ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಡಿಯ ವಸತಿ ನಿಲಯದಲ್ಲಿ ಅಧ್ಯಯನ ಮಾಡಿ ೧೦ ಮತ್ತು ೧೨ ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಚೀನ ಲಮಾಣಿ, ಸಾನಿಕಾ ಲಮಾಣಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಅವರ ಮಾರ್ಗದರ್ಶನದಂತೆ ೨೦೨೪-೨೫ನೇ ಸಾಲಿನಲ್ಲಿ ವಸತಿ ನಿಲಯಗಳಲ್ಲಿ ಓದಿ ಅತಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹವಾಗಿ ೫೦೦೦ ನೀಡುತ್ತಿದ್ದೇವೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ ಅವರು ಸನ್ಮಾನಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಬಡ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಅಂತಹ ಮಕ್ಕಳಿಗೆ ಸರಕಾರದ ಸಮಾಜ ಕಲ್ಯಾಣ ಇಲಾಖೆಯಡಿ ವಸತಿ ನಿಲಯಗಳನ್ನು ಮಾಡಿಕೊಟ್ಟು ಸಾಕಷ್ಟು ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮಾಡುತ್ತಿದ್ದು, ಇಲ್ಲಿ ಕಲಿತಂತಹ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಿರುವುದು ಶ್ಲಾಘನೀಯ ವಿಷಯ ಆ ನೀಟ್ಟಿನಲ್ಲಿ ಇಂದು ಅತೀ ಹೆಚ್ಚು ಅಂಕ ಪಡೆದ ವಿದ್ಯಾಥಿಗಳಿಗೆ ಸನ್ಮಾನಿಸುತ್ತಿದ್ದೇವೆ ಎಂದರು.
ಈ ವೇಳೆ ಬಸವನ ಬಾಗೇವಾಡಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಭವಾನಿ ಪಾಟೀಲ ಅವರು ಮಾತನಾಡುತ್ತಾ, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಶುಭ ಹಾರೈಸಿ, ಮುಂದಿನ ಮಕ್ಕಳಿಗೆ ನೀವೇ ಮಾದರಿಯಾಗಿದ್ದಿರಿ, ಹೀಗೆ ಉನ್ನತವಾದ ಅಧ್ಯಯನ ಮಾಡಿ ಜೀವನದಲ್ಲಿ ಯಶಸ್ಸು ಕಂಡು ಸಮಾಜದ ಇತರರಿಗೂ ಸಹಾಯಮಾಡುವಂತಾಗಿ ಎಂದು ಶುಬ ಹಾರೈಸಿದರು.
ಈ ವೇಳೆ ಕಚೇರಿ ಅಧಿಕ್ಷಕ ದಪೇದಾರ ಅವರು ಮಾತನಾಡಿದರು,
ದಲಿತ ವಿದ್ಯಾರ್ಥಿ ಪರಿಷತನ ತಾ ಸಂಚಾಲಕರಾದ ಅಲ್ಲಾಭಕ್ಷ ಫಿಂಜಾರ, ಸುರೇಶ ಕಣಕಲ, ಪ್ರಕಾಶ ಚಲವಾದಿ, ಭೀಮಶಿ ಚಲವಾದಿ, ವಸತಿ ನಿಲಯದ ವಿದ್ಯಾರ್ಥಿಗಳು, ನಿಲಯಪಾಲಕರು, ಹಾಗೂ ಸಿಬ್ಬಂದಿವರ್ಗದವರಿದ್ದರು.
Subscribe to Updates
Get the latest creative news from FooBar about art, design and business.
ದವಿಪ ದಿಂದ ವಸತಿ ನಿಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
Related Posts
Add A Comment

