ಆಲಮೇಲ: ಪಟ್ಟಣದಲ್ಲಿ ೧೦ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಆಲಮೇಲದ ಯೋಗೋತ್ಸವ ಸಮಿತಿ ಸಹಯೋಗದೊಂದಿಗೆ ೨೧ ದಿನಗಳ ಕಾಲ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅದರ ಜಾಗೃತಿಗಾಗಿ ಶುಕ್ರವಾರ ಬೆಳಗ್ಗೆ ಪಟ್ಟಣದೆಲ್ಲೆಡೆ ಪಾದಯಾತ್ರೆ ಮೂಲಕ ಪ್ರಭಾತ ಪೇರಿ ಹಮ್ಮಿಕೊಂಡು ಮನೆ ಮನೆಗೆ ತರಳಿ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಆಲಮೇಲ ಪಟ್ಟಣದ ಸಿಂದಗಿ ರಸ್ತೆಯ ಯುಕೆಪಿ ಕ್ಯಾಂಪಿನಲ್ಲಿ ಜೂನ್ ೨ ರಂದು ಬಾನುವಾರ ಬೆಳಗ್ಗೆ ೫:೩೦ ಗಟೆಗೆ ಯೋಗೋತ್ಸವ ಪ್ರಾರಂಬಗೊಳ್ಳಲಿದೆ ನಿರಂತರವಾಗಿ ೨೧ ದಿನಗಳ ಕಾಲ ನಡೆಯಲಿದೆ. ಮತ್ತು ಸಾಯಂಕಾಲ ೭ ಗಂಟೆಯಿಂದ ೮ ಗಂಟೆವರೆಗೆ ಭಜನೆ ಮತ್ತು ಆದ್ಯಾತ್ಮಿಕ ಪ್ರವಚನ ನಡೆಯಲಿದೆ.
ಈ ಕಾರ್ಯಕ್ರಮವನ್ನು ಹಿಮಾಲಯದ ಯೋಗ ಸಾಧನೆ ಮಾಡಿರುವ ಯೋಗ ಗುರು ಪರಮ ಪೂಜ್ಯ ನಿರಂಜನ ಶ್ರೀಗಳು ನಡೆಸಿಕೊಡಲಿದ್ದಾರೆ.
ಅಳ್ಳೊಳಿಮಠದ ಶ್ರೀಶೈಲಯ್ಯಮಹಾಸ್ವಾಮಿ, ನಿತ್ಯಾನಂದ ಆರೂಢ ಮಠದ ಬಸವಲಿಂಗ ಶರಣರು, ಯೋಗೋತ್ಸವ ಸಮಿತಿಯ ಮುಖಂಡರಾದ ಡಾ| ಶ್ರೀಶೈಲ ಪಾಟೀಲ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ, ನಿವೃತ ಪ್ರಾಚಾಯ್ ಎನ್.ಎ. ಬಿರಾದಾರ. ಡಾ| ರಾಜೇಶ ಪಾಟೀಲ, ಡಾ| ಸಂಜೆಯ ಪಾಟೀಲ, ಡಾ| ಪವನ ಜ್ಯೋಶಿ, ಡಾ| ಚನ್ನಬಸು ನಿಂಬಾಳ, ಶೇಷಾದ್ರಿ ಜೋಶಿ, ಅಶೋಕ ಸದ್ಲಾಪೂರ, ಭಾಗಣ್ಣ ಗುರಕಾರ, ಸಂತೋಷ ಅಮರಗೊಂಡ, ಸುನಿಲ ನಾರಯಣಕರ, ದೇವಪ್ಪ ಗುಣಾರಿ, ಶಂಕರ ಹಳೆಮನಿ, ರವಿ ವಾರದ, ಜಿ.ಸಿ. ಪಶುಪತಿಮಠ, ಬಾಬು ಕೆಳಗಿನಮನಿ, ಗುಂಡು ಮೇಲಿಮನಿ, ಚಂದ್ರಶೇಕರ ಕೆಳಗಿನಮನಿ, ರಾಜೇಂದ್ರ ರಾಠೋಡ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

