ಮೋರಟಗಿ: ತಾಲೂಕಿನ ಮೋರಟಗಿ ಗ್ರಾಮದ ಆರಾದ್ಯ ದೇವರುಗಳಾದ ಶ್ರೀ ಸಿದ್ದರಾಮೇಶ್ವರ ಹಾಗೂ ಶ್ರೀ ಗುರು ರೇವಣಾಸಿದ್ದೇಶ್ವರ ಜಾತ್ರಾ ನಿಮಿತ್ಯವಾಗಿ ನ.೧೮ರಂದು ರಾತ್ರಿ ೮ಘಂಟೆಗೆ ಉಭಯ ಮಹಾತ್ಮರ ಮಹಾಪುರಾಣ ಕಾರ್ಯಕ್ರಮ ಪ್ರಾರಂಭವಾಗಲಿದೆ.
ಜೇರಟಗಿ ವಿರಕ್ತಮಠದ ಶ್ರೀ ಮಹಾಂತ ಸ್ವಾಮಿಗಳು ಸಾನಿದ್ಯ ವಹಿಸಲಿದ್ದಾರೆ. ಹೂವಿನಹಳ್ಳಿಯ ಗುರುಲಿಂಗಯ್ಯ ಸ್ವಾಮಿಗಳು ಪುರಾಣ ಪ್ರವಚನ ನೀಡಲಿದ್ದಾರೆ. ಸಿದ್ರಾಮಯ್ಯ ಮಠಪತಿ ಬಸವಣ್ಣನ ಸ್ಥಾನ ವಹಿಸಲಿದ್ದು, ಗಾಯಕರಾಗಿ ಗುರುನಾಥ ವಿಶ್ವಕರ್ಮ, ತಬಲಾ ವಾದಕರಾಗಿ ರವಿ ವಿಭೂತಿ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ.
ಕಾರಣ ಮೋರಟಗಿ ಸೇರಿದಂತೆ ಗ್ರಾಮದ ಸುತ್ತಮುತ್ತಲಿನ ಶ್ರೀ ಸಿದ್ದರಾಮೇಶ್ವರ ಹಾಗೂ ಗುರು ರೇವಣಾಸಿದ್ದೇಶ್ವರ ಸದ್ಭಕ್ತಾದಿಗಳು ಪುರಾಣ ಪ್ರವಚನವನ್ನು ಕೇಳಿ ಪಾವನರಾಗಬೇಕು ಎಂದು ಶ್ರೀ ಸಿದ್ದರಾಮೇಶ್ವ ಸಮೀತಿಯ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
