Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಯುವಜನತೆ ಸೃಜನಶೀಲತೆಗೆ ಯುವಜನೋತ್ಸವ ವೇದಿಕೆ :ಸಂಬಣ್ಣಿ

ಕೋಳಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಹಾಗೂ ಉದ್ಯಮಶೀಲತೆ ಕುರಿತು ಮೂರು ದಿನಗಳ ರೈತರ ತರಬೇತಿ

ಸರ್ಕಾರಿ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಉಳಿದಿರುವ ಎರಡು ಬಿ.ಎಸ್‌ಸಿ ನರ್ಸಿಂಗ್ ಸೀಟುಗಳ ಭರ್ತಿಗೆ ನ.೧೪ರಂದು ನೇರ ಸಂದರ್ಶನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹಿಂಗಾರು-ಬೇಸಿಗೆ ಬೆಳೆಗಳಿಗೆ ವಿಮೆ ಕವಚ: ಕೃಷಿ ಇಲಾಖೆಯಿಂದ ಅಧಿಸೂಚನೆ
(ರಾಜ್ಯ ) ಜಿಲ್ಲೆ

ಹಿಂಗಾರು-ಬೇಸಿಗೆ ಬೆಳೆಗಳಿಗೆ ವಿಮೆ ಕವಚ: ಕೃಷಿ ಇಲಾಖೆಯಿಂದ ಅಧಿಸೂಚನೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ ಜಿಲ್ಲೆಯ ರೈತರಿಗೆ ವಿವಿಧ ಬೆಳೆಗಳ ವಿಮೆಗೆ ಅವಕಾಶ; ಬೆಳೆವಾರು ನೋಂದಣಿ ವಿವರ ಮತ್ತು ವಿಮಾ ಕಂತಿನ ವಿವರ ಪ್ರಕಟ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ೨೦೨೬-೨೭ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ–ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಜಿಲ್ಲೆಯ ರೈತರು ವಿವಿಧ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿ ಬೆಳೆ ಸಾಲ ಪಡೆದ ರೈತರು ಪಹಣಿ, ಆಧಾರ್ ಜೋಡಣೆಯಾದ ಬ್ಯಾಂಕ್ ಪಾಸ್‌ಬುಕ್ ಹಾಗೂ ಆಧಾರ್ ಸಂಖ್ಯೆಯನ್ನು ಹೊಂದಿರಬೇಕು. ಸಾಲ ನೀಡಿದ ಬ್ಯಾಂಕ್‌ಗಳು, ಡಿ.ಸಿ.ಸಿ. ಹಾಗೂ ಇತರೆ ಬ್ಯಾಂಕ್‌ಗಳು, ಗ್ರಾಮ ಒನ್ ಮತ್ತು ಸಾಮಾನ್ಯ ಸೇವಾ ಕೇಂದ್ರಗಳ -ಸಿ.ಎಸ್.ಸಿ. ಮೂಲಕ ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿಗೆ ಪ್ರೂಟ್ಸ್ ಐಡಿ ಕಡ್ಡಾಯವಾಗಿರುತ್ತದೆ.
ಹಿಂಗಾರು ಹಂಗಾಮಿನಲ್ಲಿ ಕಡಲೆ (ಮಳೆಯಾಶ್ರಿತ) ಬೆಳೆಗೆ ಡಿ.೩೧ರವರೆಗೆ ನೋಂದಣಿಗೆ ಅವಕಾಶವಿದ್ದು, ಪ್ರತಿ ಹೆಕ್ಟೇರ್‌ಗೆ ರೈತರ ವಿಮಾ ಕಂತು ರೂ.೬೨೫.೫೦ ನಿಗದಿಪಡಿಸಲಾಗಿದೆ. ಕಡಲೆ (ನೀರಾವರಿ) ಬೆಳೆಗೆ ಡಿ.೩೧ ಕೊನೆಯ ದಿನವಾಗಿದ್ದು, ವಿಮಾ ಕಂತು ರೂ.೬೯೩ ಇದೆ.
ಜೋಳ (ಮಳೆಯಾಶ್ರಿತ) ಬೆಳೆಗೆ ನ.೧೬ ಕೊನೆಯ ದಿನವಾಗಿದ್ದು, ಪ್ರತಿ ಹೆಕ್ಟೇರ್‌ಗೆ ರೂ.೬೬೬ ಹಾಗೂ ಜೋಳ (ನೀರಾವರಿ) ಬೆಳೆಗೆ ನ.೧೬ ಕೊನೆಯ ದಿನವಾಗಿದ್ದು, ರೂ.೭೮೯ ವಿಮಾ ಕಂತು ನಿಗದಿಪಡಿಸಲಾಗಿದೆ. ಮುಸುಕಿನ ಜೋಳ (ನೀರಾವರಿ) ಬೆಳೆಗೆ ನ.೩೦ ಕೊನೆಯ ದಿನವಾಗಿದ್ದು, ವಿಮಾ ಕಂತು ರೂ.೧,೧೪೩ ಆಗಿದೆ.
ಗೋಧಿ (ನೀರಾವರಿ) ಬೆಳೆಗೆ ಡಿ.೧೫ ಕೊನೆಯ ದಿನವಾಗಿದ್ದು, ವಿಮಾ ಕಂತು ರೂ.೮೨೯.೫೦ ಹಾಗೂ ಗೋಧಿ (ಮಳೆಯಾಶ್ರಿತ) ಬೆಳೆಗೆ ನ.೧೬ ಕೊನೆಯ ದಿನವಾಗಿದ್ದು, ರೂ.೫೫೦.೫೦ ಪಾವತಿಸಬೇಕು. ಸೂರ್ಯಕಾಂತಿ (ಮಳೆಯಾಶ್ರಿತ) ಬೆಳೆಗೆ ನ.೧೬ ಕೊನೆಯ ದಿನವಾಗಿದ್ದು, ವಿಮಾ ಕಂತು ರೂ.೭೨೩ ಹಾಗೂ ಕುಸುಬೆ (ಮಳೆಯಾಶ್ರಿತ) ಬೆಳೆಗೆ ನ.೧೬ ಕೊನೆಯ ದಿನವಾಗಿದ್ದು, ರೂ.೫೧೩ ನಿಗದಿಪಡಿಸಲಾಗಿದೆ.
ಬೇಸಿಗೆ ಹಂಗಾಮಿನಲ್ಲಿ ಶೇಂಗಾ (ನೀರಾವರಿ) ಬೆಳೆಗೆ ೨೦೨೭ರ ಫೆ.೨೬ರವರೆಗೆ ನೋಂದಣಿಗೆ ಅವಕಾಶವಿದ್ದು, ಪ್ರತಿ ಹೆಕ್ಟೇರ್‌ಗೆ ರೈತರ ವಿಮಾ ಕಂತು ರೂ.೧,೧೬೭ ಆಗಿದೆ. ಈರುಳ್ಳಿ (ನೀರಾವರಿ) ಬೆಳೆಗೆ ಇದೇ ದಿನ ಕೊನೆಯ ದಿನವಾಗಿದ್ದು, ವಿಮಾ ಕಂತು ರೂ.೪,೬೯೫ ನಿಗದಿಪಡಿಸಲಾಗಿದೆ.
ರೈತರು ಬೆಳೆವಾರು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೃಷಿ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಯುವಜನತೆ ಸೃಜನಶೀಲತೆಗೆ ಯುವಜನೋತ್ಸವ ವೇದಿಕೆ :ಸಂಬಣ್ಣಿ

ಕೋಳಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಹಾಗೂ ಉದ್ಯಮಶೀಲತೆ ಕುರಿತು ಮೂರು ದಿನಗಳ ರೈತರ ತರಬೇತಿ

ಸರ್ಕಾರಿ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಉಳಿದಿರುವ ಎರಡು ಬಿ.ಎಸ್‌ಸಿ ನರ್ಸಿಂಗ್ ಸೀಟುಗಳ ಭರ್ತಿಗೆ ನ.೧೪ರಂದು ನೇರ ಸಂದರ್ಶನ

ರಾಜ್ಯ ಮಟ್ಟದ ವಿಜ್ಞಾನ ಜಾತ್ರೆಗೆ ಕ್ಷಣಗಣನೆ ಆರಂಭ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಯುವಜನತೆ ಸೃಜನಶೀಲತೆಗೆ ಯುವಜನೋತ್ಸವ ವೇದಿಕೆ :ಸಂಬಣ್ಣಿ
    In (ರಾಜ್ಯ ) ಜಿಲ್ಲೆ
  • ಕೋಳಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಹಾಗೂ ಉದ್ಯಮಶೀಲತೆ ಕುರಿತು ಮೂರು ದಿನಗಳ ರೈತರ ತರಬೇತಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಉಳಿದಿರುವ ಎರಡು ಬಿ.ಎಸ್‌ಸಿ ನರ್ಸಿಂಗ್ ಸೀಟುಗಳ ಭರ್ತಿಗೆ ನ.೧೪ರಂದು ನೇರ ಸಂದರ್ಶನ
    In (ರಾಜ್ಯ ) ಜಿಲ್ಲೆ
  • ಹಿಂಗಾರು-ಬೇಸಿಗೆ ಬೆಳೆಗಳಿಗೆ ವಿಮೆ ಕವಚ: ಕೃಷಿ ಇಲಾಖೆಯಿಂದ ಅಧಿಸೂಚನೆ
    In (ರಾಜ್ಯ ) ಜಿಲ್ಲೆ
  • ರಾಜ್ಯ ಮಟ್ಟದ ವಿಜ್ಞಾನ ಜಾತ್ರೆಗೆ ಕ್ಷಣಗಣನೆ ಆರಂಭ
    In (ರಾಜ್ಯ ) ಜಿಲ್ಲೆ
  • ಜೆಡಿಎಸ್ ವಿಜಯಪುರ ನಗರ ಘಟಕಕ್ಕೆ ಪದಾಧಿಕಾರಿಗಳ ನೇಮಕ
    In (ರಾಜ್ಯ ) ಜಿಲ್ಲೆ
  • ಪ್ರವಾಸ ಕಥನ ಸ್ಪರ್ಧೆಗೆ ಕಥೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಪಂಢರಪುರ ಜಾತ್ರೆ: ನ.೧೬ರಿಂದ ೨೨ರವರೆಗೆ ವಿಶೇಷ ಬಸ್‌ಗಳ ವ್ಯವಸ್ಥೆ
    In (ರಾಜ್ಯ ) ಜಿಲ್ಲೆ
  • ಲಚ್ಯಾಣದಲ್ಲಿ ರೈಲು ನಿಲುಗಡೆಗೆ ಕೇಂದ್ರ ಸಚಿವ ಸೋಮಣ್ಣ ಅನುಮೋದಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ವಚನಗಳಲ್ಲಿ ವಿಜ್ಞಾನದ ಶೋಧನೆ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.