ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಕ್ತದಾನದಿಂದ ಹೃದಯ ಸಂಬAಧಿ ತೊಂದರೆಗಳ ಅಪಾಯ ಕಡಿಮೆಯಾಗಲು ಸಹಕಾರಿಯಾಗುತ್ತದೆ. ದೇಹದಲ್ಲಿ ಅನಗತ್ಯ ಕೊಬ್ಬಿನ ಸಂಗ್ರಹಣೆಯನ್ನು ನಿಯಂತ್ರಿಸುವಲ್ಲಿ ಸಹ ನೆರವಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎ.ಎ.ಮಾಗಿ ಹೇಳಿದರು.
ಸಿಂದಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲಿ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲದ ಕಾರಣ ಸ್ವಯಂ ಪ್ರೇರಿತ ರಕ್ತದಾನ ಅತ್ಯಂತ ಅವಶ್ಯಕವಾಗಿದೆ. ರಕ್ತದಾನ ಮಹಾದಾನವಾಗಿದ್ದು, ಒಂದು ಯುನಿಟ್ ರಕ್ತದಾನದಿಂದ ಮೂರು ಜೀವಗಳನ್ನು ಉಳಿಸಲು ಸಾಧ್ಯ. ಆದ್ದರಿಂದ ಆರೋಗ್ಯವಂತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಪುಣ್ಯದ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಈ ವೇಳೆ ತಾಲೂಕು ಆಯುಷ್ ವೈದ್ಯಾಧಿಕಾರಿ ಡಾ.ಮಹಾಂತೇಶ ಹಿರೇಮಠ ಮಾತನಾಡಿ, ಸಾಮಾನ್ಯವಾಗಿ ೧೮ ರಿಂದ ೬೫ ವರ್ಷದ ಆರೋಗ್ಯವಂತ ವ್ಯಕ್ತಿಗಳು ವೈದ್ಯಕೀಯ ಮಾನದಂಡಗಳ ಆಧಾರದ ಮೇಲೆ ರಕ್ತದಾನ ಮಾಡಬಹುದು. ಕನಿಷ್ಠ ೪೫ಕೆ.ಜಿ. ತೂಕ, ಸೂಕ್ತ ಹಿಮೋಗ್ಲೋಬಿನ್ ಮಟ್ಟ ಸೇರಿದಂತೆ ಆರೋಗ್ಯದ ಮಾನದಂಡಗಳನ್ನು ಹೊಂದಿರಬೇಕು. ಅಪಘಾತದಲ್ಲಿ ಗಾಯಗೊಂಡವರು, ಶಸ್ತ್ರಚಿಕಿತ್ಸೆಗೊಳಗಾಗುವವರು, ಹೆರಿಗೆ ಸಂದರ್ಭದಲ್ಲಿ ತುರ್ತು ರಕ್ತದ ಅಗತ್ಯವಿರುವ ತಾಯಂದಿರು ಹಾಗೂ ಥಲಸೀಮಿಯಾ ರೋಗಿಗಳಿಗೆ ರಕ್ತ ಅತ್ಯಂತ ಅವಶ್ಯಕವಾಗಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಸ್ವಾಗತಿಸಿದರು. ಹಿರಿಯ ಪ್ರಯೋಗಾಲಯ ತಂತ್ರಜ್ಞ ರಾಜು ನರಗೋದಿ ನಿರೂಪಿಸಿ ವಂದಿಸಿದರು. ಆಸ್ಪತ್ರೆಯ ಸಿಬ್ಬಂದಿ ರಕ್ತದಾನ ಮಾಡಿದ್ದು, ಶಿಬಿರದಲ್ಲಿ ಒಟ್ಟು ೪೦ಕ್ಕೂ ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಇದೇ ಸಂದರ್ಭದಲ್ಲಿ ಸಿಎಂಒ ಡಾ.ಶಂಕರ ದೇಶಮುಖ, ಡಾ.ಮೌನೇಶ ಬಡಿಗೇರ, ಕೆ.ಎಸ್.ಬಡಿಗೇರ, ರಫೀಕ್ ಮುಲ್ಲಾ, ವೀರೇಂದ್ರ ಪವಾಡೆ, ರಾಕೇಶ ಹೂಗಾರ, ಶಶಿ ಬುಯ್ಯಾರ, ವಿದ್ಯಾ ಹಿರೇಪಟ್ಟ, ಮಹಾಲಿಂಗ ಫಕೀರಪೂರ, ಗೀತಾ ಸಾಸಾಬಾಳ, ಸಾಯಬಣ್ಣ ಗಣಜಲಖೇಡ, ಮಹಾಂತೇಶ ಬೂದಿ, ಖತೀಜಾ, ಎಂ.ಪಿ.ಸಾಗರ, ಮಡಿವಾಳಮ್ಮ ಗದಗಿಮಠ ಸೇರಿದಂತೆ ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಆಸ್ಪತ್ರೆಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

