ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮಹಾಸಂಸ್ಥಾನ ಮಠದಲ್ಲಿ ನ.೧೩ ಮತ್ತು ೧೪ ರಂದು ೨ ದಿನಗಳ ಕಾಲ ಜಲಾಹಳ್ಳಿ-ಕಲಕೇರಿಯ ಶಿವಾಚಾರ್ಯರತ್ನ ಜಗದಾರಾದ್ಯ ಜಯಶಾಂತಲಿಗೇಶ್ವರ ಶಿವಾಚಾರ್ಯರ ಪಾವನ ಸನ್ನಿದಾನದಲ್ಲಿ ಧಾರ್ಮಿಕ ಪರ್ವ ಮಹಾಮಹೋತ್ಸವ ಕಾರ್ಯಕ್ರಮ ಸೇರಿದಂತೆ ವಿವಿದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನ.೧೩ ರಂದು ಶುಕ್ರವಾರ ಬೆಳಿಗ್ಗೆ ೫ ಘಂಟೆಗೆ ಜಗದಾರಾದ್ಯ ಜಯಶಾಂತಲಿಂಗೆಶ್ವರರ ಶಿವಲಿಂಗಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳರಾತಿ ನಡೆಯಲಿದೆ, ೭ ಘಂಟೆಗೆ ಕಲಕೇರಿಯ ಪಂಚರಂಗ ಸಂಸ್ಥಾನ ಗದ್ದುಗೆಮಠದ ಗುರುಮಡಿವಾಳೇಶ್ವರ ಶಿವಾಚಾರ್ಯರರ ಅಮೃತ ಹಸ್ತದಿಂದ ಓಂಕಾರ ದ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಸಾಸನೂರ ಹಿರೇಮಠದ ಮಹಾಂತಲಿAಗ ಶಿವಾಚಾರ್ಯರು ಸಮ್ಮುಖವಹಿಸುವರು. ಮುಂಜಾನೆ ೯ ಘಂಟೆಗೆ ಜೆಜೆ ಪದವಿ ಕಾಲೇಜಿನ ವೈದ್ಯಕೀಯ ತಪಾಸಣೆ ಘಟಕ ಮತ್ತು ಕಲಕೇರಿಯ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಉಚಿತ ಆಯುರ್ವೇದ ಮತ್ತು ಅಲೋಪತಿ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದ್ದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಉದ್ಘಾಟಿಸುವರು. ಮುಖ್ಯ ಅಥಿತಿಗಳಾಗಿ ಡಾ.ವೈ ಎಸ್ ಪಾಟೀಲ, ಡಾ.ಶಶಿಕಾಂತ ಬಾಗೇವಾಡಿ, ಡಾ.ರಿಹಾನ ಬಾಂಗಿ ಭಾಗವಿಸುವರು. ಬೆ.೧೧ ಗಂಟೆಗೆ ವಿಧ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿವೆ, ಸಂಜೆ ೪ ಘಂಟೆಗೆ ಗರುವೀರಘಂಟೈ ಮಡಿವಾಳೇಶ್ವರ ದೇವಸ್ಥಾನದಿಂದ ಜಾಲಹಳ್ಳಿಯ ಮಹಾಮಠದವರೆಗೆ ಸಾವಿರಾರು ಸುಮಂಗಲೆಯರ ನೇತ್ರತ್ವದಲ್ಲಿ ರೊಟ್ಟಿ ಬುತ್ತಿ ಜಾತ್ರೆಯ ಮೆರವಣಿಗೆ ನಡೆಯುವದು, ಸಂಜೆ ೬ ಘಂಟೆಗೆ “ಜೀವನ ಜಾಗೃತಿ ಸಂಗೋಷ್ಠಿ” ಧಾರ್ಮಿಕ ಸಭೆ ನಡೆಲಿದ್ದು ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು ಉದ್ಘಾಟಿಸುವರು ಹಿರೂರಿನ ಜಯಸಿದ್ದೇಶ್ವರ ಶಿವಾಚಾರ್ಯರು ಅಧ್ಯಕ್ಷತೆವಹಿಸಲಿದ್ದು ವಿವಿಧ ಮಠಾಧೀಶರು ರಾಜಕೀಯ ಧುರೀಣರು ಭಾಗಿಯಾಗುವರು.
ನ.೧೪ ರಂದು ಶನಿವಾರ ಬೆಳಿಗ್ಗೆ ೫ಕ್ಕೆ ಸಹಸ್ರ ಬಿಲ್ವಾರ್ಚನೆ ನಂತರ ೮ ಘಂಟೆಗೆ ಕಲಕೇರಿ ಹಿರೇಠದ ಸಿದ್ದರಾಮ ಶಿವಾಚಾರ್ಯರ ಪಾದಪೂಜೆಯೊಂದಿಗೆ ಮಹಾರುದ್ರಯಜ್ಝ, ವಿಶ್ವಶಾಂತಿಗಾಗಿ ರುದ್ರಯಾಗ, ಚಂಡಿಯಾಗ, ಹೋಮ ಹವನಗಳು ನಡಯಲಿವೆ. ಬೆಳಿಗ್ಗೆ ೧೦ ಘಂಟೆಗೆ ಜಗದಾರಾಧ್ಯ ಜಯಶಾಂತಲಿAಗೇಶ್ವರ ರಜತ ವಿಗ್ರಹದ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳದೊಂದಿಗೆ ಸಂಚರಿಸುವದು ಅಡ್ಡಪಲಕ್ಕಿ ಉತ್ಸವಕ್ಕೆ ಮುತ್ತಗಿ ಹಿರೇಮಠದ ಪಂಡಿತಾರಾಧ್ಯ ಶಿವಾಚಾರ್ಯರು ಚಾಲನೆ ನಿಡುವರು. ನಂತರ ಜಂಗಮ ವಠುಗಳಿಗೆ ಅಯ್ಯಚಾರ ದೀಕ್ಷೆ, ಸಂಜೆ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಸಂಜೆ ೬ ಘಂಟೆಗೆ ಸನಾತನ ಸಂಸ್ಕೃತಿಯ ಸದ್ಬಾವನಾ ಸಂಗೋಷ್ಠಿ ನಡೆಯಲಿದ್ದು ಮಾಗಣಗೇರಿಯ ಡಾ.ವಿಶ್ವರಾಧ್ಯ ಶಿವಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದು, ಕಲಕೇರಿ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಉದ್ಘಾಟಿಸುವರು, ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯರು, ಮಾಗಣಗೇರಿಯ ಏಕಾಕ್ಷರ ಶಿವಾಚಾರ್ಯರು, ಯಡಗಾಪೂರದ ದಾರುಕಲಿಂಗ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು ಭಾಗಿಯಾಗುವರು, ಮುಖ್ಯ ಅತಿಥಿಗಳಾಗಿ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಮುದ್ದೇಬಿಹಾಳ ಶಾಸಕ ಸಿ ಎಸ್ ನಾಡಗೌಡ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ ಎಂದು ಶ್ರೀಮಠದ ಆಡಳಿತಾಧಿಕಾರಿ ಗುರುಸ್ವಾಮಿ ಸಿರಸಂಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

