ಚಿಮ್ಮಡ: ಪರೀಕ್ಷಾ ಸಮಯದಲ್ಲಿ ಪುಸ್ತಕ ಹಿಡಿಯುವುದಕ್ಕಿಂತ ಸತತ ಅಧ್ಯಯಣದಿಂದಲೇ ಸಾಧನೆ ಮಾಡಲು ಸಾಧ್ಯವೆಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಅಭೀವೃದ್ದಿ ಸಮೀತಿ ಹಾಗೂ ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಸಾಧಕರ ಸತ್ಕಾರ” ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಡು ಬಡವರ ಮಕ್ಕಳೇ ರಾಜ್ಯದಾದ್ಯಂತ ಸಾಧನೆ ಮಾಡಿದ್ದು ಅದರಲ್ಲು ವಿದ್ಯಾರ್ಥಿನಿಯರೇ ಹೆಚ್ಚಿನ ಪ್ರಮಾಣದಲ್ಲಿ ರ‍್ಯಾಂಕ ಪಡೆದದ್ದು ಸೋಜಿಗದ ಸಂಗತಿ ಏಕೆಂದರೆ ವಿದ್ಯಾರ್ಥಿಗಳೂ ಸಮ ಪ್ರಮಾಣದಲ್ಲಿ ವಿದ್ಯಾರ್ಜನೆ ಮಾಡಿದರೂ ರ‍್ಯಾಂಕ್ ಪಟ್ಟಿಯಲ್ಲಿ ಬರುತ್ತಿಲ್ಲ ಇದು ಪಾಲಕರು ಎಚ್ಚೆತ್ತುಕೊಳ್ಳಬೇಕಾದ ಸಂಗತಿ. ತಮ್ಮ ಮಕ್ಕಳು ಅಭ್ಯಾಸದ ಸಮಯವನ್ನು ಮೊಬೈಲ್, ದುಶ್ಚಟಗಳತ್ತ ಬಳಸುತಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ಪ್ರೌಢಶಾಲೆಯ ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್. ಜಿಟ್ಟಿ ಮಾತನಾಡಿ ಹಲವಾರು ಕೊರತೆಗಳ ನಡುವೇಯೂ ನಮ್ಮ ಶಾಲೆ ಖಾಸಗೀ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವುದು ಸಂತೋಷದ ಸಂಗತಿ ಎಂದರು
ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಪ್ರಕಾಶ ಪಾಟೀಲ, ಆನಂದ ಕವಟಿ, ಅಶೋಕ ಮೋಟಗಿ, ಬಸವರಾಜ ಕುಂಚನೂರ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಗುರುಪಾದ ಉರಭಿನವರ, ಮನೋಜ ಹಟ್ಟಿ, ಚನ್ನಪ್ಪ ತೇಲಿ ಸೇರಿದಂತೆ ಶಿಕ್ಷಕರು ಪಾಲಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

