Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ

ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಂಗೀತ – ನೃತ್ಯೋತ್ಸವ: ನ.೧೪ರಿಂದ ಎರಡು ದಿನಗಳ ಕಲಾ ಧಾರಾ-೨
(ರಾಜ್ಯ ) ಜಿಲ್ಲೆ

ಸಂಗೀತ – ನೃತ್ಯೋತ್ಸವ: ನ.೧೪ರಿಂದ ಎರಡು ದಿನಗಳ ಕಲಾ ಧಾರಾ-೨

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಬ್ರಾಹಿಂ ರೋಜಾ ಸ್ಮಾರಕದ ೪೦೦ನೇ ವರ್ಷಾಚರಣೆ ಅಂಗವಾಗಿ ಆಯೋಜನೆ; ದೇಶದ ಹೆಸರಾಂತ ಕಲಾವಿದರಿಂದ ಸಂಗೀತ, ನೃತ್ಯ ಪ್ರದರ್ಶನ; ಸಾರ್ವಜನಿಕರಿಗೆ ಉಚಿತ ಪ್ರವೇಶ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಐತಿಹಾಸಿಕ ಇಬ್ರಾಹಿಂ ರೋಜಾ ಸ್ಮಾರಕದ ೪೦೦ನೇ ವರ್ಷಾಚರಣೆಯ ಅಂಗವಾಗಿ ನಗರದ ಇಬ್ರಾಹಿಂ ರೋಜಾ ಆವರಣದಲ್ಲಿ ನವೆಂಬರ್ ೧೪ ಮತ್ತು ೧೫ರಂದು ಎರಡು ದಿನಗಳ ಕಲಾ ಧಾರಾ-೨ ಸಂಗೀತ ಮತ್ತು ನೃತ್ಯೋತ್ಸವ ಆಯೋಜಿಸಲಾಗಿದೆ.
ದೇಶದ ಹೆಸರಾಂತ ಕಲಾವಿದರು ವಿವಿಧ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ದಖನ್ ವಾಸ್ತುಶಿಲ್ಪದ ಅಪರೂಪದ ಕಲಾಕೃತಿಯಾಗಿರುವ ಇಬ್ರಾಹಿಂ ರೋಜಾ ಸುಂದರ ಗುಮ್ಮಟಗಳು, ಎತ್ತರದ ಮಿನಾರ್‌ಗಳು, ಸೂಕ್ಷ್ಮ ಕೆತ್ತನೆಯ ಕಮಾನುಗಳು ಹಾಗೂ ಕಲ್ಲಿನ ಮೇಲಿನ ನಾಜೂಕಾದ ಕಲಾಕೃತಿಗಳಿಂದ ಪ್ರಸಿದ್ಧವಾಗಿದೆ. ತಾಜ್‌ಮಹಲ್‌ನ ವಾಸ್ತುಶಿಲ್ಪಕ್ಕೆ ಸ್ಫೂರ್ತಿಯಾಗಿರಬಹುದೆಂದು ಪರಿಗಣಿಸಲ್ಪಟ್ಟಿರುವ ಈ ಸ್ಮಾರಕದ ಸೊಬಗಿನ ಹಿನ್ನೆಲೆಯಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಐತಿಹಾಸಿಕ ಪರಂಪರೆ ಹಾಗೂ ಭಾರತೀಯ ಕಲಾ ಸಂಪ್ರದಾಯವನ್ನು ಒಟ್ಟಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ.
ಈ ವರ್ಷದ ಆರಂಭದಲ್ಲಿ ವಿಜಯಪುರದ ಗೋಳಗುಮ್ಮಟದಲ್ಲಿ ನಡೆದ ಕಲಾ ಧಾರಾ ಮೊದಲ ಆವೃತ್ತಿಗೆ ಸುಮಾರು ೪,೦೦೦ ಕಲಾಭಿಮಾನಿಗಳು ಭಾಗವಹಿಸಿದ್ದರು. ಸಾರ್ವಜನಿಕರಿಂದ ದೊರೆತ ಉತ್ತಮ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಎರಡನೇ ಆವೃತ್ತಿಯನ್ನು ಇಬ್ರಾಹಿಂ ರೋಜಾ ಆವರಣದಲ್ಲಿ ಆಯೋಜಿಸಲಾಗಿದೆ.
ನವೆಂಬರ್ ೧೪ರಂದು ಶನಿವಾರ ಸಂಜೆ ೫ ಗಂಟೆಗೆ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ, ನಗರ ಶಾಸಕ ಬಸನಗೌಡ ಆರ್. ಪಾಟೀಲ (ಯತ್ನಾಳ), ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪದ್ಮಶ್ರೀ ಪುರಸ್ಕೃತರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಉತ್ತರ ವಲಯದ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್ ಉಪಸ್ಥಿತರಿರಲಿದ್ದಾರೆ.
ಅಂದು ಸಂಜೆ ೬ ಗಂಟೆಗೆ ಲಯ ರಾಗ ಸಮರ್ಪಣಂ ಶೀರ್ಷಿಕೆಯಡಿ ಕರ್ನಾಟಕ ಶಾಸ್ತ್ರೀಯ ವಾದ್ಯಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದುಷಿ ಸುಕನ್ಯಾ ರಾಮಗೋಪಾಲ್ ಘಟ ಮತ್ತು ಕೊನ್ನಕೋಲ್ ಪ್ರಸ್ತುತಪಡಿಸಲಿದ್ದು, ರಾತ್ರಿ ೭.೩೦ಕ್ಕೆ ಡಾ. ಸಂಜಯ್ ಶಾಂತರಾಮ್ ಮತ್ತು ತಂಡದಿಂದ ಶಿವನ ವಿಶ್ವರೂಪದ ತಾಂಡವವನ್ನು ಬಿಂಬಿಸುವ ಶಿವತಾಂಡವ ಕೂಚಿಪುಡಿ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.
ನವೆಂಬರ್ ೧೫ರಂದು ಭಾನುವಾರ ಬೆಳಗ್ಗೆ ೭ ಗಂಟೆಗೆ ಉದಯರಾಗ ಕಾರ್ಯಕ್ರಮದಲ್ಲಿ ವಿದುಷಿ ಶಶಿಕಲಾ ದಾನಿ ಹಾಗೂ ಪಂ. ಡಾ. ಸುಜ್ಞಾನ ದಾನಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜಲತರಂಗ್ ಜುಗಲ್‌ಬಂದಿ ನಡೆಯಲಿದೆ. ಪಂ. ಅರುಣ್ ದಾನಿ ತಬಲಾ, ಪಂ. ಮಲೆಮಲ್ಲೇಶ್ ಹುಗಾರ್ ದೇಸಾಯಿ ಕಲ್ಲೂರು ಮಂಜಿರಾ ಹಾಗೂ ವಿದುಷಿ ವಂದನಾ ರಾಣಿ ತಾನ್‌ಪುರದಲ್ಲಿ ಸಹಕರಿಸಲಿದ್ದಾರೆ.
ಬೆಳಗ್ಗೆ ೮ ಗಂಟೆಗೆ ವಿಜಯಪುರದ ಕಲಾವಿದ ಪಂ. ಕಾಶಿನಾಥ ಭೋಸಲೆ ಮತ್ತು ತಂಡದಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ಪಂ. ಬಸವಂತರಾಯ್ ಹೂಗಾರ್ ಹಾಗೂ ಪಂ. ಮಂತನ್ ಜೋಶಿ ತಬಲಾ, ವಿದುಷಿ ಚಂದನಾ ಸಿ.ಎಂ. ಹಾರ್ಮೋನಿಯಂ, ವಿದುಷಿ ಶ್ರೀಪ್ರದ ದಶವಂತ್ ಮತ್ತು ವಿದುಷಿ ಸುನಯನ ದೇಶಪಾಂಡೆ ತಾನ್‌ಪುರ ಹಾಗೂ ಪಂ. ವಿಶಾಲ್ ಕಟ್ಟಿ ತಾಳದಲ್ಲಿ ಸಹಕರಿಸಲಿದ್ದಾರೆ.
ಅಂದು ಸಂಜೆ ೬ ಗಂಟೆಗೆ ವಿದುಷಿ ಅರ್ಚನಾ ಮತ್ತು ವಿದುಷಿ ಸಮನ್ವಿ ಅವರಿಂದ ಸಂತವಾಣಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದುಷಿ ಶ್ರುತಿ ಸಿ.ವಿ. ಪಿಟೀಲು, ವಿದ್ವಾನ್ ಗೌರವ್ ಗಡಿಯಾರ್ ಹಾರ್ಮೋನಿಯಂ, ವಿದುಷಿ ಆದಮ್ಯ ರಾಮಾನಂದ್ ಮೃದಂಗ ಹಾಗೂ ಪಂ. ಆದರ್ಶ್ ಶೆಣೈ ಕೆ. ತಬಲಾದಲ್ಲಿ ಸಹಕರಿಸಲಿದ್ದಾರೆ. ರಾತ್ರಿ ೭.೩೦ಕ್ಕೆ ಗುರು ಸರಿತಾ ಮಿಶ್ರಾ ಮತ್ತು ಆದ್ಯಾಶಾ ಫೌಂಡೇಶನ್‌ನ ಕಲಾವಿದರಿಂದ ಒಡಿಸ್ಸಿ ನೃತ್ಯ ಪ್ರದರ್ಶನಗೊಳ್ಳಲಿದೆ.
ಎರಡು ದಿನಗಳ ಉತ್ಸವದಲ್ಲಿ ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕೂಚಿಪುಡಿ, ಒಡಿಸ್ಸಿ ನೃತ್ಯ ಹಾಗೂ ಭಕ್ತಿ ಸಂಗೀತದ ವೈವಿಧ್ಯಮಯ ಪ್ರಸ್ತುತಿಗಳು ನಡೆಯಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ

ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ

ಧಾರ್ಮಿಕ ಪರ್ವ ಮಹಾಮಹೋತ್ಸವ ಇಂದಿನಿಂದ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ
    In (ರಾಜ್ಯ ) ಜಿಲ್ಲೆ
  • ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ
    In (ರಾಜ್ಯ ) ಜಿಲ್ಲೆ
  • ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ
    In (ರಾಜ್ಯ ) ಜಿಲ್ಲೆ
  • ಧಾರ್ಮಿಕ ಪರ್ವ ಮಹಾಮಹೋತ್ಸವ ಇಂದಿನಿಂದ
    In (ರಾಜ್ಯ ) ಜಿಲ್ಲೆ
  • ಸಂಗೀತ – ನೃತ್ಯೋತ್ಸವ: ನ.೧೪ರಿಂದ ಎರಡು ದಿನಗಳ ಕಲಾ ಧಾರಾ-೨
    In (ರಾಜ್ಯ ) ಜಿಲ್ಲೆ
  • ಸಚಿವ ಮಧು ಬಂಗಾರಪ್ಪ ವಿಜಯಪುರ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ಯುವಜನತೆ ಸೃಜನಶೀಲತೆಗೆ ಯುವಜನೋತ್ಸವ ವೇದಿಕೆ :ಸಂಬಣ್ಣಿ
    In (ರಾಜ್ಯ ) ಜಿಲ್ಲೆ
  • ಕೋಳಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಹಾಗೂ ಉದ್ಯಮಶೀಲತೆ ಕುರಿತು ಮೂರು ದಿನಗಳ ರೈತರ ತರಬೇತಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಉಳಿದಿರುವ ಎರಡು ಬಿ.ಎಸ್‌ಸಿ ನರ್ಸಿಂಗ್ ಸೀಟುಗಳ ಭರ್ತಿಗೆ ನ.೧೪ರಂದು ನೇರ ಸಂದರ್ಶನ
    In (ರಾಜ್ಯ ) ಜಿಲ್ಲೆ
  • ಹಿಂಗಾರು-ಬೇಸಿಗೆ ಬೆಳೆಗಳಿಗೆ ವಿಮೆ ಕವಚ: ಕೃಷಿ ಇಲಾಖೆಯಿಂದ ಅಧಿಸೂಚನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.