Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಲೋಕಸಭಾ ಚುನಾವಣಾ ಹಿನ್ನಲೆ ಮಹಾರಾಷ್ಟ್ರ ರಾಜ್ಯದ ಮುಖಾಂತರ ಕರ್ನಾಟಕ ರಾಜ್ಯಕ್ಕೆ ಒಳಗೆ ಬರುವ ಪ್ರತಿಯೊಂದು ವಾಹನಗಳ ಮೇಲೆ ತಪಾಸಣೆ ಮಾಡುತ್ತಿದ್ದಾಗ ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತವಾದ 4 ಲಕ್ಷ 50 ಸಾವಿರ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ.ಮಹಾರಾಷ್ಟ್ರರಾಜ್ಯದ ಔರಂಗಾಬಾದ ಜಿಲ್ಲೆಯ ರೋಶನ ಗಜಾನನ ಕರನಾಶೆ ಅವರು ಯಾವುದೆ ಅಧಿಕೃತ ದಾಖಲೆ ಇಲ್ಲದೆ ಎಮ್ ಹೆಚ್ 20 ಎಫ್ ಯು 2039 ಕಾರ್‌ನಲ್ಲಿ 4 ಲಕ್ಷ 50 ಸಾವಿರ ರೂ. ನಗದಿನೊಂದಿಗೆ ಧೂಳಖೇಡ ಮಾರ್ಗದಿಂದ ಬೆಂಗಳೂರ ಕಡೆ ಹೊರಟಿದ್ದರು. ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಈ ಹಣ ಜಪ್ತಿ ಮಾಡಿ ಜಿಲ್ಲಾ ಸೀಜರ್ ಕಮೀಟಿಯವರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಎಸ್ ಎಸ್ ಟಿ ಟೀಮ್ ನಂ 13 ರ ಅಧಿಕಾರಿಗಳಾದ ಪರಮೇಶ್ವರ ತಳವಾರ, ಎಸ್ ಜೆ ಪೂಜಾರಿ, ಎನ್ ಎಸ್ ಸಾತಲಗಾಂವ, ಪಿಎಸ್‌ಐ ಹೊನ್ನಪ್ಪ ತಳವಾರ, ಇದ್ದರು.ಪ್ರಕರಣ ಕುರಿತು ಝಳಕಿ ಪೋಲೀಸ್ ಠಾಣೆಯಲ್ಲಿ…
ವಿಜಯಪುರ: ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ದುರ್ಘಟನೆ ವಿಜಯಪುರದ ರಾಜಾಜಿ ನಗರದಲ್ಲಿ ನಡೆದಿದೆ.ಮಹಾದೇವ ದಿಂಡವಾರ ಎಂಬುವರ ಮನೆಯಲ್ಲಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ ಮಹಾದೇವ, ಸಂಕೇತ, ಮಣಿಕಂಠ ಹಾಗೂ ರಾಮು ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಮನೆಯ ವಸ್ತುಗಳು ಹಾನಿಯಾಗಿವೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ.ಈ. ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಸಕ್ತ ವರ್ಷದ ವಿದ್ಯಾರ್ಥಿ ಒಕ್ಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭ ಮಾರ್ಚ 21 ರಂದು ಗುರುವಾರ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ತ್ಯಾಗರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ನಂತರ ವಿಜಯಪುರ ಜಿಲ್ಲೆಯ ಪದವಿ ಮಹಾವಿದ್ಯಾಲಯಗಳ ಪ್ರಾಚಾರ್ಯರ ಸಭೆಯನ್ನು ನಡೆಸಲಿದ್ದಾರೆ ಎಂದು ಕಾಲೇಜಿನ ಎಂದು ಕಾಲೇಜಿನ ಪ್ರಾಚಾರ್ಯೆ ಬಿ. ವೈ. ಖಾಸನೀಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Udayarashmi kannada daily newspaper
ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಅಳಿಯ ಡಾ. ಸಿ ಎನ್ ಮಂಜುನಾಥ್ ಅವರನ್ನು ಬಿಜೆಪಿ ಟಿಕೆಟ್ ನಲ್ಲಿ ಕಣಕ್ಕಿಳಿಸುವ ಮೂಲಕ ಜೆಡಿಎಸ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.ಖ್ಯಾತ ಹೃದ್ರೋಗ ತಜ್ಞ ಹಾಗೂ ಸರ್ಕಾರಿ ಸ್ವಾಮ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಮಂಜುನಾಥ್ ಅವರಿಗೆ ಬಿಜೆಪಿ ಬೆಂಗಳೂರು ಗ್ರಾಮಂತರ ಕ್ಷೇತ್ರದಿಂದ ಟಿಕೆಟ್ ನೀಡಿದೆ.ಡಿಕೆ ಶಿವಕುಮಾರ್ ಅವರ ಸಹೋದರ ಹಾಗೂ ಹಾಲಿ ಸಂಸದ ಡಿ ಕೆ ಸುರೇಶ್ ವಿರುದ್ಧ ಮಂಜುನಾಥ್ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.ಎರಡು ಸ್ಥಾನಕ್ಕಾಗಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಬೇಕಿತ್ತೆ ಎಂಬ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಇದನ್ನು ನಿರೀಕ್ಷಿಸಿದ್ದೆ. ಬಿಜೆಪಿ ಜತೆಗಿನ ಮೈತ್ರಿಯಿಂದ ಜೆಡಿಎಸ್ ಮುಜುಗರಕ್ಕೀಡಾಗಿದೆ ಎಂದರು.ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, “ಬಿಜೆಪಿಯು ಇತರ ರಾಜ್ಯಗಳಲ್ಲಿಯೂ…
ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಅಳಿಯ ಡಾ. ಸಿ ಎನ್ ಮಂಜುನಾಥ್ ಅವರನ್ನು ಬಿಜೆಪಿ ಟಿಕೆಟ್ ನಲ್ಲಿ ಕಣಕ್ಕಿಳಿಸುವ ಮೂಲಕ ಜೆಡಿಎಸ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.ಖ್ಯಾತ ಹೃದ್ರೋಗ ತಜ್ಞ ಹಾಗೂ ಸರ್ಕಾರಿ ಸ್ವಾಮ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಮಂಜುನಾಥ್ ಅವರಿಗೆ ಬಿಜೆಪಿ ಬೆಂಗಳೂರು ಗ್ರಾಮಂತರ ಕ್ಷೇತ್ರದಿಂದ ಟಿಕೆಟ್ ನೀಡಿದೆ.ಡಿಕೆ ಶಿವಕುಮಾರ್ ಅವರ ಸಹೋದರ ಹಾಗೂ ಹಾಲಿ ಸಂಸದ ಡಿ ಕೆ ಸುರೇಶ್ ವಿರುದ್ಧ ಮಂಜುನಾಥ್ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.ಎರಡು ಸ್ಥಾನಕ್ಕಾಗಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಬೇಕಿತ್ತೆ ಎಂಬ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಇದನ್ನು ನಿರೀಕ್ಷಿಸಿದ್ದೆ. ಬಿಜೆಪಿ ಜತೆಗಿನ ಮೈತ್ರಿಯಿಂದ ಜೆಡಿಎಸ್ ಮುಜುಗರಕ್ಕೀಡಾಗಿದೆ ಎಂದರು.ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, “ಬಿಜೆಪಿಯು ಇತರ ರಾಜ್ಯಗಳಲ್ಲಿಯೂ…
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡು ಬಣಗಳ ಹೆಸರುಗಳು ಮತ್ತು ಚುನಾವಣಾ ಚಿಹ್ನೆಗಳು ಸದ್ಯಕ್ಕೆ ಚುನಾವಣಾ ಆಯೋಗವು ನಿರ್ಧರಿಸಿದಂತೆ ಉಳಿಯುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸಲಹೆ ಕೋರ್ಟ್ ನೀಡಿದ್ದು, ಈ ಆದೇಶವು ತಾತ್ಕಾಲಿಕವಾಗಿದ್ದು, ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಪಕ್ಷದ ಶರದ್ ಪವಾರ್ ಬಣವು ಸಲ್ಲಿಸಿದ ಸವಾಲಿನ ವಿಚಾರಣೆಯ ಸಂದರ್ಭದಲ್ಲಿ ಹೊರಡಿಸಿದ ನ್ಯಾಯಾಲಯದ ಆದೇಶಕ್ಕೆ ಕಕ್ಷಿದಾರರು ಪ್ರತಿಕ್ರಿಯಿಸಿದ ನಂತರ ಈ ವಿಚಾರವನ್ನು ಮರುಪರಿಶೀಲಿಸಲಾಗುವುದು ಎಂದು ಹೇಳಿದೆ.ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆವಿ ವಿಶ್ವನಾಥನ್ ಅವರ ಪೀಠವು ಅಜಿತ್ ಪವಾರ್ ಬಣವು ಗಡಿಯಾರ ಚಿಹ್ನೆಯನ್ನು ಬಳಸಲು ಸಾಧ್ಯವಾಗುತ್ತದೆ. ಆದರೆ, ಅವರು ಈ ವಿಷಯವು ನ್ಯಾಯಾಂಗ ವಿಚಾರಣೆಯಲ್ಲಿದೆ ಎಂದು ಹೇಳುವ ಜಾಹೀರಾತುಗಳನ್ನು ಪ್ರಕಟಿಸಬೇಕು. ಚುನಾವಣಾ ಸಂಬಂಧಿತ ಎಲ್ಲಾ ದೃಶ್ಯ-ಶ್ರಾವ್ಯ ಜಾಹೀರಾತುಗಳು ಮತ್ತು ಬ್ಯಾನರ್‌ಗಳು, ಪೋಸ್ಟರ್‌ಗಳಂತಹ ಪ್ರಚಾರ ಸಾಮಗ್ರಿಗಳಲ್ಲಿ ಸಾರ್ವಜನಿಕ ಸೂಚನೆಗಳು ಇರಬೇಕು ಎಂದು ಹೇಳಿದೆ.ಶರದ್ ಪವಾರ್ ಬಣವು “ಮನುಷ್ಯ ಊದುವ ಕಹಳೆ” ಚಿಹ್ನೆ ಮತ್ತು ನ್ಯಾಶನಲಿಸ್ಟ್…
ಚಡಚಣ: ಇತ್ತೀಚಿಗೆ ನಡೆದ ಅಖಿಲ ಭಾರತ ಮಟ್ಟದ ಸೈನಿಕ ಶಾಲೆ ಪ್ರವೇಶಾತಿ ಪರಿಕ್ಷೆಯಲ್ಲಿ ಸ್ಥಳೀಯ ಎಂಜಿಲ್ಸ್ ಶಾಲೆಯ ೫ನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ ಗುರುಪ್ರಸಾದ ಗೂಳಿಪಾಟೀಲ ಈತನು ೩೦೦ ಅಂಕಗಳಿಗೆ ೨೫೮ ಅಂಕ ಪಡೆದು ಆಯ್ಕೆಯಾಗಿದ್ದಾನೆ ಎಂದು ಶಾಲಾ ಮುಖ್ಯೋಪಾಧ್ಯಾಯ ಕೆ.ಡಿ. ಜೋಸೆಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಢವಳಗಿ: ಗ್ರಾಮದಲ್ಲಿ ಶ್ರೀ ಮಡಿವಾಳೇಶ್ವರರ ರಥೋತ್ಸವ ಮಂಗಳವಾರ ಸಂಜೆ 6:30 ಗಂಟೆಗೆ ಅದ್ದೂರಿಯಾಗಿ ರಥೋತ್ಸವ ಜರುಗಿತು.ಇದಕ್ಕೂ ಮುಂಚೆ ಸಯಾಂಕಾಲ ಢವಳಗಿ ಗ್ರಾಮದ ಮನೋಹರ ಮುಕ್ಕಣ್ಣಪ್ಪ ಕೋರಿ ಅವರ ಮನೆಯಿಂದ ಗುರುಬಸಪ್ಪ ಕೋಣನವರ ಅವರ ಎತ್ತಿನ ಬಂಡಿಯಲ್ಲಿ ತೇರಿನ ಮೀಣಿ(ಹಗ್ಗ)ವನ್ನು ದೇವಸ್ಥಾನಕ್ಕೆ ವಿವಿಧ ಮಜಲುಗಳಿಂದ ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋಗಲಾಯಿತು.ನಂತರ ಮಾದಿನಾಳ ಮತ್ತು ತಾರನಾಳ,ಹಾಗೂ ಹಳ್ಳೂರ ಗ್ರಾಮದಿಂದ ಉತ್ಸವ ಮೂರ್ತಿಯನ್ನು ಬರಮಾಡಿಕೊಂಡು ವಾದ್ಯ ಮಜಲುಗಳೋಂದಿಗೆ ತೇರಿಗೆ ಏರುವ ಕಲಶಗಳು ಪಲ್ಲಕ್ಕಿಯೊಂದಿಗೆ ಗಂಗಸ್ಥಳ ಮಾಡಿ ದೇವಸ್ಥಾನಕ್ಕೆ ಕರೆತರಲಾಯಿತು.ಸಂಜೆ 6:30 ನಿಮಿಷಕ್ಕೆ ಶ್ರೀ ಮಡಿವಾಳೇಶ್ವರರ ರಥೋತ್ಸವವು 500 ಮೀಟರ್ ದೂರವಿರುವ ಪಾದಗಟ್ಟಿ ಯವರಿಗೆ ಯಾವುದೇ ಅಡೆತಡೆಗಳಿಲ್ಲದೆ ಹೋಗಿ ಬಂದಿತು. ಭಕ್ತರು ತೇರು ಎಳೆಯುವ ಸಂದರ್ಭದಲ್ಲಿ ಉತ್ತತ್ತಿ,ಬಾಳೆಹಣ್ಣು, ಎಸೆದು ತಮ್ಮ ಭಕ್ತಿ ಸಮರ್ಪಿಸಿದರು.ಇದೇ ವೇಳೆಯಲ್ಲಿ ಪಿಎಸ್ಐ ಸಂಜಯಕುಮಾರ ತಿಪ್ಪಾರೆಡ್ಡಿ ಹಾಗೂ ಸಿಬ್ಬಂದಿಗಳು ಬಿಗಿಬಂದೋಬಸ್ತ ಮಾಡಿದ್ದರು.
ವಿಜಯಪುರ: ಅಕ್ರಮವಾಗಿ ಸಾಗಿಸಲಾಗುತ್ತಿದ್ದ ರೂ. 2,93,50000 ಕೋ. ನಗದನ್ನು ವಿಜಯಪುರ ಸಿಇಎನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ, ತೆಲಂಗಾಣದ ಹೈದರಾಬಾದಿನಿಂದ ರಾಜ್ಯದ ಹುಬ್ಬಳ್ಳಿಗೆ ಅಕ್ರಮವಾಗಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅದರಂತೆ ಸೋಮವಾರ ರಾತ್ರಿ ಸಿಇಎನ್ ಪೊಲೀಸ್ ಠಾಣೆಯ ಸಿಪಿಐ ಸುನೀಲಕುಮಾರ ನಂದೇಶ್ವರ, ಸಿಬ್ಬಂದಿಯಾದ ಎಂ. ಕೆ. ಹಾವಡಿ, ಡಿ. ಆರ್. ಪಾಟೀಲ, ಎಂ. ಬಿ. ಪಾಟೀಲ, ಮಲ್ಲು ಹೂಗಾರ ಅವರು ವಿಜಯಪುರ ನಗರದ ಸಿಂದಗಿ ಬೈಪಾಸ್ ನಲ್ಲಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರಿಗೆ ಬಹುಮಾನ ನೀಡಿದ ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಈ ಸಂಬಂಧ ಇಬ್ಬರು ಆರೋಪಿಗಳಾದ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಬಾಲಾಜಿ ನಿಕ್ಕಂ ಮತ್ತು ಸಚೀನ ಮೋಹಿತೆ ಎಂಬುವರನ್ನು ಬಂಧಿಸಲಾಗಿದೆ. ಅಲ್ಲದೇ, ಅವರು ಹಣ ಸಾಗಿಸಲು ಬಳಸಿದ ಎಂಎಚ್-01/ ಸಿಡಿ-7537 ಕಾರು ಹಾಗೂ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ…
