ಉದಯರಶ್ಮಿ ದಿನಪತ್ರಿಕೆ
ಚಡಚಣ: 16ನೇ ಶತಮಾನದ ಶ್ರೇಷ್ಠ ಕವಿ, ದಾರ್ಶನಿಕ, ಸಂತ ಹಾಗೂ ಸಮಾಜ ಸುಧಾರಕರಾದ ಕನಕದಾಸರು ತಮ್ಮ ಕೀರ್ತನೆಗಳು, ಮುಂಡಿಗೆಗಳು ಮತ್ತು ಸಾಹಿತ್ಯ ಕೃತಿಗಳ ಮೂಲಕ ಭಕ್ತಿ, ಪ್ರೀತಿ ಹಾಗೂ ಸಾಮಾಜಿಕ ಸಮಾನತೆಯ ಸಂದೇಶ ಸಾರಿದ ಮಹಾನ್ ಸಂತರು ಎಂದು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಹೇಳಿದರು.
ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಭತಗುಣಕಿ ಕ್ರಾಸ್ ಸಮೀಪದ ಕನಕದಾಸ ಸರ್ಕಲ್ ಆವರಣದಲ್ಲಿ ಕನಕದಾಸರ 526ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ನಮ್ಮ ನಡೆ, ನುಡಿ, ಚಲನವಲನ ಹಾಗೂ ವೈಯಕ್ತಿಕ ಸ್ವಚ್ಛತೆಯಲ್ಲಿ ಶಿಸ್ತು ಮತ್ತು ಸಂಸ್ಕಾರ ಅಳವಡಿಸಿಕೊಂಡಾಗ ಮಾತ್ರ ಸಮಾಜ ಹಾಗೂ ದೇಶದ ಸುಧಾರಣೆ ಸಾಧ್ಯ. ಕನಕದಾಸರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತರಾಯಗೌಡ ಪಾಟೀಲ, ಶರಣುಗೌಡ ಬಂಡಿ, ಅಣ್ಣಾರಾಯ ಕವಟಗಿ, ರವಿ ನಾವಿ, ಸಿದ್ದರಾಯ ಬಬಲಾದ, ರಮೇಶ ಪರಗೊಂಡ, ಸಂಜೀವಕುಮಾರ ಅಡವಿ, ಧರ್ಮಣ್ಣ ಹೂಗಾರ, ಭೂತಾಳಿ ಪೂಜಾರಿ, ಭೀರಪ್ಪ ನಾಗಠಾಣ ಸೇರಿದಂತೆ ಅಂಜುಟಗಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

