Subscribe to Updates
Get the latest creative news from FooBar about art, design and business.
Author: editor.udayarashmi@gmail.com
“ವಿದ್ಯಾರ್ಥಿ ನಿಧಿ”- ಮಂಡ್ಯ ಮ.ನಾ.ಉಡುಪ ಠಕ್ಕನರಿ ಮತ್ತು ಕೊಕ್ಕರೆ ಅದೊಂದು ದೊಡ್ಡ ಕಾಡು. ಆ ಕಾಡಿನ ಒಡೆಯ ವನರಾಜ ಸಿಂಹ. ಒಮ್ಮೆ ಸಿಂಹವು ಜಿಂಕೆಯನ್ನು ಬೇಟೆಯಾಡಿ ತಿನ್ನುವಾಗ ಜಿಂಕೆಯ ಮೂಳೆ ಸಿಂಹದ ಗಂಟಲಿನೊಳಗೆ ಸಿಕ್ಕಿ ಸಿಂಹವು ಸಾಯುವ ಪರಿಸ್ಥಿತಿಗೆ ತಲುಪಿತು.ಚಾಣಾಕ್ಷ ನರಿಯು ಸಿಂಹದ ಮಂತ್ರಿಯಾಗಿತ್ತು. ಅದು ರಾಜನ ಈ ಅವಸ್ಥೆ ನೋಡಲಾಗದೇ ಕೊಕ್ಕರೆಯ ಬಳಿ ಹೋಗಿ” ನೋಡು ನಮ್ಮ ರಾಜನಿಗೆ ಗಂಟಲಿನಲ್ಲಿ ಮೂಳೆಸಿಕ್ಕಿ ಸಾಯುವ ಪರಿಸ್ಥಿತಿ ಬಂದಿದೆ. ನೀನು ಅವನ ಗಂಟಲಿನೊಳಗೆ ಸಿಕ್ಕಿರುವ ಮೂಳೆ ತೆಗೆದು ಪ್ರಾಣಭಿಕ್ಷೆ ನೀಡಿದರೆ ನಿನಗೆ ಜೀವಮಾನದಲ್ಲಿ ಪಡೆಲಾಗದ ಬಹುಮಾನ ಕೊಡಿಸುವೆ..”ಎಂದು ಪುಸುಲಾಯಿಸಿ ಸಿಂಹದ ಬಳಿ ಕರೆದುಕೊಂಡು ಹೋಯಿತು .ಸಿಂಹದ ಬಾಯೊಳಗಿನ ಮೂಳೆಯನ್ನು ತನ್ನ ಉದ್ದವಾದ ಕೊಕ್ಕಿನಿಂದ ತೆಗೆಯಿತು. ನಂತರ ನರಿಯ ಬಳಿ” ಗೆಳೆಯ ನನ್ನ ಕೆಲಸ ಮುಗಿದಿದೆ . ನನಗೆ ಬರಬೇಕಾದ ಬಹುಮಾನ ಕೊಡಿಸು..” ಎಂದಿತು.ಆಗ ಸಿಂಹವು” ನೋಡು ನೀನು ನನ್ನ ಬಾಯೊಳಗೆ ತಲೆಯನ್ನು ಹಾಕಿದಾಗ ನಿನ್ನ ತಿನ್ನದೇ ಬಿಟ್ಟಿರುವುದೇ ದೊಡ್ಡ ಬಹುಮಾನ . ಅದಕ್ಕಿಂತಲೂ…
ವಿಜಯಪುರ: ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಮತ್ತು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ತೊರವಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಏಳು ದಿನಗಳ ಎನ್.ಎಸ್.ಎಸ್ ಶಿಬಿರದ ಅಂಗವಾಗಿ ಮಂಗಳವಾರ ಜಲ ಸಂರಕ್ಷಣೆ ಅಭಿಯಾನದ ಉದ್ಘಾಟನೆ ನಡೆಯಿತು.ಪರಿಸರ ತಜ್ಞ ಮತ್ತು ಹೈ ಲರ್ನ್ ಎಜ್ಯುಟೆಕ್ ಇನ್ಸ್ಟಿಟ್ಯೂಟ್ ನಿರ್ದೇಶಕರಾಗಿದ್ದರು. ಸಿರಾಜುದ್ದೀನ್ ಹೊರಗಿನಮನಿ ಅಭಿಯಾನಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಪರಿಸರ ಮತ್ತು ಜಲಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಕುರಿತು ಎನ್.ಎಸ್.ಎಸ್ ಶಿಬಿರಾರ್ಥಿಗಳು ಜನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಇದೇ ವೇಳೆ ತೊರವಿ ಗ್ರಾಮದ ಹನುಮಂತ ದೇವಸ್ಥಾನದ ಆವರಣದಲಿ ಜಲ ಸಂರಕ್ಷಣೆ ಅಭಿಯಾನ ಕುರಿತು ಜನಜಾಗೃತಿ ಜಾಥಾ ಮತ್ತು ಬೀದಿ ನಾಟಕ ನಡೆಯಿತು.ಈ ಸಂದರ್ಭದಲ್ಲಿ ಶಿಬಿರದ ಸಂಚಾಲಕ ಡಾ. ರಾವ್ ಸಾಹೇಬ ಎ. ದೇಶಮುಖ, ಬಿ.ಎಲ್.ಡಿ.ಈ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಡಾ. ವಿಜಯಲಕ್ಷ್ಮಿ ಬೆನಕಟ್ಟಿ, ಡಾ. ಸುನಿತಾ, ಕಾಲೇಜಿನ ಎನ್.ಎಸ್.ಎಸ್ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸರ್ಕಾರಕ್ಕೆ ಮನವಿ ವಿಜಯಪುರ: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಹಣಕಾಸು ವಂಚನೆಯ ತನಿಖೆಯನ್ನು ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಬೇಕೆಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಈ ಕುರಿತು ಗುರುವಾರ ಮನವಿ ಪ್ರತಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಅವರು, ಮಹರ್ಷಿ ವಾಲ್ಮೀಕಿ ಕಾರ್ಪೊರೇಷನ್‌ನ ಹಿರಿಯ ಲೆಕ್ಕಾಧಿಕಾರಿ ಚಂದ್ರಶೇಖರ್ ಅವರು ಆರು ಪುಟಗಳ ಆತ್ಮಹತ್ಯೆ ಪತ್ರವನ್ನು ಬಿಟ್ಟು ದುರಂತವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ತಮ್ಮ ಟಿಪ್ಪಣಿಯಲ್ಲಿ, ಅವರು ತಮ್ಮ ಸಾವಿಗೆ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ವ್ಯವಸ್ಥಾಪಕರು ಸೇರಿದಂತೆ ನಿಗಮದ ಸಚಿವರು, ಹಿರಿಯ ಅಧಿಕಾರಿಗಳು ಕಾರಣ ಎಂದು ಹೆಸರಿಸಿದ್ದಾರೆ. ಈ ವರ್ಷದ ಮಾರ್ಚ್ ಮತ್ತು ಮೇ ನಡುವೆ ಎಂಜಿ ರಸ್ತೆಯಲ್ಲಿರುವ ಖಾತೆಗೆ 187.3 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿರುವುದು ಪತ್ತೆಯಾಗಿದ್ದು, ವಹಿವಾಟು ನಡೆಸುವ ಮುನ್ನ ಪಾಲಿಕೆ ಅಧಿಕಾರಿಗಳ ಸಹಿ ನಕಲಿಯಾಗಿದೆ. ಪರಿಶಿಷ್ಟ ಪಂಗಡದವರಿಗೆ ಆರ್ಥಿಕ ನೆರವು ನೀಡಲು ಮತ್ತು ಅವರ…
ಸಿಂದಗಿ: ಪಟ್ಟಣದ ಪತ್ರಕರ್ತ ಗುಂಡು ಕುಲಕರ್ಣಿಗೆ ಜೀವ ಬೆದರಿಕೆ ಹಾಕಿದ ಸಿಪಿಐ ನಾನಾಗೌಡ ಪಾಟೀಲ, ಪಿಎಸ್‌ಐ ಭೀಮಪ್ಪ ರಬಕವಿ ಹಾಗೂ ಪೇದೆ ಸುರೇಶ ಕೊಂಡಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪತ್ರಕರ್ತರು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಪತ್ರಕರ್ತ ಗುಂಡು ಕುಲಕರ್ಣಿ, ಅಕ್ರಮ ಮರಳು ಸಾಗಣೆ ಕುರಿತು ವರದಿ ಮಾಡಿದ್ದಕ್ಕಾಗಿ ನನ್ನನ್ನು ಮೇ.೮ರ ತಡರಾತ್ರಿ ಪಿಎಸ್‌ಐ ಭೀಮಪ್ಪ ರಬಕವಿ ಹಾಗೂ ಪೇದೆ ಸುರೇಶ ಕೊಂಡಿ ಅಪಹರಿಸಿ ಪಟ್ಟಣದ ಹೊರವಲಯಕ್ಕೆ ಕರೆದೊಯ್ದು ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ವರದಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ನನಗೆ ಏನಾದರೂ ಆದರೆ ಈ ಮೂರು ಜನ ಅಧಿಕಾರಿಗಳೇ ಕಾರಣ ಎಂದು ಹೇಳಿದರು.ಈ ವೇಳೆ ಪತ್ರಕರ್ತರಾದ ಡಿ.ಬಿ.ವಡವಡಗಿ, ಪರಶುರಾಮ ಶಿವಶರಣ, ನಾಗೇಶ ನಾಗೂರ, ಗುರುರಾಜ ಮಠ, ಸುದರ್ಶನ ಜಂಗಣ್ಣಿ, ಭೋಜರಾಜ ದೇಸಾಯಿ ಇದ್ದರು.
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಡಿಯ ವಸತಿ ನಿಲಯದಲ್ಲಿ ಅಧ್ಯಯನ ಮಾಡಿ ೧೦ ಮತ್ತು ೧೨ ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಚೀನ ಲಮಾಣಿ, ಸಾನಿಕಾ ಲಮಾಣಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಅವರ ಮಾರ್ಗದರ್ಶನದಂತೆ ೨೦೨೪-೨೫ನೇ ಸಾಲಿನಲ್ಲಿ ವಸತಿ ನಿಲಯಗಳಲ್ಲಿ ಓದಿ ಅತಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹವಾಗಿ ೫೦೦೦ ನೀಡುತ್ತಿದ್ದೇವೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ ಅವರು ಸನ್ಮಾನಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಸಾಕಷ್ಟು ಬಡ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಅಂತಹ ಮಕ್ಕಳಿಗೆ ಸರಕಾರದ ಸಮಾಜ ಕಲ್ಯಾಣ ಇಲಾಖೆಯಡಿ ವಸತಿ ನಿಲಯಗಳನ್ನು ಮಾಡಿಕೊಟ್ಟು ಸಾಕಷ್ಟು ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮಾಡುತ್ತಿದ್ದು, ಇಲ್ಲಿ ಕಲಿತಂತಹ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಿರುವುದು ಶ್ಲಾಘನೀಯ ವಿಷಯ ಆ ನೀಟ್ಟಿನಲ್ಲಿ ಇಂದು ಅತೀ ಹೆಚ್ಚು ಅಂಕ ಪಡೆದ ವಿದ್ಯಾಥಿಗಳಿಗೆ…
ಆಲಮಟ್ಟಿ: ಜಮೀನು ವಿವಾದದ ಹಿನ್ನಲೆಯಲ್ಲಿ ವೃದ್ಧನೊಬ್ಬನನ್ನು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಚಿಮ್ಮಲಗಿ ಭಾಗ ೨ ಗ್ರಾಮದಲ್ಲಿ ಜರುಗಿದೆ.ಕೊಲೆಯಾದ ವ್ಯಕ್ತಿ ಹನುಮಂತ ನಾನಪ್ಪ ಲಮಾಣಿ (೮೦).ರಾಮು ಸಗರಪ್ಪ ಲಮಾಣಿ ಸೇರಿದಂತೆ ೧೨ ಜನರು ಸೇರಿ ಕೊಲೆ ಮಾಡಿದ್ದಾರೆಂದು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಮೀನಿನ ಬದುವಿನ ಸಲುವಾಗಿ ಎರಡು ಕುಟುಂಬಗಳ ಮಧ್ಯೆ ಬುಧವಾರ ರಾತ್ರಿ ಜಗಳವಾಗಿದ್ದು, ಜಗಳ ವಿಕೋಪಕ್ಕೆ ಹೋಗಿ ವೃದ್ಧನಿಗೆ ತೀವ್ರ ಗಾಯಗಳಾಗಿದ್ದು ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ ಸೋನಾವಾಲೆ, ಹೆಚ್ಚುವರಿ ಎಸ್ ಪಿ ಶಂಕರ ಮಾರಿಹಾಳ, ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ ಸೇರಿದಂತೆ ಇತರರು ಭೇಟಿ ನೀಡಿದರು.ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಡಿ: ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಬಾಲಕ ಸಾವನಪ್ಪಿರುವ ಘಟನೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.ಸಾಲೋಟಗಿ ಗ್ರಾಮದ ಶ್ರೀಶೈಲ ಪ್ರಭು ಉಪ್ಪಾರ (೦೩) ಮೃತ ಬಾಲಕ.ಇಂಡಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಂಡಿ: ತಾಲೂಕಿನ ಜೇವೂರ ಸಸ್ಯಕ್ಷೇತ್ರದಿಂದ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ ೧೨ ಸಾವಿರ ಸಸಿಗಳನ್ನು ವಿತರಿಸಲಾಗುವದೆಂದು ವಲಯ ಅರಣ್ಯ ಆಧಿಕಾರಿ ಅನಂತಕುಮಾರ ತಿಳಿಸಿದ್ದಾರೆ.ಪಟ್ಟಣದ ಪ್ರಾದೇಶಿಕ ಅರಣ್ಯ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು ಜೂ.೩ ರಿಂದ ರೈತರಿಗೆ, ಸಂಘಸಂಸ್ಥೆಗಳಿಗೆ,ಶಾಲಾ ಕಾಲೇಜುಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ಸಸಿಗಳನ್ನು ವಿತರಿಸಲಾಗುವದು.ಸಸಿಗಳು ೬೯ ಮತ್ತು ೮ ೧೨ ಬ್ಯಾಗ್ ಸೈಜ್ ನಲ್ಲಿ ವಿತರಿಸಲಾಗುವದು. ೬೯ ಬ್ಯಾಗ ಸೈಜ್ ಗೆ ದರ ರೂ ೩ ರೂ ಮತ್ತು ೮೧೨ ಬ್ಯಾಗ ಸೈಜ್ ಗೆ ದರ ರೂ ೬ ರೂ ನಿಗದಿಪಡಿಸಲಾಗಿದೆ ಎಂದರು.ನುಗ್ಗೆ, ಸಾಗವಾನಿ, ಮಹಾಗನಿ, ತಪಸಿ, ಹುಣಸೆ, ಸಸಿಗಳು ೬೯ ಬ್ಯಾಗ ಸೈಜಿನಲ್ಲಿ ಮತ್ತು ಮಹಾಗನಿ, ಸಾಗವಾನಿ, ಹುಣಸೆ, ಬದಾಮ, ಮೆಹಂದಿ, ಶ್ರೀಗಂಧ, ರಕ್ತ ಚಂದನ, ಬಾರೆ, ಪೆರು, ನಿಂಬೆ, ನುಗ್ಗೆ ೮೧೨ ಬ್ಯಾಗ ಸೈಜ್ ನಲ್ಲಿ ದೊರೆಯುತ್ತವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಚಡಚಣ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರಶೀದ ಮಾಶ್ಯಾಳ, ವನ ಪಾಲಕ ಹಣಮಂತ ಲೋಣಿ, ಇಂಡಿ ಉಪ…
ಇಂಡಿ: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಯಿಂದ ತಾಲೂಕಿನ ಎಲ್ಲ ಹಳ್ಳಗಳಿಗೆ ಮತ್ತು ಎಲ್ಲ ಡಿಸ್ಟ್ರಬ್ಯೂಷನ್ ಕಾಲುವೆಗಳಿಗೆ ನೀರು ಬಿಡಲಾಗಿದೆ ಎಂದು ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ತಿಳಿಸಿದ್ದಾರೆ.ಇಂಡಿ ತಾಲೂಕಿನ ಇಂಡಿ, ಇಂಗಳಗಿ, ಮಾನೆ ವಸ್ತಿ, ಹಿರೇಬೇವನೂರ ತಾಂಡಾ, ಹಿರೇಬೇವನೂರ ಮತ್ತು ಭ್ಯೂಯ್ಯಾರ ಹಳ್ಳಗಳಿಗೆ ನೀರು ಬಿಟ್ಟಿದ್ದು ಆ ನೀರು ಭೀಮಾ ನದಿಗೆ ಸೇರುತ್ತಿದೆ ಎಂದು ತಿಳಿಸಿದ್ದಾರೆ.ಅದಲ್ಲದೆ ಡಿಸ್ಟ್ರಬ್ಯುಷನ್ ೨೨ ಕಾಲುವೆಯಿಂದ ನೀರು ಲಾಳಸಂಗಿ ಕೆರೆಗೆ ಬಿಡಲಾಗಿದೆ, ಅದಲ್ಲದೆ ಡಿಸ್ಟ್ರಬ್ಯೂಷನ್ ೨೩ ರಿಂದ ಕಾಲುವೆ ಸೇರಿದಂತೆ ಎಲ್ಲ ಡಿಸ್ಟ್ರಬ್ಯೂಷನ್ ನಿಂದ ಕಾಲುವೆಯಲ್ಲಿ ನೀರು ಹರಿಸುತ್ತಿದೆ. ರೈತರಿಗೆ ಕುಡಿಯಲು ಮತ್ತು ಜನ ಜಾನುವಾರುಗಳಿಗಳಿಗೆ ಅನುಕೂಲವಾಗಲೆಂದು ನೀರು ಹರಿಸಲಾಗಿದೆ.ಇದೇ ಪ್ರಥಮ ಬಾರಿಗೆ ಮೇ ೨೨ ರಿಂದ ೩೦ ರ ವರೆಗೆ ನೀರು ಹರಿದು ಬಿಡಲಾಗಿದೆ. ಇದೇ ಪ್ರಥಮ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ನೀರು ಬಿಡಲಾಗಿದೆ ಎಂದು ಮನೋಜಕುಮಾರ ತಿಳಿಸಿದರು.ವಿಜಯಕುಮಾರ ಎಇಇ ಸಾಲೋಟಗಿ, ಅರವಿಂದ ಪೋಳ ಎಇಇ ಸಾಲೋಟಗಿ, ಸುಧಾಕರ ಎಇ, ಮಹಮ್ಮದ ಸಾದಿಕ ಹೊನ್ನುಟಗಿ…
ವಿಜಯಪುರ: ವೀರ ಸಾವರ್ಕರ್ ಬ್ರಿಟೀಷರ ಕಡು ವಿರೋಧಿಯಾಗಿದ್ದರು. ಅಪ್ರತಿಮ ದೇಶ ಭಕ್ತ, ಕ್ರಾಂತಿಕಾರಿ, ಶ್ರೇಷ್ಠ ಚಿಂತಕ ,ಕವಿ, ಲೇಖಕದೂರದೃಷ್ಟಿ ಸಾಮಾಜಿಕ ಹಾಗು ರಾಜಕೀಯ ನೇತಾರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಗರದ ಚಿಂತಕರ ಚಾವಡಿ ವತಿಯಿಂದ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವಕ೯ರ 141 ನೇಯ ನಿಮಿತ್ತ “ವೀರ ಸಾವಕ೯ರ ವಾದಗಳ ಸೆರೆಬಡಿಸಿ” ಪುಸ್ತಕ ಸ್ವೀಕರಿಸಿ ಮಾತನಾಡಿದರು.ಸಾವರ್ಕರ ಅವರು ಹಿಂದು ಮಹಾಸಭಾದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸಿದರು ಹಿಂದು-ಮುಸ್ಲಿಮರರು ಒಗ್ಗೂಡಿಸಿ ಸಿಂಧ ಪ್ರಾಂತದಲ್ಲಿ ಸ್ಥಳಿಯ ಸರ್ಕಾರ ಸ್ಥಾಪಿಸಿ ಮಾದರಿಯ ಆಡಳಿತ ನೀಡಿದ್ದರು. ದೇಶಕ್ಕಾಗಿ 50 ವಷ೯ ಖೈದಿಯಾಗಿ ಶಿಕ್ಷೆ ಅನುಭವಿಸಿದ ವೀರ ಸಾವಕ೯ರ ಹೋರಾಟ ಅಲ್ಲಗಳೆಯುವಂತಿಲ್ಲ. ನೀರು, ಅನ್ನ ಔಷಧ ತ್ಯಜಿಸಿ ದೇಶಕ್ಕಾಗಿ ಅವರು ಪ್ರಾಣ ನೀಡಿದರು. ಅನೇಕ ಪ್ರಕರಣಗಳಲ್ಲಿ ಬ್ರಿಟೀಷ ಸರ್ಕಾರ ಹಾಗು ಭಾರತ ಸರ್ಕಾರ ಇವರನ್ನು ಆರೋಪ ಮುಕ್ತರನ್ನಾಗಿ ಮಾಡಿದವು…
