ಆಲಮಟ್ಟಿ: ನಿಡಗುಂದಿ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ -೫೦ ರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಅಲ್ಲಿ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಗುರುವಾರ, ಯಲಗೂರದ ಯಲಗೂರೇಶನ ದರ್ಶನ ಪಡೆದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿದೆ, ಆದರೆ ಅಪಘಾತಗಳು ಹೆಚ್ಚಿಗೆ ಸಂಭವಿಸುತ್ತಿವೆ, ಹೀಗಾಗಿ ಶೀಘ್ರವೇ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮೇಲ್ಸೇತುವೆ ನಿರ್ಮಿಸದಂತೆ ಯಾವುದೇ ಒತ್ತಡವೂ ನನ್ನ ಮೇಲಿಲ್ಲ. ಅಲ್ಲಿ ಯಾವುದೇ ಭೂಸ್ವಾಧೀನದ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಮುಂದಿನ ೫ ವರ್ಷಗಳ ಕಾಲ ಮತಕ್ಷೇತ್ರದಲ್ಲಿ ಜನರು ಹೇಳುವ ಕೆಲಸ ಮಾಡುವುದೇ ನನ್ನ ಅಜೆಂಡಾ ಎಂದರು.
ಆಲಮಟ್ಟಿ ಬಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸ್ತಾವನೆಯಿದೆ ಎಂದರು.
ರಾಜ್ಯದವರೇ ಕೇಂದ್ರ ಕೈಗಾರಿಕಾ ಸಚಿವರಿದ್ದು, ಕೃಷ್ಣಾ ತೀರದಲ್ಲಿ ಯಾವುದಾದರೂ ಕಾರ್ಖಾನೆ ಸ್ಥಾಪಿಸಲು ಪ್ರಯತ್ನಿಸುವೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಕರಣಗೊಳಿಸಲು ಹಲವು ತಾಂತ್ರಿಕ ತೊಡಕುಗಳಿವೆ ಎಂದರು.
ಗೋಪಾಲ ನಾಯಕ,
ಬಿಜೆಪಿ ಮುಖಂಡ ಗೋಪಾಲ ಗದ್ದನಕೇರಿ, ನಾರಾಯಣ ಒಡೆಯರ ಗೋಪಾಲಚಾರ್ಯ ಹಿಪ್ಪರಗಿ, ಭೀಮಣ್ಣ, ಯಲಗೂರದಪ್ಪ ಪೂಜಾರಿ, ರಾಮಣ್ಣ ಬಿರಾದಾರ, ಮಹಾಂತೇಶ ಡೆಂಗಿ, ಅಶೋಕ ವಡವಡಗಿ, ಚನ್ನಬಸು ಚೆನ್ನಿಗಾವಿ, ಗುರುರಾಜ ಪೂಜಾರ, ರಂಗನಾಥ ಪೂಜಾರ, ಯಲಗೂರೇಶ ಪವಾರ, ನಾರಾಯಣ ಸೂರ್ಯವಂಶಿ, ಎಂ.ಕೆ. ಚೆನ್ನಿಗಾವಿ, ಲಕ್ಷ್ಮಣಗೌಡ ಪಾಟೀಲ,ಮೋಹನ ಭಾಂಡವಳಕರ, ಲಕ್ಷ್ಮಣ ಬೇವೂರ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

