ಚಿಮ್ಮಡ: ಶಾಲೆ ಪ್ರೌಢಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉತ್ತಮ ಅಂಕಗಳಿಸಲು ಛಲದೊಂದಿಗೆ ಜ್ಞಾನದ ಹಸಿವು ಇರಬೇಕು ಆವಾಗಲೇ ಸಾಧನೆ ಮಾಡಲು ಸಾಧ್ಯ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೆಶಕ ಬಿ.ಕೆ.ನಂದನೂರ ಹೇಳಿದರು.
ಗ್ರಾಮದ ಸರಕಾರಿ ಪ್ರೌಢಶಾಲೆಗೆ ಸೋಮವಾರ ಭೇಟಿನೀಡಿ ಪರೀಶೀಲನೆ ನಡೆಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸುತ್ತ ಮಾತನಾಡಿದ ಅವರು ಸತತ ಪ್ರಯತ್ನವೇ ಯಶಸ್ಸಿನ ಮೂಲವಾಗಿದ್ದು ಇರುವೆಯ ಪ್ರಯತ್ನಶೀಲತೆ ನಮಗೆಲ್ಲ ಮಾದರಿಯಾಗಬೇಕೆಂದ ಅವರು ನೂತನ ಪರೀಕ್ಷಾ ಪದ್ದತಿಗಳ ಅನುಕೂಲತೆಗಳ ಕುರಿತು ವಿದ್ಯಾರ್ಥಿಗಳನ್ನು ಅಭಿ ಪ್ರೇರಣೆಗೊಳಿಸಿ ಮಾರ್ಗದರ್ಶನ ನೀಡಿದರು.
ಗ್ರಾಮೀಣ ಭಾಗದ ಈ ಶಾಲೆಯ ವಾತಾವರಣ, ಕಲಿಕಾ ಗುಣಮಟ್ಟದ ಕುರಿತು ಹರ್ಷವ್ಯಕ್ತಪಡಿಸಿದ ಅಧಿಕಾರಿಗಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕೆ ಪ್ರಭಾರ ಮುಖ್ಯೋಪಾದ್ಯಾಯೆ ಸೇರಿದಂತೆ ಶಿಕ್ಷಕ ವೃಂದವನ್ನು ಹಾಗೂ ಎಸ್ಡಿಎಂಸಿ ಪಧಾಧಿಕಾರಿಗಳನ್ನು ಅಭಿನಂದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ, ಕ್ಷೇತ್ರ ಸಮನ್ವಯ ಅಧಿಕಾರಿ ರಮೇಶ ಅವಟಿ, ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್. ಜಿಟ್ಟಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

