Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರೈತರು ಸಾಲ ಮಾಡದೇ ಸ್ವಾವಲಂಬಿಯಾಗಿ ಬದುಕಿ :ಸಗರ
(ರಾಜ್ಯ ) ಜಿಲ್ಲೆ

ರೈತರು ಸಾಲ ಮಾಡದೇ ಸ್ವಾವಲಂಬಿಯಾಗಿ ಬದುಕಿ :ಸಗರ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಹೇರಿ ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟನೆ

ವಿಜಯಪುರ: ಮತ್ತೊಬ್ಬರನ್ನು ನೋಡಿ ಆಡಂಬರದ ಬದುಕು ಸಾಗಿಸುವುದಕ್ಕಿಂತ ಹಾಸಿಗೆ ಇದಷ್ಟು ಕಾಲು ಚಾಚಲು ಕಲಿಯಬೇಕು, ಸಾಲ ಇಲ್ಲದ ಬಾನ ಉಣ್ಣುವಂತಾಗಬೇಕು. ಆಧುನಿಕ ಜಗತ್ತಿನ ಈ ನಾಗಾಲೋಟದಲ್ಲಿ ದಿನೆ ದಿನೇ ಖರ್ಚುಗಳು ಹೆಚ್ಚಾಗುತ್ತಿವೆ ಈ ನಿಟ್ಟಿನಲ್ಲಿ ಕೇವಲ ಕೃಷಿ ಮಾತ್ರ ಮಾಡಿದರೆ ಸಾಲದು, ಕಡಿಮೆ ಖರ್ಚಿನಲ್ಲಿ ಸಾವಯವ ಕೃಷಿ ಮಾಡುತ್ತಾ ಅದರೊಂದಿಗೆ ಉಪಕಸುಬುಗಳಾದ ಹೈನುಗಾರಿಕೆ, ಮೀನಾಗಾರಿಕೆ, ಜೇನುಸಾಕಾಣಿಕೆ, ಆಡು, ಕುರಿ, ಕೋಳಿ ಸಾಕಾಣಿಕೆ ಮಾಡುತ್ತಾ ದಿನನಿತ್ಯ ಲಾಭ ಪಡೆಯುವಂತಾಗಬೇಕು ಅಂದಾಗ ಮಾತ್ರ ರೈತ ಆತ್ಮಹತ್ಯೆಯಂತಹ ಕೆಟ್ಟು ಪಿಡುಗುಗಳನ್ನು ಈ ಸಾಮಾಜದಲ್ಲಿ ತಡೆಯಬಹುದಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಹೇಳಿದರು.
ವಿಜಯಪುರ ತಾಲೂಕಿನ ಆಹೇರಿ(ಜಂಬಗಿ) ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ಉದ್ಗಾಟನಾ ಸಮಾರಂಭದಲ್ಲಿ ಸ್ವಾಮಿಜಿಗಳು ಹಾಗೂ ಅತಿಥಿಗಳೊಂದಿಗೆ ದೀಪ ಬೆಳಗಿಸುವದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ರೈತ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಮಾತನಾಡಿದರು.
ರೈತ ಸಂಘಟನೆ ಎನ್ನುವುದು ೧೯೭೦ರಲ್ಲಿ ಪ್ರೋ.ಎಂ,ಡಿ ನಂಜುಡಸ್ವಾಮಿ ಅವರ ನೇತೃತ್ವದಲ್ಲಿ ಪ್ರಾರಂಭವಾಗಿ ರಾಜ್ಯದ ಎಲ್ಲಾ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡುತ್ತಾ ರೈತರಿಗಾಗುವ ಅನ್ಯಾಯ ಹಾಗೂ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿ ಲಂಚ ಮುಕ್ತವಾದ ಸಮಾಜ ನಿರ್ಮಾಣ ಮಾಡಲು ಹಾಗೂ ಸರಕಾರದ ಎಲ್ಲಾ ಯೋಜನೆಗಳನ್ನು ಕಟ್ಟಕಡೆಯ ಹಳ್ಳಿಯ ರೈತರಿಗೂ ಸಿಗುವಂತೆ ಮಾಡುವುದರ ಜೊತೆಗೆ ಕೃಷಿಯಲ್ಲಿ ಆಗುತ್ತಿರುವ ಹೊಸ ಹೊಸ ತಂತ್ರಾಜ್ಞಾನಗಳ ಕುರಿತು ತರಬೇತಿ ನೀಡಿ ರೈತರನ್ನು ಸ್ವಾವಲಂಭಿಯಾಗಿ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವಂತೆ ಸದಾ ರೈತರ ಏಳಿಗೆಗಾಗಿ ಶ್ರಮ ವಹಿಸುತ್ತಾ ಬಂದಿದೆ ಎಂಧರು.
ಕೊಡೆಕಲ್ಲದ ಪುರಾಣಿಕರಾದ ಬಸವರಾಜ ಅವರು ಮಾತನಾಡುತ್ತಾ, ಇಡೀ ನಾಡಿಗೆ ಯಾವುದೇ ಫಲಾಪೇಕ್ಷೆ ಮಾಡದೇ ಎಲ್ಲರಿಗೂ ಅನ್ನ ನೀಡುತ್ತಿರುವ ಅನ್ನದಾತರ ಸೇವೆ ಘಣನೀಯವಾದದು, ಈ ಸಂಘಟನೆ ಇಂದು ಈ ಗ್ರಾಮದಲ್ಲಿ ಪ್ರಾರಂಭವಾಗಿ ಪ್ರತಿಯೊಬ್ಬ ರೈತರು ಕೂಡಾ ಇದರಲ್ಲಿ ಸದಸ್ಯರಾಗಿ ಯಾರೊಬ್ಬರಿಗಾದರೂ ಅನ್ಯಾಯವಾದರೂ ಎಲ್ಲರೂ ಕೂಡಿಕೊಂಡು ಹೋರಾಟ ಮಾಡುವದರೊಂದಿಗೆ ನ್ಯಾಯ ಕೊಡಿಸುವ ಕೆಲಸ ಮಡಬೇಕು ಎಂದರು.
ಈ ವೇಳೆ ಆಹೇರಿಯ ಮಠದ ಚಿಲ್ಲಾಲಿಂಗ ಸ್ವಾಮಿಜಿ, ಓಂ ಶಾಂತಿಯ ಮಹಾದೇವಪ್ಪ ತೇಲಿ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಶಿಕ್ಷಕ ಜಕರಾಯ ಪೂಜಾರಿ, ನಿವೃತ್ತ ಶಿಕ್ಷಕ ಆತ್ಮಾನಂದ ಇಬ್ರಾಹಿಂಪುರ ಮಾತನಾಡಿದರು.
ಶರಣಪ್ಪ ಸಾತಿಹಾಳ ನಿರೂಪಿಸಿದರು,
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಸಂಗಪ್ಪ ಟಕ್ಕೆ, ಜಿಲ್ಲಾ ಸಂಚಾಲಕರಾದ ಮಹಾಂತೇಶ ಮಮದಾಪುರ, ತಾಲೂಕಾ ಅಧ್ಯಕ್ಷರಾದ ಮಹಾದೇವಪ್ಪ ತೇಲಿ, ಉಪಾಧ್ಯಕ್ಷರಾದ ಪ್ರಕಾಶ ತೇಲಿ, ಬಸವರಾಜ ಮಸೂತಿ, ಬಸವರಾಜ ಗಾಣಗೇರ, ನಾಗಠಾಣ ಹೋಬಳಿ ಅಧ್ಯಕ್ಷರಾದ ರಾಮಸಿಂಗ ರಜಪೂತ, ಆಹೇರಿ ಗ್ರಾಮ ಅಧ್ಯಕ್ಷರಾದ ಆತ್ಮಾನಂದ ಭೈರೋಡಗಿ, ಮಹಾದೇವ ವಾಲಿ, ಚಂದ್ರಾಮ ಬಿಸನಾಳ, ಜಯಸಿಂಗ ರಜಪೂತ, ಬಸವಂತ ತೇಲಿ, ಚನ್ನು ವಾಲಿ, ಬಸವರಾಜ ಮಸೂತಿ, ತುಕಾರಾಮ ಪೂಜಾರಿ, ಚಂದ್ರಾಮ ಬಿಸನಾಳ, ಬಸವರಾಜ ಬೈರೋಡಗಿ, ಸಿದ್ದಲಿಂಗ ಹತ್ತರಕಾಳ, ರಾಜಾಸಾ ನದಾಫ, ಸೇರಿದಂತೆ ನೂರಾರು ಜನ ಇದ್ದರು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.