Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

‘ವೃಕ್ಷ ಮಕ್ಕಳ ಓಟ’ ಕ್ಕೆ ಅಭೂತಪೂರ್ವ ಬೆಂಬಲ

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಮೇಳ

೩೭೧(ಜೆ) ವ್ಯಾಪ್ತಿ ಸೇರ್ಪಡೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕಾಯಕ ಆತ್ಮಸಾಕ್ಷಾತ್ಕಾರದ ಮೂಲ :ಡಾ.ಸುಮಾ ಬೋಳರಡ್ಡಿ
(ರಾಜ್ಯ ) ಜಿಲ್ಲೆ

ಕಾಯಕ ಆತ್ಮಸಾಕ್ಷಾತ್ಕಾರದ ಮೂಲ :ಡಾ.ಸುಮಾ ಬೋಳರಡ್ಡಿ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕಾಯಕ ಕುರಿತು ವಚನಗಳನ್ನು ರಚಿಸಿ ಆಚರಿಸಿ ,ಅದರ ಅರ್ಥ ವೈಶಾಲ್ಯತೆ ಮತ್ತು ಪಾವಿತ್ರ‍್ಯತೆಯನ್ನು ಲೋಕಕ್ಕೆ ತೋರಿಸಿಕೊಟ್ಟವರು ಶರಣೆ ಆಯ್ದಕ್ಕಿ ಲಕ್ಕಮ್ಮನವರು. “ಕಾಯಕ ನಿಂದಿತ್ತು ಏಳಯ್ಯ ಎನ್ನಾಳ್ದನೆ”- ಎಂದು ಗಂಡ ಮಾರಯ್ಯನನ್ನು ಎಚ್ಚರಿಸಿ ಕಾಯಕ ಮಾಡಲು ಹಚ್ಚಿ ಅದರ ಮಹತ್ವವನ್ನು ಲಕ್ಕಮ್ಮ ಸಾರಿ ಹೇಳಿದರು. ಸತ್ಯ ಶುದ್ಧ ಕಾಯಕದಿಂದ ದಾಸೋಹ, ಪ್ರಸಾದ, ಅನುಭವಗಳು ಅಳವಟ್ಟು ಆತ್ಮ ಸಾಕ್ಷಾತ್ಕಾರ ವಾಗುವುದೆಂದು ಡಾ. ಸುಮಾ ಬೋಳರಡ್ಡಿ ಹೇಳಿದರು.
ಅವರು ನಗರದ ಶ್ರೀಮತಿ ವಿದ್ಯಾ ಕೋಟೆಣ್ಣವರ ಅವರ ಮನೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದತ್ತಿ ಸಮಾರಂಭದಲ್ಲಿ “ಶರಣೆ ಆಯ್ದಕ್ಕಿ ಲಕ್ಕಮ್ಮ” ರನ್ನು ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಶ್ರೀಮತಿ ಶಿವಲೀಲಾ ಮುರಾಳ ಅವರು “ಜನಪದ ಸಾಹಿತ್ಯದಲ್ಲಿ ಶರಣರು” ಎಂಬ ವಿಷಯ ಕುರಿತು ಮಾತನಾಡಿ, ಶಿವಶರಣ ರನ್ನು ಸ್ಮರಿಸಿಕೊಂಡರೆ ನಮ್ಮ ಬದುಕು ಬಂಗಾರವಾಗುತ್ತದೆ. ಮಹಿಳೆಯರು ಬಂಗಾರದ ಸರಗಿಯನ್ನು ಧರಿಸಿ ಹೆಳಲಿಗೆ ಘಮಘಮಿಸುವ ಮಲ್ಲಿಗೆ ಮಾಲೆಯನ್ನು ಮುಡಿದಾಗ ಸಂತೋಷವಾಗುವಂತೆ ಶರಣರ ವಚನಗಳನ್ನು ಓದಿ ಅರಗಿಸಿಕೊಂಡಾಗ ಅಂತರಂಗದಲ್ಲಿ ಅರಿವುಮೂಡಿ ಪರಮಾನಂದ ಪ್ರಾಪ್ತವಾಗುತ್ತದೆ ಎಂದು ಹೇಳಿದರು.
ಲಿಂ.ಕೋರವಾರದ ಶಂಕರಗೌಡರು, ಲಿಂ.ಗುರುಸಂಗವ್ವ ಇಂಗಳೇಶ್ವರ, ಮತ್ತು ಲಿಂ.ಶರಣಪ್ಪ ಮಂಗಾನವರ ಅವರ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ದತ್ತಿ ಸಮಾರಂಭದ ಅಧ್ಯಕ್ಷತೆಯನ್ನು ಡಾ. ರೇಣುಕಾ ಬಸವಪ್ರಭು ವಹಿಸಿಕೊಂಡಿದ್ದರು.
ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಶಾರದಾ ಐಹೊಳ್ಳಿ ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಸುಜಾತ ಸಕ್ರಿ ವಂದಿಸಿದರು.
ಸಭೆಯಲ್ಲಿ ಮ.ಗು.ಯಾದವಾಡ, ಶೈಲಿ ಪಾಟೀಲ,ಈರಣ್ಣ ತೊಂಡಿಕಟ್ಟಿ, ಎನ್. ಆರ್. ಕುಲಕರ್ಣಿ, ಪುಷ್ಪಾ ಮಹಾಂತಮಠ, ಶೈಲಜಾ ಮೋದಿ, ಮಹಾಂತೇಶ ಬಿರಾದಾರ, ಮದಭಾವಿ ಮುಂತಾದವರು ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

‘ವೃಕ್ಷ ಮಕ್ಕಳ ಓಟ’ ಕ್ಕೆ ಅಭೂತಪೂರ್ವ ಬೆಂಬಲ

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಮೇಳ

೩೭೧(ಜೆ) ವ್ಯಾಪ್ತಿ ಸೇರ್ಪಡೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಮನವಿ

ಕನಕದಾಸ-ಕೃಷ್ಣನಂತೆ ಪ್ರೀತಿ, ಸಮಾನತೆ ಇರಲಿ :ಪಾಟೀಲ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ‘ವೃಕ್ಷ ಮಕ್ಕಳ ಓಟ’ ಕ್ಕೆ ಅಭೂತಪೂರ್ವ ಬೆಂಬಲ
    In (ರಾಜ್ಯ ) ಜಿಲ್ಲೆ
  • ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಮೇಳ
    In (ರಾಜ್ಯ ) ಜಿಲ್ಲೆ
  • ೩೭೧(ಜೆ) ವ್ಯಾಪ್ತಿ ಸೇರ್ಪಡೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಮನವಿ
    In (ರಾಜ್ಯ ) ಜಿಲ್ಲೆ
  • ಕನಕದಾಸ-ಕೃಷ್ಣನಂತೆ ಪ್ರೀತಿ, ಸಮಾನತೆ ಇರಲಿ :ಪಾಟೀಲ
    In (ರಾಜ್ಯ ) ಜಿಲ್ಲೆ
  • ಡಿ.1ರಿಂದ ರಾಜ್ಯಾದ್ಯಂತ ಪಿಡಿಓ ಗಳ ಅಸಹಕಾರ ಚಳವಳಿ
    In (ರಾಜ್ಯ ) ಜಿಲ್ಲೆ
  • ಕಾಯಕ ಆತ್ಮಸಾಕ್ಷಾತ್ಕಾರದ ಮೂಲ :ಡಾ.ಸುಮಾ ಬೋಳರಡ್ಡಿ
    In (ರಾಜ್ಯ ) ಜಿಲ್ಲೆ
  • ನೂರೊಂದು ನೆನಪು ಎದೆಯಾಳದಿಂದ..
    In ವಿಶೇಷ ಲೇಖನ
  • ಏಡ್ಸ್ ಜಾಗೃತಿಯೇ ಸುರಕ್ಷಿತ ಭವಿಷ್ಯದ ಅಡಿಪಾಯ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 28,2026
    In ದಿನಪತ್ರಿಕೆ
  • ಎಬಿವಿ ಶಾಲೆಯಲ್ಲಿ ಭಕ್ತ ಕನಕದಾಸ ಜಯಂತಿ ಆಚರಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.