Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ೧೧೦ ಕೆವಿ ಇಂಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ೧೦ ಎಂವಿ ಪರಿವರ್ತಕಗಳ ಮಧ್ಯ ತಡೆಗೋಡೆ ಕಾಮಗಾರಿ ನಿರ್ಮಾಣ ಕೈಗೊಂಡಿರುವುದರಿಂದ ಮೇ.೨೮ರಂದು ಬೆಳಗ್ಗೆ ೬ ಗಂಟೆಯಿಂದ ಬೆಳಗ್ಗೆ ೧೧ ಗಂಟೆಯವರೆಗೆ ೩೩ಕೆವಿ ನಾದ, ೩೩ ಕೆವಿ ತಡವಲಗಾ, ೩೩ಕೆವಿ ತಾಂಬಾ, ೧೧ ಕೆವಿ ಅಂಜುಟಗಿ ಎನ್‌ಜಿವಾಯ್, ೧೧ ಕೆವಿ ತಡವಲಗಾ, ೧೧ ಕೆವಿ ಇಂಡಿ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಆದ ಕಾರಣ ಸಾರ್ವಜನಿಕರು ನಾಗರಿಕರು ಸಹಕರಿಸಬೇಕು ಎಂದು ಇಂಡಿ ಹೆಸ್ಕಾಂ ಕಾರ್ಯಪಾಲನ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ೧೧೦ ಕೆವಿ ದೇವರ ಹಿಪ್ಪರಗಿ-ಸಿಂದಗಿ ವಿದ್ಯುತ್ ಪ್ರಸರಣ ಜೋಡಿ ಮಾರ್ಗಗಳಲ್ಲಿ ವಾಹಕಗಳ ಮತ್ತು ಗೋಪುರಗಳ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ೧೧ ಕೆವಿ ಯಂಕಂಚಿ ಎನ್‌ಜಿವಾಯ್, ೧೧ ಕೆವಿ ಯರಗಲ್ ಎನ್‌ಜಿವಾಐ, ೧೧ ಕೆವಿ ಬಂದಾಳ ಐಪಿ ಮಾರ್ಗಗಳಲ್ಲಿ ಮೇ.೨೯ ಎಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಆದ ಕಾರಣ ಸಾರ್ವಜನಿಕರು ನಾಗರಿಕರು ಸಹಕರಿಸಬೇಕು ಎಂದು ಇಂಡಿ ಹೆಸ್ಕಾಂ ಕಾರ್ಯಪಾಲನ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ೧೧೦ ಕೆವಿ ಮೋರಟಗಿ ಉಪಕೇಂದ್ರದಲ್ಲಿ ೧೧ ಕೆವಿ ಬ್ಯಾಂಕ್ ಹಾಗೂ ಅದರ ೧೧ ಕೆವಿ ಬ್ರೇಕರ್ ಬದಲಾಯಿಸುವ ಕಾಮಗಾರಿ ಕೈಗೊಂಡಿರುವುದರಿಂದ ಮೇ.೨೮ ರಿಂದ ಮೇ.೩೦ರ ವರಗೆ ಬೆಳಗ್ಗೆ ೧೧ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಈ ಕೆಳಕಂಡ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.೧೧ ಕೆವಿ ಯರಗಲ್ ಐಪಿ, ೧೧ ಕೆವಿ ಗಬಸಾವಳಗಿ ಐಪಿ, ೧೧ ಕೆವಿ ಕಕ್ಕಳಮೇಲಿ ಐಪಿ, ೧೧ಕೆವಿ ಕುಮಸಗಿ ಐಪಿ, ೧೧ ಕೆವಿ ಹೆಬ್ಬಾಳ ಐಪಿ, ೧೧ ಕೆವಿ ಮೋರಟಗಿ ಲೋಕಲ್ ಐಪಿ, ಹಾಗೂ ೧೧ ಕೆವಿ ಮೋರಟಗಿ ಎನ್‌ಜೆವಾಯ್ ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಆದ ಕಾರಣ ಸಾರ್ವಜನಿಕರು ನಾಗರಿಕರು ಸಹಕರಿಸಬೇಕು ಎಂದು ಇಂಡಿ ಹೆಸ್ಕಾಂ ಕಾರ್ಯಪಾಲನ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಕೀಜೋಫ್ರೇನಿಯಾ ದಿನಾಚರಣೆಯಲ್ಲಿ ನ್ಯಾಯಾಧೀಶ ಲೋಕೇಶ್ ಧನಪಾಲ್ ಸಲಹೆ ವಿಜಯಪುರ: ಸ್ಕೀಜೋಫ್ರೇನಿಯಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರ ಚಿಕಿತ್ಸೆ ಬಗ್ಗೆ ಕುಟುಂಬದ ಸದಸ್ಯರು ಕಾಯಿಲೆಯ ಅರಿವಿನ ಕೊರತೆಯಿಂದ ಗಮನಹರಿಸುವುದಿಲ್ಲ. ಅದಕ್ಕಾಗಿ ಇಂಥ ಕಾಯಿಲೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಬೇಕು. ಇದರಿಂದ ಎಷ್ಟೋ ಕುಟುಂಬಗಳ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ೪ನೇ ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ ಹಾಗೂ ಪ್ರಭಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರದ ಸದಸ್ಯ ಕಾರ್ಯದರ್ಶಿಗಳಾದ ಲೋಕೇಶ ಧನಪಾಲ್ ಹವಲೆ ಹೇಳಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ ವಿಜಯಪುರ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ವಿಶ್ವ ಸ್ಕೀಜೋಫ್ರೇನಿಯಾ ದಿನಾಚರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೊಳ್ಳಿ ಮಾತನಾಡಿ, ಮಾನಸಿಕ ಖಿನ್ನತೆಯಿಂದ…
ಮುದ್ದೇಬಿಹಾಳ: ಪಟ್ಟಣದ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾಗಿ ಆಗಮಿಸಿದ ರವೀಂದ್ರಕುಮಾರ ಕಟ್ಟಿಮನಿ ಅವರನ್ನು ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸನ್ಮಾನಿಸಿ ಗೌರವಿಸುವ ಮೂಲಕ ಬರಮಾಡಿಕೊಂಡರು.ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಹಂಬಲ ಇದೆ. ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಕುರಿತು ಉಚ್ಛ ನ್ಯಾಯಾಲಯದಿಂದ ಮೇಲಿಂದ ಮೇಲೆ ಆದೇಶಗಳು ಬರುತ್ತಿರುತ್ತವೆ. ಪ್ರಕರಣಗಳನ್ನು ಇತ್ಯರ್ಥ ಪಡಿಸುವ ನ್ಯಾಯದಾನದ ಪ್ರಕ್ರೀಯೆಯಲ್ಲಿ ಎಲ್ಲ ನ್ಯಾಯವಾದಿಗಳು ನನಗೆ ಸಹಕಾರ ನೀಡಬೇಕು ಎಂದು ವಿನಂತಿಸಿದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ನ್ಯಾಯಾಧೀಶರು ಮೂಲತಃ ಗ್ರಾಮೀಣ ಪ್ರದೇಶದರಾಗಿದ್ದರಿಂದ ಗ್ರಾಮೀಣ ಭಾಗದ ಜನತೆಯ ಸಮಸ್ಯೆಗಳು ಬಹುಬೇಗ ಅರ್ಥವಾಗುತ್ತವೆ ಎಂಬ ಅನಿಸಿಕೆ ನನ್ನದು. ಉತ್ತರ ಕರ್ನಾಟಕದ ಕೆಲವು ಸೇರಿದಂತೆ ಬೆಂಗಳೂರಿನ ಸಿವಿಲ್ ಮತ್ತು ಸಿಬಿಐ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇವರು ನಮ್ಮ ನ್ಯಾಯಾಲಯಕ್ಕೆ ಬಂದಿದ್ದು ಖುಷಿ ತಂದಿದೆ. ತಮ್ಮ ಅನುಭವ ಮತ್ತು ಮಾರ್ಗದರ್ಶನವನ್ನು ಕಿರಿಯ ವಕೀಲರಿಗೆ ಹಂಚಿ, ನ್ಯಾಯದಾನದ ಪ್ರಕ್ರೀಯೆಯಲ್ಲಿ ಹಿರಿಯ…
ದೇವರಹಿಪ್ಪರಗಿ: ಪಟ್ಟಣದ ಕನಕದಾಸ ವೃತ್ತದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಹಾಗೂ ಪಾನ ಶಾಪ್‌ಗಳಲ್ಲಿ ಮಾವಾ ಎಂಬ ಮಾದಕ ಪದಾರ್ಥ ಮಾರಾಟ ತಡೆದು ಬಡ ಕುಟುಂಬಗಳ ಸಂಸಾರ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರು ತಹಶೀಲ್ದಾರ ಕಾರ್ಯಾಲಯದ ಮುಂದೆ ಸುಮಾರು ೪ ಗಂಟೆಗಳ ಕಾಲ ಧರಣಿ ಕುಳಿತು ಪ್ರತಿಭಟಿಸಿದರು.ನಂತರ ಶಿರಸ್ತೇದಾರ ಡಿ.ಎಸ್.ಭೋವಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಗಂಗಾನಗರ, ಕರಿಸಿದ್ಧೇಶ್ವರ, ರಾವುತರಾಯಗುಡಿ ಓಣಿ ಹಾಗೂ ತಾಂಡಾ ರಸ್ತೆಯ ಮಹಿಳೆಯರು ಆಗಮಿಸಿ ಕನಕದಾಸ ವೃತ್ತದಲ್ಲಿ ಮಾಡಲಾಗುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಕಮಲಾ ಬಿರಾದಾರ ಮಾತನಾಡಿ, ಪಟ್ಟಣದ ಕನಕದಾಸ ವೃತ್ತದಲ್ಲಿ ಅಕ್ರಮ ಮದ್ಯ ಹಾಗೂ ಪಾನ ಶಾಪ್‌ಗಳಲ್ಲಿ ಮಾದಕ ಮಾವಾ ಮಾರಾಟದ ಫಲವಾಗಿ ಸ್ಥಳೀಯ ಯುವಕರು ಹಾಗೂ ಗಂಡಸರು ಕುಡಿಯುವ, ತಿನ್ನುವ ಚಟಕ್ಕೆ ಅಂಟಿಕೊಂಡಿದ್ದಾರೆ ಇದರಿಂದ ಮನೆ ನಿರ್ವಹಣೆ ಮಾಡುವ ಮಹಿಳೆಯರು ಅಸಹಾಯಕತೆಯಿಂದ ಬೇಸತ್ತಿದ್ದಾರೆ ಕೂಡಲೇ ತಾಲ್ಲೂಕಾಡಳಿತ ಈ ಕುರಿತು ಕ್ರಮ ವಹಿಸುವಂತೆ ಆಗ್ರಹಿಸಿದರು.ಬೋರಮ್ಮ ಜೋಂಡಿ…
ಆಲಮೇಲ: ಜಿಲ್ಲೆಯಲ್ಲಿ ಅಹಿಂದ ಚಳುವಳಿಯನ್ನು ಜೀವಂತವಾಗಿಟ್ಟು ಕಾಂಗ್ರೆಸ್ಪಕ್ಷಕ್ಕಾಗಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಜಿಲ್ಲೆಯಾದ್ಯಂತ ಅಹಿಂದ ವರ್ಗಗಳಧ್ವನಿಯಾಗಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಕೆಪಿಸಿಸಿ ವಕ್ತಾರಎಸ್.ಎಂ.ಪಾಟೀಲ ಗಣಿಹಾರ ಅವರಿಗೆ ವಿಧಾನ ಪರಿಷತ್ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂದು ಆಲಮೇಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಶೀರ್ ತಾಂಬೋಳಿ ಒತ್ತಾಯಿಸಿದ್ದಾರೆ.ಜಿಲ್ಲೆಯಲ್ಲಿ ಅಹಿಂದ ಸಮುದಾಯ ರಾಜಕೀಯದಿಂದ ವಂಚಿತವಾಗಿದ್ದು,ಅಹಿಂದರ ಶಕ್ತಿಯನ್ನುದುರ್ಬಲಗೊಳಿಸಲು ಹಲವಾರು ಕುತಂತ್ರಗಳು ನಡೆಯುತ್ತಿವೆ. ಕಾರಣ ಅಹಿಂದ ಸಮುದಾಯಗಳಿಗೆ ನ್ಯಾಯ ಒದಗಿಸಲು, ಅಹಿಂದ ಮತಗಳಿಂದಅಧಿಕಾರಕ್ಕೆ ಬಂದ ಸರಕಾರ ಪ್ರಾಮಾಣಿಕವಾಗಿ ದುಡಿಯುವ ಅಹಿಂದ ನಾಯಕರಿಗೆಅಧಿಕಾರ ನೀಡುವ ವ್ಯವಸ್ಥೆ ಮಾಡಬೇಕು. ಅಲ್ಲದೇ ಬಿಜೆಪಿಯ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸುವ ನಾಯಕನನ್ನು ಅಹಿಂದರ ಧ್ವನಿಯಾಗಿಗುರುತಿಸಿದಂತಾಗುತ್ತದೆ ಎಂದು ತಾಂಬೋಳೆ ಹೇಳಿದ್ದಾರೆ.
ವಿಜಯಪುರ ಜಿಲ್ಲಾ KDP ಸದಸ್ಯ ನೂರಹಮ್ಮದ ಅತ್ತಾರ ಆಗ್ರಹ ವಿಜಯಪುರ: ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಜಿಲ್ಲೆಯ ಅಹಿಂದ ವರ್ಗಗಳ ಧ್ವನಿಯಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಪ್ರಾಮಾಣಿಕ ಪಕ್ಷದ ಸೇವೆ ಸಲ್ಲಿಸುತ್ತಿರುವ ಹಿರಿಯ ಹೋರಾಟಗಾರ ಹಾಗೂ ಕೆಪಿಸಿಸಿ ವಕ್ತಾರರಾದ ಎಸ್.ಎಂ.ಪಾಟೀಲ್ (ಗಣಿಹಾರ) ರವರಿಗೆ ವಿಧಾನಪರಿಷತ್ ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂದು ಸಿಂದಗಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಯುವ ನಾಯಕ ಹಾಗೂ ವಿಜಯಪುರ ಜಿಲ್ಲಾ KDP ಸದಸ್ಯ ನೂರಹಮ್ಮದ ಅತ್ತಾರ ರವರು ಒತ್ತಾಯಿಸಿದ್ದಾರೆ.ವಿಜಯಪುರ ಜಿಲ್ಲಾದ್ಯಾಂತ ಅಹಿಂದ ಸಮುದಾಯವು ರಾಜಕೀಯವಾಗಿ ಕುಂಟಿತಗೊಂಡಿದ್ದು ಅಹಿಂದ ಸಮುದಾಯದ ಶಕ್ತಿಯನ್ನು ಬಲಿಷ್ಠಗೊಳಿಸಲು ಅಹಿಂದ ಸಮುದಾಯಗಳಿಗೆ ನ್ಯಾಯ ಒದಗಿಸಿ ದಂತಾಗುತ್ತದೆ. ಅಹಿಂದ ಮತಗಳಿಂದ ಅಧಿಕಾರಕ್ಕೆ ಬಂದ ಸರ್ಕಾರ ಪ್ರಾಮಾಣಿಕವಾಗಿ ದುಡಿಯುವ ಅಹಿಂದ ನಾಯಕರನ್ನು ವಿಧಾನಪರಿಷತ್ತಿಗೆ ಅವಕಾಶ ನೀಡಬೇಕು. ಅಂತಹ ಅಹಿಂದ ನಾಯಕರನ್ನು ಅಧಿಕಾರ ನೀಡುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಬಿಜೆಪಿಯ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸುವ ನಾಯಕನನ್ನು ಅಹಿಂದ ಧ್ವನಿಯಾಗಿ ಗುರುತಿಸಿದಂತಾಗುತ್ತದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು…
ವಿಜಯಪುರ: ಮತ ಎಣಿಕೆಗೆ ನಿಗದಿಪಡಿಸಿರುವ ಸೂಚನೆಗಳ ಕ್ರಮಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ ನಿಯಮಗಳನ್ನು ಪರಿಪಾಲಿಸಿ ಮತ ಎಣಿಕೆ ಕಾರ್ಯವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಸೋಮವಾರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕಸಭಾ ಚುನಾವಣೆ–2024ರ ಮತ ಎಣಿಕೆ ಪೂರ್ವ ಸಿದ್ಧತೆ ತರಬೇತಿಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮತ ಎಣಿಕೆಗೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ಸಲಹೆ ಸೂಚನೆಗಳನ್ನು ನೀಡಿದರು.ಮತ ಎಣಿಕೆ ಪ್ರಕ್ರೀಯೆ ಜೂನ್ 4ರಂದು ವಿಜಯಪುರ ಸೈನಿಕ ಶಾಲೆಯಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮತ ಎಣಿಕೆಗೆ ನಿಯೋಜನೆಗೊಂದಿರುವ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮ ರೀತಿಯಲ್ಲಿ ತರಬೇತಿಯನ್ನು ಪಡೆದುಕೊಂಡು ಮತ ಎಣಿಕೆ ಕಾರ್ಯದಲ್ಲಿ ಲೋಪದೋಷಗಳು ಆಗದಂತೆ ನೋಡಿಕೊಳ್ಳಿ ಎಂದರು.ಅಂದು ಬೆಳಗ್ಗೆ 7 ಗಂಟೆಯ ಒಳಗೆ ತಮಗೆ ನಿಗದಿ ಪಡಿಸಿದ ಮತ ಎಣಿಕೆ ಹಾಲ್‌ನಲ್ಲಿ ಹಾಜರಿರಬೇಕು. ಮತ ಎಣಿಕೆ ಹಾಲ್ ಒಳಗಡೆ ಮೊಬೈಲ್ ನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಹಾಲ್ ಒಳಗಡೆ ಪೊಲೀಸ್, ಸೆಕ್ಯುರಿಟಿ ಸಿಬ್ಬಂದಿಗಳಿಗೆ…
ಸಂತೋಷ್ ರಾವ್ ಪೆರ್ಮುಡ, ಬೆಳ್ತಂಗಡಿ ಒಮ್ಮೆ ಎಲ್ಲರಿಗೂ ಪ್ರಿಯವಾದ ಹಾಲು ಭಗವಂತನನ್ನು ಕುರಿತು ತಪಸ್ಸು ಮಾಡಿತು. ಆಗ ದೇವರು ಪ್ರತ್ಯಕ್ಷನಾಗಿ ಏನು ನಿನ್ನ ಸಮಸ್ಯೆ ಎಂದು ಕೇಳುತ್ತಾರೆ. ಆಗ ಹಾಲು ‘ಓ ದೇವರೇ, ನನ್ನ ಹೆಸರು ಹಾಲು ನಾನು ಆಕಳು ಮತ್ತು ಎಮ್ಮೆಗಳ ಕೆಚ್ಚಲಿನಿಂದ ಬರುವಾಗ ಬಂದಾಗ ಶುದ್ಧವಾಗಿಯೇ ಇರುತ್ತೇನೆ. ಆದರೆ ಈ ಪಾಪಿ ಮನುಷ್ಯ ಮಾತ್ರ ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನೇ ಕೆಡಿಸಿಬಿಡುತ್ತಾನೆ. ನನಗೆ ಸದಾ ಕಾಲ ಹಾಲಾಗಿಯೇ ಇರುವಂತೆ ವರವನ್ನು ಕೊಡು’ ಎಂದು ಬೇಡಿಕೊಂಡಿತು.ಹಾಲಿನ ಈ ಮಾತನ್ನು ಕೇಳಿದ ದೇವರು ನಕ್ಕು, ‘ಎಲೈ ಹಾಲೇ ಇಲ್ಲಿ ಕೇಳು, ನೀನು ಸದಾ ಹಾಲಾಗಿಯೇ ಇರಬೇಕೆನ್ನುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು. ನೀನು ಕೇವಲ ಹಾಲಾಗಿ ಅಷ್ಟೇ ಇದ್ದರೆ ಕೇವಲ ಒಂದು ದಿನ ಮಾತ್ರ ಬದುಕುತ್ತೀಯಾ. ಹಾಲಿಗೆ ಹುಳಿಯಿಂದ ಹೆಪ್ಪನ್ನು ಹಾಕಿದರೆ ನೀನು ಎರಡು ದಿನಗಳ ಕಾಲ ಬದುಕಿರುತ್ತೀಯಾ. ನಿನ್ನನ್ನು ಮೊಸರಾಗಿ ಕಡೆದರೆ ಹುಳಿ ಹುಳಿಯಾಗಿ…
