Subscribe to Updates
Get the latest creative news from FooBar about art, design and business.
Author: editor.udayarashmi@gmail.com
“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ:೯೪೪೯೨೩೪೧೪೨ ಪ್ರಯತ್ನ ಮಾತ್ರ ನಮ್ಮದು ಹಿಂದಿಗಿಂತ ಇಂದು ಬದುಕು ತರಹೇವಾರಿಯಾಗಿ ತೆರೆದುಕೊಳ್ಳುತ್ತಿದೆ. ಇಂದಿನ ಜನ ಜೀವನ ಕಂಡಾಗ ಸೌಕರ್ಯ ಹೆಚ್ಚಿದ್ದರೂ ನೋವು ಕಡಿಮೆಯಾಗಿಲ್ಲ. ನಲಿವು ಎಲ್ಲೋ ಅವಿತುಕೊಂಡು ಕುಳಿತಿದೆ. ಎಂದೆನಿಸುತ್ತದೆ. ಯಾವಾಗಲೋ ಒಮ್ಮೆ ಸಂತೋಷವು ಕಿಟಕಿಯಲ್ಲಿ ಇಣುಕಿ ನೋಡಿ ಜಾಗ ಖಾಲಿ ಮಾಡುತ್ತಿದೆ. ಹೀಗಾಗಿ ನೆಮ್ಮದಿ ಗಗನ ಕುಸುಮವೆನಿಸುತ್ತಿದೆ. ಇದಕ್ಕೆ ಕಾರಣ ವಿಧಿಯಾಟ ಹಣೆಬರಹ ಎಂದು ಹೆಸರಿಟ್ಟು ಕಣ್ಣೊರೆಸಿಕೊಳ್ಳುತ್ತ ಕೈ ಚೆಲ್ಲಿ ಕುಳಿತಿರುವುದೇ ಆಗಿದೆ. ಜಗದ ಪ್ರತಿಯೊಂದು ಆಗು ಹೋಗುಗಳನ್ನು ನಮ್ಮಿಂದ ಬದಲಿಸಲು ಸಾಧ್ಯವಿಲ್ಲ ಬದುಕು ಜಟಕಾ ಬಂಡಿಯ ಚಕ್ರದಂತೆ ಉರುಳುತ್ತಲೇ ಇರುತ್ತವೆ. ಏರಿಳಿತವೇ ಬದುಕಿನ ಉಸಿರಾಟ. ಬಡವನಿರಲಿ ಬಲ್ಲಿದನಿರಲಿ ಒಳ್ಳೆಯವನಿರಲಿ ಕೆಟ್ಟವನಿರಲಿ ಕಷ್ಟ ಸುಖಗಳು ಬಾಳಿನ ಹಾದಿಯಲ್ಲಿ ಸದಾ ಸಾಗುತ್ತಲೇ ಇರುತ್ತವೆ. ಒಮ್ಮೊಮ್ಮೆ ಬಿರುಸಾದ ಬಿರುಗಾಳಿ ಹೊಡೆತಕ್ಕೆ ಜೀವನದ ದೋಣಿ ತಲೆ ಕೆಳಗಾಗಿ ನಿಂತು ಬಿಡುತ್ತದೆ. ಇನ್ನೊಮ್ಮೆ ಎಲ್ಲಿಂದಲೋ ತಂಪಾದ ತಂಗಾಳಿ ತಲೆ ನೇವರಿಸಿ ಮೈ ಮನಸ್ಸಿಗೆ…
“ವೀಣಾಂತರಂಗ”- ಶ್ರೀಮತಿ, ವೀಣಾ ಹೇಮಂತಗೌಡ ಪಾಟೀಲ್, ಮುಂಡರಗಿ – ಗದಗ ಸ್ವಾತಂತ್ರ್ಯೋತ್ಸವದ ಹೊಸ್ತಿಲಿನಲ್ಲಿ.. ಒಂದು ವಿಶ್ಲೇಷಣೆ “ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಎಂಬುದು ಖ್ಯಾತ ಕವಿ ಸಿದ್ಧಲಿಂಗಯ್ಯನವರ ಕವನದ ಸಾಲು ಖಂಡಿತವಾಗಿಯೂ ವಾಸ್ತವವನ್ನು ಪ್ರತಿನಿಧಿಸುವ ಕವನ. ಸ್ವಾತಂತ್ರ್ಯ ಹೋರಾಟದ ಅಮೃತ ಮಹೋತ್ಸವ ಪೂರೈಸಿರುವ ನಮಗೆಲ್ಲಾ ಈ ಸ್ವಾತಂತ್ರ್ಯದ ಹಿಂದಿರುವ ಹೋರಾಟ, ತ್ಯಾಗ, ಬಲಿದಾನಗಳ ಅರಿವು ಖಂಡಿತ ಬೇಕು. ಶತಮಾನಗಳ ಹಿಂದೆ ವ್ಯಾಪಾರದ ನೆವದಿಂದ ಭಾರತವನ್ನು ಹೊಕ್ಕು, ಭಾರತವನ್ನೇ ಆಳಿದ ಡಚ್ಚರು, ಪೋರ್ಚುಗೀಸರು,ಫ್ರೆಂಚರು ಮತ್ತು ಬ್ರಿಟಿಷರು ನಮ್ಮನ್ನು ಕೇವಲ ಆಳಲಿಲ್ಲ, ನಮ್ಮ ಸಂಸ್ಕೃತಿಯ ಆಳದಲ್ಲಿ ಬೇರುಬಿಟ್ಟ ಹಲವಾರು ಸಂಗತಿಗಳ ಮೇಲೆ ರಾಜ್ಯಭಾರ ಮಾಡಿದರು.’ವಸುದೈವ ಕುಟುಂಬಕಂ’ ವ್ಯಾಖ್ಯಾನದ ಮೂಲಕ ಇಡೀ ಜಗತ್ತನ್ನು ಒಂದೇ ಕುಟುಂಬ ಎಂದು ಕರೆದ ಭಾರತ ದೇಶವನ್ನು ಒಡೆದು ಆಳಿದರು. ಹಲವಾರು ಜಾತಿ, ಮತ, ಧರ್ಮಗಳ ತವರೂರಾದ ಭಾರತ ದೇಶದ ಭಾವೈಕ್ಯತೆಯ ಮೂಲ ಬೇರನ್ನು ಅಲುಗಾಡಿಸಿದರು. ಆದರೆ ಭಾರತ ದೇಶ ಅಜೇಯ, ಅಗಮ್ಯ. ನೂರಾರು ಬಾರಿ ಮುರಿಯಲ್ಪಟ್ಟರೂ, ಹಲವಾರು ಬಾರಿ ತುಳಿಯಲ್ಪಟ್ಟರೂ…
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರು: ಹಿಂದೂಸ್ತಾನ್ ಮೆಷಿನ್ ಟೂಲ್ಸ್‌ನಿಂದ 281 ಎಕರೆ ಭೂಮಿ ವಶಪಡಿಸಿಕೊಳ್ಳಲು ರಾಜ್ಯ ಅರಣ್ಯ ಇಲಾಖೆಗೆ ‘ಸ್ಪಷ್ಟ ಸೂಚನೆ’ ನೀಡಿರುವ ಆಡಳಿತಾತ್ಮಕ ಟಿಪ್ಪಣಿಗೆ ಸಂಬಂಧಿಸಿದಂತೆ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಬೆಂಗಳೂರಿನ ಎಚ್ಎಂಟಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, HMT ಭೂಮಿ ವಾಪಸ್ ನೀಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಒಂದು ಕಾಲದಲ್ಲಿ ಶೇ. 90 ರಷ್ಟು ಮಾರುಕಟ್ಟೆ ಷೇರು ಹೊಂದಿದ್ದ ಮತ್ತು ಗಡಿಯಾರ ಮಾರುಕಟ್ಟೆಯನ್ನು ಆಳುತ್ತಿದ್ದ ಎಚ್ ಎಂಟಿ ಈಗ ಮುಚ್ಚುವ ಹಂತಕ್ಕೆ ಬಂದಿದೆ. ಬೆಂಗಳೂರಿನ ಹೆಮ್ಮೆಯಾಗಿರುವ ಎಚ್ ಎಂಟಿಯನ್ನು ಪುನರುಜ್ಜೀವನಗೊಳಿಸಲು ಅರಣ್ಯ ಸಚಿವರು ತಮ್ಮ ಸಣ್ಣತನವನ್ನು ಬಿಟ್ಟು ಸಹಕಾರ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.ಒಂದು ಕಾಲದಲ್ಲಿ ಶೇಕಡ 90ರಷ್ಟು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದ್ದ ಈ…
ತಾಳಿಕೋಟೆಯಲ್ಲಿ ಶರಣ ಸಾಹಿತ್ಯ ಪರಿಷತ್ ದಿಂದ ಉಪನ್ಯಾಸ ಕಾರ್ಯಕ್ರಮ ತಾಳಿಕೋಟಿ: ಬಸವಾದಿ ಶರಣರು ಕೊಟ್ಟುಹೋದ ವಚನಗಳು ಬದುಕಿನ ನೈಜ ಉದ್ದೇಶವನ್ನು ತಿಳಿಸುತ್ತವೆ. ವಚನಗಳು ಸರ್ವಕಾಲಿಕ ಸತ್ಯಗಳಾಗಿದ್ದು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ಶಿಕ್ಷಕ ರುದ್ರೇಶ ಕಿತ್ತೂರ ಹೇಳಿದರು.ಸೋಮವಾರ ಸಂಜೆ ಪಟ್ಟಣದ ಶ್ರೀ ಕಾಳಿಕಾದೇವಿ ಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕ ಯುವ ಘಟಕ ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶರಣರ ಅನುಭಾವದಿಂದ ರಚನೆಯಾದ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. 12ನೇ ಶತಮಾನದಲ್ಲಿ ಕಲ್ಯಾಣ ಅನುಭವ ಮಂಟಪದಲ್ಲಿದ್ದ ಬಸವಾದಿ ಶರಣರು ಸಮಾಜದಲ್ಲಿರುವ ಅಸ್ಪೃಶ್ಯತೆ ಅಸಮಾನತೆ ಹಾಗೂ ಆಧ್ಯಾತ್ಮಿಕ ಶೋಷಣೆಯನ್ನು ಹೋಗಲಾಡಿಸಲು ಜೀವದ ಹಂಗು ತ್ವರೆದು ಶ್ರಮಿಸಿದರು. ಅವರು ಸಮಾಜದಲ್ಲಿರುವ ಮೌಢ್ಯಗಳನ್ನು ವಿರೋಧಿಸಿದರು. ಶರಣರ ವಚನಗಳು ವೈಚಾರಿಕತೆಯಿಂದ ಕೂಡಿದ್ದು ಅದರಲ್ಲಿ ಹೃದಯಕ್ಕೆ ತಟ್ಟುವ ವಿಷಯಗಳಿವೆ ಅವುಗಳನ್ನು ಅರ್ಥೈಸಿಕೊಳ್ಳುವ ಅಗತ್ಯ ಇದೆ ಎಂದ ಅವರು ಬಸವಾದಿ ಶರಣರು…
ವಿಜಯಪುರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಆಸಕ್ತ ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ, ಸಿಖ್ಕಲಿಗಾರ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕಾಗಿ ಪ್ರೋತ್ಸಾಹ ಯೋಜನೆಯಡಿ ಸಾಲ-ಸೌಲಭ್ಯ ಪಡೆಯಲಿಚ್ಚಿಸುವವರು ನಿಗಮದ ವೆಬ್‌ಸೈಟ್ https://kmdconline.karnataka.gov.in/ನಲ್ಲಿ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ದಿನಾಂಕ: ೩೧-೦೮-೨೦೨೪ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿರುವ ಮೌಲಾನಾ ಆಝಾದ ಭವನದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ: ೦೮೩೫೨-೨೭೯೩೪೪, ಮೊ:೮೨೭೭೯೪೪೨೦೯ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರದಲ್ಲಿ ರಾಜ್ಯಸಭೆ ಸಂಸದೆ ಸುಧಾಮೂರ್ತಿ ಸ್ಪಷ್ಟನೆ ವಿಜಯಪುರ: ಜಿಲ್ಲೆಯ ಗೋಲಗುಂಬಜ್, ಬಾರಾ ಕಮಾನ್, ಗಗನ ಮಹಲ, ಇಬ್ರಾಹಿಮ್ ರೋಜಾ, ಬಸವನ ಬಾಗೇವಾಡಿ ಹಾಗೂ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಸ್ವಚ್ಚತೆಯನ್ನು ಕಲ್ಪಿಸಿ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ಮಾಹಿತಿ ಕೇಂದ್ರ, ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಬಳಸಲಾಗುವುದು ಎಂದು ರಾಜ್ಯಸಭೆ ಸಂಸದರಾದ ಶ್ರೀಮತಿ ಸುಧಾಮೂರ್ತಿ ಹೇಳಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜಯಪುರ ನಗರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ವಿಜಯಪುರ ಜಿಲ್ಲೆಯ ಜೊತೆ ನನಗೆ ಭಾವನಾತ್ಮಕ ಸಂಬಂಧ ಇರುವುದಂದ ನೋಡಲ್ ಜಿಲ್ಲೆಯನ್ನಾಗಿ ವಿಜಯಪುರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಬಳಸಿಕೊಂಡು ಸಮಗ್ರ ಅಭಿವೃದ್ದಿಗೆ ಕ್ರಮ ವಹಿಸಲು ಜಿಲ್ಲೆಯ ಎಲ್ಲ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿ ಜನರ ಜೀವನ ಮಟ್ಟ ಸುಧಾರಣೆಗೆ ಶ್ರಮಿಸಬೇಕು ಎಂದು…
ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಇದೇ ಆಗಸ್ಟ್ ೧೫ ರಂದು ನಗರದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೯ ಗಂಟೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ನಗರ ಶಾಸಕರಾದ ಬಸನಗೌಡ ಆರ್.ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಶಾಸಕರಾದ ಪ್ರಕಾಶ ಬಿ.ಹುಕ್ಕೇರಿ, ಕರ್ನಾಟಕ ಸೋಪ್ ಮತ್ತು ಡಿಟರ್ಜೆಂಟ್ ನಿಯಮಿತ ಅಧ್ಯಕ್ಷರಾದ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ, ಸಂಸದರಾದ ರಮೇಶ ಜಿಗಜಿಣಗಿ, ಡಾ.ಸುಧಾ ಮೂರ್ತಿ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ, ಹಣಮಂತ ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಪಿ.ಎಚ್.ಪೂಜಾರ, ವಿಠ್ಠಲ ಧೋಂಡಿಬಾ ಕಟಕಧೋಂಡ, ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ, ಅಶೋಕ ಮಲ್ಲಪ್ಪ ಮನಗೂಳಿ, ಕರ್ನಾಟಕ…
ವಿಜಯಪುರ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹರ್-ಘರ್ ತಿರಂಗಾ ಅಭಿಯಾನದಡಿ ಐತಿಹಾಸಿಕ ಗೋಲಗುಮ್ಮಟದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮ್ಯಾರಥಾನ್, ಸೈಕಲ್ ಜಾಥಾ ಹಾಗೂ ಗಾಂಧೀ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಯಿತು.ಈ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಜಾಥಾ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ.ಸಿ.ಕೆ. ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ಕ್ರಿಡಾ ಇಲಾಖೆಯ ಎಸ್. ಬಿ. ಕಡಕಲ್, ತರಬೇತುದಾರರಾದ ರಾಜು ಚವ್ವಾಣ, ಅಲ್ಕಾ ಫಡತಾರೆ, ರಮೇಶ ರಾಥೋಡ, ಯಲ್ಲಪ್ಪ ಜುಂಪಲೆ, ಸಾಲುದ್ದಿನ ಮಳಗಿ, ರಫಿಕ್ ನಧಾಫ್, ಶಂಕರ ಸಣ್ಣಪ್ಪ, ಬಸವರಾಜ ಬೆಳ್ಳುಬ್ಬಿ, ಉಪಸ್ಥಿತರಿದ್ದರು.
ವಿಜಯಪುರ: ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ ಯಾವುದೇ ಬಾಕಿ ಕಾಮಗಾರಿಗಳನ್ನು ಉಳಿಸಿಕೊಳ್ಳದೇ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವರಾದ ರಹೀಂ ಖಾನ್ ಅವರು ಹೇಳಿದರು.ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಯಾವುದೇ ಕಾಮಗಾರಿಗಳನ್ನು ಬಾಕಿ ಉಳಿಸಿಕೊಳ್ಳದೇ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಎಸ್‌ಎಫ್‌ಸಿ ಯೋಜನೆ ಸೇರಿದಂತೆ ಬಾಕಿ ಇರುವ ವಿವಿಧ ಯೋಜನೆಗಳಡಿ ಕಾಮಗಾರಿಗಳನ್ನು ಟೆಂಡರ್ ಕರೆದು ಪೂರ್ಣಗೊಳಿಸಬೇಕು. ಕಾಮಗಾರಿ ಅನುಷ್ಠಾನದಲ್ಲಿ ಯಾವುದಾದರೂ ಸಣ್ಣ ಪುಟ್ಟ ತೊಂದರೆಗಳಿದಲ್ಲಿ ಆದ್ಯತೆ ಮೇಲೆ ನಿಮ್ಮ ಹಂತದಲ್ಲಿ ಪೂರ್ಣಗೊಳಿಸಬೇಕು. ಅಧಿಕಾರಿಗಳ ಹಂತದಲ್ಲಿ ಸಾಧ್ಯವಾಗದ ಯಾವುದಾದರೂ ತೊಂದರೆಗಳಿದ್ದಲ್ಲಿ ಮೇಲಾಧಿಕಾರಿಗಳ, ಉನ್ನತಾಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಶೀಘ್ರ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.ಜಿಲ್ಲೆಯಲ್ಲಿ ಕಲುಷಿತ ನೀರು ಪೂರೈಕೆಯಾಗದಂತೆ…
-ಸುಮನ್ ಪಾಟೀಲ್,ಕೆಸಿಪಿ ಕಾಲೇಜ್ ಜರ್ನಲಿಸಂ ವಿದ್ಯಾರ್ಥಿನಿ, ವಿಜಯಪುರ ಕೇಸರಿ ಬಿಳಿ ಹಸಿರು ಬಾವುಟ , ಹೂವುಗಳು ಬಲೂನ್ಗಳು, ಸಾಲ ಕಾಲೇಜು ಬ್ಯಾಂಕ್ ಕಚೇರಿಗಳ ಮುಂದೆ ನಮ್ಮ ಭಾರತದ ರಾಷ್ಟ್ರೀಯ ಬಾವುಟದ ಬಣ್ಣಗಳ ರಂಗೋಲಿ, ಹ್ಯಾಪಿ ಇಂಡಿಪೆಂಡೆನ್ಸ್ ಡೇ ಹೇಳುವ ಮಕ್ಕಳ ಭಾಷಣಗಳು , ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಎಂಬ ದೇಶಭಕ್ತಿ ಗೀತೆ, ದೇಶಭಕ್ತಿ ಗೀತೆಗಳ ಮೇಲೆ ನೃತ್ಯಗಳು, ಪಿರಮಿಡ್ ಗಳು ಹಲವಾರು ಕಾರ್ಯ ಕ್ರಮಗಳು ಈ ದಿನ ಅಗಸ್ಟ್ 15 ಅಂದರೆ ನಮ್ಮ ಭಾರತ ಸ್ವಾತಂತ್ರ್ಯ ದಿನವನ್ನು ಇನ್ನಷ್ಟು ಮೆರಗುಗೊಳಿಸುತ್ತವೆ.ಇಂದಿಗೆ ಅಂದರೆ 78 ವರ್ಷಗಳ ಹಿಂದೆ ನಮ್ಮ ಭಾರತ ಬ್ರಿಟಿಷ್ ಸಾಮ್ರಾಜ್ಯ ಅಡಿಯಲ್ಲಿ ವರ್ಷಗಳ ಗುಲಾಮಗಿರಿ ಬಂಧನದ ನಂತರ, 1947 ಅಗಸ್ಟ್ 15 ರಂದು ಸ್ವಾತಂತ್ರ ಪಡೆಯಿತು. ಇದು ಸುಲಭದ ಕೆಲಸವಾಗಿರಲಿಲ್ಲ. ಮಹಾತ್ಮ ಗಾಂಧೀಜಿ ಜವಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಲಾಲಾ ಲಜಪತ ರಾಯ್, ರಾಣಿ ಲಕ್ಷ್ಮೀಬಾಯಿ, ಬಾಲ್ ಗಂಗಾಧರ್ ತಿಲಕ್…
