ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಿಂದಗಿ ಕ್ಲಸ್ಟರ್ ಮಟ್ಟದಲ್ಲಿ ೨೦೨೬–೨೭ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ಸೃಜನಶೀಲತೆಯಿಂದ ಗಮನಾರ್ಹ ಸಾಧನೆ ಮಾಡಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದು, ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು: ಮಾಹೀನ್ ಅತ್ತಾರ್ (೯ನೇ ತರಗತಿ) ಕನ್ನಡ ಭಾಷಣ, ಕೃತಿಕಾ ಕಟಿಗಿಗಾಣ (೯ನೇ) ಜಾನಪದ ಗೀತೆ, ಸ್ವಾತಿ ಧುಮಕನಾಳ (೭ನೇ) ಅಭಿನಯಗೀತೆ, ಅನನ್ಯಾ ಸಾತಿಹಾಳ (೭ನೇ) ಕವನ ವಾಚನ, ಸಾನ್ವಿ ಮೇಟಿ (೭ನೇ) ಪ್ರಬಂಧ, ಮಾಹೀನ್ ಅತ್ತಾರ್ ಮತ್ತು ಶ್ರೀನಿಧಿ ಬಿರಾದಾರ (೮ನೇ) ರಸಪ್ರಶ್ನೆ, ಅರುಣಾ ನಿರೋಣಿ (೭ನೇ) ಇಂಗ್ಲಿಷ್ ಕಂಠಪಾಠ, ಸಮೃದ್ಧಿ ಡಿಗ್ಗಿ (೯ನೇ) ಹಾಗೂ ಸಂಜನಾ ಪಟಣಶೆಟ್ಟಿ (೭ನೇ) ಚಿತ್ರಕಲೆ, ಜೋಹಾ ಬಂತನಾಳ (೮ನೇ) ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಅನುಷ್ಕಾ ಹೊಸಮನಿ (೮ನೇ) ಸಂಸ್ಕೃತ ಧಾರ್ಮಿಕ ಪಠಣ, ಭಾರ್ಗವಿ ತುಪ್ಪದ (೮ನೇ) ಭರತನಾಟ್ಯ, ಮಹಾಂತೇಶ ಮನಗೂಳಿ (೯ನೇ) ಆಶುಭಾಷಣ, ಶ್ರೇಯಾ ಮಠ್ (೬ನೇ) ಹಿಂದಿ ಕಂಠಪಾಠ, ಭಾಗ್ಯಶ್ರೀ ಮತ್ತು ತಂಡ (೮ನೇ) ಕವ್ವಾಲಿ ಹಾಗೂ ಈಶ್ವರಿ ಅಂಕಲಗಿ (೯ನೇ) ರಂಗೋಲಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ತೃತೀಯ ಸ್ಥಾನವನ್ನು ಸುಬಿಯಾ ಬಡೆಮಗೋಳ (೭ನೇ) ಅರೇಬಿಕ್ ಧಾರ್ಮಿಕ ಪಠಣ, ಶ್ರೇಯಾ ಮತ್ತು ತಂಡ (೮ನೇ) ಜಾನಪದ ನೃತ್ಯ, ಜೀವನ ಕುಲಕರ್ಣಿ (೬ನೇ) ಮಣ್ಣಿನ ಕಲಾಕೃತಿ ಹಾಗೂ ಆರಾಧ್ಯ ಕುಂಟೋಜಿ (೮ನೇ) ಮಿಮಿಕ್ರಿ ಸ್ಪರ್ಧೆಯಲ್ಲಿ ಪಡೆದಿದ್ದಾರೆ.
ಇದೇ ವೇಳೆ ತಾಲೂಕು ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಜಾನಪದ ಗೀತೆ ಸ್ಪರ್ಧೆಯಲ್ಲಿ ಶಾಲೆಯ ಕನ್ನಡ ಶಿಕ್ಷಕ ಸಚಿನ್ ಮಠಪತಿ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಸಾಧಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ನಿರ್ದೇಶಕ ಪಿ.ಡಿ.ಕುಲಕರ್ಣಿ, ಮುಖ್ಯಗುರುಮಾತೆ ಎಸ್.ಆಯ್.ಅಸ್ಕಿ, ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

