Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ತಾಲೂಕಿನ ಗುತ್ತಿ ಬಸವಣ್ಣ ಮತ್ತು ತಿಡಗುಂದಿ ಶಾಖಾ ಕಾಲುವೆ ಕೊನೆಯ ಭಾಗದ ಕೆರೆಕಟ್ಟೆಗಳಿಗೆ ಹಾಗೂ ಕಾಲುವೆಗಳಿಗೆ ನೀರು ಹರಿಸದ ಕಾರಣ ಶುಕ್ರವಾರ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಆದರೆ ಪೊಲೀಸರು ರಸ್ತೆ ತಡೆಯಲು ಅವಕಾಶ ಮಾಡಿಕೊಡದ ಹಿನ್ನೆಲೆ ಜೋಡಗುಡಿಯ ಆವರಣದಲ್ಲಿ ರೈತರು ಧರಣಿ ನಡೆಸಿ ಪ್ರತಿಭಟಿಸಿದರು.ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ನಮ್ಮ ಸಮಸ್ಯೆ ಆಲಿಸಿ ಸಮಸ್ಯೆಗೆ ಪರಿಹಾರ ಸೂಚಿಸುವವರೆಗೆ ನಾವು ಧರಣಿ ನಡೆಸುತ್ತೇವೆ ಎಂದು ರೈತ ಮುಖಂಡರು ತಮ್ಮ ಆಕ್ರೋಶ ಹೊರಹಾಕಿದರು.ಅನೇಕ ಬಾರಿ ಲಿಖಿತ ಹಾಗೂ ಮೌಖಿಕವಾಗಿ ಜಿಲ್ಲಾಧಿಕಾರಿಗಳಿಗೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ತಡವಲಗಾ, ಅರ್ಥಗಾ, ಕೊಟ್ನಾಳ, ನಿಂಬಾಳ, ಸೇರಿದಂತೆ ಇನ್ನಿತರ ಕೆರೆಗಳಿಗೆ ಹಾಗೂ ಗುತ್ತಿ ಬಸವಣ್ಣ ಕಾಲುವೆಯ ಕೊನೆಯ ಭಾಗದ ರೈತರಿಗೆ ರೂಗಿ, ಹಂಜಗಿ, ಚಿಕ್ಕಬೇವನೂರ, ಬೋಳೆಗಾಂವ, ಗಣವಲಗಾ, ತೆನ್ನೆಳ್ಳ್ಳಿ ಗ್ರಾಮಗಳ ರೈತರಿಗೆ ಹಾಗೂ ಜಾನುವಾರುಗಳಿಗೆ ನೀರಿಲ್ಲದೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಈಗ ಕೆರೆಗಳನ್ನು ತುಂಬಿದರೆ ಆಯಾ ಗ್ರಾಮಗಳ…
ವಿಜಯಪುರ: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಓಅಗಿಖಿ) ಸಂಯೋಜನೆ ಹೊಂದಿದ ೧೨ ವಿವಿಧ ವೃತ್ತಿಗಳಲ್ಲಿ ಪ್ರವೇಶಗಳು ಪ್ರಾರಂಭವಾಗಿವೆ. ಸಂಸ್ಥೆಯು ಸುಸಜ್ಜಿತ ಕಾರ್ಯಾಗಾರವನ್ನು ಹೊಂದಿದ್ದು, ಆಧುನಿಕ iಟಿಜusಣಡಿಥಿ ೪.೦ ಅಡಿಯಲ್ಲಿ ಖಿಚಿಣಚಿ ಖಿeಛಿhಟಿoಟogies ಐಣಜ, ಇವರ ಸಹಯೋಗದೊಂದಿಗೆ ಉತ್ತಮ ದರ್ಜೆ ತರಬೇತಿ ನೀಡಲಾಗುವುದು, ಹಾಗೂ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗ ಭರವಸೆ ನೀಡಲಾಗುವುದು. ಪ್ರವೇಶಕ್ಕೆ ವಾರ್ಷಿಕವಾಗಿ ೧,೨೦೦ ರೂ ಶುಲ್ಕವನ್ನು ಪಡೆದುಕೊಳ್ಳಲಾಗುವುದು. ಎಸ್‌ಎಸ್‌ಎಲ್‌ಸಿ ಹಾಗೂ ೮ನೇ ತರಗತಿ ಪಾಸಾದ ಅಭ್ಯರ್ಥಿಗಳು ಪ್ರವೇಶ ಹೊಂದಲು ಅರ್ಹರಿದ್ದು, www.cite.karnataka.gov.in ಇಲಾಖೆ ಜಾಲತಾಣದ ಮೂಲಕ ಮೇ ೨೦ ರಿಂದ ಜೂನ್ ೩ರವರೆಗೆ ಆನ್ ಲೈನ್ ಅರ್ಜಿ ಸಲ್ಲಿಸಬಹುದು ಒಟ್ಟು ೪೭೦ ಸ್ಥಾನಗಳಿಗೆ ಪ್ರವೇಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೯೭೨೬೮೨೧೮೪, ೯೪೪೮೯೮೬೩೮೧, ೯೮೮೬೪೩೭೫೧೭ ಮತ್ತು ೦೮೩೫೨೨೬೦೩೬೦ ಗೆ ಸಂಪರ್ಕಿಸಿಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ೨೦೨೪-೨೫ನೇ ಸಾಲಿನ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟಿ ಜಾತಿ ಅಭ್ಯರ್ಥಿಗಳಿಂದ ರಾಷ್ಟೀಯ ಸಾಗರೋತ್ತರ ವಿದ್ಯಾರ್ಥಿ ವೇತನ ಯೋಜನೆ (ಓಔS)ಗೆ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಪದವಿ. ಪಿಎಚ್‌ಡಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ https://overseas.tribal.gov.inವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ ೩೧ ರಂದು ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ೮೩೫೨೨೭೬೧೨೪ ಗೆ ಸಂಪರ್ಕಿಸಬಹುದಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಭೂತನಾಳ ಕೆರೆ ಸುತ್ತ ಮುತ್ತ ಹಾಗೂ ಬಿ ಡಿ ಎ ಗಾರ್ಡನ್ ಮೂರು ಹೆಕ್ಟೇರ್ ಪ್ರದೇಶದಲ್ಲಿ ಡಿಸ್ಟ್ರಿಕ್ಟ್ ಮೀನಿರಲ್ ಫಂಡ್(ಡಿಎಮ್‌ಎಫ್) ಯೋಜನೆಯಲ್ಲಿ ೯೦೦ ಎತ್ತರದ ಸಸಿಗಳನ್ನು ನೆಡುವ ಯೋಜನೆಗೆ ಜಿಲ್ಲಾಧಿಕಾರಿ ಟಿ. ಭೂ ಬಾಲನ್ ಅವರು ಶುಕ್ರವಾರ ಚಾಲನೆ ನೀಡಿದರು.ಡಿ ಎಫ್ ಒ ಶಿವಶರಣ ಹಿರೇಮಠ ಹಾಗೂ ಅರಣ್ಯ ಇಲಾಖೆ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.
ಜನನ-ಮರಣ ಉಪನೋಂದಣಾಧಿಕಾರಿಗಳ ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಸೂಚನೆ ವಿಜಯಪುರ: ಜನನ ಮರಣ ಗಳ ನೋಂದಣಿ ಅಧಿನಿಯಮ ೧೯೬೯ರಂತೆ ಜನನ ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ ಕಡ್ಡಾಯವಾಗಿದ್ದು, ಇಂತಹ ಘಟನೆಗಳು ಸಂಭವಿಸಿದ ಸ್ಥಳದಲ್ಲಿಯೇ ನೋಂದಣಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ವಿಜಯಪುರ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ ವಿಜಯಪುರ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತಿಯ ಸಭಾ ಭವನದಲ್ಲಿ ಗುರುವಾರ ನಡೆದ ಜನನ-ಮರಣ ಉಪನೋಂದಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯತಿ ಕಾರ್ಯದರ್ಶಿ ಹಾಗೂ ಡಿ.ಇ.ಓ ರವರಿಗೆ ಜಿಲ್ಲಾ ಮಟ್ಟದ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು ಇದರ ಸದುಪೋಗವನ್ನು ಪಡೆದುಕೊಳ್ಳಬೇಕು ಎಂದರು.ರಾಜ್ಯದಲ್ಲಿ ಜನನ ಮರಣಗಳ ನೋಂದಣಿ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲು ನೋಂದಣಿ ಕಾರ್ಯದಲ್ಲಿ ನಿರತರಾಗಿರುವ ನೋಂದಣಿ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಅಧಿನಿಯಮ ಮತ್ತು ನಿಯಮಗಳ ಉಪಬಂಧಗಳ ಪೂರ್ಣವಾದ ಅರಿವು ಮೂಡಿಸುವುದು ಅವಶ್ಯಕವಾಗಿರುತ್ತದೆ ನೋಂದಣಿ ಪದ್ಧತಿ ಅಡಿ ಕಾರ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಗಳಿಗೆ…
ವಿಜಯಪುರ: ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಮೂಲಗಳಲ್ಲಿ ಕೊಳಚೆ ನೀರು ಸೇರದಂತೆ ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಮಾನ್ಸೂನ್ ಪೂರ್ವ ಸಿದ್ಧತೆ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರತಿದಿನವೂ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಯುಜಿಡಿ ಹಾಗೂ ಚರಂಡಿಯ ಕೊಳಚೆ ನೀರು, ಕುಡಿಯುವ ಪೈಪ್‌ಲೈನ್ ಹಾದುಹೋದ ಕಡೆ ಬಹು ಎಚ್ಚರಿಕೆಯಿಂದ, ಕಾಮಗಾರಿ ನಡೆಯುವಾಗ ಪೈಪ್‌ಲೈನ್ ಒಡೆದು ಹೊಗದಂತೆ ಗಮನಿಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಜೊತೆ ಕೊಳಚೆ ನೀರು ಸೇರಿ ಕಲುಷಿತವಾಗದಂತೆ ನೋಡಿಕೊಳ್ಳಿ , ಒಂದು ವೇಳೆ ಇದರಲ್ಲಿ ವಿಫಲವಾದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಏನಾದರೂ ಸಮಸ್ಯೆಗಳು ಕಂಡು ಬಂದರೆ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು,ಶಾಲೆ ಅಂಗನವಾಡಿಗಳಲ್ಲಿ ಶುದ್ಧ ಕುಡಿಯುವ ನೀರಿಗೆ ಆಧ್ಯತೆ ನೀಡಿ:ಜಿಲ್ಲೆಯಲ್ಲಿರುವ…
ವಿಜಯಪುರ: ಶಿಸ್ತು, ಸಮಯ ಪ್ರಜ್ಞೆ, ಆತ್ಮವಿಶ್ವಾಸವು ವಿದ್ಯಾರ್ಥಿ ಜೀವನದ ಯಶಸ್ಸಿನ ಕೀಲಿಕೈಯಾಗಿದ್ದು, ಮಕ್ಕಳು ಅವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣದ ಸಾರ್ಥಕತೆ ಪಡೆಯಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಶುಕ್ರವಾರದಂದು ನಗರದ ಷಣ್ಮುಖಾರೂಢ ಮಠದಲ್ಲಿ ಅಭಿನವಶ್ರೀ ಕೋಚಿಂಗ್ ಕ್ಲಾಸಿಸ್ ನ ಬೇಸಿಗೆ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.ಮಕ್ಕಳು ಸಮಯದ ಸದುಪಯೋಗ ಮಾಡಿಕೊಂಡಾಗ ಉತ್ತಮ ಕಲಿಕೆ ಸಾಧ್ಯವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಮತ್ತು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕೌಶಲ್ಯ ಜ್ಞಾನ ಹೊಂದಬೇಕು ಎಂದು ಹೇಳಿದರು.ಕನ್ನಡ ಶಿಕ್ಷಕ ಮಲ್ಲಿಕಾರ್ಜುನ ಪಡಂದರ ಮಾತನಾಡಿ,ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ. ಮಕ್ಕಳನ್ನು ಮೊಬೈಲ್ ಗಳಿಂದ ದೂರವಿರಿಸಿ ಅವರಿಗೆ ಪುಸ್ತಕದ ಪ್ರೀತಿಯನ್ನು ಹೆಚ್ಚಿಸಬೇಕು. ಓದುವ ಹವ್ಯಾಸವು ಮಕ್ಕಳಿಗೆ ಹೊಸ ಜಗತ್ತನ್ನು ನೀಡಬಲ್ಲದು ಎಂದರು.ಉಪನ್ಯಾಸಕ ಅಮರೇಶ ಸಾಲಕ್ಕಿ ಮಾತನಾಡಿ,ವಿದ್ಯೆಯು ಬಳಸಿದಷ್ಟು ಸಮೃದ್ಧವಾಗಿ ಬೆಳೆಯುವ, ಎಲ್ಲ ಸಂಪತ್ತಿಗಿಂತ ಮಿಗಿಲಾದದ್ದು. ಆದ್ದರಿಂದ ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಮಕ್ಕಳ ಜ್ಞಾನ…
“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ” – ವಿವೇಕಾನಂದ. ಎಚ್.ಕೆ, ಬೆಂಗಳೂರು ಬರಗಾಲವನ್ನು ಮರೆಸುವಷ್ಟು ಮಳೆಯಾಗುತ್ತಿದೆ. ಮಳೆ ತುಂಬಾ ಕಡಿಮೆ ಎನ್ನಲಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಕಲ್ಯಾಣ ಕರ್ನಾಟಕದ ಮೂಲೆಮೂಲೆಗಳಲ್ಲಿ ಸಹ ಮಳೆ ಬೀಳುತ್ತಿದೆ..ಕೃಷಿ ದೃಷ್ಟಿಯಿಂದ ಈ ಮಳೆಯ ಪರಿಣಾಮ ಲಾಭವೋ ನಷ್ಟವೋ ವೈಯಕ್ತಿಕವಾಗಿ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಆದರೆ ಅಂತರ್ಜಲದ ಮಟ್ಟ ಮಾತ್ರ ಉತ್ತಮವಾಗಬಹುದು ಎಂದು ಹೇಳಲಾಗುತ್ತದೆ..ಏನೇ ಇರಲಿ, ಪ್ರಕೃತಿಯ ಎಲ್ಲಾ ವೈಪರೀತ್ಯಗಳನ್ನು ನಾವು ಸಹಿಸಲೇಬೇಕು. ಅದು ಅನಿವಾರ್ಯ. ಆದರೆ ಆಡಳಿತ ವ್ಯವಸ್ಥೆ, ಪರಿಸರ, ಕೃಷಿ ಮತ್ತು ನೀರಾವರಿ ತಜ್ಞರು ಈ ಅಧಿಕ ಮಳೆಯ ಗರಿಷ್ಠ ಉಪಯೋಗ ಪಡೆಯಲು ಮತ್ತು ಕೆಲವು ಶಾಶ್ವತ ಭವಿಷ್ಯದ ಯೋಜನೆಗಳನ್ನು ರೂಪಿಸಲು ಪ್ರಯತ್ನಿಸಬೇಕು..ವಾತಾವರಣ ಹೀಗೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ವರ್ಷಗಳ ನಂತರ ಬರಗಾಲ ಬರಬಹುದು. ಅದರ ಪರಿಣಾಮ ಕಡಿಮೆ ಮಾಡಲು ನೀರಿನ ಸಂಗ್ರಹ ಮತ್ತು ಹಂಚಿಕೆಯ ಬಗ್ಗೆ ಏನಾದರೂ ಕಾರ್ಯ ಯೋಜನೆಯನ್ನು ಜಾರಿಗೊಳಿಸಬೇಕು.. ಅತಿವೃಷ್ಟಿ ಮತ್ತು ಅನಾವೃಷ್ಟಿಯ ಅನುಭವದ ಆಧಾರದ ಮೇಲೆ ಇದನ್ನು…
“ವೀಣಾಂತರಂಗ” – ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ಅದು 2ನೆಯ ವಿಶ್ವ ಯುದ್ಧದ ಸಮಯ. ಭಾರತದಲ್ಲಿ ಆಗ ಇದ್ದ ಬ್ರಿಟಿಷ್ ಮಿಲಿಟರಿಯ ಗೋರ್ಖಾಪಡೆಯ ತುಕಡಿಯೊಂದರ ಮುಖ್ಯಸ್ಥನಾಗಿದ್ದ ಆ ವ್ಯಕ್ತಿ ಬರ್ಮಾದ ಗಡಿಯಲ್ಲಿರುವ ಸೇತುವೆಯನ್ನು ಜಪಾನಿ ಸೈನಿಕರಿಂದ ರಕ್ಷಿಸಲು ಸತತ ನಾಲ್ಕು ದಿನಗಳ ಕಾಲ ತನ್ನ ಸೈನ್ಯದ ತುಕಡಿಯೊಂದಿಗೆ ನಿದ್ರಾಹಾರಗಳಿಲ್ಲದೆ ಕಾರ್ಯ ನಿರ್ವಹಿಸಿದನು. ಮರಳಿ ಬರುತ್ತಿರುವಾಗ ತನ್ನ ಅರ್ಧಕ್ಕಿಂತ ಹೆಚ್ಚು ಸೈನಿಕರನ್ನು ತಮ್ಮದೇ ಬ್ರಿಟಿಷ್ ಮಿಲಿಟರಿ ವಾಯುಪಡೆಯ ವಿಮಾನಗಳ ದಾಳಿಗೆ ಗೊತ್ತಿಲ್ಲದೇ ಆದ ಅಚಾತುರ್ಯಕ್ಕೆ ಸಿಲುಕಿ ಮರಣ ಹೊಂದಿದರೂ, ಉಳಿದ ಸೈನ್ಯವನ್ನು ಹುರಿದುಂಬಿಸಿ ಯುದ್ಧಕ್ಕೆ ಸಜ್ಜು ಮಾಡುವ ಹೊಣೆಗಾರಿಕೆಯನ್ನು ಆತನಿಗೆ ನೀಡಲಾಯಿತು. ತನ್ನ ಅತ್ಯದ್ಭುತ ವಾಕ್ಜರಿಯಿಂದ ಸೈನಿಕರನ್ನು ಹುರಿದುಂಬಿಸಿದ ಆತ ಮರುದಿನ ಮುಂಜಾನೆ ಯುದ್ಧಕ್ಕೆ ಸನ್ನದ್ಧರಾಗುತ್ತಿರುವ ಸಮಯದಲ್ಲಿ ಜಪಾನಿಯರು ಬುದ್ಧ ಪರ್ವತವನ್ನು ಏರುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿತನ್ನ ಸೇನೆಯವರಲ್ಲಿ ಉತ್ಸಾಹ ತುಂಬಿ ಮುನ್ನಡೆಯುತ್ತಿರುವಾಗ ಆತನ ಮೇಲೆ ಉಂಟಾದ ಹಠಾತ್ ದಾಳಿಯಲ್ಲಿ 9 ಗುಂಡುಗಳು ಆತನ ಶರೀರವನ್ನು ಹೊಕ್ಕವು. ವಿಪರೀತ…
ಆಲಮಟ್ಟಿ: ನಾಡಿನ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಮಹತ್ವದ್ದಾಗಿದ್ದು, ರಕ್ತ ಸಂಬಂಧಕ್ಕಿಂತ ಭಕ್ತಿ ಸಂಬಂಧ ಮುಖ್ಯವಾಗಿದೆ ಎಂದು ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಹೇಳಿದರು.ಗುರುವಾರ ಇಲ್ಲಿನ ಪುರವರ ಹಿರೇಮಠ ಅನ್ನದಾನೇಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಠಾಧೀಶರ ಪಾತ್ರ ಅತೀ ಮಹತ್ವದ್ದಾಗಿದ್ದು, ಮಠಾಧೀಶರು ಮತ್ತು ಭಕ್ತರ ಸಂಬಂಧವು ತಾಯಿ ಮಕ್ಕಳ ಸಂಬಂಧದಂತಿರುತ್ತದೆ. ರಾಜಕಾರಣಿಗಳು ಮಠ, ದೇವಸ್ಥಾನ, ಮಸೀದಿ, ಚರ್ಚಗಳಿಗೆ ಅನುದಾನ ನೀಡದೇ ವಿದ್ಯಾಮಂದಿರಗಳಿಗೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಮಠಗಳು ಸೇರಿದಂತೆ ಕೆಲ ಧಾರ್ಮಿಕ ಕೇಂದ್ರಗಳು ವ್ಯವಹಾರ ಕೇಂದ್ರಗಳಂತೆ ವರ್ತಿಸುತ್ತಿವೆ ಎಂದು ಜನರ ಭಾವನೆಯಾಗಿದೆ, ಆದರೆ ಆಲಮಟ್ಟಿಯ ಅನ್ನದಾನೇಶ್ವರ ಮಠವು ವಿಭಿನ್ನವಾಗಿದ್ದು, ಬಡ ಭಕ್ತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ, ಅನ್ನದಾಸೋಹ, ಅಕ್ಷರ ದಾಸೋಹಗಳಂತಹ ಕ್ರಮ ಕೈಗೊಳ್ಳಲು ಅಣಿಯಾಗುತ್ತಿರುವುದು ಸಂತಸವಾಗಿದೆ ಎಂದು ಸಂಗಮೇಶ ಬಬಲೇಶ್ವರ ಶ್ಲಾಘಿಸಿದರು.ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾಥನಾಡಿದ ಕೊಣ್ಣೂರಿನ ವಿಶ್ವಪ್ರಭುಸ್ವಾಮೀಜಿ, ಭಕ್ತರಾದವರು ಭಗವಂತನ ಕೃಪೆಗೆ ಪಾತ್ರರಾಗಲು ನಿಸ್ವಾರ್ಥ, ಶ್ರದ್ದೆ, ಭಕ್ತಿಯಿಂದ ಸಧ್ಯಾನಿಸಬೇಕು ಎಂದರು.ಸಾನಿಧ್ಯವಹಿಸಿದ ಗಿರಿಸಾಗರದರುದ್ರಮುನಿಸ್ವಾಮೀಜಿ…
