Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಡಚಣ: 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತ ಎಣಿಕೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಚಿತ್ರದುರ್ಗ ಕ್ಷೇತ್ರದಿಂದ ಗೋವಿಂದ ಕಾರಜೋಳ ಅವರು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಚಡಚಣ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯನ್ನು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಆಚರಿಸಿದರು.ಪಟ್ಟಣದ ಬಸವೇಶ್ವರ ವೃತ್ತ, ಬಜಾರ್ ರಸ್ತೆ ಹಾಗೂ ದೇವರ ದಾಸಿಮಯ್ಯ ವೃತ್ತ, ಹೀರೋ ಶೋ ರೂಮ್ ನ ಮುಂಭಾಗದಲ್ಲಿ ಸೇರಿ ಪ್ರಮುಖ ಬೀದಿಗಳಲ್ಲಿ ನೂರಾರು ಬೈಕ್ ರ್ಯಾಲಿ ನಡೆಸಿ, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹರ್ಷವನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸಚಿನ್ ಅವಟಿ, ಕಾರ್ಯಕರ್ತರಾದ ಗಣಪತಿ ಅವಟಿ, ಮಂಜುನಾಥ ಅವಟಿ, ಕಲ್ಲಪ್ಪ ಮೇತ್ರಿ, ಸುಭಾಸ ಮೇತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂಡಿ: ಜಾಗತೀಕರಣದ ನಂತರ ಭಾರದತ ಪರಿಸ್ಥಿತಿ ಬದಲಾಗಿದ್ದು, ಅಭಿವೃದ್ದಿ ಹೆಸರಿನಲ್ಲಿ ಮಣ್ಣು ಪರಿಸರ ಹಾಳಾಗುತ್ತದೆ ಎಂದು ಬೆಂಗಳೂರಿನ ಡಿಸಿಪಿ ಸಿದ್ದರಾಜು ಹೇಳಿದರು.ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಕೃಷಿ,ತೊಟಗಾರಿಕೆ, ಪಶು ಸೇರಿದಂತೆ ಎಲ್ಲ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಮೊದಲಿನ ಪರಿಸ್ಥಿತಿ ಈಗ ಇಲ್ಲ. ಅರಣ್ಯವು ಕಡಿಮೆ ಯಾಗುತ್ತಿದ್ದು, ನೀರಿನ ಸೆಲೆ ಕಡಿಮೆ ಯಾಗುತ್ತಿದೆ. ಸಾವಯುವ ಕೃಷಿ ಪದ್ದತಿ ಅಳವಡಿಸಿ ಗೋ ಗ್ರೀನ್, ಸೆವ್ ಗ್ರೀನ್, ಪ್ಲಾಸ್ಟಿಕ ಮುಕ್ತ ಭಾರತ ಮಾಡಿ ನಿಸರ್ಗ ನಿರ್ಮಿತ ಕೊನೆಯತನಕದ ಪರಿಸರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಪರಿಸರದ ಜಾಗೃತಿ ಮೂಡಿಸಿ ಮಳೆ ನೀರನ್ನು ಹಿಡಿದು ಬಳಸಿಕೊಳ್ಳುವ ಕ್ರಮಗಳಿಗೆ ಆಧ್ಯತೆ ನೀಡಬೇಕಾಗಿದೆ ಎಂದರು.ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಭೂಮಿ ಮತ್ತು ಪರಿಸಲು ಉಳಿಸಲು ಜನಾಂದೋಲನ ರೂಪದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಆಧುನಿಕ ಕೃಷಿ ಪದ್ದತಿಯಿಂದ ನಿರಂತರವಾಗಿ ಅರಣ್ಯಗಳ…
ಕಲಕೇರಿಯ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಲಕೇರಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪರಿಸರದ ರಕ್ಷಣೆಯಾದಾಗ ಮಾತ್ರ ಜೀವ ಸಂಕುಲದ ರಕ್ಷಣೆಯಾಗುತ್ತದೆ ಎಂಬುದನ್ನು ನಾವು ಅರಿತು ನಡೆಯಬೇಕು. ಅಂದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಯುತ ಮತ್ತು ಸುಂದರ ಪರಿಸರವನ್ನು ಬಿಟ್ಟು ಹೋಗಲು ಸಾಧ್ಯ ಎಂದು ಆದರ್ಶ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಮ್.ಸಜ್ಜನ ಅವರು ಹೇಳಿದರು.ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆದರ್ಶ ಪದವಿ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿದ ನಂತರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾವು ಅಭಿವೃದ್ಧಿಯ ನೆಪದಲ್ಲಿ ಗಿಡಮರಗಳನ್ನು ಕಡಿದು ಕಾಂಕ್ರೀಟ್ ಪರಿಸರವನ್ನು ನಿರ್ಮಾಣ ಮಾಡುತ್ತಿದ್ದು, ಇದರಿಂದ ಕಾಲಕಾಲಕ್ಕೆ ಮಳೆಯಾಗದೇ ವಾತಾವರಣದಲ್ಲಿ ತಾಪಮಾನ ಹೆಚ್ಚಾಗಿ ಭೂಮಿಯಲ್ಲಿ ಕಾಲಮಾನಗಳ ಬದಲಾವಣೆಯಾಗುವ ಮೂಲಕ ಜೀವಸಂಕುಲಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇದರಿಂದ ಜನಜೀವನ ದುಸ್ತರವಾಗಿ ವಿನಾಶದ ಅಂಚಿಗೆ ತಲುಪುವ ಸ್ಥಿತಿ ಉಂಟಾಗಿದ್ದು, ಜೀವ ಸಂಕುಲದ ಉಳಿವಿಗಾಗಿ ಮತ್ತು ಆರೋಗ್ಯ್ತ, ಆಯಸ್ಸು…
ವಿಜಯಪುರ: ಮಗುವಿಗೊಂದು ಮರ, ಶಾಲೆಗೊಂದು ವನ ಮಾಡುವದರೊಂದಿಗೆ ವಿಶ್ವ ಪರಿಸರ ದಿನವನ್ನು ಅಥ೯ಪೂಣ೯ವಾಗಿ ಆಚರಿಸೋಣ. ಫಲ ನೀಡುವ ಮರಗಳನ್ನು ಬೆಳೆಸುವ ಕತ೯ವ್ಯ ನಮ್ಮೆಲ್ಲರದಾಗಿದೆ. ಅರಣ್ಯ ನಾಶದಿಂದ ಜೀವ ವೈವಿಧ್ಯದ ನಷ್ಟ ಉಂಟಾಗುತ್ತಿರುವ ಕಳವಳಕಾರಿ ಕನ್ನಡ ವಿಷಯ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.ಬುಧವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಶಿವಗಿರಿ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು,ಭವಿಷ್ಯದ ಪೀಳಿಗೆಗೆ ಪರಿಸರ ಸಮತೋಲನ ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.ಮುಖ್ಯ ಅತಿಥಿಗಳಾದ ಸಮಾಜ ಸೇವಕ ರಾಜು ಜಾಧವ ಮಾತನಾಡಿ, ಪರಿಸರ ನಾಶದಿಂದ ಪಶು,ಪಕ್ಷಿ, ಪ್ರಾಣಿಗಳ ವಿನಾಶಕ್ಕೆ ಕಾರಣವಾಗುತ್ತಿದೆ. ಪರಿಸರ ಸಂರಕ್ಷಣೆಯ ಮಾಡದೆ ಇದ್ದರೆ ಜಾಗತಿಕ ತಾಪಮಾನ ಏರಿಕೆಯಾಗಿ ಮನು ಕುಲಕ್ಕೆಧಕ್ಕೆ ಉಂಟಾಗುತ್ತದೆ ಎಂದರು.ಉಪನ್ಯಾಸಕರಾಗಿ ಡಾ ಸುಮಾ ಮಮದಾಪೂರ ಮಾತನಾಡಿ, ಮನೆಗೊಂದು ಮರ, ದೇಶಕ್ಕೆ ವರ, ರಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಶಕ್ತಿ ಕಳೆದುಕೊಳ್ಳುತ್ತಿದೆ.ಕಾಡಿನ…
ವಿಜಯಪುರ: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಓಅಗಿಖಿ) ಸಂಯೋಜನೆ ಹೊಂದಿದ ೧೨ ವಿವಿಧ ವೃತ್ತಿಗಳಲ್ಲಿ ಪ್ರವೇಶಗಳು ಪ್ರಾರಂಭವಾಗಿವೆ. ಸಂಸ್ಥೆಯು ಸುಸಜ್ಜಿತ ಕಾರ್ಯಾಗಾರವನ್ನು ಹೊಂದಿದ್ದು, ಆಧುನಿಕ iಟಿಜusಣಡಿಥಿ ೪.೦ ಅಡಿಯಲ್ಲಿ ಖಿಚಿಣಚಿ ಖಿeಛಿhಟಿoಟogies ಐಣಜ, ಇವರ ಸಹಯೋಗದೊಂದಿಗೆ ಉತ್ತಮ ದರ್ಜೆ ತರಬೇತಿ ನೀಡಲಾಗುವುದು, ಹಾಗೂ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗ ಭರವಸೆ ನೀಡಲಾಗುವುದು. ಪ್ರವೇಶಕ್ಕೆ ವಾರ್ಷಿಕವಾಗಿ ೧,೨೦೦ ರೂ ಶುಲ್ಕವನ್ನು ಪಡೆದುಕೊಳ್ಳಲಾಗುವುದು. ಎಸ್‌ಎಸ್‌ಎಲ್‌ಸಿ ಹಾಗೂ ೮ನೇ ತರಗತಿ ಪಾಸಾದ ಅಭ್ಯರ್ಥಿಗಳು ಪ್ರವೇಶ ಹೊಂದಲು ಅರ್ಹರಿದ್ದು, ತಿತಿತಿ.ಛಿiಣe.ಞಚಿಡಿಟಿಚಿಣಚಿಞಚಿ.gov.iಟಿ ಇಲಾಖೆ ಜಾಲತಾಣದ ಮೂಲಕ ಜೂನ್ ೯ರವರೆಗೆ ಆನ್ ಲೈನ್ ಅರ್ಜಿ ಸಲ್ಲಿಸಬಹುದು ಒಟ್ಟು ೪೭೦ ಸ್ಥಾನಗಳಿಗೆ ಪ್ರವೇಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೯೭೨೬೮೨೧೮೪, ೯೪೪೮೯೮೬೩೮೧, ೯೮೮೬೪೩೭೫೧೭ ಮತ್ತು ೦೮೩೫೨೨೬೦೩೬೦ ಗೆ ಸಂಪರ್ಕಿಸಿಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಡಚಣ: ವಿಶ್ವ ಪರಿಸರ ದಿನವನ್ನು ಪರಿಸರವನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. ಪರಿಸರ ಉಳಿಸಲು ಎಲ್ಲರೂ ಒಗ್ಗೂಡುವುದು. ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ಈ ದಿನದಂದು ಪರಿಸರ ಉಳಿಸುವ ಜಾಗೃತಿ ಕಾರ್ಯಕ್ರಮಗಳು ಹಾಗೂ ಮರ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಡೋಣ ಎಂದು ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಮಾತೆ ಎಂ.ಎಸ್.ಪಾಟೀಲ ಹೇಳಿದರು.ಬುಧವಾರದಂದು ಪ್ರೌಢ ಶಾಲೆಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು. ಮಾನವನ ಸ್ವಾರ್ಥಭರಿತ ಚಟುವಟಿಕೆಗಳಿಂದ ದಿನೇ ದಿನೇ ಪ್ರಕೃತಿಯೂ ಹಾಳಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯನು ಕುರುಡಾಗಿ ವರ್ತಿಸುತ್ತಿದ್ದಾನೆ. ಅತಿಯಾದ ಕಾಡುಗಳ ನಾಶದಿಂದ ಮುಂಬರುವ ದಿನಗಳ್ಲೂ ಉಸಿರಾಡಲು ಆಮ್ಲಜನಕವೇ ಇಲ್ಲವಾದರೆ, ಬದುಕಿಳಿಯುವುದು ಕಷ್ಟವೇ. ಹೀಗಾಗಿ ಪರಿಸರದ ಬಗ್ಗೆ ಹೆಚ್ಚೆಚ್ಚು ಕಾಳಜಿ ವಹಿಸುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೂನ ೫…
ದೇವರಹಿಪ್ಪರಗಿ: ಪ್ರತಿ ಮೂರು ವರ್ಷಗಳಿಗೊಮ್ಮೆ ಆಚರಿಸಲ್ಪಡುವ ಇಬ್ರಾಹಿಂಪೂರ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ದಿ:೬ ರಂದು(ಇಂದು) ಆರಂಭಗೊಳ್ಳಲಿದೆದಿ:೬ ಗುರುವಾರ(ಇಂದು) ಮುಂಜಾನೆ ೮ ಗಂಟೆಗೆ ದೇವಿಯು ಗಂಗಾಸ್ಥಳ ಮಾಡಿಕೊಂಡು ಪೋತರಾಜರೊಂದಿಗೆ ಕುಂಭ, ಕಳಸ, ಡೋಳ್ಳು ಕುಣಿತದೊಂದಿಗೆ ಬಂಡಿಯಲ್ಲಿ ಮೆರವಣಿಗೆಯಲ್ಲಿ ಹೊರಟು, ಅಗಸಿಯಲ್ಲಿನ ಲಕ್ಷ್ಮೀ ದೇವಸ್ಥಾನ ಕಟ್ಟಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ. ನಂತರ ದಿ:೭ ಶುಕ್ರವಾರದಂದು ಪುನಃ ಕುಂಭ, ಕಳಸ, ಡೋಳ್ಳು ಕುಣಿತದೊಂದಿಗೆ ಬಂಡಿಯಲ್ಲಿ ಮೆರವಣಿಗೆಯಲ್ಲಿ ಹೊರಟು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲ ದೇವಸ್ಥಾನಕ್ಕೆ ತಲುಪುವಳು. ಅದೇ ದಿನ ರಾತ್ರಿ ಶ್ರೀರಾಘವೇಂದ್ರ ಕೃಷ್ಣ ಪಾರಿಜಾತ ಕಂಪನಿಯಿಂದ ಶ್ರೀಕೃಷ್ಣ ಪಾರಿಜಾತ ಎಂಬ ಪೌರಾಣಿಕ ನಾಟಕ ಜರುಗುವುದು ಎಂದು ಜಾತ್ರಾ ಸಮೀತಿ ಪ್ರಕಟಣೆ ಮೂಲಕ ತಿಳಿಸಿದೆ.
ದೇವರಹಿಪ್ಪರಗಿ: ಸಸಿ ನೆಟ್ಟು ಬೆಳೆಸುವ ಕಾರ್ಯ ಕೇವಲ ಪರಿಸರ ದಿನಕ್ಕೆ ಸೀಮಿತವಾಗದೆ ಪ್ರತಿಯೊಬ್ಬರು ಮನೆಗೊಂದು ಮರ ಬೆಳೆಸಿ ಪರಿಸರ ಸಮತೋಲನಕ್ಕೆ ಸಹಕಾರ ನೀಡಬೇಕು ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದಲ್ಲಿ ಬುಧವಾರ ಪಂಚಾಯಿತಿ ಹಾಗೂ ಪ್ರಾದೇಶಿಕ ಅರಣ್ಯ ವಲಯಗಳ ಅಡಿಯಲ್ಲಿ ಬೇವಿಕಟ್ಟಿಯ ಹಳೇಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ನೀರುಣಿಸಿ ಮಾತನಾಡಿದರು. ಪರಿಸರ ದಿನಾಚರಣೆ ಕೇವಲ ಇಂದಿನ ದಿನ ನೆಪ ಮಾತ್ರಕ್ಕೆ ಆಚರಿಸದೇ ನಮ್ಮ ಉಳಿವಿಗಾಗಿ ಅಳವಡಿಸಿಕೊಳ್ಳಬೇಕಾಗಿದೆ. ಆದ್ದರಿಂದ ಗಿಡ ಮರಗಳ ಬೆಳೆಸುವುದರ ಮೂಲಕ ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಬದ್ಧರಾಗೋಣ ಎಂದರು.ಸಾನಿಧ್ಯ ವಹಿಸಿದ್ದ ಸದಯ್ಯನಮಠದ ವೀರಗಂಗಾಧರಶ್ರೀಗಳು ಮಾತನಾಡಿ, ಹಸಿರೇ ಉಸಿರು. ನಮ್ಮ ಭವಿಷ್ಯ ಹಾಗೂ ಮುಂದಿನ ಪೀಳಿಗೆಗಾಗಿ ನಾವೆಲ್ಲ ಸಸಿಗಳನ್ನು ನೆಟ್ಟು, ನಾಡನ್ನು ಹಸಿರಾಗಿಸೋಣ ಎಂದರು.ಸ್ಥಳೀಯ ಜಡಿಮಠದ ಜಡಿಸಿದ್ದೇಶ್ವರಶ್ರೀ ಹಾಗೂ ಅವೋಗೇಶ್ವರಶ್ರೀ ಉಪಸ್ಥಿತಿಯಲ್ಲಿ ಪಟ್ಟಣದ ಪಂಚಾಯಿತಿ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು.ನಂತರ ಪಟ್ಟಣದ ಇಂಡಿ ರಸ್ತೆ, ಸಿದ್ದೇಶ್ವರ…
“ಜಯ್ ನುಡಿ” (ವ್ರಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ ಉಪನ್ಯಾಸಕರು, ಬೆಳಗಾವಿ. ಮೊ: ೯೪೪೯೨೩೪೧೪೨ ನ್ಯೂಟನ್‌ನ ಮೂರನೇ ನಿಯಮ ಎಲ್ಲರಿಗೂ ಗೊತ್ತು. ಕ್ರಿಯೆಗೆ ಪ್ರತಿಕ್ರಿಯೆ ಯಾವಾಗಲೂ ಸಮ ಹಾಗೂ ವಿರುದ್ಧವಾಗಿರುತ್ತದೆ. ಅಚ್ಚರಿಯೆನಿಸಿದರೂ ನಿಜ ಸಂಗತಿ ಏನು ಗೊತ್ತೆ? ನಾವೆಲ್ಲ ಬದುಕಿನ ಸಂತಸದ ಅಮೂಲ್ಯ ಕ್ಷಣಗಳನ್ನು ಬೇಗನೆ ಮರೆತು ದುಃಖ ದುರಂತ ಘಟನೆಗಳಿಗೆ ಭಾವ ಪರವಶರಾಗಿ ಅತಿಯಾಗಿ ಸ್ಪಂದಿಸುವ ಸ್ವಭಾವ ಹೊಂದಿದ್ದೇವೆ. ಸಣ್ಣ ಪುಟ್ಟ ಸಮಸ್ಯೆಗಳು, ಚಿಕ್ಕ ಚಿಕ್ಕ ನೋವುಗಳು ಸಾಲು ಸಾಲು ಸೋಲುಗಳು ನಮ್ಮ ಮೃದು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿ ಬಹು ಕಾಲದವರೆಗೆ ಬೇರೆ ಯಾವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ. ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತೇವೆ. ಯಾವುದೇ ಉತ್ತಮ ಕೆಲಸ ನನ್ನಿಂದಾಗದು. ನಾನೆಂದೂ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಿಲ್ಲ. ಎಂದೇ ಯೋಚಿಸುತ್ತೇವೆ. ಪ್ರತಿಯೊಂದು ಸನ್ನಿವೇಶದಲ್ಲೂ ಹೆಚ್ಚು ನಕಾರಾತ್ಮಕತೆಯಿಂದಲೇ ಪ್ರತಿಕ್ರಿಯಿಸುತ್ತೇವೆ. ಅವುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದಷ್ಟು ನಮ್ಮಲ್ಲಿ ಅಸಂತಸದ ಮೂಟೆಯ ಗಾತ್ರವನ್ನು ಹೆಚ್ಚಿಸುತ್ತವೆ. ಅನೀಸ್ ನಿನ್ ಹೇಳಿದಂತೆ ನಾವು ವಸ್ತುಗಳನ್ನು…
ವಿಜಯಪುರ: ಮಾನವ ಸಂಕುಲದ ಬದುಕುಳಿಯುವಿಕೆಗೆ ಅವಶ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಪರಿಸರ ಒದಗಿಸುತ್ತದೆ. ಮಾನವನ ಯೋಗಕ್ಷೇಮಕ್ಕೆ ಅವಶ್ಯವಿರುವ ಎಲ್ಲಾ ಸಂಪನ್ಮೂಲಗಳು ಈ ಭೂಮಿಯ ಮೇಲಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ರಿಷಿ ಆನಂದ ಹೇಳಿದರು.ಜಿಲ್ಲಾ ಪಂಚಾಯತ ಹಾಗೂ ಸಮಾಜಿಕ ಅರಣ್ಯ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿಯ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ”ವಿಶ್ವ ಪರಿಸರ ದಿನಾಚರಣೆ ” ಕಾರ್ಯಕ್ರಮದಲ್ಲಿ ಗಿಡ ನೆಟ್ಟು, ನೀರುಣಿಸಿ ಅವರು ಮಾತನಾಡಿದರು.ಪ್ರಕೃತಿ ಸಂಪನ್ಮೂಲವನ್ನು ನಮಗೆ ಅವಶ್ಯಕತೆ ಇದ್ದಷ್ಟು ಮಾತ್ರ ಉಪಯೋಗಿಸೋಣ, ಅವಶ್ಯಕತೆಗಿಂತ ಹೆಚ್ಚು ಉಪಯೋಗ ಮಾಡದೇ ನಮ್ಮ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಬಿಸಿಲಿನ ತಾಪಮಾನ ಇರುವುದರಿಂದ ಸಸಿಗಳನ್ನು ನೆಡುವುದು ಹಾಗೂ ಜಲ ಸಂರಕ್ಷಣೆ ಮಾಡುವುದು ಅವಶ್ಯಕವಾಗಿದೆ. ಜಲಸಂರಕ್ಷಣೆಗೆ ಅತ್ಯಂತ ಸೂಕ್ತ ವಿಧಾನ “ಮಳೆನೀರು ಕೊಯ್ಲು” ಈ ವಿಧಾನವನ್ನು ನಾವು ಅಳವಡಿಸಿಕೊಂಡು ಸಾರ್ವಜನಿಕರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದರು.ಮಾನವ ಮಾತ್ರ ಪ್ರಕೃತಿಯ…
