ವಿಜಯಪುರ: ವೀರ ಸಾವರ್ಕರ್ ಬ್ರಿಟೀಷರ ಕಡು ವಿರೋಧಿಯಾಗಿದ್ದರು. ಅಪ್ರತಿಮ ದೇಶ ಭಕ್ತ, ಕ್ರಾಂತಿಕಾರಿ, ಶ್ರೇಷ್ಠ ಚಿಂತಕ ,ಕವಿ, ಲೇಖಕ
ದೂರದೃಷ್ಟಿ ಸಾಮಾಜಿಕ ಹಾಗು ರಾಜಕೀಯ ನೇತಾರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಗರದ ಚಿಂತಕರ ಚಾವಡಿ ವತಿಯಿಂದ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವಕ೯ರ 141 ನೇಯ ನಿಮಿತ್ತ “ವೀರ ಸಾವಕ೯ರ ವಾದಗಳ ಸೆರೆ
ಬಡಿಸಿ” ಪುಸ್ತಕ ಸ್ವೀಕರಿಸಿ ಮಾತನಾಡಿದರು.
ಸಾವರ್ಕರ ಅವರು ಹಿಂದು ಮಹಾಸಭಾದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸಿದರು ಹಿಂದು-ಮುಸ್ಲಿಮರರು ಒಗ್ಗೂಡಿಸಿ ಸಿಂಧ ಪ್ರಾಂತದಲ್ಲಿ ಸ್ಥಳಿಯ ಸರ್ಕಾರ ಸ್ಥಾಪಿಸಿ ಮಾದರಿಯ ಆಡಳಿತ ನೀಡಿದ್ದರು. ದೇಶಕ್ಕಾಗಿ 50 ವಷ೯ ಖೈದಿಯಾಗಿ ಶಿಕ್ಷೆ ಅನುಭವಿಸಿದ ವೀರ ಸಾವಕ೯ರ ಹೋರಾಟ ಅಲ್ಲಗಳೆಯುವಂತಿಲ್ಲ. ನೀರು, ಅನ್ನ ಔಷಧ ತ್ಯಜಿಸಿ ದೇಶಕ್ಕಾಗಿ ಅವರು ಪ್ರಾಣ ನೀಡಿದರು. ಅನೇಕ ಪ್ರಕರಣಗಳಲ್ಲಿ ಬ್ರಿಟೀಷ ಸರ್ಕಾರ ಹಾಗು ಭಾರತ ಸರ್ಕಾರ ಇವರನ್ನು ಆರೋಪ ಮುಕ್ತರನ್ನಾಗಿ ಮಾಡಿದವು ಎಂದರು.
ಚಿಂತನ ಮಂಥನ ಚಾವಡಿಯ ಸದಸ್ಯ ರಘೋತ್ತಮ ಅಜು೯ಣಗಿ ಮಾತನಾಡಿ,
ಬ್ರಿಟೀಷ ಸರ್ಕಾರ ವಿನಾಕಾರಣ ವೀರ ಸಾವಕ೯ರ ಆರೋಪಿಸಿ ಬಂಧಿಸಿದ್ದು ಅದನ್ನು ಪುನರ್ ಪರಿಶೀಲಿಸಬೇಕೆಂದು ಅರ್ಜಿ ಸಲ್ಲಿಸಿದ್ದು ಸಹಜವಾದ ಹಕ್ಕು. ಆದರೆ ಬ್ರಿಟೀಷರು ಅವರ ಮನವಿ ತಿರಸ್ಕರಿಸಿದ್ಧರಿಂದ 50 ವಷ೯ ಕಠಿಣ ಸೆರೆ ಶಿಕ್ಷೆ ಅನುಭವಿಸಿದರು ಎಂದರು.
ಚನ್ನಬಸು ಕೋರಿ, ಬಸವರಾಜ ದಂಡೋತಿ, ಮನೀಷಾ ಕುಲಕರ್ಣಿ ಮುಂತಾದವರು ಉಪಸ್ಥತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

