ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಅಶ್ವಾರೂಢ ಬಸವೇಶ್ವರರ ಪುತ್ಥಳಿ ಸ್ಥಾಪನೆ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಶುಕ್ರವಾರ ಸ್ಥಳ ಪರಿಶೀಲನೆ ಮಾಡಿದರು.
ಸ್ಥಳ ಪರಿಶೀಲನೆ ಮಾಡಿದ ನಂತರ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಸ್ಥಳ ಪರಿಶೀಲನೆ ಮಾಡಲು ಬಂದಿದ್ದು. ಜೂ.೬ ರ ನಂತರ ಜಿಲ್ಲಾಽಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅವರು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಹಿಂದಿನ ಸರ್ಕಾರ ಅವಧಿಯಲ್ಲಿ ನಮ್ಮ ಮನವಿಗೆ ಸ್ಪಂದಿಸಿ ಇಂಗಳೇಶ್ವರ ಗ್ರಾಮದ ಅಭಿವೃದ್ಧಿಗಾಗಿ ೫ ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಬಸವೇಶ್ವರ ಪಂಚ ಲೋಹದ ಪುತ್ಥಳಿ ಸ್ಥಾಪನೆ ೧.೩೬ ಕೋಟಿ ಅಂದಾಜು ವೆಚ್ಚ ಮಾಡಲಾಗಿದೆ. ಉತ್ತಮ ರೀತಿಯಿಂದ ಬಸವೇಶ್ವರರ ಪುತ್ಥಳಿ ತಯಾರಿಸಿ ಸುತ್ತಲೂ ಉದ್ಯಾನವನ, ಕಾರಂಜಿ, ವಿದ್ಯುತ್ ದೀಪಗಳ ವ್ಯವಸ್ಥೆ ಹಾಗೂ ಸಿದ್ದೇಶ್ವರ ದೇವಸ್ಥಾನದ ಬಸವನಬಾಗೇವಾಡಿ ರಸ್ತೆಯಿಂದ ಡಿವೈಡರ್ ರಸ್ತೆ ಮಧ್ಯದಲ್ಲಿ ವಿದ್ಯುತ್ ಕಂಬಗಳನ್ನು ಮಾದಲಾಂಬಿಕೆ ಸ್ಮಾರಕದವರೆಗೆ ಅಳವಡಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮಾಡಳಿಧಿಕಾರಿ ಸಂತೋಷ ಕುಂಟೋಜಿ, ಗ್ರಾಮ ಪಂಚಾಯತ ಅಧ್ಯಕ್ಷ ಬನ್ನೆಪ್ಪ ಡೋಣೂರ, ಶ್ರೀಶೈಲ ತಾಳಿಕೋಟಿ, ರೇವಣಸಿದ್ದ ದಳವಾಯಿ, ಶ್ರೀಶೈಲ ಚಾಂದಕವಟೆ, ಶಿವಾನಂದ ನಡಕಟ್ಟಿ, ಮಲ್ಲಪ್ಪ ತಕ್ಕೋಡ, ಚನ್ನಬಸಪ್ಪ ಸಿಂಧೂರ, ಭೀಮಪ್ಪ ಡಿಗ್ಗಾವಿ, ಶಂಕ್ರೆಪ್ಪ ಪೂಜಾರಿ, ಸಂಗಪ್ಪ ದಳವಾಯಿ, ಮಲ್ಲಪ್ಪ ಬಮ್ಮಣಗಿ, ಮುತ್ತಪ್ಪ ಬಡಿಗೇರ, ನಾಗಣ್ಣ ಚಿಗರಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ತಹಸೀಲ್ದಾರರಿಂದ ಸ್ಥಳ ಪರಿಶೀಲನೆ.
Related Posts
Add A Comment

