ಸಿಂದಗಿಯ ಪಿಇಎಸ್ ಪದವಿ ಹಾಗೂ ಪಪೂ ಕಾಲೇಜು ಮತ್ತು ಕಾವ್ಯ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಹೋರಾಟಕ್ಕೆ ಬೆಂಬಲ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗೋಕಾಕ ಚಳುವಳಿಯ ರೂವಾರಿ ರೇ.ಚ.ರೇವಡಿಗಾರ ಪ್ರತಿಷ್ಠಾನ ಹಾಗೂ ೩೭೧ ಜೆ ಹೋರಾಟ ಸಮಿತಿಯಿಂದ ವಿಜಯಪುರ ಜಿಲ್ಲೆಯನ್ನು ಸಂವಿಧಾನದ ೩೭೧(ಎ) ಕಲಂ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ ೬೦ ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ನಗರದ ಪಿಇಎಸ್ ಪದವಿ ಹಾಗೂ ಪಪೂ ಕಾಲೇಜು ಮತ್ತು ಕಾವ್ಯ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಬೆಂಬಲ ಸೂಚಿಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿಇಎಸ್ ಕಾಲೇಜಿನ ವಿಧ್ಯಾರ್ಥಿನಿ ದಾನಮ್ಮ ದೇವಣಗಾಂವ ಮಾತನಾಡಿ, ೨೦೧೩ರಲ್ಲಿ ಜಾರಿಯಾದ ಡಾ. ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ವಿಜಯಪುರ ಜಿಲ್ಲೆಯ ಹೆಸರಿತ್ತು ಅದನ್ನು ಕೇಳುವ ರಾಜಕಾರಣಿಗಳ ನಿರ್ಲಕ್ಷ್ಯತನದಿಂದ ಈ ಜಿಲ್ಲೆಗೂ ಸೌಲಭ್ಯ ತಪ್ಪಿದೆ, ಅದನ್ನು ಕೊಡಿ ಎನ್ನುವ ಬೇಡಿಕೆ ನಮ್ಮದು ಎಂದರು.
ವಿದ್ಯಾರ್ಥಿನಿಯರಾದ ಸುಶ್ಮಿತಾ ಬಡಿಗೇರ, ಸೃಷ್ಠಿ ಬಿರಾದಾರ ಮಾತನಾಡಿ, ೩೭೧(ಜೆ) ವಿಶೇಷ ಸ್ಥಾನಮಾನ ಅತ್ಯಂತ ಅಗತ್ಯವಾಗಿದೆ. ಈ ಹೋರಾಟ ರೂಪುಗೊಂಡಿದೆ. ಇದು ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ವೈಯಕ್ತಿಕ ಹೋರಾಟವಲ್ಲ; ವಿಜಯಪುರ ಜಿಲ್ಲೆಯ ಭವಿಷ್ಯ, ಯುವಜನರ ಅವಕಾಶಗಳು ಹಾಗೂ ಮುಂದಿನ ಪೀಳಿಗೆಯ ಹಕ್ಕುಗಳಿಗಾಗಿ ನಡೆಯುತ್ತಿರುವ ಸಾಮೂಹಿಕ ಹೋರಾಟವಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಸರಣಿ ಸತ್ಯಾಗ್ರಹ ನಡೆಸಲಾಗುವುದು ಅಲ್ಲದೆ ಮುಂದೆ ಎಂತಹ ಹೋರಾಟಕ್ಕೂ ಸಿದ್ದರಿದ್ದೇವೆ ಎಂದು ಘರ್ಜಿಸಿದರು.
ಈ ಸಂದರ್ಭದಲ್ಲಿ ಕಾವ್ಯ ಸಮೂಹ ಶಿಕ್ಷಣ ಸಂಸ್ಥೆಯ ಚಂದ್ರಶೇಖರ ನಾಗರಬೇಟ್ಟ, ಪಿಇಎಸ್ ಕಾಲೇಜಿನ ರಮೇಶ ಧರಿಗೊಂಡ, ರವಿ ಗೋಡಕರ, ಮಹಾಂತೇಶ ದಂಡವತ, ಉಮೀದ ಕರ್ಜಗಿ, ಆಜ್ವಾಕ ಬರೋಮಣಿ, ಅಮೀರ ಮೋಪಗಾರ, ವಿಜಯಲಕ್ಷ್ಮಿ ಲೋಣಿ, ತಿಕಾಜಿ ಕಲಾಲ, ಸಮಿತಿಯ ರಂಗನಾಥ ಥೋರ್ಫೆ, ಆನಂದ ಶಾಬಾದಿ, ಪಂಡಿತ ಯಂಪೂರೆ, ಗುರುರಾಜ ಪಡಶೆಟ್ಟಿ, ಶಂಕರ ಮಲ್ಲೇದ, ಬಾಬು ವಾಲೀಕಾರ, ಸಿದ್ದು ಅಂಬಳನೂರ, ಉಪಸ್ಥಿತರಿದ್ದರು.

