Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಯುವಜನತೆ ಸೃಜನಶೀಲತೆಗೆ ಯುವಜನೋತ್ಸವ ವೇದಿಕೆ :ಸಂಬಣ್ಣಿ

ಕೋಳಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಹಾಗೂ ಉದ್ಯಮಶೀಲತೆ ಕುರಿತು ಮೂರು ದಿನಗಳ ರೈತರ ತರಬೇತಿ

ಸರ್ಕಾರಿ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಉಳಿದಿರುವ ಎರಡು ಬಿ.ಎಸ್‌ಸಿ ನರ್ಸಿಂಗ್ ಸೀಟುಗಳ ಭರ್ತಿಗೆ ನ.೧೪ರಂದು ನೇರ ಸಂದರ್ಶನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರಾಜ್ಯ ಮಟ್ಟದ ವಿಜ್ಞಾನ ಜಾತ್ರೆಗೆ ಕ್ಷಣಗಣನೆ ಆರಂಭ
(ರಾಜ್ಯ ) ಜಿಲ್ಲೆ

ರಾಜ್ಯ ಮಟ್ಟದ ವಿಜ್ಞಾನ ಜಾತ್ರೆಗೆ ಕ್ಷಣಗಣನೆ ಆರಂಭ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನ.14 ರಂದು ತಿಕೋಟಾದ ಎ.ಬಿ.ಜತ್ತಿ ಶಾಲೆ ಆವರಣದಲ್ಲಿ ನಡೆವ ರಾಜ್ಯ ಮಟ್ಟದ ವಿಜ್ಞಾನ ಜಾತ್ರೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಗ್ರಾಮೀಣ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ನ.14 ರಂದು ಶನಿವಾರ ತಿಕೋಟಾದ ಎ.ಬಿ.ಜತ್ತಿ ಶಾಲೆ ಆವರಣದಲ್ಲಿ ನಡೆವ ರಾಜ್ಯ ಮಟ್ಟದ ವಿಜ್ಞಾನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.
ಮಕ್ಕಳ ದಿನಾಚರಣೆ ದಿನದಂದು ನಡೆಯುವ ಈ ಕಾರ್ಯಕ್ರಮಕ್ಕೆ ‘ವಿಜ್ಞಾನ ಸ್ವಾಮೀಜಿ’ ಎಂದೇ ಖ್ಯಾತರಾದ ನಾಗನೂರು ರುದ್ರಾಕ್ಷಿ ಮಠದ ಡಾ.‌ಸಿದ್ಧರಾಮ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದು ಗ್ರಾಮೀಣ ವಲಯದ ಶಿಕ್ಷಣಾಧಿಕಾರಿ ಬಸವರಾಜ ತಳವಾರ ತಿಳಿಸಿದ್ದಾರೆ.
ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.‌ ಪಾಟೀಲ ಅವರು ಪ್ರದರ್ಶನದ ಸ್ಟಾಲ್‌ಗಳನ್ನು ಉದ್ಘಾಟಿಸಲಿದ್ದಾರೆ. ಇವರೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಲ್ಲಾಧಿಕಾರಿ ಡಾ.‌ ಕೆ. ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಉಪಸ್ಥಿತರಿರಲಿದ್ದಾರೆ.
ಅಂದು ಬೆಳಗ್ಗೆ 11ಕ್ಕೆ ನಾಲ್ಕು ವಿಭಾಗಗಳ ವಿಜ್ಞಾನ ಪ್ರದರ್ಶನ ಮಳಿಗೆಗಳಿಗೆ ಇವರು ಚಾಲನೆ ನೀಡಲಿದ್ದಾರೆ. ಸಿಎಸ್‌ಆರ್ ಅನುದಾನ ಸೇರಿದಂತೆ ನಾನಟ ಶಾಲಾ ಅಭಿವೃದ್ಧಿಯ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಹುಬ್ಬಳ್ಳಿಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಡೀನ್ ಡಾ. ನರಸಿಂಹ ಎಚ್. ಆಯಚಿತ್ ಅವರು ವಿಜ್ಞಾನದ ಅಗತ್ಯ ಮತ್ತು ಅನಿವಾರ್ಯತೆ ಬಗ್ಗೆ ಭಾಷಣ ಮಾಡಲಿದ್ದಾರೆ.
ಗಣ್ಯರಿಗೆ ವಿಜ್ಞಾನದ ಪುಸ್ತಕಗಳನ್ನು ನೀಡಿ, ದೀಪಕ್ಕೆ ಎಣ್ಣೆಯ ಬದಲು ನೀರು ಹಾಕಿ, ಬತ್ತಿ ಹೊತ್ತಿಸುವ ಪ್ರಯೋಗದೊಂದಿಗೇ ಸಭೆಯನ್ನು ಆರಂಭಿಸುತ್ತಿರುವುದು ವಿಶೇಷ ಎಂದು ಅವರು ತಿಳಿಸಿದ್ದಾರೆ.
ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು ಸೇರಿ ಹತ್ತು ಸಾವಿರ ಜನ ಪಾಲ್ಗೊಳ್ಳಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ(ಗ್ರಾಮೀಣ ವಲಯ), ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ನಡೆವ ಜಾತ್ರೆಯಲ್ಲಿ ಇಷ್ಟು ಮಟ್ಟದ ಜನರು ಸೇರುತ್ತಿರುವುದು ಇದೇ ಮೊದಲು. ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಿದೆ ಎಂದಿದ್ದಾರೆ.

ಮಾನವನ ದೇಹದ ಪರಿಚಯ ಮತ್ತು ತಾಂತ್ರಿಕ ಪ್ರದರ್ಶನ

ವಿಜಯಪುರ ಗ್ರಾಮೀಣ ವಲಯದ ವಿವಿಧ ಕ್ಲಸ್ಟರ್‌ಗಳಲ್ಲಿನ ಸ್ಪರ್ಧೆಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿ ಯೋಜನೆಗಳು ಇಲ್ಲಿ ಇರಲಿವೆ. ಮಕ್ಕಳ ದಿನದಂದೇ ಇದು ನಡೆಯುತ್ತಿರುವುದು ವಿಶೇಷ. ಸರಕಾರಿ ಶಾಲೆಯ ಐದರಿಂದ ಹತ್ತನೇ ತರಗತಿಯ ಪಠ್ಯಗಳಲ್ಲಿನ ಶೇ.60ರಷ್ಟು ವಿಜ್ಞಾನ ಪರಿಕಲ್ಪನೆಗಳನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಇದು ನೆರವಾಗಲಿದೆ. ಓದುವ ವಿಜ್ಞಾನವನ್ನು ನೇರವಾಗಿ ನೋಡುವ, ಮುಟ್ಟುವ ಮತ್ತು ಪ್ರಯೋಗಗಳ ಮೂಲಕ ತಿಳಿವ ಅವಕಾಶ ಗ್ರಾಮೀಣರಿಗೆ ದೊರೆಯಲಿದೆ.
ಕಡಿಮೆ ವೆಚ್ಚದ ರೋಬೋಟ್‌ಗಳು, ಸಂವೇದಕ ಆಧಾರಿತ ಮಾದರಿಗಳು, ವಿದ್ಯುತ್, ಕಾಂತತ್ವ, ಬೆಳಕಿನ ವಿಜ್ಞಾನ, ರಾಸಾಯನಿಕ ಕ್ರಿಯೆಗಳು, ದ್ಯುತಿ ಸಂಶ್ಲೇಷಣೆ, ಮಾನವನ ದೇಹದ ರಚನೆ, ಪಂಚೇಂದ್ರಿಯಗಳು ಸೇರಿದಂತೆ ಹಲವು ವಿಜ್ಞಾನ ಪರಿಕಲ್ಪನೆಗಳನ್ನು ಆಧರಿಸಿದ ಮಾದರಿಗಳು ಪ್ರದರ್ಶನಗೊಳ್ಳಲಿವೆ. ವಾಯುಮಾಲಿನ್ಯವನ್ನು ಪತ್ತೆಹಚ್ಚುವ ‘ಏರ್ ಗಾರ್ಡ್’, ನೀರಿನ ಮಟ್ಟವನ್ನು ಗುರುತಿಸುವುದು, ತೇವಾಂಶವನ್ನು ಅಳೆವ ಸಾಧನ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರ ಮಾದರಿಗಳು, ಮಾನವನ ದೇಹದ ಪರಿಚಯ ಮತ್ತು ತಾಂತ್ರಿಕ ಪ್ರದರ್ಶನಗಳೂ ಇರಲಿವೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಯುವಜನತೆ ಸೃಜನಶೀಲತೆಗೆ ಯುವಜನೋತ್ಸವ ವೇದಿಕೆ :ಸಂಬಣ್ಣಿ

ಕೋಳಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಹಾಗೂ ಉದ್ಯಮಶೀಲತೆ ಕುರಿತು ಮೂರು ದಿನಗಳ ರೈತರ ತರಬೇತಿ

ಸರ್ಕಾರಿ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಉಳಿದಿರುವ ಎರಡು ಬಿ.ಎಸ್‌ಸಿ ನರ್ಸಿಂಗ್ ಸೀಟುಗಳ ಭರ್ತಿಗೆ ನ.೧೪ರಂದು ನೇರ ಸಂದರ್ಶನ

ಹಿಂಗಾರು-ಬೇಸಿಗೆ ಬೆಳೆಗಳಿಗೆ ವಿಮೆ ಕವಚ: ಕೃಷಿ ಇಲಾಖೆಯಿಂದ ಅಧಿಸೂಚನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಯುವಜನತೆ ಸೃಜನಶೀಲತೆಗೆ ಯುವಜನೋತ್ಸವ ವೇದಿಕೆ :ಸಂಬಣ್ಣಿ
    In (ರಾಜ್ಯ ) ಜಿಲ್ಲೆ
  • ಕೋಳಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಹಾಗೂ ಉದ್ಯಮಶೀಲತೆ ಕುರಿತು ಮೂರು ದಿನಗಳ ರೈತರ ತರಬೇತಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಉಳಿದಿರುವ ಎರಡು ಬಿ.ಎಸ್‌ಸಿ ನರ್ಸಿಂಗ್ ಸೀಟುಗಳ ಭರ್ತಿಗೆ ನ.೧೪ರಂದು ನೇರ ಸಂದರ್ಶನ
    In (ರಾಜ್ಯ ) ಜಿಲ್ಲೆ
  • ಹಿಂಗಾರು-ಬೇಸಿಗೆ ಬೆಳೆಗಳಿಗೆ ವಿಮೆ ಕವಚ: ಕೃಷಿ ಇಲಾಖೆಯಿಂದ ಅಧಿಸೂಚನೆ
    In (ರಾಜ್ಯ ) ಜಿಲ್ಲೆ
  • ರಾಜ್ಯ ಮಟ್ಟದ ವಿಜ್ಞಾನ ಜಾತ್ರೆಗೆ ಕ್ಷಣಗಣನೆ ಆರಂಭ
    In (ರಾಜ್ಯ ) ಜಿಲ್ಲೆ
  • ಜೆಡಿಎಸ್ ವಿಜಯಪುರ ನಗರ ಘಟಕಕ್ಕೆ ಪದಾಧಿಕಾರಿಗಳ ನೇಮಕ
    In (ರಾಜ್ಯ ) ಜಿಲ್ಲೆ
  • ಪ್ರವಾಸ ಕಥನ ಸ್ಪರ್ಧೆಗೆ ಕಥೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಪಂಢರಪುರ ಜಾತ್ರೆ: ನ.೧೬ರಿಂದ ೨೨ರವರೆಗೆ ವಿಶೇಷ ಬಸ್‌ಗಳ ವ್ಯವಸ್ಥೆ
    In (ರಾಜ್ಯ ) ಜಿಲ್ಲೆ
  • ಲಚ್ಯಾಣದಲ್ಲಿ ರೈಲು ನಿಲುಗಡೆಗೆ ಕೇಂದ್ರ ಸಚಿವ ಸೋಮಣ್ಣ ಅನುಮೋದಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ವಚನಗಳಲ್ಲಿ ವಿಜ್ಞಾನದ ಶೋಧನೆ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.