Author: editor.udayarashmi@gmail.com

ವಿಜಯಪುರ: ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಮುಂಗಾರು ಪೂರ್ವ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಜಿಲ್ಲೆಯಲ್ಲಿ ಮಳೆಯಿಂದಾಗುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಇಲಾಖಾ ಅಧಿಕಾರಿಗಳು ಸನ್ನದರಾಗಬೇಕು. ನಗರ ಹಾಗೂ ಪಟ್ಟಣ, ಹಳ್ಳಿಗಳಲ್ಲಿರುವ ರಾಜಕಾಲುವೆಗಳ ಸ್ವಚ್ಚತೆಗೆ ಆಧ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಜರುಗಿದ ಬರಪರಿಸ್ಥಿತಿ ಹಾಗೂ ಮುಂಗಾರು ಪೂರ್ವ ಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂನ್, ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆ ಆಗುವ ಸಂಭವ ಇದೆ. ನಗರ ಪ್ರದೇಶಗಳಲ್ಲಿ ಮಳೆನೀರು ಸರಾಗವಾಗಿ ಹರಿಯುವಂತೆ ಚರಂಡಿ ಹಾಗೂ ರಾಜಕಾಲುವೆಗಳನ್ನು ಸ್ವಚ್ಚತೆ ಮಾಡಬೇಕು. ಯಾವುದೇ ಕಾರಣಕ್ಕು ರಸ್ತೆ ಹಾಗೂ ಮನೆಗಳ ಒಳಗೆ ಮಳೆನೀರು ನುಗ್ಗದಂತೆ ನೋಡಿಕೊಳ್ಳಬೇಕು ಎಂದರು.ಪ್ರವಾಹ ಪರಿಸ್ಥಿತಿ ಉಂಟಾದರೆ ಯಾವುದೇ ರೀತಿಯ ಜೀವ ಹಾನಿಯಾಗದಂತೆ ತಡೆಯಲು ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗುವ ಸ್ಥಳಗಳ ಬಗ್ಗೆ ಮಾಹಿತಿ ಪಡೆದು ಮುನ್ನೆಚ್ಚರಿಕೆಯಾಗಿ ಅಲ್ಲಿ ಅಗತ್ಯ ಸಿದ್ಧತೆಗಳಾದ ದೋಣಿ,…

Read More

ಚಿಮ್ಮಡ: ಪರೀಕ್ಷಾ ಸಮಯದಲ್ಲಿ ಪುಸ್ತಕ ಹಿಡಿಯುವುದಕ್ಕಿಂತ ಸತತ ಅಧ್ಯಯಣದಿಂದಲೇ ಸಾಧನೆ ಮಾಡಲು ಸಾಧ್ಯವೆಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಅಭೀವೃದ್ದಿ ಸಮೀತಿ ಹಾಗೂ ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಸಾಧಕರ ಸತ್ಕಾರ” ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಡು ಬಡವರ ಮಕ್ಕಳೇ ರಾಜ್ಯದಾದ್ಯಂತ ಸಾಧನೆ ಮಾಡಿದ್ದು ಅದರಲ್ಲು ವಿದ್ಯಾರ್ಥಿನಿಯರೇ ಹೆಚ್ಚಿನ ಪ್ರಮಾಣದಲ್ಲಿ ರ‍್ಯಾಂಕ ಪಡೆದದ್ದು ಸೋಜಿಗದ ಸಂಗತಿ ಏಕೆಂದರೆ ವಿದ್ಯಾರ್ಥಿಗಳೂ ಸಮ ಪ್ರಮಾಣದಲ್ಲಿ ವಿದ್ಯಾರ್ಜನೆ ಮಾಡಿದರೂ ರ‍್ಯಾಂಕ್ ಪಟ್ಟಿಯಲ್ಲಿ ಬರುತ್ತಿಲ್ಲ ಇದು ಪಾಲಕರು ಎಚ್ಚೆತ್ತುಕೊಳ್ಳಬೇಕಾದ ಸಂಗತಿ. ತಮ್ಮ ಮಕ್ಕಳು ಅಭ್ಯಾಸದ ಸಮಯವನ್ನು ಮೊಬೈಲ್, ದುಶ್ಚಟಗಳತ್ತ ಬಳಸುತಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.ಪ್ರೌಢಶಾಲೆಯ ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್. ಜಿಟ್ಟಿ ಮಾತನಾಡಿ ಹಲವಾರು ಕೊರತೆಗಳ ನಡುವೇಯೂ ನಮ್ಮ ಶಾಲೆ ಖಾಸಗೀ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವುದು ಸಂತೋಷದ ಸಂಗತಿ ಎಂದರುರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿದರು.ಎಸ್ಡಿಎಂಸಿ…

Read More

ವಿಜಯಪುರ: ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ೩೩ನೇ ಪುಣ್ಯತಿಥಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಚರಿಸಲಾಯಿತು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀಮತಿ ಇಂದಿರಾ ಗಾಂಧಿಯವರ ನಿಧನದ ನಂತರ ದೇಶದ ಪ್ರಧಾನ ಮಂತ್ರಿ ಜವಾಬ್ದಾರಿ ವಹಿಸಿಕೊಂಡ ರಾಜೀವ ಗಾಂಧಿಯವರು ಶ್ರೀ ರಾಜೀವ ಗಾಂಧಿಯವರು ಪಂಚಾಯತ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದರು. ಇಂದು ನಾವೆಲ್ಲರೂ ಬಳಸುತ್ತಿರುವ ಮೊಬೈಲ್ ಫೋನ ಪರಿಚಯಿಸಿದ್ದಲ್ಲದೆ ಕಂಪ್ಯೂಟರ್‌ಗಳನ್ನು ಬಳಸಲು ಕಾರಣೀಭೂತರಾದರು. ಅದರಂತೆ ೧೮ ವರ್ಷದ ಯುವಕ ಯುವತಿಯರಿಗೆ ಮತದಾನ ಹಕ್ಕನ್ನು ನೀಡಿದರು. ದೇಶಕ್ಕೆ ಅವರ ಕೊಡುಗೆ ಅಪಾರವಾದದ್ದು ಹಾಗೂ ಮಾದರಿಯಾಗಿದೆ. ತಮಿಳುನಾಡಿನ ಪೆರಂಬೂರಿನಲ್ಲಿ ಎಲ್‌ಟಿಟಿಇ ಉಗ್ರರ ಕೃತ್ಯಕ್ಕೆ ಬಲಿಯಾದರು. ಅವರ ಆದರ್ಶಗಳು, ದೇಶದ ಜನತೆಯ ಬಗೆಗಿನ ಕಾಳಜಿ ಅವಿಸ್ಮರಣೀಯವಾಗಿದೆ ಹಾಗೂ ಅವರೊಬ್ಬ ದೂರದೃಷ್ಠಿಯುಳ್ಳ ನಾಯಕರಾಗಿದ್ದರು ಎಂದು ಹೇಳಿದರು.ಈ ಸಂದರ್ಭದಲ್ಲಿ ವಿಜಯಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ, ಜಿಲ್ಲಾ…

Read More

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್. ಕೆ. ಬೆಂಗಳೂರು ಸರ್ವೇ ಜನೋ ಸುಖಿನೋ ಭವಂತು..ನಮ್ಮ ನೆರೆಯ ದೇಶ ಮತ್ತು ಒಂದು ಕಾಲದ ನಮ್ಮದೇ ದೇಶದ ಭಾಗವಾಗಿದ್ದ ಪಾಕಿಸ್ತಾನ ಇತ್ತೀಚಿನ ಸುದ್ದಿಗಳ ಪ್ರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಮತ್ತು ದಿವಾಳಿತನದ ಅಂಚಿನಲ್ಲಿದೆ..ದೇಶವೇ ಇರಲಿ, ವೈಯಕ್ತಿಕ ಬದುಕೇ ಇರಲಿ, ನಮ್ಮ ಕ್ರಿಯೆ ಪ್ರತಿಕ್ರಿಯೆಗಳು ನಮ್ಮ ಜೀವನಮಟ್ಟವನ್ನು ನಿರ್ಧರಿಸುತ್ತದೆ. ಅಪರೂಪದ ಕೆಲವು ಆಕಸ್ಮಿಕ ಸಂದರ್ಭಗಳಲ್ಲಿ ಮಾತ್ರ ಇದಕ್ಕೆ ಅಪವಾದ ಇರಬಹುದು..ಧರ್ಮದ ಆಧಾರದ ಮೇಲೆ ದೇಶದ ನಿರ್ಮಾಣ, ಭಯೋತ್ಪಾದನೆಗೆ ಸಹಕಾರ, ಕೋವಿಡ್ ವೈರಸ್ ದಾಳಿ, ಅಮೆರಿಕ ದೇಶದ ವಿರೋಧದ ಕಾರಣದಿಂದ ಅವರ ನೆರವಿನ ಖೋತಾ, ದೇಶದ ರಾಜಕಾರಣಿಗಳ ಭ್ರಷ್ಟಾಚಾರ, ರಾಜಕೀಯ ಅಸ್ಥಿರತೆ ಮುಂತಾದ ಅನೇಕ ಕಾರಣಗಳಿಗಾಗಿ ಅದು ಈ ಪರಿಸ್ಥಿತಿ ತಲುಪಿರಬಹುದು..ಇದು ಸಹ ಶಾಶ್ವತವೇನು ಅಲ್ಲ. ದೇಶ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆದರೆ ಮತ್ತೆ ಕೆಲವೇ ವರ್ಷಗಳಲ್ಲಿ ಸುಸ್ಥಿತಿಗೆ ಮರಳಬಹುದು. ಹಾಗಾಗಲಿ ಎಂದು ಶುಭ ಹಾರೈಸುತ್ತಾ..ಮುಖ್ಯವಾಗಿ ಭಾರತದ ಕೆಲವು ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ಪಾಕಿಸ್ತಾನದ ಆ ದುಸ್ಥಿತಿಯನ್ನು…

Read More

“ಸಿನಿ ತಿರುಳು” – ವೀಣಾ ಹೇಮಂತಗೌಡ ಪಾಟೀಲ್. ಮುಂಡರಗಿ-ಗದಗ ಉತ್ತರ ಭಾರತದ ಸೂರಜ್ ಮುಖಿ ಎಂಬ ಗ್ರಾಮದ ಯುವಕ ದೀಪಕ್ ಕುಮಾರ್ ಮದುವೆಯಾಗಿ ತನ್ನ ಪತ್ನಿ ಪೂಲ್ ಕುಮಾರಿ ಯೊಂದಿಗೆ ತನ್ನೂರಿಗೆ ಮರಳಿ ಬರುತ್ತಿದ್ದನು. ರೈಲಿನಲ್ಲಿ ಮತ್ತೂ ಎರಡು ಜೋಡಿ ವಧು ವರರು ಇದ್ದು, ಇಳಿ ಸಂಜೆಯ ಹೊತ್ತಿನಲ್ಲಿ ಎಲ್ಲರೂ ನಿದ್ರಾವಶರಾಗಿದ್ದಾಗ ಮುಸುಗು ಹಾಕಿಕೊಂಡು ಮಲಗಿದ್ದ ವಧುಗಳಲ್ಲಿ ತನ್ನ ಪತ್ನಿ ಎಂದು ಬೇರೊಬ್ಬ ಹೆಣ್ಣುಮಗಳನ್ನು ಎಬ್ಬಿಸಿ ಕರೆದುಕೊಂಡು ಬಂದದ್ದು ಮನೆಗೆ ಬಂದ ನಂತರ ಎಲ್ಲರಿಗೂ ನಡೆದ ತಪ್ಪಿನ ಅರಿವಾಗುತ್ತದೆ. ಈತನ ಜೊತೆಗೆ ಬಂದ ಮಹಿಳೆ ತನ್ನ ಉದ್ದೇಶ ಸಾಧನೆಗಾಗಿ ಬಂದಿದ್ದು ಆಕೆಯ ನಡಾವಳಿ ತುಸು ಸಂಶಯದಿಂದ ಕೂಡಿರುತ್ತದೆ. ಇತ್ತ ಆತನ ಪತ್ನಿ ಫೂಲ್ ಕುಮಾರಿ ಕೊನೆಯ ಸ್ಟೇಷನ್ ನಲ್ಲಿ ಇಳಿದು ಜೊತೆಯಲ್ಲಿ ತನ್ನ ಪತಿ ಇಲ್ಲದೆಯಿದ್ದದ್ದು ನೋಡಿ ಗಾಬರಿಯಾಗುತ್ತಾಳೆ. ಸ್ಟೇಷನ್ ನಲ್ಲಿ ತನಗೆ ಪರಿಚಯವಾದ ಅನಾಥ ವ್ಯಕ್ತಿಯ ಜೊತೆಗೆ ಹೋಗಿ ಸ್ಟೇಷನ್ ಮಾಸ್ಟರ್ ರಲ್ಲಿ ಆಕೆ ದೂರನ್ನು ನೀಡುತ್ತಾಳೆ. ಸ್ಟೇಷನ್ ನಲ್ಲಿ…

Read More

“ವಿದ್ಯಾರ್ಥಿ ನಿಧಿ”- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಮೂರ್ಖನ ಸಹವಾಸ ಅಕ್ಬರ್ ಬಾದಶಹನ ಮನಸ್ಸಿನಲ್ಲಿ ‘ಮೂರ್ಖರ ಜೊತೆಗೆ ಕೆಲಸ ಮಾಡುವ ಸಂದರ್ಭ ಬಂದರೆ ಏನು ಮಾಡಬಹುದು?’ ಎಂಬ ಚಿಂತೆಯು ಸದಾ ಕೊರೆಯುತ್ತಿತ್ತು. ಈ ವಿಚಾರವನ್ನು ಅಕ್ಬರನು ಮರೆಯಲು ಸತತವಾಗಿ ಪ್ರಯತ್ನಿಸುತ್ತಿದ್ದರೂ ಬಿಡದೇ ಪ್ರಶ್ನೆಯು ಈತನನ್ನು ಕಾಡುತ್ತಿತ್ತು. ಒಂದು ದಿನ ಅಕ್ಬರ್ ದರ್ಬಾರನ್ನು ಕರೆದಿದ್ದ, ಆಗ ಅಕ್ಬರನಿಗೆ ಆತನ ಚಿಂತೆಯೂ ನೆನಪಾಯಿತು. ಆಗ ತನ್ನ ಸಭೆಯಲ್ಲಿ ‘ಮೂರ್ಖರ ಜೊತೆಯಲ್ಲಿ ಕೆಲಸ ಮಾಡುವ ಸಂದರ್ಭ ಬಂದರೆ ಏನು ಮಾಡಬೇಕು’ ಎಂದು ಎಲ್ಲರನ್ನು ಕೇಳಿದ. ಅಕ್ಬರನ ಪ್ರಶ್ನೆಗೆ ಬೀರಬಲ್ಲನು ಮುಗುಳ್ನಕ್ಕು ಮೌನವಾಗಿ ಕುಳಿತುಕೊಂಡು ಬಿಟ್ಟ.ಈ ಪ್ರಶ್ನೆಯನ್ನು ಅಕ್ಬರ್ ಒಬ್ಬ ಪಂಡಿತನ ಬಳಿ ಕೇಳುತ್ತಾನೆ, ಆಗ ಆ ಪಂಡಿತನು ಅಂತಹ ಮೂರ್ಖರಿದ್ದರೆ ಅವರ ತಲೆ ಬೋಳಿಸಿ ಕತ್ತೆಯ ಮೇಲೆ ಮೆರವಣಿಗೆ ಮಾಡಬೇಕು ಎಂದು ಉತ್ತರಿಸುತ್ತಾನೆ. ಇನ್ನೊಬ್ಬ ಪಂಡಿತ ಮಹಾರಾಜಾ, ಅಂತಹ ಮೂರ್ಖನ ಸಹವಾಸವಾದರೆ ಆತನ ಮುಖಕ್ಕೆ…

Read More

ಬೆಂಗಳೂರು: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್’ಡಿ.ದೇವೇಗೌಡ ಅವರನ್ನು ಭಾನುವಾರ ಭೇಟಿ ಮಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ ಅವರೊಂದಿಗೆ ರಾಜ್ಯದ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದೆ. ರಾಜ್ಯದಲ್ಲಿ ಕೊಲೆ, ಕಳ್ಳತನ,ದರೋಡೆ ಹೆಚ್ಚಾಗಿದೆ. ಮಳೆ ಸುರಿಯುವುದಕ್ಕಿಂತ ಹೆಚ್ಚಾಗಿ ಕೊಲೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೌಡಿಗಳಿಗೆ, ಕೊಲೆಗಡುಕರಿಗೆ ಹಬ್ಬ. ಈ ಹಬ್ಬಕ್ಕೆ ಕಾಂಗ್ರೆಸ್ಸೇ ನೇರ ಕಾರಣ. ಇತ್ತೀಚೆಗೆ ಹತ್ಯೆಯಾದ ಅಂಜಲಿ ಕುಟುಂಬದವರು ಕೊಲೆಗಾರರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರವೇ ಅ‍ಪರಾಧಿ ಸ್ಥಾನದಲ್ಲಿದ್ದು, ಸರ್ಕಾರವನ್ನೇ ಗಲ್ಲಿಗೇರಿಸಬೇಕು ಎಂದು ಕಿಡಿಕಾರಿದರು.ಪೆನ್‌ಡ್ರೈವ್‌ ವಿಚಾರದಲ್ಲಿ ದೇವರಾಜೇಗೌಡ ಸತ್ಯವನ್ನೇ ಹೇಳಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಪ್ರೈನ್‌ಡ್ರೈವ್‌ ಬಿಡುಗಡೆ ಮಾಡಿದರು ಎಂದು ಸುಳ್ಳು ಹೇಳುವುದಕ್ಕಾಗಿ ಡಿ.ಕೆ.ಶಿವಕುಮಾರ್‌ ಅಮಿಷ ಒಡ್ಡಿರುವ ವಿಚಾರದಲ್ಲಿ ಸತ್ಯವಿದೆ. ನಿಜ ಇರುವುದಕ್ಕೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಅದಕ್ಕಾಗಿ ಬಂಧನವಾಗಿದೆ.…

Read More

ಖಜಾನೆ ಖಾಲಿ ಖಾಲಿ, ವಸೂಲಿ ಭಾರಿ ಭಾರಿ: ಸರ್ಕಾರದ ವಿರುದ್ಧ ಬಿಜೆಪಿ ವ್ಯಂಗ್ಯ ಬೆಂಗಳೂರು: ಸಿದ್ದರಾಮಯ್ಯ ಅವರು ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ 1 ವರ್ಷಗಳು ಕಳೆದಿದ್ದು, ಈ ನಡುವಲ್ಲೇ ಸರ್ಕಾರದ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರು, ಪೂರೈಸಿದ್ದು ವರುಷ ಮಾತ್ರ. ಸಾಧಿಸಿದ್ದು ಶೂನ್ಯ. ಖಜಾನೆ ಖಾಲಿ ಖಾಲಿ, ವಸೂಲಿ ಭಾರಿ ಭಾರಿ ಎಂದು ವ್ಯಂಗ್ಯವಾಡಿದ್ದಾರೆ.ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಬಿಟ್ಟಿ ಭಾಗ್ಯಗಳಿಗಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮ: ನಿರುದ್ಯೋಗದ ಭವಣೆ ಹೆಚ್ಚಿತು. ಶಿಕ್ಷಣ ಕ್ಷೇತ್ರ ಎಡವಿ ಬಿದ್ದಿತು, ಉತ್ಪನ್ನ ಕ್ಷೇತ್ರ ಸೊರಗಿತು, ನಾರಿ ಕುಲ ರಕ್ಷಣೆ ಇಲ್ಲದೆ ನಲುಗಿತು, ದಲಿತ ಕಲ್ಯಾಣ ಕಾರ್ಯಗಳು ಕುಸಿಯಿತು, ದುಳಿದವರ ಅಭಿವೃದ್ಧಿ, ಹಿಂದುಳಿಯಿತು.ಬೆಳೆಯೆಲ್ಲ ಒಣಗಿತು, ರೈತರ ಬಾಳು ಗೋಳಾಯಿತು ಎಂದು ಟೀಕಿಸಿದ್ದಾರೆ.ರಾಜ್ಯ ಬಿಜೆಪಿ ನಾಯಕರು ಇಂದು ಸರ್ಕಾರದ ವಿರುದ್ಧ ಆರೋಪ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ…

Read More

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ: ಸಿಎಂ ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗಾಗಿ 52,009 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದ್ದೇವೆ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆ ಎಂಬುವುದು ಬಿಜೆಪಿಯ ಅಪ್ಪಟ ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿಎಂ, “ನಮ್ಮ ಸರ್ಕಾರ ಬಂದು ಇಂದಿಗೆ ಒಂದು ವರ್ಷ ತುಂಬಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಂಭ್ರಮಾಚರಣೆ ನಡೆಸಲು ಆಗಿಲ್ಲ. ನಮ್ಮ ಸರ್ಕಾರವನ್ನು ಒಂದು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು” ಎಂದರು.“ಅಭದ್ರತೆಯ ಆತಂಕ ಇರಲೇಬಾರದೆಂದು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು ಸ್ಪಷ್ಟವಾದ ಬಹುಮತವನ್ನು ಕೊಟ್ಟು ಸರ್ಕಾರ ರಚನೆಗೆ ಅವಕಾಶ ಮಾಡಿ ಕೊಟ್ಟಿದ್ದೀರಿ. ರಾಜ್ಯದ ಮತದಾರರ ಪ್ರಜ್ಞಾವಂತಿಕೆ, ಅವರ ವಿಶ್ವಾಸವನ್ನು ನಾವು ಕಳೆದುಕೊಳ್ಳುವುದಿಲ್ಲ” ಎಂದು ತಿಳಿಸಿದರು.“ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ…

Read More