ವಿಜಯಪುರ ಜಿಲ್ಲಾ KDP ಸದಸ್ಯ ನೂರಹಮ್ಮದ ಅತ್ತಾರ ಆಗ್ರಹ
ವಿಜಯಪುರ: ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಜಿಲ್ಲೆಯ ಅಹಿಂದ ವರ್ಗಗಳ ಧ್ವನಿಯಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಪ್ರಾಮಾಣಿಕ ಪಕ್ಷದ ಸೇವೆ ಸಲ್ಲಿಸುತ್ತಿರುವ ಹಿರಿಯ ಹೋರಾಟಗಾರ ಹಾಗೂ ಕೆಪಿಸಿಸಿ ವಕ್ತಾರರಾದ ಎಸ್.ಎಂ.ಪಾಟೀಲ್ (ಗಣಿಹಾರ) ರವರಿಗೆ ವಿಧಾನಪರಿಷತ್ ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂದು ಸಿಂದಗಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಯುವ ನಾಯಕ ಹಾಗೂ ವಿಜಯಪುರ ಜಿಲ್ಲಾ KDP ಸದಸ್ಯ ನೂರಹಮ್ಮದ ಅತ್ತಾರ ರವರು ಒತ್ತಾಯಿಸಿದ್ದಾರೆ.
ವಿಜಯಪುರ ಜಿಲ್ಲಾದ್ಯಾಂತ ಅಹಿಂದ ಸಮುದಾಯವು ರಾಜಕೀಯವಾಗಿ ಕುಂಟಿತಗೊಂಡಿದ್ದು ಅಹಿಂದ ಸಮುದಾಯದ ಶಕ್ತಿಯನ್ನು ಬಲಿಷ್ಠಗೊಳಿಸಲು ಅಹಿಂದ ಸಮುದಾಯಗಳಿಗೆ ನ್ಯಾಯ ಒದಗಿಸಿ ದಂತಾಗುತ್ತದೆ. ಅಹಿಂದ ಮತಗಳಿಂದ ಅಧಿಕಾರಕ್ಕೆ ಬಂದ ಸರ್ಕಾರ ಪ್ರಾಮಾಣಿಕವಾಗಿ ದುಡಿಯುವ ಅಹಿಂದ ನಾಯಕರನ್ನು ವಿಧಾನಪರಿಷತ್ತಿಗೆ ಅವಕಾಶ ನೀಡಬೇಕು. ಅಂತಹ ಅಹಿಂದ ನಾಯಕರನ್ನು ಅಧಿಕಾರ ನೀಡುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಬಿಜೆಪಿಯ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸುವ ನಾಯಕನನ್ನು ಅಹಿಂದ ಧ್ವನಿಯಾಗಿ ಗುರುತಿಸಿದಂತಾಗುತ್ತದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಕೊಡುಗೆ ಗಣನೀಯವಾಗಿದ್ದು, ಈ ಸಮುದಾಯದ ವಿಜಯಪುರ ಜಿಲ್ಲೆಯ ಪ್ರಬಲ ನಾಯಕ ಎಸ್.ಎಂ.ಪಾಟೀಲ ಗಣಿಹಾರ ಅವರಿಗೆ ಅವಕಾಶ ಕಲ್ಪಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಕೆಪಿಸಿಸಿ ನಾಯಕರಿಗೆ ಯುವ ಮುಖಂಡ ನೂರಹಮ್ಮದ ಅತ್ತಾರ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

