ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜನತಾದಳ (ಜ್ಯಾತ್ಯತೀತ) ಪಕ್ಷದ ವಿಜಯಪುರ ನಗರ ಘಟಕದ ವಿವಿಧ ಪದಾಧಿಕಾರಿಗಳನ್ನು ಹಾಗೂ ಘಟಕಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರ ಅನುಮೋದನೆಯ ಮೇರೆಗೆ ನೇಮಕಾತಿ ಆದೇಶ ಹೊರಡಿಸಲಾಗಿದೆ ಎಂದು ಜೆಡಿಎಸ್ ವಿಜಯಪುರ ನಗರ ಘಟಕದ ಅಧ್ಯಕ್ಷ ಪ್ರಶಾಂತ ಕಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರ ಘಟಕದ ಹಿರಿಯ ಉಪಾಧ್ಯಕ್ಷರಾಗಿ ಎಸ್.ವೈ. ನಡುವಿನಕೇರಿ, ಉಪಾಧ್ಯಕ್ಷರಾಗಿ ಡಾ. ಪ್ರಕಾಶ ಹೇರಕಲ್, ಖ್ವಾಜಾ ಮೈನುದ್ದೀನ್ ಪಟೇಲ್, ರಾಜು ರಜಪೂತ ಲಮಾಣಿ ಹಾಗೂ ಎಂ.ಎಸ್. ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ವಾಜಿದ ಕಾಜಿ, ಬಾಬು ಶಿವಣಗಾರ ಹಾಗೂ ವಿಜಯಕುಮಾರ ಕುರ್ಲೆ, ಸಂಘಟನಾ ಕಾರ್ಯದರ್ಶಿಗಳಾಗಿ ಮುನಿರ ಪಠಾಣ, ಜಾಫರ ಕಲಾದಗಿ ಹಾಗೂ ಸುರೇಶ ಬಿರಾದಾರ, ಕಾರ್ಯದರ್ಶಿಗಳಾಗಿ ಪ್ರಶಾಂತ ಕಕ್ಲಮೇಲಿ ಹಾಗೂ ಶಬ್ಬೀರ ಕೋತವಾಲ ಅವರನ್ನು ನೇಮಿಸಲಾಗಿದೆ.
ಜೆಡಿಎಸ್ ನಗರ ಯುವ ಘಟಕದ ಅಧ್ಯಕ್ಷರಾಗಿ ಸುನೀಲ ದೇವರಮನಿ, ನಗರ ಅಲ್ಪ ಸಂಖ್ಯಾತ ಘಟಕದ ಸೈಯ್ಯದ ನವಿದ ಖಾದ್ರಿ ಹರಿಯಾಲ, ನಗರ ವಕೀಲರ ಘಟಕದ ಅಧ್ಯಕ್ಷರಾಗಿ ಎಸ್.ಎಸ್. ದುರ್ಗದ, ತಾಂತ್ರಿಕ ವಿಭಾಗದ ಅಧ್ಯಕ್ಷರಾಗಿ ಸೈಯ್ಯದ ಇರಫಾನ ಕಾಜಿ ಹಾಗೂ ಐಟಿ ಸೆಲ್ ಘಟಕದ ಅಧ್ಯಕ್ಷರಾಗಿ ಎಸ್.ಎಸ್. ಮಗರಬಿ ಅವರನ್ನು ನೇಮಕ ಮಾಡಲಾಗಿದೆ.
ವಿಜಯಪುರ ಸಲಹಾ ಸಮಿತಿಗೆ ಮಾನಪ್ಪ ದಾಸರ, ಶಿವಲಿಂಗ ಕಿಣಗಿ, ಶಿವಕಾಂತ ಕುಂಬಾರ ಹಾಗೂ ಅಬುತಾಲಿಬ್ ಜಿ. ಮಕಾನದಾರ ಅವರನ್ನು ನೇಮಿಸಲಾಗಿದೆ. ಎಲ್ಲ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
