗೆ ಮೆರವಣೆಗೆ ಬಂದು ತಲಿಪಿತ್ತು. ನಂತರ ಆಳೂರ ಗ್ರಾಮಕ್ಕೆ ಕುಂಭ ಮೆರವಣೆಗೊಂದಿಗೆ ಶ್ರೀ ಸಿದ್ಧಾರೂಢರ ಮಠಕ್ಕೆ ಮೆರವಣೆಗೆ ತಲುಪಿತ್ತು.ಇದೇ ಸಂದರ್ಭದಲ್ಲಿ ಆಳೂರ ಮಠದ…