Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

‘ವೃಕ್ಷ ಮಕ್ಕಳ ಓಟ’ ಕ್ಕೆ ಅಭೂತಪೂರ್ವ ಬೆಂಬಲ

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಮೇಳ

೩೭೧(ಜೆ) ವ್ಯಾಪ್ತಿ ಸೇರ್ಪಡೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಮೇಳ
(ರಾಜ್ಯ ) ಜಿಲ್ಲೆ

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಮೇಳ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನ.30ರಂದು ಮೂರು ವಾರ್ಡ್‌ಗಳಲ್ಲಿ ಅರ್ಜಿ ಸ್ವೀಕಾರ | ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಸಲಹೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲ ಆಸ್ತಿ ಮಾಲೀಕರು ಇ-ಆಸ್ತಿ (ಇ-ಖಾತಾ) ಪಡೆಯುವುದು ಕಡ್ಡಾಯವಾಗಿದ್ದು, ಇ-ಖಾತಾ ವಿತರಣಾ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನ.30ರಂದು ನಗರದ ಮೂರು ವಲಯಗಳ ಆಯ್ದ ವಾರ್ಡ್‌ಗಳಲ್ಲಿ ವಿಶೇಷ ಇ-ಖಾತಾ ಮೇಳ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಅರ್ಜಿ ಸ್ವೀಕರಿಸಲಾಗುವುದು. ಮೊದಲನೇ ವಲಯದ ವಾರ್ಡ್ ಸಂಖ್ಯೆ 6ರ ಕೆ.ಎಚ್.ಬಿ. ಕಾಲನಿ ಹಿಂಭಾಗದ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಸಂಖ್ಯೆ 24, ಎರಡನೇ ವಲಯದ ವಾರ್ಡ್ ಸಂಖ್ಯೆ 17ರ ರಂಭಾಪುರ ಗ್ರಾಮದ ಹನುಮಾನ ದೇವಸ್ಥಾನ ಹಾಗೂ ಮೂರನೇ ವಲಯದ ವಾರ್ಡ್ ಸಂಖ್ಯೆ 21 ಮತ್ತು 22ರ ಗಣೇಶ ನಗರದ ಲಕ್ಷ್ಮೀ ಗುಡಿ ಸಮುದಾಯ ಭವನದಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ.
ಆಸ್ತಿ ಮಾಲೀಕರು ಕರ್ನಾಟಕ ಒನ್ -ಪ್ರಜಾ ಸೇವಾ ಕೇಂದ್ರ ಮಹಾನಗರಪಾಲಿಕೆಯ ವಲಯ ಕಚೇರಿಗಳಲ್ಲಿ ಹಾಗೂ ಪಾಲಿಕೆ ಸಿಬ್ಬಂದಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, https://eaasthi.karnataka.gov.in ಪೋರ್ಟಲ್ ಮೂಲಕವೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಆಸ್ತಿ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಆಸ್ತಿ ದಾಖಲಾತಿ ಪತ್ರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ ಅಥವಾ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್‌ಗಳ ಪೈಕಿ ಯಾವುದಾದರೊಂದು, ಕಟ್ಟಡ ಅಥವಾ ನಿವೇಶನದ ಜಿಪಿಎಸ್ ಛಾಯಾಚಿತ್ರ, ಕಟ್ಟಡ ಪರವಾನಗಿ ಪ್ರತಿ ಹಾಗೂ ಚಾಲ್ತಿ ವರ್ಷದ ಆಸ್ತಿ ತೆರಿಗೆ ಪಾವತಿ ರಸೀದಿಯನ್ನು ಅರ್ಜಿಯೊಂದಿಗೆ ದಾಖಲೆ ಸಲ್ಲಿಸಬೇಕು.
ಇ.ಸಿ. ಸಲ್ಲಿಸುವುದು ಕಡ್ಡಾಯವಲ್ಲ. ಇ.ಸಿ. ಸಲ್ಲಿಸಿದಲ್ಲಿ ವಹಿವಾಟು ನಡೆಸಲು ಅನುಕೂಲವಾಗುವ ಟ್ರಾನ್ಸ್ಯಾಕ್ಟಬಲ್ ಇ-ಖಾತಾ ಹಾಗೂ ಇ.ಸಿ. ಸಲ್ಲಿಸದಿದ್ದಲ್ಲಿ ನಾನ್-ಟ್ರಾನ್ಸ್ಯಾಕ್ಟಬಲ್ ಇ-ಖಾತಾ ನೀಡಲಾಗುವುದು. ಆದ್ದರಿಂದ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಇದರ ಸದುಪಯೋಗ ಪಡೆದುಕೊಂಡು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಮಹಾನಗರಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

‘ವೃಕ್ಷ ಮಕ್ಕಳ ಓಟ’ ಕ್ಕೆ ಅಭೂತಪೂರ್ವ ಬೆಂಬಲ

೩೭೧(ಜೆ) ವ್ಯಾಪ್ತಿ ಸೇರ್ಪಡೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಮನವಿ

ಕನಕದಾಸ-ಕೃಷ್ಣನಂತೆ ಪ್ರೀತಿ, ಸಮಾನತೆ ಇರಲಿ :ಪಾಟೀಲ

ಡಿ.1ರಿಂದ ರಾಜ್ಯಾದ್ಯಂತ ಪಿಡಿಓ ಗಳ ಅಸಹಕಾರ ಚಳವಳಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ‘ವೃಕ್ಷ ಮಕ್ಕಳ ಓಟ’ ಕ್ಕೆ ಅಭೂತಪೂರ್ವ ಬೆಂಬಲ
    In (ರಾಜ್ಯ ) ಜಿಲ್ಲೆ
  • ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಮೇಳ
    In (ರಾಜ್ಯ ) ಜಿಲ್ಲೆ
  • ೩೭೧(ಜೆ) ವ್ಯಾಪ್ತಿ ಸೇರ್ಪಡೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಮನವಿ
    In (ರಾಜ್ಯ ) ಜಿಲ್ಲೆ
  • ಕನಕದಾಸ-ಕೃಷ್ಣನಂತೆ ಪ್ರೀತಿ, ಸಮಾನತೆ ಇರಲಿ :ಪಾಟೀಲ
    In (ರಾಜ್ಯ ) ಜಿಲ್ಲೆ
  • ಡಿ.1ರಿಂದ ರಾಜ್ಯಾದ್ಯಂತ ಪಿಡಿಓ ಗಳ ಅಸಹಕಾರ ಚಳವಳಿ
    In (ರಾಜ್ಯ ) ಜಿಲ್ಲೆ
  • ಕಾಯಕ ಆತ್ಮಸಾಕ್ಷಾತ್ಕಾರದ ಮೂಲ :ಡಾ.ಸುಮಾ ಬೋಳರಡ್ಡಿ
    In (ರಾಜ್ಯ ) ಜಿಲ್ಲೆ
  • ನೂರೊಂದು ನೆನಪು ಎದೆಯಾಳದಿಂದ..
    In ವಿಶೇಷ ಲೇಖನ
  • ಏಡ್ಸ್ ಜಾಗೃತಿಯೇ ಸುರಕ್ಷಿತ ಭವಿಷ್ಯದ ಅಡಿಪಾಯ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 28,2026
    In ದಿನಪತ್ರಿಕೆ
  • ಎಬಿವಿ ಶಾಲೆಯಲ್ಲಿ ಭಕ್ತ ಕನಕದಾಸ ಜಯಂತಿ ಆಚರಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.