Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕಠಿಣ ಪರಿಶ್ರಮದ ಮುಂದೆ ಸೋಲುಗಳು ಗೌಣವಾಗಲಿ

ನಮ್ಮ ಸಂಸ್ಕೃತಿಯನ್ನು ನಾವೇ ಏಕೆ ಮರೆತಿದ್ದೇವೆ?

ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 29,2026

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕಠಿಣ ಪರಿಶ್ರಮದ ಮುಂದೆ ಸೋಲುಗಳು ಗೌಣವಾಗಲಿ
ವಿಶೇಷ ಲೇಖನ

ಕಠಿಣ ಪರಿಶ್ರಮದ ಮುಂದೆ ಸೋಲುಗಳು ಗೌಣವಾಗಲಿ

By No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲೆಲ್ಲ ಮಹಾನ್ ವ್ಯಕ್ತಿಗಳ ಸಾಧನೆಯ ಬದುಕಿನ ಕಥೆಗಳು ನಮ್ಮನ್ನು ಆಕರ್ಷಿಸುತ್ತವೆ. ಸ್ವಾರಸ್ಯ ಏನೆಂದರೆ, ಒಂದು ಗೆಲುವಿನ ಮೆಟ್ಟಿಲನ್ನು ಹತ್ತಿ ನಿಲ್ಲುವ ಮುನ್ನ ಅದೇ ಸಾಧಕ ಹತ್ತಕ್ಕೂ ಹೆಚ್ಚು ಬಾರಿ ಸೋಲಿನ ಮೆಟ್ಟಿಲಿನ ಮೇಲೆ ಬಿದ್ದು ಹೊರಳಾಟ ನಡೆಸಿರುತ್ತಾನೆ. ಹಾಗೂ ಆ ವ್ಯಕ್ತಿಯೂ ಸಹಿತ ನಮ್ಮ ನಿಮ್ಮೆಲ್ಲರಂತೆಯೇ ಜನ ಸಾಮಾನ್ಯನೇ ಆಗಿರುತ್ತಾನೆ.

– ಸಂತೋಷ್ ರಾವ್ ಪೆರ್ಮುಡ.
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ದೂ: ೯೭೪೨೮೮೪೧೬೦

ಉದಯರಶ್ಮಿ ದಿನಪತ್ರಿಕೆ

ಬಹುತೇಕ ಜನರ ಪ್ರಕಾರ ಗೆಲುವು ಎಂಬುದು ಕೇವಲ ಅದೃಷ್ಟದ ಆಟ. ಅದು ಹಣೆಬರಹ. ಅದು ದೈವಕೃಪೆ, ಅದೊಂದು ರೀತಿ ಲಾಟರಿ ಇದ್ದ ಹಾಗೆ, ಯಶಸ್ಸು ಎಂಬುದು ಯಾವತ್ತೂ ಶ್ರೀಮಂತರ ಪರವಾಗಿಯೇ ಇರುತ್ತದೆ, ಹಾಗಾಗಿ, ಆಕಾಶಕ್ಕೆ ಏಣಿ ಹಾಕುವ ಕೆಲಸ ಮಾಡಲೇಬಾರದು. ‘ಬಡವಾ, ನೀ ಮಡಗಿದ ಹಾಂಗಿರು’ ಎಂದು ಗಾದೆಯೇ ಇದೆ. ಅದರಂತೆ ಇದ್ದು ಬಿಡಬೇಕು. ಅದೇ ಸರಿ.’ ವಿಪರಾಸ್ಯ ಎಂದರೆ, ಇಂತಹ ಅರ್ಥಹೀನ ಮಾತುಗಳನ್ನೇ ನಂಬುವ, ಅದನ್ನು ಅನುಮೋದಿಸುವ, ಅದನ್ನೇ ಅನುಸರಿಸಿ ಬದುಕುವ ಜನರು ಕೂಡಾ ಇಂದು ನಮ್ಮ ನಡುವೆ ಇದ್ದಾರೆ.

ಆದರೆ ಯಾವಾಗಲೂ ಒಂದು ಮಾತು ನೆನಪಿನಲ್ಲಿ ಇರಬೇಕು, ಅದೇನೆಂದರೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲೆಲ್ಲ ಮಹಾನ್ ವ್ಯಕ್ತಿಗಳ ಸಾಧನೆಯ ಬದುಕಿನ ಕಥೆಗಳು ನಮ್ಮನ್ನು ಆಕರ್ಷಿಸುತ್ತವೆ. ಸ್ವಾರಸ್ಯ ಏನೆಂದರೆ, ಒಂದು ಗೆಲುವಿನ ಮೆಟ್ಟಿಲನ್ನು ಹತ್ತಿ ನಿಲ್ಲುವ ಮುನ್ನ ಅದೇ ಸಾಧಕ ಹತ್ತಕ್ಕೂ ಹೆಚ್ಚು ಬಾರಿ ಸೋಲಿನ ಮೆಟ್ಟಿಲಿನ ಮೇಲೆ ಬಿದ್ದು ಹೊರಳಾಟ ನಡೆಸಿರುತ್ತಾನೆ. ಹಾಗೂ ಆ ವ್ಯಕ್ತಿಯೂ ಸಹಿತ ನಮ್ಮ ನಿಮ್ಮೆಲ್ಲರಂತೆಯೇ ಜನ ಸಾಮಾನ್ಯನೇ ಆಗಿರುತ್ತಾನೆ. ಈ ಮಾತಿಗೆ ಉದಾಹರಣೆಯಾಗಿ ಅಮೇರಿಕಾದ ಒಬ್ಬ ವ್ಯಕ್ತಿಯ ಒಂದು ಕಥೆ ಹೀಗಿದೆ.


ಇವರೊಬ್ಬ ಅಮೆರಿಕನ್ ವ್ಯಕ್ತಿ, ಆತ ಎಲ್ಲರಂತೆ ಒಬ್ಬ ಸಾಮಾನ್ಯ ಮನುಷ್ಯ. ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಬೇಕು ಎನ್ನುವ ಆಸೆಯು ಅದಮ್ಯವಾಗಿ ಮನದಲ್ಲಿ ಬೇರೂರಿತ್ತು. ಆತನ ಮನದಲ್ಲಿ ಆಸೆಯಿತ್ತು. ಕನಸುಗಳಿದ್ದವು. ಛಲವಿತ್ತು, ಆತ್ಮವಿಶ್ವಾಸವಿತ್ತು. ‘ಸಾಧನೆ’ ಮಾಡಲು ಹಣ ಬೇಕು ಎಂದು ಎನಿಸಿದಾಗ ಈತ ಚಿಕ್ಕಂದಿನಲ್ಲೇ ದುಡಿಯಲು ನಿಂತನು. ದುಡಿಮೆಯಲ್ಲಿ ಪ್ರತೀ ವರ್ಷವೂ ಒಂದಷ್ಟು ದುಡ್ಡು ಸೇರಿಸಿಕೊಂಡ. ಹಣದ ಗಂಟು ಒಂದಿಷ್ಟು ದೊಡ್ಡದಾಗುವ ವೇಳೆಗೆ ಅದಾಗಲೇ ಆತನಿಗೆ ೨೧ ವರ್ಷವಾಗಿತ್ತು. ಗಂಟಿನ ಹಣದ ಬಲದಿಂದ ಆತ ವ್ಯಾಪಾರವನ್ನು ಪ್ರಾರಂಭಿಸಿದ. ಒಂದು ವರ್ಷ ವ್ಯವಹಾರ ಮಾಡಿದ. ವ್ಯವಹಾರದಲ್ಲಿ ಲಾಭದ ಮಾತು ಹಾಗಿರಲಿ, ಹಾಕಿದ ಬಂಡವಾಳವೂ ಆತನಿಗಗೆ ಮರಳಿ ಬರಲಿಲ್ಲ. ಈ ಸೋಲು ಮರೆಯುವ ಸಲುವಾಗಿ, ಮುಂದಿನ ವರ್ಷ ಆತ ಅಲ್ಲಿನ ಜಿಲ್ಲಾ ಮಟ್ಟದ ಚುನಾವಣೆಯಲ್ಲಿ ಸ್ಪರ್ಧಿಸಿದ. ಅಲ್ಲೂ ಆತ ಸೋತು ಹೋದ. ಯಾಕೋ ನನ್ನ ಅದೃಷ್ಟ ಸರಿಯಾಗಿ ಇಲ್ಲ ಎಂದು ಗೊಣಗಿಕೊಂಡು ಮತ್ತೆ ತನ್ನ ಹಿಂದಿನ ವ್ಯವಹಾರಕ್ಕೇ ಅಂಟಿಕೊAಡ.
ಎರಡನೆಯ ಬಾರಿಗೆ ಕಠಿಣವಾದ ದುಡಿಮೆಗೆ ನಿಂತ ಈತ ಬರೋಬ್ಬರಿ ಎರಡು ವರ್ಷ ಹಗಲು ಇರುಳೂ ಎನ್ನದೇ ದುಡಿಮೆ ಮಾಡಿದ. ಅದರ ಪರಿಣಾಮವಾಗಿ ಒಂದಿಷ್ಟು ದುಡ್ಡು ಜಮೆಯಾಯಿತು. ವ್ಯಾಪಾರದಲ್ಲಿ ಹಿಂದೆ ಒಂದು ಬಾರಿ ಈತ ಸೋತು ಹೋಗಿದ್ದನಲ್ಲಾ. ಆ ಎಲ್ಲಾ ತಪ್ಪುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಮತ್ತೆ ವ್ಯಾಪಾರವನ್ನು ಪ್ರಾರಂಭಿಸಿದ. ಆ ವೇಳೆಗೆ ಆತನಿಗೆ ಮದುವೆಯೂ ಆಯಿತು. ಮದುವೆಯಾದ ಮೊದಲ ವರ್ಷ ವ್ಯವಹಾರ ಮತ್ತು ಇಬ್ಬರ ನಡುವಿನ ದಾಂಪತ್ಯವೂ ಚೆನ್ನಾಗಿಯೇ ಇತ್ತು. ಆದರೆ ಆತನ ೨೬ನೇ ವರ್ಷದಲ್ಲಿ ಮತ್ತೊಂದು ಆಘಾತಕ್ಕೆ ಆತನು ಒಳಗಾದನು. ಒಂದು ಕಡೆಯಲ್ಲಿ ಆತನಿಗೆ ಮತ್ತೆ ವ್ಯಾಪಾರದಲ್ಲಿ ನಷ್ಟವಾಯಿತು. ಆ ಬಗ್ಗೆ ಯೋಚನೆಯನ್ನು ಮಾಡುತ್ತಿದ್ದ ಸಂದರ್ಭದಲ್ಲೇ ಆತನ ಹೆಂಡತಿ ನ್ಯುಮೋನಿಯಾಕ್ಕೆ ತುತ್ತಾಗಿ ತೀರಿಕೊಂಡಳು.ಈ ರೀತಿ ಈತನ ಜೀವನದಲ್ಲಿ ಒಂದರ ಮೇಲೆ ಒಂದರAತೆ ಸೋಲು ಮತ್ತು ಸಮಸ್ಯೆಗಳಿಂದ ಆತ ಮನೋರೋಗಿಯಾದ. ಇನ್ನು ಈತನ ಕಥೆಯೇ ಮುಗಿಯಿತು, ಈತ ಹುಚ್ಚ ಆಗುವುದು ಖಚಿತವೆಂದು ಗೆಳೆಯರು, ಬಂಧುಗಳೆಲ್ಲ ಮಾತನಾಡಿಕೊಂಡರು. ಆದರೆ, ಆತನ ಪವಾಡವೇ ನಡೆದು ಹೋಯಿತು. ಕೇವಲ ಒಂದೇ ವರ್ಷದಲ್ಲಿ ಆತನ ವೈದ್ಯರೇ ಅಚ್ಚರಿಗೆ ಒಳಗಾಗುವ ರೀತಿ ಮನೋರೋಗದಿಂದ ಚೇತರಿಸಿಕೊಂಡ.


ಇದಾದ ಮುಂದಿನ ಏಳು ವರ್ಷಗಳ ಕಾಲ ಆತ ಎಲ್ಲಿದ್ದ, ಏನು ಮಾಡುತ್ತಿದ್ದ ಎನ್ನುವುದು ಹೆಚ್ಚಿನವರಿಗೆ ತಿಳಿಯಲೇ ಇಲ್ಲ. ಆತನು ಜೀವನದ ಪ್ರತೀ ಕ್ಷಣವೂ ಒಂದು ಗೆಲುವಿಗಾಗಿ ಕಾತರಿಸುತ್ತಲೇ ಬದುಕಿದ್ದ. ಆತನಿಗೆ ೩೪ ವರ್ಷ ವಯಸ್ಸಾಗಿದ್ದಾಗ ಅಮೆರಿಕಾದಲ್ಲಿ ಮತ್ತೊಂದು ಮಹಾಚುನಾವಣೆ ಘೋಷಣೆ ಆಯಿತು. ಅಲ್ಲಿನ ಪ್ರಾದೇಶಿಕ ಪಕ್ಷವೊಂದರ ಅಭ್ಯರ್ಥಿಯಾಗಿ ಚುನಾವಣೆಗೆ ಈತ ನಿಂತು ಮತ್ತೆ ಹೀನಾಯವಾಗಿ ಸೋತುಹೋದ. ಅದುವರೆಗೂ ಈತನ ಹಲವಾರು ವಿಫಲ ಸಾಹಸಗಳನ್ನು ನೋಡಿದ್ದ ಅಲ್ಲಿನ ಜನರು ನಕ್ಕು ಗೇಲಿ ಮಾಡಿದರು. ಆತನ ಗೆಳೆಯರೆಲ್ಲರೂ ‘ಇದೇನು ನಿನ್ನ ಹುಚ್ಚಾಟ, ಇಷ್ಟೆಲ್ಲಾ ಪ್ರಯತ್ನಿಸುವ ಬದಲು ತೆಪ್ಪಗೆ ಇದ್ದುಬಿಡಬಾರದೇ?’ ಎಂದು ಬುದ್ಧಿಯನ್ನು ಹೇಳಿದರು.
ಅಷ್ಟು ಜನರ ಬುದ್ಧಿಮಾತನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಈತ, ತನ್ನ ೪೫ನೇ ವಯಸ್ಸಿನಲ್ಲಿ ಈತ ಅಮೆರಿಕಾದ ಸೆನೆಟ್ ಸಭೆಯ ಚುನಾವಣೆಗೆ ನಿಂತು ಮತ್ತೆ ಸೋತು ಹೋದ. ಇಷ್ಟಾದ ಮೇಲಾದರೂ ಸುಮ್ಮನೆ ಇರಬಾರದೆ? ಆದರೆ ಆತನು ಸುಮ್ಮನೆ ಇರಲಿಲ್ಲ. ಎರಡು ವರ್ಷಗಳ ನಂತರ, ಅಂದರೆ ತನ್ನ ೪೭ನೇ ವಯಸ್ಸಿನಲ್ಲಿ ಅದೇ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೇ ಧೈರ್ಯದಿಂದ ಸದಪರ್ಧಿಸಿ ಮತ್ತೆ ಹಿಂದಿನAತೆಯೇ ಸೋತು ಹೋದ. ಈ ಮತ್ತೊಂದು ಮಹಾಸೋಲೂ ಅವನನ್ನು ಕಿಂಚಿತ್ತೂ ಧೃತಿಗೆಡಿಸಲಿಲ್ಲ. ಮತ್ತೆ ಎರಡು ವರ್ಷಗಳ ಕಾಲ ಸುಮ್ಮನೆ ಇದ್ದವನು ಮತ್ತೆ ಸೆನೆಟ್ ಚುನಾವಣೆಗೆ ಸ್ಪರ್ಧಿಸಿ ಅಲ್ಲಿಯೂ ಮತ್ತೆ ಅದೇ ಹಳೆಯ ಸೋಲನ್ನು ಅನುಭವಿಸಿದ.


ಈತನ ಈ ಹುಚ್ಚು ಪ್ರಯತ್ನವನ್ನು ನೋಡೊದ ಅಮೆರಿಕದ ಜನರು ಒಂದೊAದು ರೀತಿ ಮಾತನಾಡುತ್ತಾ ಆತನನ್ನು ಗೇಲಿ ಮಾಡಿ ದೈನ್ಯತೆಯಿಂದ ನೋಡಿದರು. ‘ಈತ ಒಬ್ಬ ಸೋಲಿನ ಮಹಾರಾಜ’ ಎಂದು ಹೀಯಾಳಿಸಿದರು. ಈತನು ಸತತವಾಗಿ ಸೋಲನ್ನು ಕಾಣುವುದರಲ್ಲಿ ಗಿನ್ನಿಸ್ ರೆಕಾರ್ಡ್ ಮಾಡುವವನು ಎಂದರು. ಯಾರು ಅದೆಷ್ಟೇ ಟೀಲೆಯನ್ನು ಮಾಡದರೂ ಈತ ಅದನ್ನು ಕೇಳಿಯೂ ಕೇಳಿಸದಂತೆ ಮುಂದಕ್ಕೆ ಹಜ್ಜೆ ಹಾಕಿದ ಮತ್ತು ತನ್ನ ೫೨ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷ ಪದವಿಗೆ ಸ್ಪರ್ಧಿಸಿ ಅಲ್ಲಿ ಎಲ್ಲರೂ ಮೂಗಿಗೆ ಬೆರಳಿಟ್ಟು ನೋಡುವಂತೆ ಪ್ರಚಂಡ ಬಹುಮತದಿಂದ ಗೆದ್ದುಬಿಟ್ಟ. ಅಂದ ಹಾಗೆ, ನೂರಾರು ಸೋಲುಗಳ ನಡುವೆಯೇ ಗೆಲುವಿನ ಅರಮನೆಗೆ ನಿಧಾನವಾಗಿ ಹೆಜ್ಜೆ ಹಾಕಿದ ವ್ಯಕ್ತಿ ಯಾರೆಂದರೆ ಆತ ಅಬ್ರಹಾಂ ಲಿಂಕನ್!
ಈಗ ನಾವೆಲ್ಲರೂ ಯೋಚನೆಯನ್ನು ಮಾಡಬೇಕು ತನ್ನ ಹಣೆಬರಹವನ್ನೋ, ವಿಧಿಯ ಆಟವನ್ನೋ, ಅದೃಷ್ಟವನ್ನೋ ಹಳಿದುಕೊಂಡು ಅಬ್ರಹಾಂ ಲಿಂಕನ್ನನೂ ಸುಮ್ಮನೇ ಉಳಿದಿದ್ದರೆ ಏನಾಗುತ್ತಿತ್ತು ಎಂದು. ಆತನೂ ಜಗತ್ತಿನ ಕೋಟ್ಯಂತರ ಸೋತು ಹೋದವರ, ಕನಸನ್ನೇ ಕಾಣದವರ ಪಟ್ಟಿಗೆ ಸೇರಿಬಿಡುತ್ತಿದ್ದ. ಆದರೆ, ನನ್ನಿಂದ ಏನೂ ಆಗದು ಎಂದು ಯೋಚಿಸುವ ಬದಲಿಗೆ ನನ್ನಿಂದ ಎಲ್ಲವೂ ಸಾಧ್ಯ ಎಂದು ಅವನು ಸೋಲಿನ ಹಾದಿಯಲ್ಲೂ ಒಂದೊAದೇ ದೃಢವಾದ ಹೆಚ್ಚೆ ಇಟ್ಟ ಕಾರಣದಿಂದ ಆಕಾಶಕ್ಕೇ ಏಣಿ ಹಾಕುವುದು ಅವನಿಂದ ಸಾಧ್ಯವಾಯಿತು. ಸಾಧನೆಯ ಛಲಕ್ಕೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಲಿಂಕನ್ನ ಗೆಲುವಿನ ಬದುಕು ಎಲ್ಲರಿಗೂ ಮಾದರಿಯಾಗಿರಲಿ. ಅವನಿಗೆ ಸಿಕ್ಕಂಥ ಹೆಸರು, ಯಶಸ್ಸು ಎಲ್ಲರಿಗೂ ದೊಎಯಬೇಕು ಎಂದರೆ ನಿರಂತರವಾದ ಪ್ರಯತ್ನ ಮತ್ತು ಕಠಿಣ ಪರಿಶ್ರಮವನ್ನು ಹಾಕಬೇಕಷ್ಟೇ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನಮ್ಮ ಸಂಸ್ಕೃತಿಯನ್ನು ನಾವೇ ಏಕೆ ಮರೆತಿದ್ದೇವೆ?

ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 29,2026

ಶರಣ ಪರಂಪರೆ ಮೇಲಿನ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ

ನಿರ್ಮೋಹಿ ಸಂತ, ಮಹಾನ್ ತತ್ವಜ್ಞಾನಿಯಾಗಿದ್ದ ಸಿದ್ಧೇಶ್ವರ ಶ್ರೀ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕಠಿಣ ಪರಿಶ್ರಮದ ಮುಂದೆ ಸೋಲುಗಳು ಗೌಣವಾಗಲಿ
    In ವಿಶೇಷ ಲೇಖನ
  • ನಮ್ಮ ಸಂಸ್ಕೃತಿಯನ್ನು ನಾವೇ ಏಕೆ ಮರೆತಿದ್ದೇವೆ?
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 29,2026
    In ದಿನಪತ್ರಿಕೆ
  • ಶರಣ ಪರಂಪರೆ ಮೇಲಿನ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ನಿರ್ಮೋಹಿ ಸಂತ, ಮಹಾನ್ ತತ್ವಜ್ಞಾನಿಯಾಗಿದ್ದ ಸಿದ್ಧೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಸಂಭ್ರಮದಿಂದ ಜರುಗಿದ ಬನಶಂಕರಿದೇವಿ ರಥೋತ್ಸವ
    In (ರಾಜ್ಯ ) ಜಿಲ್ಲೆ
  • ಡಿ.೫-೬ ರಂದು ದೇಶಿ ತಳಿ ನಾಯಿಮರಿಗಳ ದತ್ತು ಅಭಿಯಾನ
    In (ರಾಜ್ಯ ) ಜಿಲ್ಲೆ
  • ಕನಕದಾಸರ ಆದರ್ಶಗಳು ಸಮಾಜಕ್ಕೆ ದಾರಿದೀಪ :ಕೊಡಗೆ
    In (ರಾಜ್ಯ ) ಜಿಲ್ಲೆ
  • ಸದಸ್ಯರಾಗಿ ಪವಿತ್ರಾ ಕುಂಬಾರ ನೇಮಕ
    In (ರಾಜ್ಯ ) ಜಿಲ್ಲೆ
  • ಮೂಢನಂಬಿಕೆ ತೊರೆದು ಕನಕದಾಸರ ಸಂದೇಶ ಪಾಲಿಸಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.