ಮುದ್ದೇಬಿಹಾಳ: ಪಟ್ಟಣದ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾಗಿ ಆಗಮಿಸಿದ ರವೀಂದ್ರಕುಮಾರ ಕಟ್ಟಿಮನಿ ಅವರನ್ನು ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸನ್ಮಾನಿಸಿ ಗೌರವಿಸುವ ಮೂಲಕ ಬರಮಾಡಿಕೊಂಡರು.
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಹಂಬಲ ಇದೆ. ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಕುರಿತು ಉಚ್ಛ ನ್ಯಾಯಾಲಯದಿಂದ ಮೇಲಿಂದ ಮೇಲೆ ಆದೇಶಗಳು ಬರುತ್ತಿರುತ್ತವೆ. ಪ್ರಕರಣಗಳನ್ನು ಇತ್ಯರ್ಥ ಪಡಿಸುವ ನ್ಯಾಯದಾನದ ಪ್ರಕ್ರೀಯೆಯಲ್ಲಿ ಎಲ್ಲ ನ್ಯಾಯವಾದಿಗಳು ನನಗೆ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ನ್ಯಾಯಾಧೀಶರು ಮೂಲತಃ ಗ್ರಾಮೀಣ ಪ್ರದೇಶದರಾಗಿದ್ದರಿಂದ ಗ್ರಾಮೀಣ ಭಾಗದ ಜನತೆಯ ಸಮಸ್ಯೆಗಳು ಬಹುಬೇಗ ಅರ್ಥವಾಗುತ್ತವೆ ಎಂಬ ಅನಿಸಿಕೆ ನನ್ನದು. ಉತ್ತರ ಕರ್ನಾಟಕದ ಕೆಲವು ಸೇರಿದಂತೆ ಬೆಂಗಳೂರಿನ ಸಿವಿಲ್ ಮತ್ತು ಸಿಬಿಐ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇವರು ನಮ್ಮ ನ್ಯಾಯಾಲಯಕ್ಕೆ ಬಂದಿದ್ದು ಖುಷಿ ತಂದಿದೆ. ತಮ್ಮ ಅನುಭವ ಮತ್ತು ಮಾರ್ಗದರ್ಶನವನ್ನು ಕಿರಿಯ ವಕೀಲರಿಗೆ ಹಂಚಿ, ನ್ಯಾಯದಾನದ ಪ್ರಕ್ರೀಯೆಯಲ್ಲಿ ಹಿರಿಯ ನುರಿತ ವಕೀಲರ ಅನುಭವವನ್ನು ಪಡೆದುಕೊಂಡು ನ್ಯಾಯಾಲಯದ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತಕುಮಾರ ಬಳೂಳಗಿಡದ, ಸರ್ಕಾರಿ ವಕೀಲರಾದ ನಾಗೇಶ ಪೂಜಾರ, ಬಸವರಾಜ ಆಹೇರಿ, ಅಪರ ಸರ್ಕಾರಿ ವಕೀಲರಾದ ಎಚ್.ಎಲ್.ಸರೂರ, ಹಿರಿಯ ನ್ಯಾಯವಾದಿಗಳಾದ ಸಿ.ಆರ್.ಜೋಶಿ, ಜೆ.ಎ.ಚಿನಿವಾರ, ಎಂ.ಎಚ್.ಹಾಲಣ್ಣವರ, ಬಿ.ಆರ್.ನಾಡಗೌಡರ, ಎಂ.ಎ.ಮುದ್ದೇಬಿಹಾಳ, ಎಂ.ಎಚ್.ಕ್ವಾರಿ, ಎನ್.ಆರ್.ಮೊಕಾಶಿ ನ್ಯಾಯವಾದಿಗಳಾದ ಎಲ್.ಎಸ್.ಮೇಟಿ ಎಂ.ಆರ್.ಪಾಟೀಲ, ಎಚ್.ಟಿ.ಪೂಜಾರಿ, ಎಸ್.ಆರ್.ಜೋಗಿ, ಚೇತನ ಶಿವಶಿಂಪಿ, ಎಸ್.ಆರ್.ಸಜ್ಜನ, ಎಸ್.ಆರ್.ಅಮರಣ್ಣವರ, ಬಿ.ಆರ್.ನಾಡಗೌಡರ, ಎಂ.ಬಿ.ಬಿರಾದಾರ, ಪಿ.ಬಿ.ಮಾತಿನ, ಎಸ್.ಎಂ.ಕಿಣಗಿ, ಬಿ.ಎ.ಚಿನಿವಾರ, ರಾಯನಗೌಡ ಬಿರಾದಾರ, ಸಂತೋಷ ನಾಯಕ, ಆರ್.ಎಸ್.ತುಪ್ಪದ, ರೇಣುಕಾ ಪಾಟೀಲ, ರಶ್ಮಿ ಕುಲಕರ್ಣಿ, ಹಸೀನಾ ಅನಂತಪೂರ, ಶ್ರೀದೇವಿ ರಾಜೂರ, ಶೋಭಾ ಪಾಟೀಲ ಸೇರಿದಂತೆ ಮತ್ತೀತರರು ಇದ್ದರು.
ಸಂಘದ ಉಪಾಧ್ಯಕ್ಷ ಎಚ್.ಜಿ.ನಾಗೋಡ ನ್ಯಾಯಾಧೀಶರ ಕಿರು ಪರಿಚಯ ಮಾಡಿಕೊಟ್ಟರು. ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

