Author: editor.udayarashmi@gmail.com

ವಿಜಯಪುರ: ದೂಳಿನಿಂದ ಮುಕ್ತವಾದ ನಗರ ವಿಜಯಪುರ ನಗರ ಎಂಬುವುದು ಹೆಮ್ಮೆಯ ವಿಷಯ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದ ವಾರ್ಡ ನಂ.೩೫ ರ ವ್ಯಾಪ್ತಿಯ ಮಹಾತ್ಮ ಗಾಂಧಿ ಕಾಲೊನಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮಂಜೂರಾದ ರೂ.೪೮೨.೯೦ ಲಕ್ಷ ಮೊತ್ತದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನರ ಸಹಕಾರದಿಂದ ವಿಜಯಪುರ ನಗರ ನಿರೀಕ್ಷೆ ಮೀರಿ ಅಭಿವೃದ್ಧಿ ಕಂಡಿದ್ದು, ದೂಳಿನಿಂದ ಮುಕ್ತವಾಗಿ, ದೇಶದಲ್ಲಿ ಒಳ್ಳೆಯ ಗಾಳಿ ಬಿಸುವ ನಗರಗಳ ಪಟ್ಟಿಯಲ್ಲಿ ೬ನೇ ಸ್ಥಾನದಲ್ಲಿರುವುದೇ ಸಾಕ್ಷಿ ಎಂದರು.ಬಡ ಮಕ್ಕಳ ಅನುಕೂಲಕ್ಕಾಗಿ ಸುಮಾರು ಸುಮಾರು ರೂ. ೫ ಕೋಟಿ ಖರ್ಚು ಮಾಡಿ, ಅತ್ಯುತ್ತಮವಾದ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಇದು ನಿಮ್ಮ ಆಸ್ತಿಯಾಗಿದ್ದು, ಹಾಳು ಮಾಡದೆ ನಿಮ್ಮ ಮನೆಯಷ್ಟೇ ಸರಿಯಾಗಿ ಸ್ವಚ್ಛತೆಯೊಂದಿಗೆ ವಾಸ ಮಾಡಬೇಕು. ನೀವು ಹೋದ ಮೇಲೆ ಬೇರೆ ಬಡ ಮಕ್ಕಳಿಗೂ…

Read More

ವಿಜಯಪುರ: ಸಂತ ಮಹಾಂತರ ಬದುಕು ಉರಿಯುವ ಕರ್ಪುರದಂತಾಗಬೇಕು. ಮಠಾಧಿಪತಿಗಳಿಗೆ ಮನೋನಿಗ್ರಹ ಮೂಲವಾಗಬೇಕು. ಜಪ ತಪ ಮೌನ ಅನುಷ್ಠಾನಗಳು ಮನುಷ್ಯನನ್ನು ದೈವತ್ವಕ್ಕೇರಿಸುತ್ತವೆ. ಆಗ ಅಧ್ಯಾತ್ಮದ ಹಾದಿ ಸುಗಮವಾಗುತ್ತದೆ ಎಂದು ಗುಣದಾಳ ಹಿರೇಮಠದ ಪೂಜ್ಯ ಡಾ ವಿವೇಕಾನಂದ ದೇವರು ಅಭಿಪ್ರಾಯಪಟ್ಟರು.ಬಬಲೇಶ್ವರ ತಾಲೂಕಿನ ಹರಳಯ್ಯನಗುಂಡ ಕ್ಷೇತ್ರದಲ್ಲಿ ಚಿಕ್ಕಗಲಗಲಿಯ ಸಾಯಿಬಾಬಾ ಆಶ್ರಮದ ಪೀಠಾಧಿಪತಿ ಶರಣ ಚಮನಸಾಬ ಬಾಬಾ ಕೈಕೊಂಡ ಮೌನ ಅನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಮಂತ್ರಘೋಷ ನೆರವೇರಿಸಿ ಮಾತನಾಡುತ್ತಾ , ಅನುಷ್ಠಾನಕ್ಕೆ ದಿವ್ಯ ಶಕ್ತಿ ಇದೆ. ಕಠಿಣ ಪರಿಶ್ರಮಕ್ಕೆ ಕರ್ತೃತ್ವ ಶಕ್ತಿ ಪ್ರಾಪ್ತಿಯಾಗುತ್ತದೆ. ಈ ಶಕ್ತಿ ಸಮಾಜಕ್ಕೆ ವಿನಿಯೋಗವಾಗಲಿ ಎಂದರು.ಸಾನಿಧ್ಯ ವಹಿಸಿ ಮಾತನಾಡಿದ ಚಿಕ್ಕಲಕಿ ಭಗೀರಥ ಪೀಠದ ಪೂಜ್ಯ ಶಿವಾನಂದ ಸ್ವಾಮೀಜಿ, ಪ್ರಪಂಚದಲ್ಲಿದ್ದು ಪಾರಮಾರ್ಥ ಸಾಧಿಸುವುದು ಸಾಮಾನ್ಯ ಕೆಲಸವಲ್ಲ. ಸತ್ಯ ಶುದ್ಧ ಬದುಕು ಸಾಧಿಸುತ್ತ ಅಧ್ಯಾತ್ಮವಾದಿಯಾಗಿ ಭಾವೈಕ್ಯದ ಸಂತನೆನಿಸಿಕೊಂಡಿರುವ ಚಮನಸಾಬ ಬಾಬಾರು, ನೊಂದು ಬೆಂದವರ ಕಣ್ಣೀರೊರೆಸುವ ಕರುಣಾಮಯಿಯಾಗಿದ್ದಾರೆ. ಅಧ್ಯಾತ್ಮವಾದಿಗಳಿಗೆ ಆದರ್ಶರಾಗಿದ್ದಾರೆ. ಈ ಅನುಷ್ಠಾನದಿಂದ ಸಮಾಜಕ್ಕೆ ಒಳಿತಾಗಲಿ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿರಸಂಗಿ ಲಿಂಗರಾಜ ದೇಸಾಯಿ ಟ್ರಸ್ಟಿ ಜಿ…

Read More

ಬೆಂಗಳೂರು: ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ: ೦೧.೦೧.೨೦೨೫ ರಂತೆ ಭಾವಚಿತ್ರ ಸಹಿತ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೫ ರ ವೇಳಾಪಟ್ಟಿಯನ್ನು ಪ್ರಕಟಿಸಿದೆ.ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಸಮಯದಲ್ಲಿ ರಾಜ್ಯದ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ ೧೮ ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ವಿಶೇಷ ಅಭಿಯಾನ ದಿನಾಂಕಗಳನ್ನು ನಿಗಧಿಪಡಿಸಲಾಗಿದೆ. ಸಾರ್ವಜನಿಕರು ವಿಶೇಷ ಅಭಿಯಾನಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹಾಗೂ ಅವಶ್ಯವಿರುವ ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದುಹಾಕುವಿಕೆಗಳಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿಗಳು ಮತದಾರರಲ್ಲಿ ಮನವಿ ಮಾಡಿದ್ದಾರೆ.ಸಾರ್ವಜನಿಕರು ಅರ್ಜಿ ನಮೂನೆ ೬ ಮತ್ತು೮ ಗಳನ್ನು ಸಲ್ಲಿಸುವಾಗ ಸ್ವಯಂಪ್ರೇರಿತವಾಗಿ ಆಧಾರ್ ಸಂಖ್ಯೆಗಳನ್ನು ಒದಗಿಸಬಹುದಾಗಿದೆ.ಎಲ್ಲಾ ರೀತಿಯ ಚುಣಾವಣಾ ಸಂಬಂಧಿತ ಸೇವೆಗಳಿಗಾಗಿ…

Read More

ಬೆಂಗಳೂರು: ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ: ೦೧.೦೧.೨೦೨೫ ರಂತೆ ಭಾವಚಿತ್ರ ಸಹಿತ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೫ ರ ವೇಳಾಪಟ್ಟಿಯನ್ನು ಪ್ರಕಟಿಸಿದೆ.ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಸಮಯದಲ್ಲಿ ರಾಜ್ಯದ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ ೧೮ ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ವಿಶೇಷ ಅಭಿಯಾನ ದಿನಾಂಕಗಳನ್ನು ನಿಗಧಿಪಡಿಸಲಾಗಿದೆ. ಸಾರ್ವಜನಿಕರು ವಿಶೇಷ ಅಭಿಯಾನಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹಾಗೂ ಅವಶ್ಯವಿರುವ ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದುಹಾಕುವಿಕೆಗಳಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿಗಳು ಮತದಾರರಲ್ಲಿ ಮನವಿ ಮಾಡಿದ್ದಾರೆ.ಸಾರ್ವಜನಿಕರು ಅರ್ಜಿ ನಮೂನೆ ೬ ಮತ್ತು೮ ಗಳನ್ನು ಸಲ್ಲಿಸುವಾಗ ಸ್ವಯಂಪ್ರೇರಿತವಾಗಿ ಆಧಾರ್ ಸಂಖ್ಯೆಗಳನ್ನು ಒದಗಿಸಬಹುದಾಗಿದೆ.ಎಲ್ಲಾ ರೀತಿಯ ಚುಣಾವಣಾ ಸಂಬಂಧಿತ ಸೇವೆಗಳಿಗಾಗಿ…

Read More

ವಿಜಯಪುರ: ಕರ್ನಾಟಕದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಆ.೨೨ರಂದು ಬೆಳಿಗ್ಗೆ ೧೦ ರಿಂದ ೧-೩೦ರವರೆಗೆ ಹಾಗೂ ಮಧ್ಯಾಹ್ನ ೨-೩೦ರಿಂದ ೫ ಗಂಟೆಯವರೆಗೆ ನಗರದ ಸ್ಟೇಶನ್ ರಸ್ತೆಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ವಿಚಾರಣೆ ನಡೆಸಲಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಸಮಸ್ಯೆ-ಅಹವಾಲುಗಳಿಗೆ ಪರಿಹಾರ ಪಡೆದುಕೊಳ್ಳುವಂತೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಕೋರಿದ್ದಾರೆ.ಸರ್ಕಾರಿ ಅಧಿಕಾರಿ-ನೌಕರರು ಕಾನೂನು ರಿತ್ಯ ಕಾರ್ಯ ಮಾಡಲು ವಿಳಂಬವಾಗುತ್ತಿದ್ದಲ್ಲಿ, ಅಥವಾ ಅಧಿಕಾರಿ-ನೌಕರರು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ನಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದಲ್ಲಿ ತೊಂದರೆಗೊಳಗಾದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ದಾಖಲೆ, ಸಾಕ್ಷಾಧಾರಗಳೊಂದಿಗೆ ಸಲ್ಲಿಸಿ ಬಗೆಹರಿಸಿಕೊಳ್ಳಬಹುದಾಗಿದೆ.ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ-ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರಿತ್ಯ ಆ.೨೩ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧-೩೦ರವರೆಗೆ ಮತ್ತು ಮಧ್ಯಾಹ್ನ ೨-೩೦ರಿಂದ ೫ ಗಂಟೆಯವರೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಚಾರಣೆ ನಡೆಸಲಿದ್ದಾರೆ.…

Read More

ವಿಜಯಪುರ: ಮೀನುಗಾರಿಕೆ ಇಲಾಖೆಯ ವತಿಯಿಂದ ೨೦೨೪-೨೫ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಜಲಾಶಯ, ನದಿಭಾಗ, ಕೆರೆಗಳ ವ್ಯಾಪ್ತಿಯ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಖರೀದಿಗೆ ಸಹಾಯ ಧನ ಹಾಗೂ ಭಾವಿ- ಹೊಂಡಗಳಿಗೆ ಮೀನುಮರಿ ಸರಬರಾಜು, ಮೀನು ಸಲಕರಣೆ ಕಿಟ್ ವಿತರಣೆ, ಮೀನು ಕೃಷಿಕೊಳ ನಿರ್ಮಾಣಕ್ಕೆ ಮತ್ತು ಹೂಡಿಕೆ ವೆಚ್ಚಗಳಿಗೆ ಸಹಾಯ ಧನ,ದ್ವಿಚಕ್ರ ವಾಹನ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಮತ್ತು ಶಾಖ ನಿರೋಧಕ ಪೆಟ್ಟಿಗೆ ಖರೀದಿಗೆ ಸಹಾಯ ಧನ ಯೋಜನೆಗಳಿಗಾಗಿ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.ವೃತ್ತಿಪರ ಮೀನುಗಾರರು, ಮೀನು ಕೃಷಿಕರು ಹಾಗೂ ಮೀನುಗಾರರ ಸಹಕಾರ ಸಂಘದ ಸದಸ್ಯರು ನಿಗದಿತ ನಮೂನೆಯಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಆಯಾ ತಾಲ್ಲೂಕಿನ ಮೀನುಗಾರಿಕೆ ಇಲಾಖೆಯ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೧೦ ಕೊನೆಯ ದಿನವಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು (ಮೊ:೯೯೮೬೧೩೨೭೧೭), ವಿಜಯಪುರ,ಬಬಲೇಶ್ವರ, ತಿಕೋಟಾ,ದೇವರ ಹಿಪ್ಪರಗಿ, ಸಿಂದಗಿ, ಆಲಮೇಲ, ಇಂಡಿ…

Read More

ವಿಜಯಪುರ: ೨೦೨೪-೨೫ನೇ ಸಾಲಿಗಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ, ಪ್ರವರ್ಗ-೧ರ ವಿದ್ಯಾರ್ಥಿಗಳಿಂದ ಅರ್ಹ ಪಿಯುಸಿ ಮತ್ತು ಸಮಾನಾಂತರ, ಸಾಮಾನ್ಯ ಪದವಿ ಮತ್ತು ಸಂಯೋಜಿತ ಉಭಯ ಪದವಿ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ- ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ವಿದ್ಯಾರ್ಥಿಗಳುhttps://ssp.postmatric.karnataka.gov.in ನಲ್ಲಿ ಸೆಪ್ಟೆಂಬರ್ ೧೫ರೊಳಗಾಗಿ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೮೦೫೦೭೭೦೦೦೫ ಅಥವಾ ವೆಬ್‌ಸೈಟ್ https:bcwd.karnataka.gov.inವೀಕ್ಷಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಆಗಸ್ಟ್-೨೦೨೪ರ ಮಾಹೆಯಲ್ಲಿ ಜಿಲ್ಲೆಯ ಆಸಕ್ತ ರೈತರಿಗೆ ‘ಕುರಿ ಮತ್ತು ಆಡು ಸಾಕಾಣಿಕೆ ಹಾಗೂ ಹೈನುಗಾರಿಕೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿದೆ.ಆಸಕ್ತ ರೈತರು ಆಗಸ್ಟ್ ೨೧ರೊಳಗಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿಗಳಾದ ಶ್ರೀಮತಿ ಗೀತಾ ಭಜಂತ್ರಿ (ಮೊ:೮೨೭೭೯೩೦೬೧೯) ಅವರನ್ನು ಸಂಪರ್ಕಿಸುವಂತೆ ವಿಜಯಪುರ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಝಳಕಿ ೧೧೦ ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೆಚ್ಚುವರಿಯಾಗಿ ೩೩ಕೆವ್ಹಿ ಬಸ್ ನಿರ್ಮಾಣ ಮಾಡುವ ಕಾಮಗಾರಿ ಕೈಗೊಂಡಿರುವುದರಿಂದ ದಿನಾಂಕ : ೧೮-೦೮-೨೦೨೪ ರಂದು ಮಧ್ಯಾಹ್ನ ೧೨ ರಿಂದ ಸಂಜೆ ೬ ಗಂಟೆಯವರೆಗೆ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ ಮಾರ್ಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಝಳಕಿ ೧೧೦ ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ೩೩ ಕೆವ್ಹಿ ಹೊರ್ತಿ, ನಿವರಗಿ, ಧೂಳಖೇಡ, ಹಲಸಂಗಿ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲ ೧೧ ಕೆವ್ಹಿ ಮಾರ್ಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು, ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ವಿಜಯಪುರ: ೨೦೨೪-೨೫ನೇ ಸಾಲಿಗಾಗಿ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಸಾಮಾನ್ಯ ಪದವಿ ಮಟ್ಟದ ಕೋರ್ಸಿನ ವಿದ್ಯಾರ್ಥಿಗಳಿಂದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿಲಾಗಿದೆ. ದಿನಾಂಕ: ೧೩-೦೮-೨೦೨೪ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ನಿಲಯ ತಂತ್ರಾಂಶ https://shp.karnataka.gov.inದಿನಾಂಕ: ೧೨-೦೯-೨೦೨೪ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿರುವ ಮೌಲಾನಾ ಆಝಾದ ಭವನದ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ: ೦೮೩೫೨-೨೯೫೫೨೩, ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Read More