Author: editor.udayarashmi@gmail.com

ವಿಜಯಪುರ: ವಿಜಯಪುರ ಮಹಾನಗರಪಾಲಿಕೆ ವತಿಯಿಂದ ೨೦೨೪-೨೫ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಉಪ ಘಟಕವಾರು ಭೌತಿಕ ಮತ್ತು ಆರ್ಥಿಕ ಗುರಿಯನ್ನು ನಿಗದಿಪಡಿಸಿದ್ದು, ಸ್ವಯಂ ಉದ್ಯೋಗ(ದ್ವಿ-ಪ್ರತಿ ಅರ್ಜಿ)-೭೮, ಗುಂಪು ಸಮೂಹ ಉದ್ಯಮಗಳು ಯೋಜನೆ – ೦೬, ಸ್ವಸಹಾಯ ಗುಂಪುಗಳ ರಚನೆ-೨೦೧, ಸ್ವಸಹಾಯ ಗುಂಪುಗಳ ಬ್ಯಾಂಕ ಲಿಂಕೇಜ್-೧೦೧ ಸದರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬಿಪಿಎಲ್/ಅಂತ್ಯೋದಯ ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಮತದಾರರ ಗುರುತೀನ ಚೀಟಿ, ವಿದ್ಯಾರ್ಹತೆ ಪ್ರಮಾಣ ಪತ್ರ ಮತ್ತು ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ದ್ವಿಪ್ರತಿಯಲ್ಲಿ ಕನಿಷ್ಠ ೧೮ ರಿಂದ ೫೦ ವಯಸ್ಸಿನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಜೂನ್ ೨೯ ರಂದು ಸಾಯಂಕಾಲ ೫ ಗಂಟೆಯ ಒಳಗಾಗಿ ಮಹಾನಗರ ಪಾಲಿಕೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯಾಗಿ ಮಹಾನಗರಪಾಲಿಕೆಯ ಡೇ-ನಲ್ಮ್ ವಿಭಾಗವನ್ನು ಸಂಪರ್ಕಿಸಬಹುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಆಲಮಟ್ಟಿ: ನಿಡಗುಂದಿ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ -೫೦ ರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಅಲ್ಲಿ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಗುರುವಾರ, ಯಲಗೂರದ ಯಲಗೂರೇಶನ ದರ್ಶನ ಪಡೆದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿದೆ, ಆದರೆ ಅಪಘಾತಗಳು ಹೆಚ್ಚಿಗೆ ಸಂಭವಿಸುತ್ತಿವೆ, ಹೀಗಾಗಿ ಶೀಘ್ರವೇ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಮೇಲ್ಸೇತುವೆ ನಿರ್ಮಿಸದಂತೆ ಯಾವುದೇ ಒತ್ತಡವೂ ನನ್ನ ಮೇಲಿಲ್ಲ. ಅಲ್ಲಿ ಯಾವುದೇ ಭೂಸ್ವಾಧೀನದ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಮುಂದಿನ ೫ ವರ್ಷಗಳ ಕಾಲ ಮತಕ್ಷೇತ್ರದಲ್ಲಿ ಜನರು ಹೇಳುವ ಕೆಲಸ ಮಾಡುವುದೇ ನನ್ನ ಅಜೆಂಡಾ ಎಂದರು.ಆಲಮಟ್ಟಿ ಬಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸ್ತಾವನೆಯಿದೆ ಎಂದರು.ರಾಜ್ಯದವರೇ ಕೇಂದ್ರ ಕೈಗಾರಿಕಾ ಸಚಿವರಿದ್ದು, ಕೃಷ್ಣಾ ತೀರದಲ್ಲಿ ಯಾವುದಾದರೂ ಕಾರ್ಖಾನೆ ಸ್ಥಾಪಿಸಲು ಪ್ರಯತ್ನಿಸುವೆ ಎಂದರು.ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಕರಣಗೊಳಿಸಲು ಹಲವು ತಾಂತ್ರಿಕ ತೊಡಕುಗಳಿವೆ ಎಂದರು.ಗೋಪಾಲ ನಾಯಕ,ಬಿಜೆಪಿ ಮುಖಂಡ ಗೋಪಾಲ ಗದ್ದನಕೇರಿ, ನಾರಾಯಣ ಒಡೆಯರ ಗೋಪಾಲಚಾರ್ಯ ಹಿಪ್ಪರಗಿ, ಭೀಮಣ್ಣ, ಯಲಗೂರದಪ್ಪ ಪೂಜಾರಿ, ರಾಮಣ್ಣ…

Read More

ವಿಜಯಪುರ: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಮಲ್ಲಿ ಕಂಬ, ಮಲ್ಲಿ ಹಗ್ಗ ಸಾಹಸ ಕ್ರೀಡೆ ಪ್ರದರ್ಶನ ಹಾಗೂ ತರಳಬಾಳು ಕಲಾ ಸಂಘದಿಂದ ಶರಣ ಸಂಕುಲ ನೃತ್ಯ ಸಂಗೀತ ಮತ್ತು ಅಭಿನಯ ವಿಶೇಷ ಕಾರ್ಯಕ್ರಮ ಜ್ಞಾನಯೋಗಾಶ್ರಮ ವಿಜಯಪುರದಲ್ಲಿ ದಿ.15 ಶನಿವಾರ ಸಂಜೆ 6.30ಗಂ. ಜರುಗಲಿದೆ.ಈ ಕಾರ್ಯಕ್ರಮದ ಸಾನಿಧ್ಯವನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಿರಿಗೆರೆ ಇವರು ವಹಿಸಲಿದ್ದು, ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದು, ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ಸಚಿವರು ಮತ್ತು ವಿಜಯಪುರ ಜಿಲ್ಲೆ ಉಸ್ತಿವಾರಿ ಸಚಿವರಾದ ಎಂ.ಬಿ.ಪಾಟೀಲ ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಪ್ರಕಟಣೆ ತಿಳಿಸಿದೆ.

Read More

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್.ಕೆ. ಬೆಂಗಳೂರು ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರು ಅಸ್ತಂಗತರಾದ ಈ ಸಂದರ್ಭದಲ್ಲಿ..ನಾಗರಿಕ ಮನುಷ್ಯ ಊಟ, ವಸತಿ, ಬಟ್ಟೆ, ವಾಹನ ಪ್ರಯಾಣ ಹೀಗೆ ನಾನಾ ಅವಶ್ಯಕತೆಗಳನ್ನು, ಆಧುನಿಕತೆಯನ್ನು ತಾಂತ್ರಿಕತೆಗಳನ್ನು ಪೂರೈಸಿಕೊಳ್ಳುತ್ತಾ ಸಾಕಷ್ಟು ಆರಾಮದಾಯಕ ಬದುಕಿಗಾಗಿ ಪರಿತಪಿಸುವಾಗಲು, ಕೆಲವು ಕ್ಷೇತ್ರಗಳಲ್ಲಿ ಮಹತ್ಸಾಧನೆಗಾಗಿ ಅಥವಾ ಆತ್ಮ ತೃಪ್ತಿಗಾಗಿ ಅದರಲ್ಲಿ ಲೀನವಾಗಲು ಸದಾ ಪ್ರಯತ್ನಿಸುತ್ತಲೇ ಇರುತ್ತಾನೆ..ಅಂತಹ ಒಂದು ಕ್ಷೇತ್ರ ಕಲೆಯ ಬಲೆಯಾಗಿರುವ ವಾದ್ಯ ಸಂಗೀತ. ಹರಿಯವ ನೀರಿನ ಜುಳು ಜುಳು ನಿನಾದ, ಸಮುದ್ರದಲೆಗಳ ಭೋರ್ಗರೆತ, ಗಾಳಿಯ ರೊಯ್ಯನೇ ಬೀಸುವ ತಂಗಾಳಿಯ ನಾದ,ಪ್ರಾಣಿ ಪಕ್ಷಿ ಕ್ರಿಮಿಕೀಟಗಳ ಆಹ್ಲಾದಕರ ಸುಶ್ರಾವ್ಯ ಗಾನ, ದಟ್ಟ ಕಾಡುಗಳ, ಹಿಮಾಚ್ಛಾದಿತ ಪ್ರದೇಶಗಳ ವರ್ಣಿಸಲಾಗದ ಧ್ವನಿ ತರಂಗಗಳು, ಮರ ಮುಟ್ಟುಗಳ ವಿವಿಧ ಆಕಾರದ ದ್ವನಿ ಹೊಮ್ಮಿಸುವ ಶಬ್ದ ನಿನಾದಗಳು, ವಿಧ ವಿಧ ತಂತಿಗಳು ಹೊಮ್ಮಿಸುವ ಸಂಗೀತ ಪ್ರಾಕಾರಗಳು..ಹಾಗೆಯೇ, ವೀಣೆ, ಕೊಳಲು, ಹಾರ್ಮೋನಿಯಂ, ತಬಲಾ, ಸರೋದ್, ಮೃದಂಗ, ಗೆಜ್ಜೆ, ಪಿಟೀಲು, ತಾಳೆ, ಮದ್ದಲೆ, ಚೆಂಡೆ, ವೀಣೆ,…

Read More

ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಯಲ್ಲಿ ನಡೆದಿರುವ ಕಳಪೆ ಕಾಮಗಾರಿ ವಿಜಯಪುರ: ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಯಲ್ಲಿ ನಡೆದಿರುವ ಕಳಪೆ ಕಾಮಗಾರಿಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹ ಜಯ ಕರ್ನಾಟಕ ಸಂಘಟನೆಯ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವಿಷಯ ಕುರಿತು ರಾಜ್ಯ ಸಂಘಟನಾ ಕಾರ್ಯದರ್ಶಿ ರಾಕೇಶ ಕಲ್ಲೂರ ಅವರು ಮಾತನಾಡಿ, ತಾಳಿಕೋಟಿ ತಾಲೂಕಿನ ಬಂಟನೂರ ಗ್ರಾಮದ ಸರ್ವೇ ನಂ. ೧೭೮/೧,೨ ಈ ಜಮೀನದಲ್ಲಿ ಮುಖ್ಯ ಕಾಲುವೆ ಅಕ್ವಾಡೆಕ್ಕೆ ಹಾಗೂ ಏಂಬೆಕಮೆಂಟ್ ಕಾಮಗಾರಿ ಕೈಗೊಂಡಿದ್ದು, ಇದು ಕಳಪೆ ಮಟ್ಟದಿಂದ ಕೂಡಿದ್ದು, ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕಾಮಗಾರಿಗೆ ಕಾಲುವೆಗೆ ೧೯-೦೧-೨೦೨೪ ರಂದು ಪ್ರಾಯೋಗಿಕವಾಗಿ ನೀರು ಹರಿಸಿದ್ದು ಕಾಲುವೆಯ ನೀರು ಸದರಿಯವರ ಜಮೀನಿಗೆ ನುಗ್ಗಿ ಅಪಾರ ಹಾನಿ ಸಂಬಂಧಿಸಿರುತ್ತದೆ. ಆದಕಾರಣ ಆದಷ್ಟು ಬೇಗ ತಾವು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ತಪ್ಪಿತಸ್ಥರಾದ ಗುತ್ತಿಗೆದಾರ ಆದಿತ್ಯ ಕನ್ಸಟ್ರಂಕ್ಸನ್ ಕಂಪನಿ ಹಾಗೂ ಅವರೊಂದಿಗೆ ಕೂಡಿಕೊಂಡು ಕಳಪೆ ಕಾಮಗಾರಿಗೆ…

Read More

ಚಿಮ್ಮಡ: ಶಾಲೆ ಪ್ರೌಢಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉತ್ತಮ ಅಂಕಗಳಿಸಲು ಛಲದೊಂದಿಗೆ ಜ್ಞಾನದ ಹಸಿವು ಇರಬೇಕು ಆವಾಗಲೇ ಸಾಧನೆ ಮಾಡಲು ಸಾಧ್ಯ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೆಶಕ ಬಿ.ಕೆ.ನಂದನೂರ ಹೇಳಿದರು.ಗ್ರಾಮದ ಸರಕಾರಿ ಪ್ರೌಢಶಾಲೆಗೆ ಸೋಮವಾರ ಭೇಟಿನೀಡಿ ಪರೀಶೀಲನೆ ನಡೆಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸುತ್ತ ಮಾತನಾಡಿದ ಅವರು ಸತತ ಪ್ರಯತ್ನವೇ ಯಶಸ್ಸಿನ ಮೂಲವಾಗಿದ್ದು ಇರುವೆಯ ಪ್ರಯತ್ನಶೀಲತೆ ನಮಗೆಲ್ಲ ಮಾದರಿಯಾಗಬೇಕೆಂದ ಅವರು ನೂತನ ಪರೀಕ್ಷಾ ಪದ್ದತಿಗಳ ಅನುಕೂಲತೆಗಳ ಕುರಿತು ವಿದ್ಯಾರ್ಥಿಗಳನ್ನು ಅಭಿ ಪ್ರೇರಣೆಗೊಳಿಸಿ ಮಾರ್ಗದರ್ಶನ ನೀಡಿದರು.ಗ್ರಾಮೀಣ ಭಾಗದ ಈ ಶಾಲೆಯ ವಾತಾವರಣ, ಕಲಿಕಾ ಗುಣಮಟ್ಟದ ಕುರಿತು ಹರ್ಷವ್ಯಕ್ತಪಡಿಸಿದ ಅಧಿಕಾರಿಗಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕೆ ಪ್ರಭಾರ ಮುಖ್ಯೋಪಾದ್ಯಾಯೆ ಸೇರಿದಂತೆ ಶಿಕ್ಷಕ ವೃಂದವನ್ನು ಹಾಗೂ ಎಸ್ಡಿಎಂಸಿ ಪಧಾಧಿಕಾರಿಗಳನ್ನು ಅಭಿನಂದಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ, ಕ್ಷೇತ್ರ ಸಮನ್ವಯ ಅಧಿಕಾರಿ ರಮೇಶ ಅವಟಿ, ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್. ಜಿಟ್ಟಿ ಉಪಸ್ಥಿತರಿದ್ದರು.

Read More

“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ:೯೪೪೯೨೩೪೧೪೨ ನಮ್ಮಲ್ಲಿ ಬಹುತೇಕ ಜನರು ಗುರಿ ಮುಟ್ಟದೇ ವಿಫಲರಾಗಲು ಕಾರಣ ಸಂವಹನ ಕಲೆ ಗೊತ್ತಿಲ್ಲದೇ ಇರುವುದು. ಅದರಲ್ಲೂ ಅಪರಿಚಿತರೊಂದಿಗೆ ಮಾತನಾಡಲು ಭಯಗೊಳ್ಳುವುದು ಸಾಮಾನ್ಯ. ಮಾತಿನ ಕಲೆ ತಲೆ ಎತ್ತಿ ನಡೆಯುವುದನ್ನು ದೈರ್ಯವನ್ನು ತುಂಬುತ್ತದೆ. ಕರಗತ ಮಾಡಿಕೊಂಡರೆ ಅಪರಿಚಿತರೊಂದಿಗೆ ಮಾತು ಹೇಗೆ ಆರಂಭಿಸಬೇಕೆಂಬುದು ಸಲೀಸಾಗಿ ಬಿಡುತ್ತದೆ. ನಾಲ್ಕಾರು ಜನರ ಗುಂಪಿನಲ್ಲಿರುವಾಗ ಏನು ಮಾತನಾಡುವುದೆಂದು ತಿಳಿಯದೆ ಆ ಕಡೆ ಈ ಕಡೆ ನೋಡುತ್ತ ನಿಂತು ಬಿಡುತ್ತೇವೆ. ಅವರಲ್ಲಿ ನಾವೂ ಒಬ್ಬರೆಂಬ ಭಾವನೆ ಬರದೇ ಅವರ ಇರುವಿಕೆಯನ್ನು ಸಂತಸದಿಂದ ಕಳೆಯದೆ ಪೇಚಾಡುತ್ತೇವೆ. ಉಸಿರುಗಟ್ಟಿದ ವಾತಾವರಣದಲ್ಲಿ ನಿಂತಂತೆನಿಸಿ ಅಲ್ಲಿಂದ ಹೊರ ನಡೆದರೆ ಸಾಕೆಂದು ಅನಿಸುವುದೂ ಉಂಟು. ಅಂಥ ಸಮಯದಲ್ಲಿ ನೀವೂ ಅವರಲ್ಲೊಬ್ಬರು ಅಂತೆನಿಸಲು ಹೇಗೆ ಮಾತನಾಡಬೇಕೆಂದು ಯೋಚಿಸುತ್ತೀರಿ, ಆದರೆ ಮಾತನಾಡಿ ಏನಾದರೂ ತಪ್ಪಾದರೆಂದು ಬಾಯಿ ಮುಚ್ಚಿಕೊಂಡಿರುತ್ತೀರಿ. ನಡೆಯುತ್ತಿರುವ ಸಂಭಾಷಣೆಯಲ್ಲಿ ನೀವೂ ಭಾಗ ತೆಗೆದುಕೊಳ್ಳಬೇಕೆಂದರೆ ಏನು ಮಾಡಬೇಕೆಂಬುದಕ್ಕೆ ಇಲ್ಲಿವೆ ಕೆಲವು ಸಲಹೆಗಳು. – ಜಯಶ್ರೀ.ಜೆ.…

Read More

ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಹೊಲದಲ್ಲಿ ೨೦ ಅಡಿ ಆಳದ ತೆರೆದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದ ಎರಡು ವರ್ಷದ ಮಗು ಸಾತ್ವಿಕನನ್ನು ರಕ್ಷಿಸಲು ಸತತ ೨೦ ಗಂಟೆಗಳ ರಕ್ಷಣಾ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿ ತಂಡದಲ್ಲಿ ಇಂಡಿಯ ಅಗ್ನಿಶಾಮಕ ತಂಡದಲ್ಲಿದ್ದ ಆರು ಜನ ಸಿಬ್ಬಂದಿಯನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಡಾ. ಜಿ.ಪರಮೇಶ್ವರ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.ಅಗ್ನಿ ಶಾಮಕ ತಂಡದ ಠಾಣಾಧಿಕಾರಿ ಗುರುಪಾದಪ್ಪ ತೇಲಿ, ಸಹಾಯಕ ಠಾಣಾಧಿಕಾರಿ ದೇವದಾನಮ್ಮ, ಮತ್ತು ಮುಬಾರಕ ಇಂಡಿಕರ, ಅನೀಲ ಚವ್ಹಾಣ, ಮಾರು ರಾಠೋಡ, ಮಹಮ್ಮದ ಅಲಿ ಬಂಥನಾಳ ಇವರಿಗೆ ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಿದರು.ಈ ರಕ್ಷಣಾ ಕಾರ್ಯಾಚರಣೆಯಲ್ಲಿ ತೋರಿದ ಧೈರ್ಯ ಹಾಗೂ ಸಮಯಪ್ರಜ್ಞೆ ಅನುಕರಣೀಯ. ಈ ಕುರಿತು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪೋಲಿಸ್ ಮಹಾ ನಿರ್ದೇಶಕ ಹಾಗೂ ಮಹಾ ನಿರ್ದೇಶಕರು ಕರ್ನಾಟಕ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಕಮಲ ಪಂತ ಪ್ರಶಂಸನಾ ಪತ್ರ…

Read More

ಇಂಡಿ: ಕರ್ತವ್ಯ ಲೋಪ ಹಿನ್ನಲೆ ಪ್ರಭಾರ ಪಿಡಿಓನ್ನು ಜಿಲ್ಲಾ ಪಂಚಾಯತ ಸಿಇಓ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮ ಪಂಚಾಯತಿ ಪ್ರಭಾರ ಹಾಗೂ ಹಿರೇಬೇವನೂರ ಗ್ರಾಮ ಪಂಚಾಯತಿ ಪಿಡಿಓ ರವಿ ಕರ್ಜಗಿ ಅಮಾನತುಗೊಂಡವರು. ಇನ್ನು ನಮ್ಮ ಭೂಮಿ ನಮ್ಮ ತೋಟ ಯೋಜನೆಯಡಿಯಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅದಕ್ಕಾಗಿ ರವಿ ಅವರನ್ನು ಅಮಾನತುಗೊಳಿಸಿ ಮುಂದಿನ ಶಿಸ್ತು ಕ್ರಮಕ್ಕೆ ಜಿಲ್ಲಾ ಪಂಚಾಯತ ಸಿಇಓ ರಿಷಿ ಆನಂದ ಆದೇಶ ಹೊರಡಿಸಿದ್ದಾರೆ.

Read More