ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಗುರಿ ಸಾಧನೆಗೆ ಅಧ್ಯಯನದ ಜೊತೆ ಕ್ರೀಡೆಗಳು ಸಹಕಾರಿಯಾಗಲಿವೆ. ಜೀವನದಲ್ಲಿ ಇವುಗಳ ಅಗತ್ಯ ಸಮತೋಲನವನ್ನು ಕಾಯ್ದುಕೊಂಡು ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದರೆ ಯಶಸ್ಸು ಶತಸಿದ್ಧ ಎಂದು ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ನಂ.೭ ಜಯನಗರ ವಿಜಯಪುರ ಇಲ್ಲಿ ಲಾಡ್ಲಿ ಫೌಂಡೇಶನ್ ಹಾಗೂ ಲಿವಿಂಗ್ ಆಫ್ ಗಿವಿಂಗ್ ವತಿಯಿಂದ ಮಕ್ಕಳಿಗೆ ಆಟದ ಸಾಮಗ್ರಿಗಳನ್ನ ವಿತರಿಸಿ ಫೌಂಡೇಶನ್ ರಾಯಭಾರಿ ಶಿಫಾ ಜಮಾದಾರ್ ಮಾತನಾಡಿದರು.
ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಈ ಶಾಲೆ ಅಭಿವೃದ್ಧಿ ಹೊಂದಿದ್ದು ಇಲ್ಲಿಯ ಶಿಕ್ಷಕರ ಹಾಗೂ ಮುಖ್ಯ ಗುರುಗಳ ನಿರಂತರ ಪ್ರಯತ್ನದಿಂದ ಶಾಲೆಯು ಆಕರ್ಷಣೆಯವಾಗಿ ಗಣನೀಯ ಬದಲಾವಣೆಯಾಗಿದೆ. ಮಕ್ಕಳ ಶ್ರೇಯೋಭಿವೃದ್ಧಿಗೆ ಶಿಕ್ಷಕರು ಸದಾ ಕಾರ್ಯ ತತ್ಪರರಾಗಿದ್ದು ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ರೇಖಾ ಎಸ್ ಕುದರಿ ಮಾತನಾಡಿ, ಇಲ್ಲಿಯ ಮಕ್ಕಳು ಪ್ರತಿಯೊಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಗೆ ಅತ್ಯುತ್ತಮ ಕೀರ್ತಿಯನ್ನು ತರುತ್ತಿದ್ದಾರೆ. ಶಾಲೆಯ ಭೌತಿಕ ವಾತಾವರಣ ಆಕರ್ಷಣೆಯವಾಗಿದ್ದು ಮಕ್ಕಳ ಕಲಿಕೆಗೆ ಪೂರಕವಾಗಿದೆ.ಎಂದು ಹೇಳಿದರು. ಅತಿಥಿಗಳಾದ ದೀಪಕ್ ಶಿಂತ್ರೆ ಮಾತನಾಡಿ. ಸರ್ಕಾರಿ ಶಾಲೆಗಳನ್ನ ಗುರುತಿಸಿ ಸಮುದಾಯ ಸಹಾಯ ಸಹಕಾರವನ್ನು ನೀಡದಲ್ಲಿ ಮಕ್ಕಳ ಕಲಿಕೆಗೆ ಸಹಕಾರಿಯಾಗುವುದು ಈ ದಿಶೆಯಲ್ಲಿ ಲಾಡ್ಲಿ ಫೌಂಡೇಶನ್ ಹಾಗೂ ಆರ್ಟ್ ಆಫ್ ಗಿವಿಂಗ್ ನ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಅಜೀಜ್ ಅರಳಿಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಬಾಗೇವಾಡಿ ಸ್ವಾಗತಿಸಿದರು. ಗುರುದೇವ ಬಾಲಪ್ಪನವರ್ ವಂದಿಸಿದರು. ಶ್ರೀಮತಿ ಶೀತಲ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು

