Subscribe to Updates
Get the latest creative news from FooBar about art, design and business.
Author: editor.udayarashmi@gmail.com
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಘಟನೆ ಒಂದು.. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಾಕ್ಲೇಟ್ ಕೊಡುತ್ತೇನೆ ಎಂದು ಪಕ್ಕದ ಮನೆಯ ಪುಟ್ಟ ಹುಡುಗಿಗೆ ಆಸೆ ತೋರಿಸಿ ಪೈಶಾಚಿಕ ಕೃತ್ಯ ಎಸಗಿದ ಯುವಕ.ಘಟನೆ ಎರಡು.. ಹೊರಗೆ ಸುತ್ತಾಡಿಸಿಕೊಂಡು ಬರುತ್ತೇನೆ ಎಂದು ಸಂಬಂಧಿಕರ ಅಬೋಧ ಮಕ್ಕಳ ಮೇಲೆ ಅಮಾನುಷ ಅತ್ಯಾಚಾರ.ಘಟನೆ ಮೂರು.. ಪಾಠ ಹೇಳುವ ನೆಪದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಘಟನೆ ನಾಲ್ಕು…. ಗಂಡು ಹುಡುಗ ಎಂದು ಗೊತ್ತಿದ್ದು ಕೂಡ ಆತನನ್ನು ತಮ್ಮ ಕಾಮಪಿಪಾಸೆಗೆ ಬಳಸಿಕೊಂಡ ವಯಸ್ಕ.ಹೀಗೆ ಹತ್ತು ಹಲವು ದುರ್ಘಟನೆಗಳನ್ನು ಪ್ರಪಂಚದ ಒಂದಲ್ಲ ಒಂದು ಭಾಗದಲ್ಲಿ ನಡೆಯುವುದನ್ನು ಕಾಣುತ್ತೇವೆ.ನಮ್ಮ ಮಕ್ಕಳನ್ನು ಅವರು ತುಂಬಾ ಪ್ರೀತಿಸ್ತಾರೆ ಎಂಬ ಭಾವದಿಂದ ಪರರನ್ನು ಸಂಪೂರ್ಣವಾಗಿ ನಂಬುವ ಎಷ್ಟೋ ಜನ ಪಾಲಕರು ಏನಾದರೂ ತಪ್ಪು ನಡೆದಾಗ ಅದನ್ನು ಹೇಳಲಾಗದೆ ತಮ್ಮ ಮಕ್ಕಳು ಒದ್ದಾಡಿ ಪದಗಳಿಗಾಗಿ ತಡಕಾಡಿ ಕೊನೆಗೆ ಹೇಳಿದಾಗ ತಮ್ಮ ಮಕ್ಕಳಿಗೆ ಹೇಳುವುದು ಶ್…! ಯಾರಿಗೂ ಹೇಳಬೇಡ!! ಎಂದು.ಅದೆಷ್ಟು ಬಾರಿ ತಾಯಂದಿರು ತಮ್ಮ ಮಕ್ಕಳಿಗೆ ಈ…
-ಪ್ರೊ.ಧರ್ಮರಾಜ ಕುಂಬಾರ ಉಪನ್ಯಾಸಕರು ಮತ್ತು ಉದ್ಯೋಗ ತರಬೇತಿ ಅಧಿಕಾರಿ ಒಬ್ಬ ನಾಯಕನಾಗಲಿ, ವಿದ್ಯಾರ್ಥಿಯಾಗಲಿ, ಅಥವಾ ಒಂದು ಸಂಸ್ಥೆಯ ಚುಕ್ಕಾಣಿ ಹಿಡಿದಂತ ನಾಯಕನೇ ಆಗಲಿ ಯಾವತ್ತೂ ಚೌಕಟ್ಟನ್ನು ಮೀರಿ ಯೋಚಿಸುವ ಶಕ್ತಿ ಹೊಂದಿರಬೇಕು ಅದನ್ನೇ ನಾವು Thinking out of box ಎನ್ನುತ್ತೇವೆ.ಏಕೆಂದರೆ ಚೌಕಟ್ಟಿನ ಹೊರಗೆ ಯೋಚಿಸುವುದು ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ನಮ್ಮೊಳಗೆ ನಮ್ಮ ಅರಿವಿಲ್ಲದಂತೆಯೇ ಬೆಳೆಯಲು ನಮಗೆ ಸಹಾಯ ಮಾಡುತ್ತದೆ, ಇದು ಸಾಮಾನ್ಯವಾಗಿ ಹೊಸ ಮತ್ತು ಸುಧಾರಿತ ಯೋಚನೆಗಳೊಂದಿಗೆ ಅತ್ಯುತ್ತಮ ಸೇವೆ ನೀಡಲು ಕಾರಣವಾಗುತ್ತದೆ. ಅದಲ್ಲದೆ ಸಮಸ್ಯೆಗಳನ್ನು ಅತ್ಯುತ್ತಮ ರೀತಿಯಲ್ಲಿ ಪರಿಹರಿಸುವ ಮೂಲಕ ಸಂವಹನ ಕೌಶಲ್ಯವನ್ನು ಕೂಡ ಪರಿಣಾಮಕಾರಿಯಾಗಿಸುತ್ತದೆ.Thinking out of Box ಎನ್ನುವುದು ಸುಲಭವಲ್ಲ ಏಕೆಂದರೆ ನಾವು ನಮ್ಮ comfort zone ಇಂದ ಮೊದಲು ಹೊರಗೆ ಬರಬೇಕು. ಚೌಕಟ್ಟಿನೊಳಗೆ ಎಲ್ಲರೂ ಆರಾಮವಾಗಿ ಇರುತ್ತಾರೆ. ಒಬ್ಬ ಮನುಷ್ಯ ಚೌಕಟ್ಟನ್ನು ಮೀರಿ ಹೊರಗೆ ಬಂದಾಗ ಸಮಸ್ಯೆಗಳಿಗೆ ವಿಭಿನ್ನ ರೀತಿಯಲ್ಲಿ ಪರಿಹಾರ ಕೊಂಡುಕೊಳ್ಳುತ್ತಾನೆ. ಅದೇ ರೀತಿ ಒಬ್ಬ ನಾಯಕ ಯಶಸ್ವಿ ನಾಯಕನಾಗುತ್ತಾನೆ. ಹೆಚ್ಚಿನ ಜನರು…
ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಟೀಕೆ ಬೆಂಗಳೂರು: ಕೇಂದ್ರ ಸರಕಾರವು ಸಾವಿರಾರು ಕೋಟಿ ರೂ. ಬರಗಾಲದ ಪರಿಹಾರಧನ ಕೊಟ್ಟಿದೆ. ಆದರೂ, ದೇವರು ಕೊಟ್ಟರೂ ಕೂಡ ಪೂಜಾರಿ ಕೊಡಲು ತಯಾರಿಲ್ಲ ಎಂಬಂತೆ ಕೇಂದ್ರ ಸರಕಾರ, ನರೇಂದ್ರ ಮೋದಿಯವರು ಬರಗಾಲದ ಮೊತ್ತವನ್ನು ಕೊಟ್ಟಿದ್ದರೂ ಅದನ್ನು ಸುಮಾರು 2 ಲಕ್ಷಕ್ಕಿಂತ ಹೆಚ್ಚು ರೈತರ ಖಾತೆಗಳಿಗೆ ಇವತ್ತಿಗೂ ನೀಡಿಲ್ಲ ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಟೀಕಿಸಿದರು.ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು ರೈತರ ಪಾಲಿಗೆ ಸತ್ತು ಹೋಗಿದೆ. ಕಳೆದ ಸುಮಾರು ಒಂದು ವರ್ಷದಿಂದ ಬರಗಾಲದಿಂದ ತತ್ತರಿಸಿ ಹೋದ ರೈತರಿಗೆ ಸಹಾಯ ಮಾಡುತ್ತಿಲ್ಲ, ಇದು ರೈತರ ಪಾಲಿಗೆ ಸತ್ತು ಹೋದ ಸರಕಾರದಂತಿದೆ ಎಂದು ಹೇಳಿದರು.ಬರಗಾಲದಿಂದ ಬೆಂದಿರುವ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಬಿತ್ತನೆ ಬೀಜವನ್ನು ವಿತರಿಸುವ ಕೆಲಸವನ್ನು ಈ ಸರಕಾರ ಮಾಡಬೇಕಿತ್ತು. ಆದರೆ, ಕಾಂಗ್ರೆಸ್ ಸರಕಾರವು ಬಿತ್ತನೆ ಬೀಜಕ್ಕೂ…
ವಿಜಯಪುರ: ನಗರದ ಬಳಿಯ ಭೂತನಾಳ ತಾಂಡಾದ ಸುನೀಲ ತಂ.ರೂಪಸಿಂಗ ರಾಠೋಡ ಇವರು ಜೂ. ೨೧ರಿಂದ ೨೭ ರವರೆಗೆ ನಡೆಯಲಿರುವ Tenpin Para Bowling ಅಂತರಾಷ್ಟ್ರೀಯ Comodiya Open Para Bowling Championship೨೦೨೪ ರಲ್ಲಿ ನಡೆಯಲಿರುವ ಕ್ರೀಡೆಗೆ ಆಯ್ಕೆಯಾಗಿ ತೆರಳುತ್ತಿದ್ದು, ಇದಕ್ಕಿಂತ ಮುಂಚೆ ರಜ್ಯ, ರಾಷ್ಟ್ರೀಯ ಮತ್ತು ೩ ಬಾರಿ ಅಂತರಾಷ್ಟ್ರೀಯ Para Olympic Commitee of India ದಿಂದ ಆಯ್ಕೆಯಾಗಿ ದುಬೈ ಸಾರಜಾತದಲ್ಲಿ ನಡೆದ ಗೆ ಆWorld wasಯ್ಕೆಯಾಗಿ ೪ನೇ ಸ್ಥಾನವನ್ನು ಪಡೆದಿರುತ್ತಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ೪ನೇ ಪ್ಯಾರಾ ಟೆನಪಿನ್ ನ್ಯಾಷನಲ್ ಚಾಂಪಿಯನಶೀಫ್‌ನಲ್ಲಿ ತೃತೀಯ ಸ್ಥಾನ ಪಡೆದು, ಅಂತರಾಷ್ಟ್ರೀಯ ಕಾಂಬೋಡಿಯಾ ಅಂತರಾಷ್ಟ್ರೀಯ ಕ್ರೀಡೆಗೆ ಆಯ್ಕೆಯಾಗಿ ತೆರಳುತ್ತಿದ್ದಾರೆ. ಅಲ್ಲದೇ ವಿಜಯಪುರ ನಗರ, ವಿಜಯಪುರ ಜಿಲ್ಲೆ ಕೀತಿರ್ಯನ್ನು ಹೆಚ್ಚಿಸಿರುತ್ತಾರೆ.ಅಲ್ಲದೇ ಇವರು ಕ್ರೀಡೆಯಲ್ಲೂ ಭಾಗವಹಿಸಲು ಸಹಾಯ ಮಾಡಿದ ಶ್ರೀ ಸತ್ಯನಾರಾಯಣ ಸರ್ ಪ್ಯಾರಾ ಓಲಪಿಂಕ ಕಮೀಟಿ ಚೇರಮನ್ ಮತ್ತು ಸುರರ್ಜಿತಸಿಂಗ್ ಏಸಿಯನ್ ಮೆಡಲಿಸ್ಟ್ ಹಾಗೂ ಓಲಪಿಂಕ ಪದಕ ವಿಜೇತ ಎಚ್.ಎನ್.ಗಿರೀಶ ಹಾಗೂ ಕಾಮನವೆಲ್ಲ ಮೆಡಲಿಸ್ಟ್…
ಸಿಂದಗಿ: ನಿಮ್ಮೊಂದಿಗೆ ನಾನಿದ್ದೇನೆ. ನಮ್ಮ ಸರ್ಕಾರವಿದೆ ನೀವು ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ. ಧೈರ್ಯವಾಗಿರಿ ಎಂದು ಶಾಸಕ ಅಶೋಕ್ ಮನಗೂಳಿ ಸಾಂತ್ವನ ಹೇಳಿದರು.ಇತ್ತೀಚಿಗೆ ಸಿಂದಗಿ ಮತಕ್ಷೇತ್ರದ ಕಕ್ಕಳಮೇಲಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಗುರುಶಾಂತಯ್ಯ ಸಿದ್ದಯ್ಯ ನಾಗನಮಠ ಅವರ ಮನೆಗೆ ಭೇಟಿ ಮನಗೂಳಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ಇದೇ ಸಂದರ್ಭದಲ್ಲಿ ಪ್ರಭುಗೌಡ ಬಿರಾದಾರ, ಶಂಕರ ಮಾವುರ, ಶಫಿಕ ಮುಜಾವರ, ಯಲ್ಲಾಲಿಂಗ ಅಗಸರ, ಶಂಕರಲಿಂಗ ಪತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಿಂದಗಿ: ಜಿಲ್ಲೆಯಲ್ಲಿ ಅಹಿಂದ ಚಳುವಳಿಯನ್ನು ಜೀವಂತವಾಗಿಟ್ಟು ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಜಿಲ್ಲೆಯಾದ್ಯಂತ ಅಹಿಂದ ವರ್ಗಗಳ ಧ್ವನಿಯಾಗಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಹಿರಿಯ ಹೋರಾಟಗಾರರು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಅವರಿಗೆ ವಿಧಾನ ಪರಿಷತ್ ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೋದಿನ್ ಶಾಬಾದಿ ಒತ್ತಾಯಿಸಿದ್ದಾರೆ.ಜಿಲ್ಲೆಯಲ್ಲಿ ಅಹಿಂದ ಸಮುದಾಯ ರಾಜಕೀಯದಿಂದ ವಂಚಿತವಾಗಿದ್ದು, ಅಹಿಂದರ ಶಕ್ತಿಯನ್ನು ದುರ್ಬಲಗೊಳಿಸಲು ಹಲವಾರು ಕುತಂತ್ರಗಳು ನಡೆಯುತ್ತಿವೆ. ಕಾರಣ ಅಹಿಂದ ಸಮುದಾಯಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಅಹಿಂದ ಮತಗಳಿಂದ ಅಧಿಕಾರಕ್ಕೆ ಬಂದ ಸರ್ಕಾರ ಪ್ರಾಮಾಣಿಕವಾಗಿ ದುಡಿಯುವ ಅಹಿಂದ ನಾಯಕರಿಗೆ ಅಧಿಕಾರ ನೀಡುವ ವ್ಯವಸ್ಥೆ ಮಾಡಬೇಕು. ಅಲ್ಲದೇ ಬಿಜೆಪಿಯ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸುವ ನಾಯಕನನ್ನು ಅಹಿಂದರ ಧ್ವನಿಯಾಗಿ ಗುರುತಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಚಡಚಣ ತಾಲೂಕಿನ ರೇವತಗಾಂವದ ಶ್ರೀ ರೇವಣಸಿದ್ದೇಶ್ವರ ಜಾತ್ರೆ ಸಂಪನ್ನ ಚಡಚಣ: ಗ್ರಾಮೀಣ ಸೊಗಡನ್ನು ಉಳಿಸುವ ನಿಟ್ಟಿನಲ್ಲಿ ಕುಸ್ತಿ ಪಂದ್ಯಾವಳಿ ಉತ್ತಮ ಪ್ರಯೋಗವಾಗಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಕುಸ್ತಿ ಕ್ರೀಡೆ ಇತ್ತೀಚಿನ ದಿನಗಳಲ್ಲಿ ಅವನತಿ ಅಂಚಿನಲ್ಲಿ ಸಾಗುತ್ತಿದೆ. ಅದನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಮಾಜಿ ಕುಸ್ತಿ ಪೈಲ್ವಾನರು ಚನ್ನಪ್ಪ ಹತ್ತಳ್ಳಿಯವರು ಹೇಳಿದರು.ಶುಕ್ರವಾರದಂದು ಗ್ರಾಮದ ಶ್ರೀ ರೇವಣಸಿದ್ದೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯ ವೇಳೆಯ ನಿರ್ಣಾಯಕರಾಗಿ ಮಾತನಾಡಿದ ಅವರು. ಇಂದಿನ ಮಕ್ಕಳು ಮೊಬೈಲ್‌ಗೆ ದಾಸರಾಗುತ್ತಿದ್ದು, ಸಣ್ಣ ವಯಸ್ಸಿನಲ್ಲೇ ದುಷ್ಚಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ತಂದೆ-ತಾಯಿ ಎಚ್ಚೆತ್ತುಕೊಂಡು ಮಕ್ಕಳನ್ನು ಪೈಲ್ವಾನರಾಗಲು ಹುರಿದುಂಬಿಸಬೇಕು. ದೇಹ ದಂಡಿಸಿ ಗಟ್ಟಿಮುಟ್ಟಾಗಿ ಕುಸ್ತಿ ಪಟುವಾಗಲು ಮುಂದಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನ ಕಮೀಟಿ ಅಧ್ಯಕ್ಷರಾದ ಪ್ರಕಾಶ ಜೀಗಜೇವಣಿಯವರು ಮಾತನಾಡುತ್ತ. ದೈಹಿಕ ಕಸರತ್ತು ತಾಕತ್ತು ತೋರಿಸುವ ರೈತರ ಹಾಗೂ ಯುವಕರ ಕ್ರೀಡೆಗಳಲ್ಲೊಂದಾದ ಕುಸ್ತಿ ಕರಡಿ ಮನೆಗಳು ಅಳಿವಿನಂಚಿನಲ್ಲಿವೆ. ಇದು ಗ್ರಾಮೀಣ ಕ್ರೀಡೆ ನಾವೇಲ್ಲರೂ ಸೇರಿ…
ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನವು ಮೇ. ೨೬ ರಂದು ಬೆಳಗ್ಗೆ ೧೦ ಗಂಟೆಗೆ ಪ್ರತಿಭಾ ಪುರಸ್ಕಾರ ಹಾಗೂ ಸಾದ್ವಿ ಶಿರೋಮಣಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತೋತ್ಸವ ಹಮ್ಮಿಕೊಂಡಿದೆ. ಕಾರ್ಯಕ್ರಮದ ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ವಹಿಸುವರು. ಶಿಕ್ಷಕ ಸಾಹಿತಿ ಅಶೋಕ ಹಂಚಲಿ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲಗೌಡ ಹೊಸಳ್ಳಿ, ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಾಟೀಲ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಆಗಮಿಸುವರು.ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿಯಲ್ಲಿ ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ, ಉರ್ದು ಮಾಧ್ಯಮಗಳಲ್ಲಿ ಅಖಂಡ ತಾಲೂಕಿಗೆ ಪ್ರಥಮ,ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು, ದ್ವಿತೀಯ ಪಿಯುಸಿಯ ಕಲಾ ವಿಭಾಗ, ವಿಜ್ಞಾನ ವಿಭಾಗ,…
ಬಸವನಬಾಗೇವಾಡಿ: ಮೂಲತಃ ತಾಲೂಕಿನ ನಾಗೋಡ ಗ್ರಾಮದವರಾದ ಸ್ಥಳೀಯ ಸಾಹಿತಿ, ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ ಖೇಡದ ಅವರು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ನೀಡುವ ಚುಟುಕು ದಾಸೋಹಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನಿಂದ ವಿವಿಧ ಸಾಹಿತ್ಯ ಅಭಿಯಾನಗಳ ಕೈಗೊಳ್ಳುವ ಮೂಲಕ ಸಾಹಿತ್ಯ ಸೇವೆ, ಸುದ್ದಿ ಸೇವೆಯ ನಿರಂತರ ಅಭಿಯಾನಗಳನ್ನು ಮಾಡಿರುವುದು, ಚುಟುಕು ಸಾಹಿತ್ಯ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯಕ್ಕೆ ಕೊಡುಗೆ ನೀಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಮೇ. ೨೬ ರಂದು ಬೆಳಗ್ಗೆ ೧೦ ಗಂಟೆಗೆ ಶಿರಸಿಯ ನೆಮ್ಮದಿ ಆವರಣದ ರಂಗಧಾಮ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ೧೨ ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
