ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸ್ಪೂರ್ತಿ ಫೌಂಡೇಶನ್ ವತಿಯಿಂದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ IPS ರವರಿಗೆ ಸ್ಪೂರ್ತಿ ಫೌಂಡೇಶನ್ ಅಧ್ಯಕ್ಷರಾದ ಅರುಣ ಹುಂಡೇಕಾರ ಮತ್ತು ಸದಸ್ಯರಿಂದ ಸನ್ಮಾನ ಕಾರ್ಯಕ್ರಮ ಮಾಡಲಾಯಿತು
ಈ ಸಂದರ್ಭದಲ್ಲಿ ಅರುಣ ಹುಂಡೇಕಾರ ಅವರು ಮಾತನಾಡಿ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವಲ್ಲಿ ತಾವು ತೋರುತ್ತಿರುವ ಸಮರ್ಪಿತ ಸೇವೆ ನಾಯಕತ್ವ, ಆಡಳಿತ ಮತ್ತು ಬದ್ಧತೆಯನ್ನು ನಾವು ಮನಪೂರ್ವಕವಾಗಿ ಶ್ಲಾಗಿಸುತ್ತೇವೆ .
ತಮ್ಮ ಪ್ರಯತ್ನಗಳು ಮತ್ತು ವೃತ್ತಿಪರತೆ ನಿಜಕ್ಕೂ ಪ್ರಶಂಶನಿಯ ಎಂದು ತಿಳಿಸಿದರು. ಹಾಗೂ ಸ್ಪೂರ್ತಿ ಫೌಂಡೇಶನ್ ಗ್ರಂಥಾಲಯದಲ್ಲಿ ಓದಿ 4000 ಕ್ಕೂ ಅಧಿಕ ವಿದ್ಯಾರ್ಥಿಗಳು ಪೋಲಿಸ್ ಮತ್ತು ವಿವಿಧ ಇಲಾಖೆಗಳಲ್ಲಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಡಾ.ಶೈಲಜಾ ಪಾಟೀಲ ಮಾತನಾಡಿ, ಸ್ಪೂರ್ತಿ ಫೌಂಡೇಶನ್ ಗ್ರಂಥಾಲಯ 2015 ರಲ್ಲಿ ಸ್ಥಾಪನೆಯಾಗಿದ್ದು ಇದು ಹತ್ತನೇ ತರಗತಿ ಸ್ನೇಹಿತರು ಕೂಡಿ ಸಮಾಜಕ್ಕೆ ಒಂದು ನಿಸ್ವಾರ್ಥ ಸೇವೆ ಸಲ್ಲಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಉಚಿತ ಗ್ರಂಥಾಲಯ ವ್ಯವಸ್ಥೆಯನ್ನು ಮತ್ತು ಫೌಂಡೇಶನ್ ವತಿಯಿಂದ ಉಚಿತವಾಗಿ ಆಂಬುಲೆನ್ಸ್ ಸೇವೆಯನ್ನು ಮಾಡಲಾಗಿದೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಸ್ಪೂರ್ತಿ ಫೌಂಡೇಶನ್ ಉಪಾಧ್ಯಕ್ಷ ಬಸವರಾಜ ಪಾಟೀಲ, ಸದಸ್ಯರಾದ ರಾಜೇಶ ಶೆಟ್ಟಿ, ಮುತ್ತು ಹಕ್ಕಾ ಪಕ್ಕಿ, ಬಾಪು ಗಂಜಲಖೇಡ ಶಾಹಿದ್ ಮಾಲಿಪಾಟೀಲ, ಗ್ರಂಥಾಲಯದ ವಿದ್ಯಾರ್ಥಿಗಳಾದ ಮುತ್ತು ರಾಯನಗೌಡ್ರ , ವಿಜಯಕುಮಾರ ಕುಂಬಾರ , ಶ್ರೀಮಂತ ದೇಸಾಯಿ, ರಮೇಶ , ಅಕ್ಬರ್ ,ಪವನ , ಉಪಸ್ಥಿತರಿದ್ದರು.

