Author: editor.udayarashmi@gmail.com

ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಅವರಿಗೆ ಮನವಿ ಸಲ್ಲಿಸಿದ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ವರದಿಗಾರ ಕಾನಿಪ ಸಂಘದ ಸದಸ್ಯ ಗುಂಡು ಕುಲಕರ್ಣಿ ಅವರು ಅಕ್ರಮ ಮರಳು ದಂದೆ ಕುರಿತು ವರದಿ ಮಾಡಿದ ಹಿನ್ನೆಲೆ ಪೊಲೀಸರಿಂದ ನಡೆದ ದೌರ್ಜನ್ಯ ವಿರೋಧಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿದ ಸಿಎಂ ಮಾಧ್ಯಮ ಸಲಹೆಗಾರರು ವಿಜಯಪುರ ಎಸ್ಪಿ ಅವರಿಗೆ ಕರೆ ಮಾಡಿ ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳಿ. ಪತ್ರಕರ್ತರ ಸ್ಥಿತಿಯೇ ಹೀಗಾದರೆ ಹೇಗೆ ಅದನ್ನು ಪರಿಶೀಲನೆ ಮಾಡಿ ಸಂಬಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಿ. ಸರಕಾರಕ್ಕೆ ಕೆಟ್ಟ ಹೆಸರು ಬರದ ಹಾಗೇ ನೋಡಿಕೊಳ್ಳಿ ಎಂದರು.ಇದೇ ಸಂದರ್ಭದಲ್ಲಿ ಗುಂಡು ಕುಲಕರ್ಣಿ, ಗುರುರಾಜ ಮಠ ಸೇರಿದಂತೆ ಅನೇಕರಿದ್ದರು.

Read More

ಮುದ್ದೇಬಿಹಾಳ: ಶಾಲಾ ಪ್ರಾರಂಭೊತ್ಸವದ ಹಿನ್ನೆಲೆ ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಭೇಟಿ ನೀಡಿ ಶಾಲಾ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು.ಈ ವೇಳೆ ಮಾತನಾಡಿದ ಅವರು ಸಂಸ್ಥೆಯ ಎಲ್ಲ ದಾಖಲೆಗಳನ್ನು ಸರಿಯಾಗಿಟ್ಟುಕೊಳ್ಳುವಂತೆ, ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸುವಂತೆ, ವಿಧ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ಪಡೆಯದಂತೆ ತಿಳಿಸಿದರು. ಈ ವೇಳೆ ಸಿ.ಆರ್.ಪಿ ಗುಂಡು ಚವ್ಹಾಣ ಸಂಸ್ಥೆಯ ಕಾರ್ಯದರ್ಶಿ ಪ್ರಭು.ಎಸ್.ಕಡಿ, ನಿರ್ದೇಶಕಿರುಗಳಾದ ಲೀಲಾ ಭಟ್ಟ ಮತ್ತು ಶಾಂತಾ ಭಟ್ಟ, ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ, ಪ್ರಾಥಮಿಕ ಮುಖ್ಯಗುರು ಜಿ.ಜೆ.ಪಾದಗಟ್ಟಿ, ಆಂಗ್ಲಮಾಧ್ಯಮ ಗುರುಮಾತೆ ರಂಜಿತಾ ಹೆಗಡೆ ಸೇರಿದಂತೆ ಮತ್ತೀತರರು ಇದ್ದರು.

Read More

ಮುದ್ದೇಬಿಹಾಳ: ಪಟ್ಟಣದ ಗಾಂಧಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಟ್ಟೆ ಪುಸ್ತಕ ನೀಡುವ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.ಈ ವೇಳೆ ವಿದ್ಯಾರ್ಥಿಗಳನ್ನುದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಮಾತನಾಡಿ, ಶಾಲೆಗೆ ಪ್ರಾರಂಭದಿಂದ ಹಾಜರಿದ್ದಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಪಠ್ಯ ಅರ್ಥವಾಗುತ್ತದೆ. ಕೆಲವು ದಿನಗಳ ನಂತರ ಹಾಜರಾಗುವ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ. ಹೀಗಾದಲ್ಲಿ ಪರೀಕ್ಷೆಗಳಲ್ಲಿ ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಪಾಲಕರು ತಮ್ಮ ಮಕ್ಕಳು ಶಾಲೆಗೆ ತೆರಳುವಂತೆ ಒತ್ತಾಯಿಸಬೇಕು ಎಂದರು.ಈ ವೇಳೆ ಎಸ್‌ಡಿಎಂಸಿ ಸದಸ್ಯ ಸುಲೇಮಾನ ಸಾತಿಹಾಳ, ಸದಸ್ಯ ರುಕ್ಸಾನ ಸಂಕನಾಳ, ಮುಖ್ಯ ಶಿಕ್ಷಕ ಎಂಎಸ್.ಕವಡಿಮಟ್ಟಿ, ಶಿಕ್ಷಕರಾದ ಎ.ಎಸ್.ಬಾಗವಾನ, ಎಂ.ಎಸ್.ಚಟ್ಟೇರ, ರೇಣುಕಾ ಸಜ್ಜನ, ಎಂ.ಬಿ.ಪಾಟೀಲ, ಅಪ್ಪು ಪವಾರ, ಎಂ.ಎಸ್.ನಾಟೆಕಾರ, ರಿಯಾನಾ ಬೇಗಂ, ಶರಣಮ್ಮ ಹಡಲಗೇರಿ ಸೇರಿದಂತೆ ಮತ್ತೀತರರು ಇದ್ದರು.

Read More

ಮುದ್ದೇಬಿಹಾಳ: ತಂಬಾಕು ಸೇವನೆಯಿಂದಾಗುವ ಅಪಾಯಗಳ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ತಂಬಾಕು ಬಳಕೆ ಕಡಿಮೆಯಾಗುತ್ತಿಲ್ಲ. ಸಾರ್ವಜನಿಕರು ಎಚ್ಚೆತ್ತು ಪ್ರಾಣಕ್ಕೆ ಅಪಾಯ ತಂದೊಡ್ಡುವ ತಂಬಾಕು ಸೇವನೆಯನ್ನು ಸಂಪೂರ್ಣ ತ್ಯಜಿಸಿ ತಮ್ಮ ಆರೋಗ್ಯದ ಜೊತೆಗೆ ಪರಿಸರವನ್ನು ರಕ್ಷಿಸಲು ಮುಂದಾಗಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.ಪಟ್ಟಣದ ಹೊರಪೇಟೆ ಗಲ್ಲಿಯಲ್ಲಿರುವ ಸಿದ್ಧಗಂಗಾ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿದ್ಧಗಂಗಾ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಂಬಾಕು ಮುಕ್ತ ವಲಯಗಳಲ್ಲಿ ತಂಬಾಕು ಮಾರಾಟ ಮಾಡುವವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲಂದರಲ್ಲಿ ಬೀಡಿ, ಸಿಗರೇಟ್, ಗುಟಕಾ ಜಗಿದು ಉಗಿಯುವವರಿಗೆ ಪೊಲೀಸರು ಸೂಕ್ತ ಶಿಕ್ಷೆಗೆ ಗುರಿಪಡಿಸಬೇಕು. ತಂಬಾಕು ಸೇವನೆಯಿಂದಾಗುವ ಗಂಭೀರ ಪರಿಣಾಮಗಳ ಕುರಿತು ಆರೋಗ್ಯ ಇಲಾಖೆ ಮೇಲಿಂದ…

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದಲ್ಲಿ ಶತಾಯುಷಿ ಲಿಂ. ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೪೧ ನೇ ಪುಣ್ಯಸ್ಮರಣೋತ್ಸವ ಹಾಗೂ ಲಿಂ. ೨೦೦೮ ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೧೧ ನೇ ಜಾತ್ರಾಮಹೋತ್ಸವದಂಗವಾಗಿ ಜೂ. ೧,೨ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಜೂ. ೧ ರಂದು ಬೆಳಗ್ಗೆ ೬.೨೦ ಗಂಟೆಗೆ ಪಂಚಾಚಾರ್ಯ ಧ್ವಜಾರೋಹಣ, ೬.೩೦ ಗಂಟೆಗೆ ಸಾಮೂಹಿಕ ಶಿವದೀಕ್ಷೆ ಕಾರ್ಯಕ್ರಮ ಜರುಗಲಿದೆ. ರಾತ್ರಿ ೧೦ ಗಂಟೆಗೆ ಮನಗೂಳಿ, ಕುಬಕಡ್ಡಿ, ಹತ್ತರಕಿಹಾಳ, ನಂದಿಹಾಳ ಪಿಯು, ವಿಜಯಪುರ ಅಡಿಕೆ ಗಲ್ಲಿ ಹಾಗೂ ಬಬಲೇಶ್ವರ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಜೂ. ೨ ರಂದು ಬೆಳಗ್ಗೆ ೭ ಗಂಟೆಗೆ ಬಸಪ್ಪ ಹುಣಶಿಕಟ್ಟಿ ಅವರ ತೋಟದಿಂದ ವಿವಿಧ ವಾದ್ಯಮೇಳದೊಂದಿಗೆ ಕುಂಭ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ಆಗಮಿಸುವದು. ನಂತರ ೮ ಗಂಟೆಗೆ ಉಭಯ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ನಿಂಗನಗೌಡ ಪಾಟೀಲ, ಶಿವಪ್ಪ ಅನಗವಾಡಿ, ಬಸವರಾಜ ಸಣಕಲ್ ಹಾಗೂ ಮನಗೂಳಿ ವೈದಿಕರಿಂದ ನಡೆಯಲಿದೆ.…

Read More

ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಅಶ್ವಾರೂಢ ಬಸವೇಶ್ವರರ ಪುತ್ಥಳಿ ಸ್ಥಾಪನೆ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಶುಕ್ರವಾರ ಸ್ಥಳ ಪರಿಶೀಲನೆ ಮಾಡಿದರು.ಸ್ಥಳ ಪರಿಶೀಲನೆ ಮಾಡಿದ ನಂತರ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಸ್ಥಳ ಪರಿಶೀಲನೆ ಮಾಡಲು ಬಂದಿದ್ದು. ಜೂ.೬ ರ ನಂತರ ಜಿಲ್ಲಾಽಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅವರು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಹಿಂದಿನ ಸರ್ಕಾರ ಅವಧಿಯಲ್ಲಿ ನಮ್ಮ ಮನವಿಗೆ ಸ್ಪಂದಿಸಿ ಇಂಗಳೇಶ್ವರ ಗ್ರಾಮದ ಅಭಿವೃದ್ಧಿಗಾಗಿ ೫ ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಬಸವೇಶ್ವರ ಪಂಚ ಲೋಹದ ಪುತ್ಥಳಿ ಸ್ಥಾಪನೆ ೧.೩೬ ಕೋಟಿ ಅಂದಾಜು ವೆಚ್ಚ ಮಾಡಲಾಗಿದೆ. ಉತ್ತಮ ರೀತಿಯಿಂದ ಬಸವೇಶ್ವರರ ಪುತ್ಥಳಿ ತಯಾರಿಸಿ ಸುತ್ತಲೂ ಉದ್ಯಾನವನ, ಕಾರಂಜಿ, ವಿದ್ಯುತ್ ದೀಪಗಳ ವ್ಯವಸ್ಥೆ ಹಾಗೂ…

Read More

ಬಸವವಬಾಗೇವಾಡಿ: ತಾಲೂಕಿನ ನಂದಿಹಾಳ ಗ್ರಾಮ ಎಂಪಿಎಸ್ ಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನದ ಸಮಾರಂಭ ಸಂಭ್ರಮ, ಸಡಗರದಿಂದ ಜರುಗಿತು.ಎಸ್ಡಿಎಂಸಿ ಅಧ್ಯಕ್ಷ ಸುರೇಶ ಗ್ರಾಮ ಪಂಚಾಯಿತಿ ಸದಸ್ಯ ಅಪ್ಪು ಹಾದಿಮನಿ, ಮುಖ್ಯಗುರು ಡಿ. ಎನ್. ಸಂಗಳದ ಸರಸ್ವತಿ ದೇವಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಎಸ್ಡಿಎಂಸಿ ಸದಸ್ಯರಾದ ವಿಶ್ವನಾಥ ಮನಗೂಳಿ,ಶಂಕರ ಮನಗೂಳಿ , ಶಿವಪ್ಪ ಕುಮಶಿ,,ಹಣಮಂತ ಕರಡಿ,ರಮೇಶ ಬೆಂಕಿ, ಮುತ್ತು ಸಾರವಾಡ, ಆಸೀಪ್ ಮುಲ್ಲಾ, ಶಾಲೆಯ ಶಿಕ್ಷಕರಾದ ಪ್ರೇಮಲತಾ, ಸಂಗು ನಾಗರಾಳ, ರಮೇಶ ಕುದರಿ, ಶಿವು ಮಡಿಕೇಶ್ವರ,ಬಸವರಾಜ ಬಾಗೇವಾಡಿ, ವೈ. ಬಿ. ಬಾಗೇವಾಡಿ, ಉರ್ದು ಶಾಲೆಯ ಮುಖ್ಯಗುರು ಐ.ಆರ್. ಮಕಾನದಾರ, ಕನ್ನಡ ಶಿಕ್ಷಕ ಸಿ. ಎನ್. ಗಟೇಕಾರ ಪಾಲಕ ಪೋಷಕರು, ಮಕ್ಕಳು ಹಾಜರಿದ್ದರು. ಮಕ್ಕಳಿಗೆ ಸಿಹಿ ಹಂಚಿ ಗುಲಾಬಿ ಹೂ ನೀಡಿ ಶಾಲೆಗೆ ಮಕ್ಕಳನ್ನು ಸ್ವಾಗತಿಸಿಲಾಯಿತು.

Read More

– ಬಸವರಾಜ ನಂದಿಹಾಳಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆ, ಶಾಲಾ ಪ್ರಾರಂಭೋತ್ಸವ ಸಂಭ್ರಮ, ಸಡಗರದಿಂದ ಶುಕ್ರವಾರ ಆರಂಭವಾಯಿತು.ಕಳೆದರೆಡು ದಿನಗಳಿಂದ ಶಾಲೆಗಳನ್ನು ಸ್ವಚ್ಛಗೊಳಿಸಿ ತಳಿರು-ತೋರಣ, ರಂಗವಲ್ಲಿ ಚಿತ್ತಾರ ಬಿಡಿಸಿ ಮಕ್ಕಳನ್ನು ಸ್ವಾಗತಿಸಿಕೊಳ್ಳಲು ಶಾಲೆಗಳನ್ನು ಶಿಕ್ಷಕ ಬಾಂಧವರು ಸಜ್ಜುಗೊಳಿಸಿದ್ದರು. ಕೆಲ ಶಾಲೆಗಳಲ್ಲಿ ತಳಿರು-ತೋರಣದ ಜೊತೆಗೆ ಬಲೂನುಗಳನ್ನು ಕಟ್ಟಲಾಗಿತ್ತು. ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿಕೊಳ್ಳಲಾಯಿತು. ಸರ್ಕಾರ ಶಾಲಾ ಪ್ರಾರಂಭೋತ್ಸವಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರೂ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಅಷ್ಟಾಗಿ ಕಂಡುಬರಲಿಲ್ಲ. ಕೆಲ ಶಾಲೆಗಳಲ್ಲಿಯಂತೂ ವಿದ್ಯಾರ್ಥಿಗಳು ಬೆರಳಣಿಕೆಯಷ್ಟು ಇರುವುದು ಕಂಡುಬಂದಿತ್ತು. ಶಿಕ್ಷಕ ಬಾಂಧವರು ಶಾಲೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು. ಮಧ್ಯಾನ್ಹ ಸರ್ಕಾರದ ಆದೇಶದಂತೆ ಬಿಸಿಯೂಟದಲ್ಲಿ ಸಿಹಿಯೂಟ ವ್ಯವಸ್ಥೆ ಮಾಡಲಾಗಿತ್ತು.ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ ಸರ್ಕಾರಿ 108 ಕಿರಿಯ ಪ್ರಾಥಮಿಕ ಶಾಲೆ, 181 ಹಿರಿಯ ಪ್ರಾಥಮಿಕ ಶಾಲೆ, 26 ಪ್ರೌಢಶಾಲೆಗಳಿವೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1240 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 333 ಹುದ್ದೆಗಳು ಖಾಲಿ ಇವೆ. ಸರ್ಕಾರಿ ಪ್ರೌಢಶಾಲೆಯಲ್ಲಿ…

Read More

ವಿಜಯಪುರ: ರಾಜ ಮಾತಾ ಅಹಿಲ್ಯಾಬಾಯಿ ಹೊಳ್ಕರ ಜಯಂತಿ ಅಂಗವಾಗಿ ಶುಕ್ರವಾರ ನಗರದ ಎಪಿಎಂಸಿ ಬಳಿಯ ರಾಜಮಾತಾ ಅಹಿಲ್ಯಾಬಾಯಿ ಹೊಳ್ಕರ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಕಣಾಪುರ ಗುರು ಪೀಠದ ಸೋಮೇಶ್ವರ ಮಹಾರಾಜ್, ಮೇಲಗಿರೇಶ್ವರ ಗದ್ದುಗೆ ಶ್ರೀಗಳಾದ ಭೀಮಶಿ ಬಳಗಾನೂರ, ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಜವಾಹಾರ ಗೋಸಾವಿ, ರಾಜಶೇಖರ ಮಗಿಮಠ, ರಾಜಶೇಖರ ಕುರಿಯವರ, ವಿಠ್ಠಲ ಹೊಸಪೇಟೆ, ಪ್ರೇಮಾನಂದ ಬಿರಾದಾರ, ಮಳುಗೌಡ ಬಿರಾದಾರ, ವಿವಿಧ ಸಮಾಜದ ಮುಖಂಡರಾದ ಅಶೋಕ ಬೆಲ್ಲದ, ಯಲಗೊಂಡ ಬಾಗಾದಿ, ರಮೇಶ ಪಡಸಲಗಿ, ಬಸವರಾಜ ಗೊಳಸಂಗಿ, ಕಾಂತು ಸಿಂಧೆ, ಬಾಬು ಶಿರಶ್ಯಾಡ, ವಿಕ್ರಮ ಗಾಯಕವಾಡ, ಬಸವರಾಜ ಲವಗಿ, ಅಮೋಗಿ ಕರಂಡೇ, ಕರೇಪ್ಪ ಬಸ್ತಾಳ, ಹಣಮಂತ ಬಿದರಿ, ವಿಠ್ಠಲ ಶಿವಣಗಿ, ಶಂಕರ ಹೂಗಾರ, ಪರಶು ತಳೇವಾಡ, ಭೀಮು ಮಳೆಪ್ಪನವರ, ಪ್ರಕಾಶ ಚವ್ಹಾಣ, ಜಗದೀಶ ಶಿಂಗಾಡಿ ಇದ್ದರು.

Read More

ಆಲಮೇಲ: ಪಟ್ಟಣದಲ್ಲಿ ೧೦ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಆಲಮೇಲದ ಯೋಗೋತ್ಸವ ಸಮಿತಿ ಸಹಯೋಗದೊಂದಿಗೆ ೨೧ ದಿನಗಳ ಕಾಲ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅದರ ಜಾಗೃತಿಗಾಗಿ ಶುಕ್ರವಾರ ಬೆಳಗ್ಗೆ ಪಟ್ಟಣದೆಲ್ಲೆಡೆ ಪಾದಯಾತ್ರೆ ಮೂಲಕ ಪ್ರಭಾತ ಪೇರಿ ಹಮ್ಮಿಕೊಂಡು ಮನೆ ಮನೆಗೆ ತರಳಿ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.ಆಲಮೇಲ ಪಟ್ಟಣದ ಸಿಂದಗಿ ರಸ್ತೆಯ ಯುಕೆಪಿ ಕ್ಯಾಂಪಿನಲ್ಲಿ ಜೂನ್ ೨ ರಂದು ಬಾನುವಾರ ಬೆಳಗ್ಗೆ ೫:೩೦ ಗಟೆಗೆ ಯೋಗೋತ್ಸವ ಪ್ರಾರಂಬಗೊಳ್ಳಲಿದೆ ನಿರಂತರವಾಗಿ ೨೧ ದಿನಗಳ ಕಾಲ ನಡೆಯಲಿದೆ. ಮತ್ತು ಸಾಯಂಕಾಲ ೭ ಗಂಟೆಯಿಂದ ೮ ಗಂಟೆವರೆಗೆ ಭಜನೆ ಮತ್ತು ಆದ್ಯಾತ್ಮಿಕ ಪ್ರವಚನ ನಡೆಯಲಿದೆ.ಈ ಕಾರ್ಯಕ್ರಮವನ್ನು ಹಿಮಾಲಯದ ಯೋಗ ಸಾಧನೆ ಮಾಡಿರುವ ಯೋಗ ಗುರು ಪರಮ ಪೂಜ್ಯ ನಿರಂಜನ ಶ್ರೀಗಳು ನಡೆಸಿಕೊಡಲಿದ್ದಾರೆ.ಅಳ್ಳೊಳಿಮಠದ ಶ್ರೀಶೈಲಯ್ಯಮಹಾಸ್ವಾಮಿ, ನಿತ್ಯಾನಂದ ಆರೂಢ ಮಠದ ಬಸವಲಿಂಗ ಶರಣರು, ಯೋಗೋತ್ಸವ ಸಮಿತಿಯ ಮುಖಂಡರಾದ ಡಾ| ಶ್ರೀಶೈಲ ಪಾಟೀಲ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ, ನಿವೃತ ಪ್ರಾಚಾಯ್ ಎನ್.ಎ. ಬಿರಾದಾರ.…

Read More