ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಯಲ್ಲಿ ನಡೆದಿರುವ ಕಳಪೆ ಕಾಮಗಾರಿ
ವಿಜಯಪುರ: ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಯಲ್ಲಿ ನಡೆದಿರುವ ಕಳಪೆ ಕಾಮಗಾರಿಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹ ಜಯ ಕರ್ನಾಟಕ ಸಂಘಟನೆಯ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವಿಷಯ ಕುರಿತು ರಾಜ್ಯ ಸಂಘಟನಾ ಕಾರ್ಯದರ್ಶಿ ರಾಕೇಶ ಕಲ್ಲೂರ ಅವರು ಮಾತನಾಡಿ, ತಾಳಿಕೋಟಿ ತಾಲೂಕಿನ ಬಂಟನೂರ ಗ್ರಾಮದ ಸರ್ವೇ ನಂ. ೧೭೮/೧,೨ ಈ ಜಮೀನದಲ್ಲಿ ಮುಖ್ಯ ಕಾಲುವೆ ಅಕ್ವಾಡೆಕ್ಕೆ ಹಾಗೂ ಏಂಬೆಕಮೆಂಟ್ ಕಾಮಗಾರಿ ಕೈಗೊಂಡಿದ್ದು, ಇದು ಕಳಪೆ ಮಟ್ಟದಿಂದ ಕೂಡಿದ್ದು, ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕಾಮಗಾರಿಗೆ ಕಾಲುವೆಗೆ ೧೯-೦೧-೨೦೨೪ ರಂದು ಪ್ರಾಯೋಗಿಕವಾಗಿ ನೀರು ಹರಿಸಿದ್ದು ಕಾಲುವೆಯ ನೀರು ಸದರಿಯವರ ಜಮೀನಿಗೆ ನುಗ್ಗಿ ಅಪಾರ ಹಾನಿ ಸಂಬಂಧಿಸಿರುತ್ತದೆ. ಆದಕಾರಣ ಆದಷ್ಟು ಬೇಗ ತಾವು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ತಪ್ಪಿತಸ್ಥರಾದ ಗುತ್ತಿಗೆದಾರ ಆದಿತ್ಯ ಕನ್ಸಟ್ರಂಕ್ಸನ್ ಕಂಪನಿ ಹಾಗೂ ಅವರೊಂದಿಗೆ ಕೂಡಿಕೊಂಡು ಕಳಪೆ ಕಾಮಗಾರಿಗೆ ಸಹಕರಿಸಿದ ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಮಾರ್ಚ್ ೨೧ರಂದು ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಕೆಲವು ದಿನಗಳ ಹಿಂದೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಲುವೆಯಲ್ಲಿನ ನೀರು ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಕೂಡಲೇ ಸಂಬಂಧಪಟ್ಟ ಕಂದಾಯ ಇಲಾಖೆ ಹಾಗೂ ಕೆ.ಬಿ.ಜೆ.ಎನ್.ಎಲ್ . ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಲು ಆದೇಶ ಮಾಡಿ ಹಾಗೂ ಕಳಪೆ ಮಟ್ಟದ ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಸಂಗಮೇಶ ದಾಸನಗೌಡ್ರು , ಪಿಂಟು ಗಬ್ಬೂರ, ಮುಕ್ಕದ್ದಸ್ ಇನಾಮದಾರ್, ತಾಲೂಕ ಮುಖಂಡ ಬಸವರಾಜ್ ಸಿಂಗನಹಳ್ಳಿ, ಜಿಲ್ಲಾ ಮುಖಂಡ ಸಂಗಮೇಶ್ ಹಿರೇಮಠ, ಉಮೇಶ್ ರುದ್ರಮನಿ, ಸಂತೋಷ್ ಶ್ಯಾಪೇಟಿ, ಮಹಿಳಾ ಮುಖಂಡರು ಸುಜಾತ ಪೂಜಾರಿ, ಮಲ್ಲಮ್ಮ ಲಮಾಣಿ, ಕವಿತಾ ಹಲ್ಲೋಳಿ, ಬೇಬಿ ತಳವಾರ, ಸುವರ್ಣ ಹಳ್ಳಿ, ನಾಗಮ್ಮ ವಾಲೀಕಾರ್. ರಾಜಶ್ರೀ ವಾಲಿಕಾರ್, ಅಶ್ವಿನಿ ಸಾವಂತ್, ಲಕ್ಷ್ಮಿ ದಾಸವಾಳ ಇನ್ನಿತರರು ಉಪಸ್ಥಿತರಿದ್ದರು.

