ಸಿಂದಗಿ: ಪಟ್ಟಣದ ಪತ್ರಕರ್ತ ಗುಂಡು ಕುಲಕರ್ಣಿಗೆ ಜೀವ ಬೆದರಿಕೆ ಹಾಕಿದ ಸಿಪಿಐ ನಾನಾಗೌಡ ಪಾಟೀಲ, ಪಿಎಸ್‌ಐ ಭೀಮಪ್ಪ ರಬಕವಿ ಹಾಗೂ ಪೇದೆ ಸುರೇಶ ಕೊಂಡಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪತ್ರಕರ್ತರು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪತ್ರಕರ್ತ ಗುಂಡು ಕುಲಕರ್ಣಿ, ಅಕ್ರಮ ಮರಳು ಸಾಗಣೆ ಕುರಿತು ವರದಿ ಮಾಡಿದ್ದಕ್ಕಾಗಿ ನನ್ನನ್ನು ಮೇ.೮ರ ತಡರಾತ್ರಿ ಪಿಎಸ್‌ಐ ಭೀಮಪ್ಪ ರಬಕವಿ ಹಾಗೂ ಪೇದೆ ಸುರೇಶ ಕೊಂಡಿ ಅಪಹರಿಸಿ ಪಟ್ಟಣದ ಹೊರವಲಯಕ್ಕೆ ಕರೆದೊಯ್ದು ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ವರದಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ನನಗೆ ಏನಾದರೂ ಆದರೆ ಈ ಮೂರು ಜನ ಅಧಿಕಾರಿಗಳೇ ಕಾರಣ ಎಂದು ಹೇಳಿದರು.
ಈ ವೇಳೆ ಪತ್ರಕರ್ತರಾದ ಡಿ.ಬಿ.ವಡವಡಗಿ, ಪರಶುರಾಮ ಶಿವಶರಣ, ನಾಗೇಶ ನಾಗೂರ, ಗುರುರಾಜ ಮಠ, ಸುದರ್ಶನ ಜಂಗಣ್ಣಿ, ಭೋಜರಾಜ ದೇಸಾಯಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

