ವಿಜಯಪುರ ನ.೧೭ (ಕರ್ನಾಟಕ ವಾರ್ತೆ): ಕ್ರೀಯಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನೆ, ಕಲೆ, ಸಾಹಿತ್ಯ ಸಂಗೀತ, ಜಾನಪದ, ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳಿಗೆ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಪ್ರೋತ್ಸಾಹ ಧನ ನೀಡಲು sevasindhu.karnataka.gov.in ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಸಂಘ-ಸಂಸ್ಥೆಗಳು ಸೇವಾ ಸಿಂಧು ಪೋರ್ಟ್ಲ್ ಮೂಲಕ ದಿನಾಂಕ : ೧೪-೧೧-೨೦೨೩ ರಿಂದ ೧೩-೧೨-೨೦೨೩ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಾರ್ಗಸೂಚಿಯನ್ನು ಸೇವಾ ಸಿಂಧು ಪೋರ್ಟಲ್ ಹಾಗೂ ಇಲಾಖೆಯ ವೆಬ್‌ಸೈಟ್ www.kannadasiri.karnataka.gov.in ನಲ್ಲಿ ಅಳವಡಿಸಲಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ:೦೮೦-೨೨೨೭೯೯೫೪, ಮೊ: ೯೯೮೬೮೩೭೦೩೭, ೮೭೯೨೬೬೨೮೧೪, ೮೭೯೨೬೬೨೮೧೬, ಜಿಲ್ಲಾ ಯೋಜನಾ ವ್ಯವಸ್ಥಾಪಕರು ಸೇವಾಸಿಂಧು ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಸಂಘ-ಸಂಸ್ಥೆಗಳಿಗೆ ಪ್ರೊತ್ಸಾಹ ಧನ : ಆನ್‌ಲೈನ್ ಅರ್ಜಿ ಆಹ್ವಾನ
Related Posts
Add A Comment
