ಢವಳಗಿ: ಗ್ರಾಮದಲ್ಲಿ ಶ್ರೀ ಮಡಿವಾಳೇಶ್ವರರ ರಥೋತ್ಸವ ಮಂಗಳವಾರ ಸಂಜೆ 6:30 ಗಂಟೆಗೆ ಅದ್ದೂರಿಯಾಗಿ ರಥೋತ್ಸವ ಜರುಗಿತು.
ಇದಕ್ಕೂ ಮುಂಚೆ ಸಯಾಂಕಾಲ ಢವಳಗಿ ಗ್ರಾಮದ ಮನೋಹರ ಮುಕ್ಕಣ್ಣಪ್ಪ ಕೋರಿ ಅವರ ಮನೆಯಿಂದ ಗುರುಬಸಪ್ಪ ಕೋಣನವರ ಅವರ ಎತ್ತಿನ ಬಂಡಿಯಲ್ಲಿ ತೇರಿನ ಮೀಣಿ(ಹಗ್ಗ)ವನ್ನು ದೇವಸ್ಥಾನಕ್ಕೆ ವಿವಿಧ ಮಜಲುಗಳಿಂದ ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋಗಲಾಯಿತು.
ನಂತರ ಮಾದಿನಾಳ ಮತ್ತು ತಾರನಾಳ,ಹಾಗೂ ಹಳ್ಳೂರ ಗ್ರಾಮದಿಂದ ಉತ್ಸವ ಮೂರ್ತಿಯನ್ನು ಬರಮಾಡಿಕೊಂಡು ವಾದ್ಯ ಮಜಲುಗಳೋಂದಿಗೆ ತೇರಿಗೆ ಏರುವ ಕಲಶಗಳು ಪಲ್ಲಕ್ಕಿಯೊಂದಿಗೆ ಗಂಗಸ್ಥಳ ಮಾಡಿ ದೇವಸ್ಥಾನಕ್ಕೆ ಕರೆತರಲಾಯಿತು.
ಸಂಜೆ 6:30 ನಿಮಿಷಕ್ಕೆ ಶ್ರೀ ಮಡಿವಾಳೇಶ್ವರರ ರಥೋತ್ಸವವು 500 ಮೀಟರ್ ದೂರವಿರುವ ಪಾದಗಟ್ಟಿ ಯವರಿಗೆ ಯಾವುದೇ ಅಡೆತಡೆಗಳಿಲ್ಲದೆ ಹೋಗಿ ಬಂದಿತು. ಭಕ್ತರು ತೇರು ಎಳೆಯುವ ಸಂದರ್ಭದಲ್ಲಿ ಉತ್ತತ್ತಿ,ಬಾಳೆಹಣ್ಣು, ಎಸೆದು ತಮ್ಮ ಭಕ್ತಿ ಸಮರ್ಪಿಸಿದರು.
ಇದೇ ವೇಳೆಯಲ್ಲಿ ಪಿಎಸ್ಐ ಸಂಜಯಕುಮಾರ ತಿಪ್ಪಾರೆಡ್ಡಿ ಹಾಗೂ ಸಿಬ್ಬಂದಿಗಳು ಬಿಗಿಬಂದೋಬಸ್ತ ಮಾಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

