ಆಲಮಟ್ಟಿ: ನಾಡಿನ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಮಹತ್ವದ್ದಾಗಿದ್ದು, ರಕ್ತ ಸಂಬಂಧಕ್ಕಿಂತ ಭಕ್ತಿ ಸಂಬಂಧ ಮುಖ್ಯವಾಗಿದೆ ಎಂದು ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಹೇಳಿದರು.
ಗುರುವಾರ ಇಲ್ಲಿನ ಪುರವರ ಹಿರೇಮಠ ಅನ್ನದಾನೇಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಠಾಧೀಶರ ಪಾತ್ರ ಅತೀ ಮಹತ್ವದ್ದಾಗಿದ್ದು, ಮಠಾಧೀಶರು ಮತ್ತು ಭಕ್ತರ ಸಂಬಂಧವು ತಾಯಿ ಮಕ್ಕಳ ಸಂಬಂಧದಂತಿರುತ್ತದೆ. ರಾಜಕಾರಣಿಗಳು ಮಠ, ದೇವಸ್ಥಾನ, ಮಸೀದಿ, ಚರ್ಚಗಳಿಗೆ ಅನುದಾನ ನೀಡದೇ ವಿದ್ಯಾಮಂದಿರಗಳಿಗೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಮಠಗಳು ಸೇರಿದಂತೆ ಕೆಲ ಧಾರ್ಮಿಕ ಕೇಂದ್ರಗಳು ವ್ಯವಹಾರ ಕೇಂದ್ರಗಳಂತೆ ವರ್ತಿಸುತ್ತಿವೆ ಎಂದು ಜನರ ಭಾವನೆಯಾಗಿದೆ, ಆದರೆ ಆಲಮಟ್ಟಿಯ ಅನ್ನದಾನೇಶ್ವರ ಮಠವು ವಿಭಿನ್ನವಾಗಿದ್ದು, ಬಡ ಭಕ್ತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ, ಅನ್ನದಾಸೋಹ, ಅಕ್ಷರ ದಾಸೋಹಗಳಂತಹ ಕ್ರಮ ಕೈಗೊಳ್ಳಲು ಅಣಿಯಾಗುತ್ತಿರುವುದು ಸಂತಸವಾಗಿದೆ ಎಂದು ಸಂಗಮೇಶ ಬಬಲೇಶ್ವರ ಶ್ಲಾಘಿಸಿದರು.
ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾಥನಾಡಿದ ಕೊಣ್ಣೂರಿನ ವಿಶ್ವಪ್ರಭುಸ್ವಾಮೀಜಿ, ಭಕ್ತರಾದವರು ಭಗವಂತನ ಕೃಪೆಗೆ ಪಾತ್ರರಾಗಲು ನಿಸ್ವಾರ್ಥ, ಶ್ರದ್ದೆ, ಭಕ್ತಿಯಿಂದ ಸಧ್ಯಾನಿಸಬೇಕು ಎಂದರು.
ಸಾನಿಧ್ಯವಹಿಸಿದ ಗಿರಿಸಾಗರದ
ರುದ್ರಮುನಿಸ್ವಾಮೀಜಿ ಮಾತನಾಡಿ,
ಆಲಮಟ್ಟಿಯ ಜಂಗಮರು ಶತಮಾನಗಳ ಹಿಂದೆ ನುಡಿದ ವಾಣಿ, ಅವರ ಸಂಕಲ್ಪವು ಈಗ ಆಲಮಟ್ಟಿ ಬಳಿಯಲ್ಲಿ ಬೃಹತ್ ಜಲಾಶಯ ನಿರ್ಮಾಣವಾಗಿದೆ. ಆಲಮಟ್ಟಿಯು ಬಂಥನಾಳ ಶಿವಯೋಗಿಗಳ ತಾಯಿಯ ತವರೂರಾಗಿದ್ದು, ಬಸವಣ್ಣನವರ ವಚನಗಳನ್ನು ಸಂರಕ್ಷಣೆ ಮಾಡಲು
ಫ.ಗು.ಹಳಕಟ್ಟಿ ಮತ್ತು ಮಂಜಪ್ಪ ಹರ್ಡೇಕರ ಅವರಿಗೆ ಆಲಮಟ್ಟಿಯ ಇದೇ ಮಠದಲ್ಲಿ ಒಂದು ಕೋಣೆಯನ್ನು ಕೊಡಿಸಿದ್ದರು
ಎಂದರು.
ಆಲಮಟ್ಟಿಯಲ್ಲಿ ಈ ಹಿಂದೆಯೇ ಬಂಥನಾಳದ ಶಿವಯೋಗಿಗಳ ಇಚ್ಛೆಯಂತೆ ಮಂಜಪ್ಪ ಹರ್ಡೇಕರ, ಫ.ಗು.ಹಳಕಟ್ಟಿಯಂತಹ ಹಿರಿಯರು ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಬಡ ಗ್ರಾಮೀಣ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅಕ್ಷರದಾಸೋಹದೊಂದಿಗೆ ಅನ್ನದಾಸೋಹವನ್ನೂ ನೀಡುತ್ತಿದ್ದರು. ಯಾವುದೋ ಒಂದು ಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥೆಯು ಮಠದ ಕೈ ತಪ್ಪಿಹೋಗಿದೆ. ಮತ್ತೆ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗಾಗಿ
ಈಗಿರುವ ರುದ್ರಮುನಿ ಸ್ವಾಮೀಜಿಯವರು ಸಿಬಿಎಸ್‍ಇ ಶಿಕ್ಷಣ ಸಂಸ್ಥೆ ಹಾಗೂ ಮಕ್ಕಳಿಗೆ ವಸತಿ ನಿಲಯಗಳನ್ನು ಆರಂಭಿಸಲು
2ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ
ನಿರ್ಮಿಸಿದ್ದಾರೆ ಎಂದು ಹೇಳಿದರು.
ನಿಡಗುಂದಿಯ ರುದ್ರೇಶ್ವರ ಸಂಸ್ಥಾನ
ಮಠದ ರುದ್ರಮುನಿಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು.
ಅನ್ನದಾನೇಶ್ವರ ಪುರವರ ಮಠದ ರುದ್ರಮುನಿಸ್ವಾಮೀಜಿ
ಮಾತನಾಡಿದರು.
ಧಾರ್ಮಿಕ ಸಭೆಯಲ್ಲಿ ಮುತ್ತತ್ತಿ ಹಿರೇಮಠದ ಗುರುಲಿಂಗ ಸ್ವಾಮೀಜಿ ಬಿಲ್ ಕೆರೂರಿನ ಬಿಲ್ವಾಶ್ರಮ ಹಿರೇಮಠದ ಸಿದ್ದಲಿಂಗ ಸ್ವಾಮೀಜಿ ನೇತೃತ್ವವಹಿಸಿದ್ದರು.
ಬೀಳಗಿಯ ಗುರುಪಾಸ್ವಾಮೀಜಿ,
ಚಿಮ್ಮಲಗಿಯ ಸಿದ್ದರೇಣುಕ ಸ್ವಾಮೀಜಿ, ನಂದವಾಡಗಿಯ ಅಭಿನವ ಚನ್ನಬಸವ ಸ್ವಾಮೀಜಿ, ಇಟಗಿಯ
ಗುರುಶಾಂತವೀರಸ್ವಾಮೀಜಿ, ಕುಂದರಗಿಯ ವೀರಸಂಗಮೇಶ್ವರ ಸ್ವಾಮೀಜಿ, ಹುನಗುಂದದ ಅಮರೇಶ್ವರ ದೇವರು ಅವರುಗಳ
ಸಮ್ಮಖದಲ್ಲಿ ನಡೆದವು.
ವಿಶ್ರಾಂತ ನ್ಯಾಯಮೂರ್ತಿ ರಾಚಪ್ಪ
ಚಿನಿವಾಲ, ಅಶೋಕ ಚಿನಿವಾರ, ಭರತರಾಜ್ ದೇಶಮುಖ, ಪ್ರಕಾಶ ಚಿನಿವಾಲರ, ಸಂಗಣ್ಣ ಚಿನಿವಾಲರ, ಶರಣು ಆಲೂರ, ಸಿದ್ದಲಿಂಗೇಶ ಚಿನಿವಾರ, ಪ್ರಭು ದೇಸಾಯಿ, ಸಂಗು ಸಜ್ಜನ್, ಎನ್.ಎಂ.ಬಿರಾದಾರ, ಸಿ.ಕೆ.ಹೊಸಮನಿ, ಸಂಗಮೇಶ ಬಬಲೇಶ್ವರ, ಬಸವರಾಜ ಬಾದರದಿನ್ನಿ, ಕೆಬಿಜೆನ್ನೆಲ್ ಮುಖ್ಯ
ಅಭಿಯಂತರ ಎಚ್.ಎನ್.ಶ್ರೀನಿವಾಸ,
ಎನ್.ಎಚ್.ವರದರಾಜು,
ಆರ್.ಎಲ್.ಹಳ್ಳೂರ, ಬಿ.ಎಸ್.ಪಾಟೀಲ್, ರವೀಂದ್ರನಾಥ ಹಜೇರಿ, ಮಹೇಶ ಪಾಟೀಲ, ಉಮೇಶ ಹಿರೂರಮಠ, ರವಿ ಚಂದ್ರಗಿರಿರವರ, ಕುಮಾರ ಹಂಚಿನಾಳ, ಜಿ.ಸಿ.ವಂದಾಲ, ವಿಠ್ಠಲ ಜಾಧವ, ಎಸ್.ಬಿ.ದಳವಾಯಿ, ಮಂಜುನಾಥ ಹಿರೇಮಠ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಆನಂದ ರೇವಡಿ ಸ್ವಾಗತಿಸಿ, ನಿರೂಪಿಸಿದರು.

ಅನ್ನದಾನೇಶ್ವರ ಪುರವರ ಹಿರೇಮಠದ ಜಾತ್ರಾ ಮಹೋತ್ಸವ
ಆಲಮಟ್ಟಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಗಿಹುಣ್ಣಿಮೆಯಂದು ಇಲ್ಲಿನ
ಅನ್ನದಾನೇಶ್ವರ ಪುರವರ ಹಿರೇಮಠದ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ 6ಗಂ.ಗೆ ಶ್ರೀ ಅನ್ನದಾನೇಶ್ವರ ಶಿವಯೋಗಿಗಳ ಕರ್ತೃಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಜರುಗಿದವು.
ನಂತರ ಷಟಸ್ಥಲ
ಧ್ವಜಾರೋಣವನ್ನು ನಿಡಗುಂದಿಯ ರುದ್ರೇಶ್ವರ ಸಂಸ್ಥಾನಮಠದ ಶ್ರೀ ರುದ್ರಮುನಿಸ್ವಾಮೀಜಿ
ಹಾಗೂ ರಾಷ್ಟ್ರಧ್ವಜಾರೋಹಣವನ್ನು
ಶ್ರೀಭರತರಾಜ ದೇಶಮುಖ ನೆರವೇರಿಸಿದರು.
ಮಧ್ಯಾಹ್ನ ಪಲ್ಲಕ್ಕಿ ಮೆರವಣಿಗೆಯು ಮಾರುಕಟ್ಟೆ ಆವರಣದಲ್ಲಿರುವ ಶ್ರೀಬಸವೇಶ್ವರ ದೇವಸ್ಥಾನದಿಂದ ಹೊರಟು ಈಶ್ವರ ದೇವಸ್ಥಾನದಲ್ಲಿ ಪೂಜೆ, ಬಿ.ಎ.ದೇಶಮುಖ ಅವರ ವಾಡೆಯಲ್ಲಿ ವಿಶೇಷ ಪೂಜೆ,
ಶ್ರೀಹನುಮಾನ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ನಂತರ ಸ್ಟೇಟ್ ಬ್ಯಾಂಕ್ ಮಾರ್ಗವಾಗಿ ಶ್ರೀ ಮಠಕ್ಕೆ
ಆಗಮಿಸಿತು.
ಸಂಜೆಯವೇಳೆ ಸಾವಿರಾರು ಭಕ್ತರ
ಮಧ್ಯದಲ್ಲಿ ಮಹಾರಥೋತ್ಸವ ಜರುಗಿತು.

