ವಿಜಯಪುರ: ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ೩೩ನೇ ಪುಣ್ಯತಿಥಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀಮತಿ ಇಂದಿರಾ ಗಾಂಧಿಯವರ ನಿಧನದ ನಂತರ ದೇಶದ ಪ್ರಧಾನ ಮಂತ್ರಿ ಜವಾಬ್ದಾರಿ ವಹಿಸಿಕೊಂಡ ರಾಜೀವ ಗಾಂಧಿಯವರು ಶ್ರೀ ರಾಜೀವ ಗಾಂಧಿಯವರು ಪಂಚಾಯತ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದರು. ಇಂದು ನಾವೆಲ್ಲರೂ ಬಳಸುತ್ತಿರುವ ಮೊಬೈಲ್ ಫೋನ ಪರಿಚಯಿಸಿದ್ದಲ್ಲದೆ ಕಂಪ್ಯೂಟರ್‌ಗಳನ್ನು ಬಳಸಲು ಕಾರಣೀಭೂತರಾದರು. ಅದರಂತೆ ೧೮ ವರ್ಷದ ಯುವಕ ಯುವತಿಯರಿಗೆ ಮತದಾನ ಹಕ್ಕನ್ನು ನೀಡಿದರು. ದೇಶಕ್ಕೆ ಅವರ ಕೊಡುಗೆ ಅಪಾರವಾದದ್ದು ಹಾಗೂ ಮಾದರಿಯಾಗಿದೆ. ತಮಿಳುನಾಡಿನ ಪೆರಂಬೂರಿನಲ್ಲಿ ಎಲ್‌ಟಿಟಿಇ ಉಗ್ರರ ಕೃತ್ಯಕ್ಕೆ ಬಲಿಯಾದರು. ಅವರ ಆದರ್ಶಗಳು, ದೇಶದ ಜನತೆಯ ಬಗೆಗಿನ ಕಾಳಜಿ ಅವಿಸ್ಮರಣೀಯವಾಗಿದೆ ಹಾಗೂ ಅವರೊಬ್ಬ ದೂರದೃಷ್ಠಿಯುಳ್ಳ ನಾಯಕರಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಕೆ.ಎಫ್. ಅಂಕಲಗಿ, ಡಿ.ಎಚ್. ಕಲಾಲ, ಸಾಹೇಬಗೌಡ ಬಿರಾದಾರ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ಅಬ್ದುಲ್‌ಹಮೀದ ಮುಶ್ರೀಫ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ಸುಭಾಷ್ ಕಾಲೇಬಾಗ್, ಮಹಾದೇವಿ ಗೋಕಾಕ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರತಿ ಶಹಾಪೂರ, ವಿದ್ಯಾವತಿ ಅಂಕಲಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ತಮ್ಮಣ್ಣ ಮೇಲಿನಕೇರಿ, ಶರಣಪ್ಪ ಯಕ್ಕುಂಡಿ, ಎಂ.ಜಿ. ಯಂಕಂಚಿ, ದೇಸು ಚವ್ಹಾಣ, ಎಂ.ಎಂ ಮುಲ್ಲಾ, ಅಫ್ತಾಬ್ ಖಾದ್ರಿ ಇನಾಮದಾರ,
ಅಂಗ ಘಟಕಗಳ ಅಧ್ಯಕ್ಷರುಗಳಾದ ಅಮಿತ ಚವ್ಹಾಣ, ಲಾಲಸಾಬ ಕೊರಬು, ಫಿರೋಜ ಶೇಖ, ಮಹಾದೇವ ಜಾಧವ, ಇಲಿಯಾಸ ಸಿದ್ದಿಕಿ, ಅಬ್ದುಲ್‌ಪೀರಾ ಜಮಖಂಡಿ, ತಾಜುದ್ದೀನ ಖಲೀಫಾ, ಅಬುಬಕರ ಕೆಂಬಾವಿ, ಕಲ್ಲಪ್ಪ ಪರಶೆಟ್ಟಿ, ಮಹ್ಮದ ಮುಲ್ಲಾ, ಕಾಶಿಬಾಯಿ ಹಡಪದ, ಮಹೇಶ ಶಹಾಪೂರ, ಅಂಬಣ್ಣ ಕಲಮನಿ, ಬಾಬುಸಾಬ ಯಾಳವಾರ, ನಾಗರಾಜ ಲಂಬು, ದಿಲೀಪ ಪ್ರಭಾಕರ, ಅಶೋಕ ಕಾಂಬಳೆ ಮುಂತಾದ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

